logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Jio Prima: 2599 ರೂಪಾಯಿಗೆ 4ಜಿ ಜಿಯೋಫೋನ್ ಪ್ರೈಮಾ ಬಿಡುಗಡೆ ಮಾಡಿದ ರಿಲಯನ್ಸ್ ಜಿಯೋ, ಇಲ್ಲಿದೆ ಫೀಚರ್ಸ್ ಮತ್ತು ಇತರೆ ವಿವರ

Jio Prima: 2599 ರೂಪಾಯಿಗೆ 4ಜಿ ಜಿಯೋಫೋನ್ ಪ್ರೈಮಾ ಬಿಡುಗಡೆ ಮಾಡಿದ ರಿಲಯನ್ಸ್ ಜಿಯೋ, ಇಲ್ಲಿದೆ ಫೀಚರ್ಸ್ ಮತ್ತು ಇತರೆ ವಿವರ

Nov 08, 2023 09:31 PM IST

ರಿಲಯನ್ಸ್ ಜಿಯೋ ಕಂಪನಿಯು ಹೊಸ ‘ಜಿಯೋಫೋನ್ ಪ್ರೈಮಾ’ ಎಂಬ 4ಜಿ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಬೆಲೆ 2599 ರೂಪಾಯಿ. 2.4 ಇಂಚಿನ ಡಿಸ್‌ಪ್ಲೇ ಸ್ಕ್ರೀನ್ ಮತ್ತು 1800mAh ಶಕ್ತಿಯುತ ಬ್ಯಾಟರಿ ಹೊಂದಿರುವ ಈ ಫೋನ್‌ನ ಇನ್ನಷ್ಟು ವಿವರ ಇಲ್ಲಿದೆ.  

ರಿಲಯನ್ಸ್ ಜಿಯೋದ ಹೊಸ 4G ಕೀಪ್ಯಾಡ್ ಫೀಚರ್ ಫೋನ್ ಜಿಯೋಫೋನ್ ಪ್ರೈಮಾ (JioPhone Prima) ಇಂದಿನಿಂದ (ನ.8) ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) 2023 ರ ಸಮಯದಲ್ಲಿ ಅನಾವರಣಗೊಂಡ ಜಿಯೋಫೋನ್ ಪ್ರೈಮಾದಲ್ಲಿ ಯೂಟ್ಯೂಬ್‌, ಫೇಸ್‌ಬುಕ್‌, ವಾಟ್ಸ್‌ಆಪ್ ಮತ್ತು ಗೂಗಲ್‌ ವಾಯ್ಸ್ ಅಸಿಸ್ಟೆಂಟ್‌ ನೇರವಾಗಿ ಲಭ್ಯವಿದೆ. ಈ ಫೋನ್‌ Kai-OS ‎(v 2.5.3) ನಲ್ಲಿ ಕಾರ್ಯನಿರ್ವಹಿಸುತ್ತದೆ.
(1 / 6)

ಹೊಸ ಕೀಪ್ಯಾಡ್ ಸ್ಮಾರ್ಟ್ ಫೋನ್ ನೋಟ ಹಾಗೂ ಆಕರ್ಷಕ ವಿನ್ಯಾಸಕ್ಕಾಗಿ ಜಿಯೋ ಸಾಕಷ್ಟು ಕೆಲಸ ಮಾಡಿದೆ. ಜಿಯೋಫೋನ್ ಪ್ರೈಮಾ ವಿನ್ಯಾಸವು ದಿಟ್ಟ ಹಾಗೂ ಪ್ರೀಮಿಯಂ ಆಗಿ ಕಾಣುತ್ತದೆ. 2.4 ಇಂಚಿನ ಡಿಸ್ ಪ್ಲೇ ಪರದೆಯು ಬಳಕೆಯ ದೃಷ್ಟಿಯಿಂದ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.
(2 / 6)

ಈ ಸ್ಮಾರ್ಟ್‌ಫೋನ್ 1800mAhನ ಶಕ್ತಿಶಾಲಿ ಬ್ಯಾಟರಿಯೊಂದಿಗೆ ಬರುತ್ತದೆ.ವಿಡಿಯೋ ಕರೆ ಮತ್ತು ಫೋಟೋಗ್ರಫಿಗಾಗಿ ಮೊಬೈಲ್‌ನ ಎರಡೂ ಬದಿಯಲ್ಲಿ ಡಿಜಿಟಲ್ ಕ್ಯಾಮೆರಾಗಳನ್ನು ನೀಡಲಾಗಿದೆ. ಮೊಬೈಲ್ ಹಿಂಭಾಗದಲ್ಲಿ ಫ್ಲ್ಯಾಷ್ ಲೈಟ್ ಕೂಡ ಇದೆ. ಜಿಯೋಪೇ ಮೂಲಕ ಯುಪಿಐ ಪಾವತಿ ಕೂಡ ಮಾಡಬಹುದು.
(3 / 6)

ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್‌ನಂತಹ ಪ್ರೀಮಿಯಂ ಡಿಜಿಟಲ್ ಸೇವೆಗಳೊಂದಿಗೆ ಸ್ಮಾರ್ಟ್‌ಫೋನ್ ಸಿದ್ಧವಾಗಿದೆ. ಜಿಯೋ ಪ್ರೈಮಾ 23 ಭಾಷೆಗಳನ್ನು ಬೆಂಬಲಿಸುತ್ತದೆ. ಅಂದರೆ ಇದರಲ್ಲಿ 23 ಭಾಷೆಗಳಲ್ಲಿ ಕೆಲಸ ಮಾಡಬಹುದು.
(4 / 6)

ಗಾಢ ಬಣ್ಣಗಳಲ್ಲಿ ಬರುತ್ತಿರುವ ಈ ಸ್ಮಾರ್ಟ್‌ಫೋನ್ ಅನ್ನು ಪ್ರಮುಖ ರಿಟೇಲ್ ಸ್ಟೋರ್‌ಗಳು ಮತ್ತು ರಿಲಯನ್ಸ್ ಡಿಜಿಟಲ್.ಇನ್, ಜಿಯೋಮಾರ್ಟ್ ಎಲೆಕ್ಟ್ರಾನಿಕ್ಸ್ ಮತ್ತು ಅಮೆಜಾನ್‌ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದ ಖರೀದಿಸಬಹುದು. ಈ ಫೋನ್ ಬೆಲೆ 2599 ರೂಪಾಯಿ.
(5 / 6)

ಜಿಯೋ ಪ್ರೈಮಾ ಕೇವಲ ಮೊಬೈಲ್ ಅಲ್ಲ, ಆದರೆ ಒಂದು ಸ್ಟೈಲ್ ಎಂದು ಕಂಪನಿಯು ನಂಬುತ್ತದೆ. ಕೈಗೆಟುಕುವ ಬೆಲೆಯಲ್ಲಿ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳ ಜತೆಗೆ ಸಂಪರ್ಕಗೊಂಡಿರುವ 4ಜಿಯಿಂದ ಶಕ್ತಿಯುತವಾದ ಮೊಬೈಲ್ ಅನ್ನು ಬಯಸುವವರಿಗೆ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂಬುದು ಕಂಪನಿಯ ಹೇಳಿಕೆ.
(6 / 6)

    ಹಂಚಿಕೊಳ್ಳಲು ಲೇಖನಗಳು