logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಮೆರಿಕದ ಟೆನ್ನೆಸ್ಸಿಯಲ್ಲಿ ಭೀಕರ ಸುಂಟರಗಾಳಿ, ಗುಡುಗು ಸಹಿತ ಮಳೆಗೆ 6 ಜನ ಸಾವು; ಹಲವರಿಗೆ ಗಾಯ, ಮನೆಗಳಿಗೆ ಹಾನಿ; ಫೆೋಟೊಸ್

ಅಮೆರಿಕದ ಟೆನ್ನೆಸ್ಸಿಯಲ್ಲಿ ಭೀಕರ ಸುಂಟರಗಾಳಿ, ಗುಡುಗು ಸಹಿತ ಮಳೆಗೆ 6 ಜನ ಸಾವು; ಹಲವರಿಗೆ ಗಾಯ, ಮನೆಗಳಿಗೆ ಹಾನಿ; ಫೆೋಟೊಸ್

Dec 10, 2023 05:41 PM IST

ಅಮೆರಿಕದ ಟೆನ್ನೆಸ್ಸಿಯಲ್ಲಿ ಶನಿವಾರ ಸಂಭವಿಸಿದ ಭೀಕರ ಸುಂಟರಗಾಳಿ ಮತ್ತು ಗುಡುಗು ಸಹಿತ ಭಾರಿ ಮಳೆಗೆ ಕನಿಷ್ಠ ಆರು ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಮನೆಗಳಿಗೆ ಹಾನಿಯಾಗಿದೆ. ವಿದ್ಯುತ್ ಇಲ್ಲದೆ ಜನ ಪರದಾಡುವಂತಾಗಿದೆ.

ಅಮೆರಿಕದ ಟೆನ್ನೆಸ್ಸಿಯಲ್ಲಿ ಶನಿವಾರ ಸಂಭವಿಸಿದ ಭೀಕರ ಸುಂಟರಗಾಳಿ ಮತ್ತು ಗುಡುಗು ಸಹಿತ ಭಾರಿ ಮಳೆಗೆ ಕನಿಷ್ಠ ಆರು ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಮನೆಗಳಿಗೆ ಹಾನಿಯಾಗಿದೆ. ವಿದ್ಯುತ್ ಇಲ್ಲದೆ ಜನ ಪರದಾಡುವಂತಾಗಿದೆ.
ಅಮೆರಿಕದ ಟೆನ್ನೆಸ್ಸಿಯಲ್ಲಿ ಉಂಟಾಗಿದ್ದ ಭೀಕರ ಸುರಂಟರಗಾಳಿ ಹಾಗೂ ಗುಡುಗು ಸಹಿತಿ ಭಾರಿ ಮಳೆಯಿಂದ ಆರು ಮಂದಿ ಮೃತಪಟ್ಟಿದ್ದಾರೆೆ. 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
(1 / 8)
ಅಮೆರಿಕದ ಟೆನ್ನೆಸ್ಸಿಯಲ್ಲಿ ಉಂಟಾಗಿದ್ದ ಭೀಕರ ಸುರಂಟರಗಾಳಿ ಹಾಗೂ ಗುಡುಗು ಸಹಿತಿ ಭಾರಿ ಮಳೆಯಿಂದ ಆರು ಮಂದಿ ಮೃತಪಟ್ಟಿದ್ದಾರೆೆ. 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.(REUTERS)
ಟೆನ್ನೆಸ್ಸಿ ರಾಜ್ಯದಲ್ಲಿ ಸಂಭವಿಸಿದ್ದ ಸುಂಟರಗಾಳಿ ಭಾರಿ ಅವಾಂತರವನ್ನು ಸೃಷ್ಟಿಸಿತ್ತು. ನ್ಯಾಶ್ವಿಲ್ಲಾಯ ಉತ್ತರ ಉಪನಗರದಲ್ಲಿ ಮರಗಳು ಬಿದ್ದ ಪರಿಣಾಮ ವಿದ್ಯುತ್ ಸಂಪೂರ್ಣವಾಗಿ ಸ್ಥಗಿತವಾಗಿತ್ತು. ನಗರದಲ್ಲಿ ಸಂಪೂರ್ಣವಾಗಿ ಕತ್ತಲು ಆವರಿಸಿತ್ತು.
(2 / 8)
ಟೆನ್ನೆಸ್ಸಿ ರಾಜ್ಯದಲ್ಲಿ ಸಂಭವಿಸಿದ್ದ ಸುಂಟರಗಾಳಿ ಭಾರಿ ಅವಾಂತರವನ್ನು ಸೃಷ್ಟಿಸಿತ್ತು. ನ್ಯಾಶ್ವಿಲ್ಲಾಯ ಉತ್ತರ ಉಪನಗರದಲ್ಲಿ ಮರಗಳು ಬಿದ್ದ ಪರಿಣಾಮ ವಿದ್ಯುತ್ ಸಂಪೂರ್ಣವಾಗಿ ಸ್ಥಗಿತವಾಗಿತ್ತು. ನಗರದಲ್ಲಿ ಸಂಪೂರ್ಣವಾಗಿ ಕತ್ತಲು ಆವರಿಸಿತ್ತು.(AP)
ಅಗ್ನೇಯ ಅಮೆರಿಕದ ನ್ಯಾಶ್ವಿಲ್ಲಾಯ ಉತ್ತರ ಉಪನಗರದಲ್ಲಿ ಸುಂಟರಗಾಳಿ, ಗುಡುಗು ಸಹಿತ ಮಳೆಗೆ ಮೂರು ಸಾವುಗಳಾಗಿವೆ ಎಂದು ಅಲ್ಲಿನ ತುರ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.
(3 / 8)
ಅಗ್ನೇಯ ಅಮೆರಿಕದ ನ್ಯಾಶ್ವಿಲ್ಲಾಯ ಉತ್ತರ ಉಪನಗರದಲ್ಲಿ ಸುಂಟರಗಾಳಿ, ಗುಡುಗು ಸಹಿತ ಮಳೆಗೆ ಮೂರು ಸಾವುಗಳಾಗಿವೆ ಎಂದು ಅಲ್ಲಿನ ತುರ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.(AP)
ಸುರಂಟರಗಾಳಿ, ಗುಡುಗು ಸಹಿತ ಮಳೆಯಿಂದಾಗಿ ವಿದ್ಯುತ್ ಕಂಬಗಳು ಧರೆಗುರುಳಿವೆ, ಮರಗಳು ಮುರಿದು ಬಿದ್ದಿವೆ. ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ತಿಳಿಸಿದೆ.
(4 / 8)
ಸುರಂಟರಗಾಳಿ, ಗುಡುಗು ಸಹಿತ ಮಳೆಯಿಂದಾಗಿ ವಿದ್ಯುತ್ ಕಂಬಗಳು ಧರೆಗುರುಳಿವೆ, ಮರಗಳು ಮುರಿದು ಬಿದ್ದಿವೆ. ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ತಿಳಿಸಿದೆ.(AP)
ಟೆನ್ನೆಸ್ಸಿಯದ ಹೆಂಡರ್ಸನ್‌ವೆಲ್ಲೆಗೆ ಸುಂಟರಗಾಳಿ ಅಪ್ಪಿಸಿದ ನಂತರ ಕಾರೊಂದು ಅವಶೇಷಗಳಡಿ ಸಿಲುಕಿಕೊಂಡಿರುವುದನ್ನು ಚಿತ್ರದಲ್ಲಿ ಕಾಣಬಹುದು. 
(5 / 8)
ಟೆನ್ನೆಸ್ಸಿಯದ ಹೆಂಡರ್ಸನ್‌ವೆಲ್ಲೆಗೆ ಸುಂಟರಗಾಳಿ ಅಪ್ಪಿಸಿದ ನಂತರ ಕಾರೊಂದು ಅವಶೇಷಗಳಡಿ ಸಿಲುಕಿಕೊಂಡಿರುವುದನ್ನು ಚಿತ್ರದಲ್ಲಿ ಕಾಣಬಹುದು. (AP)
ಪ್ರಕೃತಿಯ ವಿಕೋಪದಿಂದ ಮಡಿದವರಿಗೆ ಅಲ್ಲಿನ ಜನಪ್ರತಿನಿಧಿಗಳು ಕಂಬನಿ ಮಿಡಿದಿದ್ದಾರೆ. ದುರಂತದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡವರ ಕುಟುಂಬಗಳಿಗೆ ಸಾಂತ್ವನ ಇರಲಿದೆ. ಸಂತ್ರಸ್ತ ಕುಟುಂಬಗಳ ದುಃಖದಲ್ಲಿ ಅವರಿಗೆ ನೆರವಾಗಲು ಸಿದ್ಧರಿರುವುದಾಗಿ ಕ್ಲಾರ್ಕ್ಸ್‌ವಿಲ್ಲೆ ಮೇಯರ್ ಜೋ ಪಿಟ್ಸ್ ಹೇಳಿದ್ದಾರೆ.
(6 / 8)
ಪ್ರಕೃತಿಯ ವಿಕೋಪದಿಂದ ಮಡಿದವರಿಗೆ ಅಲ್ಲಿನ ಜನಪ್ರತಿನಿಧಿಗಳು ಕಂಬನಿ ಮಿಡಿದಿದ್ದಾರೆ. ದುರಂತದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡವರ ಕುಟುಂಬಗಳಿಗೆ ಸಾಂತ್ವನ ಇರಲಿದೆ. ಸಂತ್ರಸ್ತ ಕುಟುಂಬಗಳ ದುಃಖದಲ್ಲಿ ಅವರಿಗೆ ನೆರವಾಗಲು ಸಿದ್ಧರಿರುವುದಾಗಿ ಕ್ಲಾರ್ಕ್ಸ್‌ವಿಲ್ಲೆ ಮೇಯರ್ ಜೋ ಪಿಟ್ಸ್ ಹೇಳಿದ್ದಾರೆ.(AP)
ಭೀಕರ ಸುಂಟರಗಾಳಿಯ ಆರ್ಭಟಕ್ಕೆ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ವಾಹನಗಳೇ ಪಲ್ಟಿಯಾಗಿವೆ.
(7 / 8)
ಭೀಕರ ಸುಂಟರಗಾಳಿಯ ಆರ್ಭಟಕ್ಕೆ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ವಾಹನಗಳೇ ಪಲ್ಟಿಯಾಗಿವೆ.(AP)
ಸುಮಾರು 80 ಸಾವಿರಕ್ಕೂ ಅಧಿಕ ಮಂದಿ ವಿದ್ಯುತ್ ಇಲ್ಲದೆ ಶನಿವಾರ ಪರದಾಟ ನಡೆಸುತ್ತಿದ್ದಾರೆ. ವಿದ್ಯುತ್ ಕಂಬಗಳು ರಸ್ತೆಗಳ ಮೇಲೆಯೇ ಬಿದ್ದಿರುವುದು ಕಾಣಬಹುದು. ಜೊತೆಗೆ ಭಾರಿ ಮಳೆಯಿಂದ ಟೆನ್ನೆಸ್ಸಿ ಜನ ಹೈರಾಣವಾಗಿದ್ದಾರೆ.
(8 / 8)
ಸುಮಾರು 80 ಸಾವಿರಕ್ಕೂ ಅಧಿಕ ಮಂದಿ ವಿದ್ಯುತ್ ಇಲ್ಲದೆ ಶನಿವಾರ ಪರದಾಟ ನಡೆಸುತ್ತಿದ್ದಾರೆ. ವಿದ್ಯುತ್ ಕಂಬಗಳು ರಸ್ತೆಗಳ ಮೇಲೆಯೇ ಬಿದ್ದಿರುವುದು ಕಾಣಬಹುದು. ಜೊತೆಗೆ ಭಾರಿ ಮಳೆಯಿಂದ ಟೆನ್ನೆಸ್ಸಿ ಜನ ಹೈರಾಣವಾಗಿದ್ದಾರೆ.(AP)

    ಹಂಚಿಕೊಳ್ಳಲು ಲೇಖನಗಳು