logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Upcoming Smartphones: ಸದ್ಯದಲ್ಲಿಯೇ ಆಗಮಿಸಲಿರುವ ಸ್ಮಾರ್ಟ್‌ಫೋನ್‌ಗಳಿವು, ಹೊಸ ಐಫೋನ್‌ ಫಿಕ್ಸೆಲ್‌ ಒನ್‌ಪ್ಲಸ್‌ಗೆ ಸುಸ್ವಾಗತ

Upcoming smartphones: ಸದ್ಯದಲ್ಲಿಯೇ ಆಗಮಿಸಲಿರುವ ಸ್ಮಾರ್ಟ್‌ಫೋನ್‌ಗಳಿವು, ಹೊಸ ಐಫೋನ್‌ ಫಿಕ್ಸೆಲ್‌ ಒನ್‌ಪ್ಲಸ್‌ಗೆ ಸುಸ್ವಾಗತ

Jan 09, 2024 07:22 PM IST

Upcoming smartphones in 2023: ಹೊಸ ಸ್ಮಾರ್ಟ್‌ಫೋನ್‌ ಖರೀದಿಸಲು ಬಯಸುವವರು ಯಾವುದಾದರೂ ಹೊಸ ಮಾಡೆಲ್‌ ಆಗಮನಕ್ಕೆ ಕಾಯುತ್ತಿರಬಹುದು. ಸದ್ಯದಲ್ಲಿಯೇ ಮಾರುಕಟ್ಟೆಗೆ ಬರಲಿರುವ ಸ್ಮಾರ್ಟ್‌ಫೋನ್‌ಗಳ ವಿವರ ಇಲ್ಲಿದೆ. ಐಫೋನ್‌ 15, ಗೂಗಲ್‌ ಫಿಕ್ಸೆಲ್‌ 8 ಸೀರಿಸ್‌, ಐಕ್ಯೂಒಒ ನಿಯೊ 8 ಸೀರಿಸ್‌ ಸೇರಿದಂತೆ ಮುಂದಿನ ದಿನಗಳಲ್ಲಿ ಆಗಮಿಸಲಿರುವ ಫೋನ್‌ಗಳ ಮಾಹಿತಿ.

Upcoming smartphones in 2023: ಹೊಸ ಸ್ಮಾರ್ಟ್‌ಫೋನ್‌ ಖರೀದಿಸಲು ಬಯಸುವವರು ಯಾವುದಾದರೂ ಹೊಸ ಮಾಡೆಲ್‌ ಆಗಮನಕ್ಕೆ ಕಾಯುತ್ತಿರಬಹುದು. ಸದ್ಯದಲ್ಲಿಯೇ ಮಾರುಕಟ್ಟೆಗೆ ಬರಲಿರುವ ಸ್ಮಾರ್ಟ್‌ಫೋನ್‌ಗಳ ವಿವರ ಇಲ್ಲಿದೆ. ಐಫೋನ್‌ 15, ಗೂಗಲ್‌ ಫಿಕ್ಸೆಲ್‌ 8 ಸೀರಿಸ್‌, ಐಕ್ಯೂಒಒ ನಿಯೊ 8 ಸೀರಿಸ್‌ ಸೇರಿದಂತೆ ಮುಂದಿನ ದಿನಗಳಲ್ಲಿ ಆಗಮಿಸಲಿರುವ ಫೋನ್‌ಗಳ ಮಾಹಿತಿ.
iPhone 15 series: ಐಫೋನ್‌ 15 ಸರಣಿಯ ಫೋನ್‌ ಸೆಪ್ಟೆಂಬರ್‌ನಲ್ಲಿ ಬರಲಿದೆ. ಹೊಸ ಐಫೋನ್‌ ಖರೀದಿಸಲು ಬಯಸುವವರು ಇದಕ್ಕೆ ಕಾಯಬಹುದು. ಸೆಪ್ಟೆಂಬರ್‌ 12ರಂದು ಐಫೋನ್‌ 15  ಸರಣಿಯ ಸ್ಮಾರ್ಟ್‌ಫೋನ್‌ಗಳು ಆಗಮಿಸಲಿವೆ. ಐಫೋನ್‌ 15, ಐಫೋನ್‌ 15 ಪ್ಲಸ್‌, ಐಫೋನ್‌ 15 ಪ್ರೊ ಮತ್ತು ಐಫೋನ್‌ ಪ್ರೊ ಮ್ಯಾಕ್ಸ್‌ ಫೋನ್‌ಗಳನ್ನು ಆಪಲ್‌ ಕಂಪನಿಯು ಪರಿಚಯಿಸಲಿದೆ. 
(1 / 7)
iPhone 15 series: ಐಫೋನ್‌ 15 ಸರಣಿಯ ಫೋನ್‌ ಸೆಪ್ಟೆಂಬರ್‌ನಲ್ಲಿ ಬರಲಿದೆ. ಹೊಸ ಐಫೋನ್‌ ಖರೀದಿಸಲು ಬಯಸುವವರು ಇದಕ್ಕೆ ಕಾಯಬಹುದು. ಸೆಪ್ಟೆಂಬರ್‌ 12ರಂದು ಐಫೋನ್‌ 15  ಸರಣಿಯ ಸ್ಮಾರ್ಟ್‌ಫೋನ್‌ಗಳು ಆಗಮಿಸಲಿವೆ. ಐಫೋನ್‌ 15, ಐಫೋನ್‌ 15 ಪ್ಲಸ್‌, ಐಫೋನ್‌ 15 ಪ್ರೊ ಮತ್ತು ಐಫೋನ್‌ ಪ್ರೊ ಮ್ಯಾಕ್ಸ್‌ ಫೋನ್‌ಗಳನ್ನು ಆಪಲ್‌ ಕಂಪನಿಯು ಪರಿಚಯಿಸಲಿದೆ. (Unsplash)
ಐಫೋನ್‌ 15 ಸರಣಿಯ ಸ್ಮಾರ್ಟ್‌ಫೋನ್‌ಗಳು ಐರೋಪ್ಯ ಒಕ್ಕೂಟಕ್ಕೆ ಸೂಕ್ತವಾದ ಯುಎಸ್‌ಬಿ ಸಿ ಚಾರ್ಜಿಂಗ್‌ ಹೊಂದಿರಲಿದೆ ಎಂಬ ವದಂತಿಗಳಿವೆ. ಐಫೋನ್ 12 ಪ್ರೊ ಆವೃತ್ತಿಗಳು ವರ್ಧಿತ ಜೂಮ್  ಫೀಚರ್‌ ಹೊಂದಿರಲಿದೆ, ಫಿಸಿಕಲ್‌ ಆಕ್ಷನ್‌ ಬಟನ್‌,  ಪೆರಿಸ್ಕೋಪ್ ಕ್ಯಾಮೆರಾವನ್ನು ಒಳಗೊಂಡಿರಬಹುದು
(2 / 7)
ಐಫೋನ್‌ 15 ಸರಣಿಯ ಸ್ಮಾರ್ಟ್‌ಫೋನ್‌ಗಳು ಐರೋಪ್ಯ ಒಕ್ಕೂಟಕ್ಕೆ ಸೂಕ್ತವಾದ ಯುಎಸ್‌ಬಿ ಸಿ ಚಾರ್ಜಿಂಗ್‌ ಹೊಂದಿರಲಿದೆ ಎಂಬ ವದಂತಿಗಳಿವೆ. ಐಫೋನ್ 12 ಪ್ರೊ ಆವೃತ್ತಿಗಳು ವರ್ಧಿತ ಜೂಮ್  ಫೀಚರ್‌ ಹೊಂದಿರಲಿದೆ, ಫಿಸಿಕಲ್‌ ಆಕ್ಷನ್‌ ಬಟನ್‌,  ಪೆರಿಸ್ಕೋಪ್ ಕ್ಯಾಮೆರಾವನ್ನು ಒಳಗೊಂಡಿರಬಹುದು(Unsplash)
Google Pixel 8 series: ನೂತನ ಗೂಗಲ್‌ ಫಿಕ್ಸೆಲ್‌ 8 ಸರಣಿಯ ಸ್ಮಾರ್ಟ್‌ಫೋನ್‌ಗಳು ಮುಂದಿನ ದಿನಗಳಲ್ಲಿ ಆಗಮಿಸಲಿದೆ. ಇದು ಫಿಕ್ಸೆಲ್‌ 8 ಮತ್ತು ಫಿಕ್ಸೆಲ್‌ 8 ಪ್ರೊ ಎಂಬ ಎರಡು ಆಯ್ಕೆಗಳಲ್ಲಿ ದೊರಕುವ ಸಾಧ್ಯತೆಯಿದೆ. ಈ ಕುರಿತು ಕಂಪನಿ ಇನ್ನೂ ಖಚಿತಪಡಿಸಿಲ್ಲ. 
(3 / 7)
Google Pixel 8 series: ನೂತನ ಗೂಗಲ್‌ ಫಿಕ್ಸೆಲ್‌ 8 ಸರಣಿಯ ಸ್ಮಾರ್ಟ್‌ಫೋನ್‌ಗಳು ಮುಂದಿನ ದಿನಗಳಲ್ಲಿ ಆಗಮಿಸಲಿದೆ. ಇದು ಫಿಕ್ಸೆಲ್‌ 8 ಮತ್ತು ಫಿಕ್ಸೆಲ್‌ 8 ಪ್ರೊ ಎಂಬ ಎರಡು ಆಯ್ಕೆಗಳಲ್ಲಿ ದೊರಕುವ ಸಾಧ್ಯತೆಯಿದೆ. ಈ ಕುರಿತು ಕಂಪನಿ ಇನ್ನೂ ಖಚಿತಪಡಿಸಿಲ್ಲ. (Smartprix)
ಗೂಗಲ್‌ ಫಿಕ್ಸೆಲ್‌ 8 ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಟೆಂಪರೇಚರ್‌ ಸೆನ್ಸಾರ್‌ ಫೀಚರ್‌ ಇರುವ ಸಾಧ್ಯತೆಯಿದೆ. ಆಂಡ್ರಾಯ್ಡ್‌ 14 ಆಪರೇಟಿಂಗ್‌ ಸಿಸ್ಟಮ್‌ ಹೊಂದಿರಲಿದೆ. 12 ಜಿಬಿ ರಾಮ್‌ ಹೊಂದಿರಲಿದೆ ಎನ್ನಲಾಗಿದೆ. 
(4 / 7)
ಗೂಗಲ್‌ ಫಿಕ್ಸೆಲ್‌ 8 ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಟೆಂಪರೇಚರ್‌ ಸೆನ್ಸಾರ್‌ ಫೀಚರ್‌ ಇರುವ ಸಾಧ್ಯತೆಯಿದೆ. ಆಂಡ್ರಾಯ್ಡ್‌ 14 ಆಪರೇಟಿಂಗ್‌ ಸಿಸ್ಟಮ್‌ ಹೊಂದಿರಲಿದೆ. 12 ಜಿಬಿ ರಾಮ್‌ ಹೊಂದಿರಲಿದೆ ಎನ್ನಲಾಗಿದೆ. (Unsplash)
ಒನ್‌ಪ್ಲಸ್‌ ಫೋಲ್ಡೆಬಲ್‌: ಒನ್‌ಪ್ಲಸ್‌ ಕಂಪನಿಯೂ ಮಡುಚಬಹುದಾದ ಸ್ಮಾರ್ಟ್‌ಫೋನ್‌ ಪರಿಚಯಿಸಲಿದೆ ಎನ್ನಲಾಗಿದೆ. ಈ ವರ್ಷದ ಅಂತ್ಯದಲ್ಲಿ ಇದು ಆಗಮಿಸುವ ಸಾಧ್ಯತೆಯಿದೆ. ಹೆಚ್ಚಿನ ವಿವರ ಲಭ್ಯವಿಲ್ಲ.
(5 / 7)
ಒನ್‌ಪ್ಲಸ್‌ ಫೋಲ್ಡೆಬಲ್‌: ಒನ್‌ಪ್ಲಸ್‌ ಕಂಪನಿಯೂ ಮಡುಚಬಹುದಾದ ಸ್ಮಾರ್ಟ್‌ಫೋನ್‌ ಪರಿಚಯಿಸಲಿದೆ ಎನ್ನಲಾಗಿದೆ. ಈ ವರ್ಷದ ಅಂತ್ಯದಲ್ಲಿ ಇದು ಆಗಮಿಸುವ ಸಾಧ್ಯತೆಯಿದೆ. ಹೆಚ್ಚಿನ ವಿವರ ಲಭ್ಯವಿಲ್ಲ.
ಮೈಸ್ಮಾರ್ಟ್‌ ಪ್ರೈಸ್‌ ತಾಣವು ಹಂಚಿಕೊಂಡ ಮಾಹಿತಿಯನ್ನು ನಂಬುವುದಾದರೆ ಒನ್‌ಪ್ಲಸ್‌ ಫೋಲ್ಡೆಬಲ್‌ ಫೋನ್‌ 7.8 ಇಂಚಿನ ಇಂಟರ್ನಲ್‌ ಸ್ಕ್ರೀನ್‌ ಹೊಂದಿರಲಿದೆ. ಟ್ರಿಪಲ್‌ ಕ್ಯಾಮೆರಾ ಇರಲಿದೆ.  ಸ್ನಾಪ್‌ಡ್ರಾಗನ್‌ 8 ಜೆನ್‌ 2 ಪ್ರೊಸೆಸರ್‌ ಹೊಂದಿರಲಿದೆ.  
(6 / 7)
ಮೈಸ್ಮಾರ್ಟ್‌ ಪ್ರೈಸ್‌ ತಾಣವು ಹಂಚಿಕೊಂಡ ಮಾಹಿತಿಯನ್ನು ನಂಬುವುದಾದರೆ ಒನ್‌ಪ್ಲಸ್‌ ಫೋಲ್ಡೆಬಲ್‌ ಫೋನ್‌ 7.8 ಇಂಚಿನ ಇಂಟರ್ನಲ್‌ ಸ್ಕ್ರೀನ್‌ ಹೊಂದಿರಲಿದೆ. ಟ್ರಿಪಲ್‌ ಕ್ಯಾಮೆರಾ ಇರಲಿದೆ.  ಸ್ನಾಪ್‌ಡ್ರಾಗನ್‌ 8 ಜೆನ್‌ 2 ಪ್ರೊಸೆಸರ್‌ ಹೊಂದಿರಲಿದೆ.  (HT Tech)
ಐಕ್ಯೂಒಒ ನಿಯೊ 8 ಸೀರಿಸ್‌: ಈ ಸ್ಮಾರ್ಟ್‌ಫೋನ್‌ ಈ ವರ್ಷವೇ ಆಗಮಿಸಲಿದೆ. iQOO Neo ಮತ್ತು iQOO Neo 8 Pro ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಕಂಪನಿ ಪರಿಚಯಿಸಲಿದೆ. ಇದು ಕೂಡ 12 ಜಿಬಿ ರಾಮ್‌ ಹೊಂದಿರುವ ನಿರೀಕ್ಷೆಯಿದೆ. ಈ ಸೆಪ್ಟೆಂಬರ್‌ ತಿಂಗಳಲ್ಲಿ ಆಗಮಿಸುವ ಸೂಚನೆಯಿದೆ. 
(7 / 7)
ಐಕ್ಯೂಒಒ ನಿಯೊ 8 ಸೀರಿಸ್‌: ಈ ಸ್ಮಾರ್ಟ್‌ಫೋನ್‌ ಈ ವರ್ಷವೇ ಆಗಮಿಸಲಿದೆ. iQOO Neo ಮತ್ತು iQOO Neo 8 Pro ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಕಂಪನಿ ಪರಿಚಯಿಸಲಿದೆ. ಇದು ಕೂಡ 12 ಜಿಬಿ ರಾಮ್‌ ಹೊಂದಿರುವ ನಿರೀಕ್ಷೆಯಿದೆ. ಈ ಸೆಪ್ಟೆಂಬರ್‌ ತಿಂಗಳಲ್ಲಿ ಆಗಮಿಸುವ ಸೂಚನೆಯಿದೆ. (iQOO)

    ಹಂಚಿಕೊಳ್ಳಲು ಲೇಖನಗಳು