logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೂರು ಮಾದರಿಯ ಕ್ರಿಕೆಟ್​ನಲ್ಲಿ 100 ಪಂದ್ಯ ಆಡಿದ ಎಲೈಟ್ ಕ್ಲಬ್​ಗೆ ಸೇರಿದ ಟಿಮ್ ಸೌಥಿ; ಈ ದಾಖಲೆ ವಿಶ್ವದ 4ನೇ ಆಟಗಾರ

ಮೂರು ಮಾದರಿಯ ಕ್ರಿಕೆಟ್​ನಲ್ಲಿ 100 ಪಂದ್ಯ ಆಡಿದ ಎಲೈಟ್ ಕ್ಲಬ್​ಗೆ ಸೇರಿದ ಟಿಮ್ ಸೌಥಿ; ಈ ದಾಖಲೆ ವಿಶ್ವದ 4ನೇ ಆಟಗಾರ

Mar 10, 2024 04:14 PM IST

ಟೆಸ್ಟ್, ಏಕದಿನ ಮತ್ತು ಟಿ20ಐನಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿರುವುದು ವಿಶ್ವದ ಕೇವಲ ನಾಲ್ವರು ಆಟಗಾರರು ಮಾತ್ರ. ಆ ಪ್ರಮುಖರ ಪಟ್ಟಿ ಇಲ್ಲಿದೆ ನೋಡಿ.

  • ಟೆಸ್ಟ್, ಏಕದಿನ ಮತ್ತು ಟಿ20ಐನಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿರುವುದು ವಿಶ್ವದ ಕೇವಲ ನಾಲ್ವರು ಆಟಗಾರರು ಮಾತ್ರ. ಆ ಪ್ರಮುಖರ ಪಟ್ಟಿ ಇಲ್ಲಿದೆ ನೋಡಿ.
ಧರ್ಮಶಾಲಾದಲ್ಲಿ ನಡೆದ ಭಾರತ-ಇಂಗ್ಲೆಂಡ್ ಪಂದ್ಯದಲ್ಲಿ ಆರ್​ ಅಶ್ವಿನ್ ಮತ್ತು ಜಾನಿ ಬೈರ್​ಸ್ಟೋ ಏಕಕಾಲದಲ್ಲಿ 100 ಟೆಸ್ಟ್​​ ಮೈಲಿಗಲ್ಲನ್ನು ತಲುಪಿದರು. ಅಂತೆಯೇ ಕೇನ್ ವಿಲಿಯಮ್ಸನ್ ಮತ್ತು ಟಿಮ್ ಸೌಥಿ ಕ್ರೈಸ್ಟ್​​​ಚರ್ಚ್​​ನಲ್ಲಿ ನಡೆದ ನ್ಯೂಜಿಲೆಂಡ್-ಆಸ್ಟ್ರೇಲಿಯಾ ಪಂದ್ಯದಲ್ಲಿ ಏಕಕಾಲದಲ್ಲಿ 100 ಟೆಸ್ಟ್​​ ಪಂದ್ಯಗಳ ಮೈಲಿಗಲ್ಲನ್ನು ತಲುಪಿದರು. 
(1 / 7)

ಇದರ ನಡುವೆಯೂ ಟಿಮ್ ಸೌಥಿ ವಿಶೇಷ ದಾಖಲೆಯೊಂದನ್ನು ಬರೆದರು. ಟಿ20, ಏಕದಿನ ಮತ್ತು ಟೆಸ್ಟ್​​ ಕ್ರಿಕೆಟ್​ನಲ್ಲಿ ನೂರು ಅಥವಾ ಅದಕ್ಕಿಂತ ಹೆಚ್ಚಿನ ಟೆಸ್ಟ್​​ಗಳನ್ನಾಡಿದ ವಿಶ್ವದ ನಾಲ್ಕನೇ ಆಟಗಾರ ಎಂಬ ವಿಶೇಷ ದಾಖಲೆಗೆ ಪಾತ್ರರಾದರು. ಹಾಗಾಗಿ ಸೌಥಿ ಹೊರತಾಗಿ ಎಲ್ಲಾ ಫಾರ್ಮೆಟ್​​ಗಳಲ್ಲಿ ನೂರು ಪಂದ್ಯಗಳನ್ನಾಡಿದ ಆಟಗಾರರು ಯಾರು? ಇಲ್ಲಿದೆ ವಿವರ.
(2 / 7)

ಟಿಮ್ ಸೌಥಿ ಟೆಸ್ಟ್, ಏಕದಿನ ಮತ್ತು ಟಿ 0 ಸೇರಿದಂತೆ ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ 100 ಪಂದ್ಯಗಳನ್ನು ಆಡಿದ ವಿಶ್ವದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮುನ್ನ ನ್ಯೂಜಿಲೆಂಡ್​ನ ರಾಸ್ ಟೇಲರ್, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮತ್ತು ಭಾರತದ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​​ನ 3 ಸ್ವರೂಪಗಳಲ್ಲಿ 100 ಪಂದ್ಯಗಳನ್ನು ಆಡಿದ ಮೊದಲ ಬೌಲರ್ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. ಸೌಥಿ 100 ಟೆಸ್ಟ್, 161 ಏಕದಿನ ಮತ್ತು 123 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.
(3 / 7)

ಕಿವೀಸ್​​ನ ಮಾಜಿ ಸ್ಟಾರ್ ಆಟಗಾರ ರಾಸ್ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್​​ನ ಎಲ್ಲಾ ಮೂರು ಸ್ವರೂಪಗಳಲ್ಲಿ 100 ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ವಿಶ್ವ ದಾಖಲೆಗೆ ಒಳಗಾಗಿದ್ದಾರೆ. 112 ಟೆಸ್ಟ್, 236 ಏಕದಿನ, 102 ಟಿ20 ಪಂದ್ಯಗಳನ್ನು ಆಡಿದ್ದಾರೆ.
(4 / 7)

ಎಲ್ಲಾ ಮೂರು ಸ್ವರೂಪಗಳಲ್ಲಿ 100 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ವಿಶ್ವದ 2ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಕೊಹ್ಲಿ ಈವರೆಗೆ 113 ಟೆಸ್ಟ್, 292 ಏಕದಿನ, 117 ಟಿ20 ಪಂದ್ಯಗಳನ್ನು ಆಡಿದ್ದಾರೆ.
(5 / 7)

ಡೇವಿಡ್ ವಾರ್ನರ್ ಎಲೈಟ್ ಕ್ಲಬ್ ಸೇರಿದ ವಿಶ್ವದ 3ನೇ ಕ್ರಿಕೆಟಿಗ ಎನಿಸಿದ್ದಾರೆ. ವಾರ್ನರ್ ಒಟ್ಟು 112 ಟೆಸ್ಟ್, 161 ಏಕದಿನ, 103 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ.
(6 / 7)

ಕ್ಷಣಕ್ಷಣದ ಅಪ್ಡೇಟ್ಸ್​​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
(7 / 7)
ಕ್ಷಣಕ್ಷಣದ ಅಪ್ಡೇಟ್ಸ್​​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.

    ಹಂಚಿಕೊಳ್ಳಲು ಲೇಖನಗಳು