logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kajal Aggarwal Birthday: ಬರ್ತ್‌ಡೇ ಸಂಭ್ರಮದಲ್ಲಿ ಕಾಜಲ್‌ ಅಗರ್‌ವಾಲ್‌; ಪತಿ, ಮಗುವಿಗಾಗಿ ಸಿನಿಮಾ ತೊರೆಯಲು ಮಗಧೀರ ಸುಂದರಿಯ ನಿರ್ಧಾರ?

Kajal Aggarwal Birthday: ಬರ್ತ್‌ಡೇ ಸಂಭ್ರಮದಲ್ಲಿ ಕಾಜಲ್‌ ಅಗರ್‌ವಾಲ್‌; ಪತಿ, ಮಗುವಿಗಾಗಿ ಸಿನಿಮಾ ತೊರೆಯಲು ಮಗಧೀರ ಸುಂದರಿಯ ನಿರ್ಧಾರ?

Jun 19, 2023 11:17 AM IST

ಟಾಲಿವುಡ್‌ ಬ್ಯೂಟಿ, ಮಗಧೀರ ಚೆಲುವೆ ಕಾಜಲ್‌ ಅಗರ್‌ವಾಲ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮದುವೆ ನಂತರ ಕಾಜಲ್‌ ಎ ಕಿಚ್ಲು ಎಂದು ಹೆಸರು ಬದಲಿಸಿಕೊಂಡಿರುವ ಈ ಸುಂದರಿ ಇಂದು 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 

ಹುಟ್ಟುಹಬ್ಬ ಆಚರಿಸಿಕೊಳ್ಳುತಿರುವ ಮೆಚ್ಚಿನ ನಟಿಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಶುಭಾಶಯ ಕೋರುತ್ತಿದ್ದಾರೆ. 
(1 / 13)
ಹುಟ್ಟುಹಬ್ಬ ಆಚರಿಸಿಕೊಳ್ಳುತಿರುವ ಮೆಚ್ಚಿನ ನಟಿಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಶುಭಾಶಯ ಕೋರುತ್ತಿದ್ದಾರೆ. (PC: Kajal Aggarwal Facebook)
ಮದುವೆ, ಮಗು ಆದ ನಂತರ ಕೆಲವು ದಿನಗಳ ಕಾಲ ಸಿನಿಮಾಗಳಿಂದ ದೂರ ಉಳಿದಿದ್ದ ಕಾಜಲ್‌ ಅಗರ್‌ವಾಲ್‌ ಈಗ ಮತ್ತೆ ಚಿತ್ರರಂಗಕ್ಕೆ ಕಮ್‌ ಬ್ಯಾಕ್‌ ಮಾಡಿದ್ದಾರೆ. ಮೊದಲಿನಂತೆ ಅವಕಾಶ ಗಳಿಸುತ್ತಿದ್ದಾರೆ. 
(2 / 13)

ಮಗು ಆದ ನಂತರ ಬಹಳ ದಪ್ಪ ಇದ್ದ ಕಾಜಲ್‌ ನೋಡಿ, ಇನ್ನು ಮತ್ತೆ ಈಕೆ ಸಿನಿಮಾಗೆ ಬರುವುದಿಲ್ಲ. ಕಾಜಲ್‌ ಸಿನಿಕರಿಯರ್‌ ಮುಗಿಯಿತು ಎಂದು ಕಾಲೆಳೆದವರೇ ಹೆಚ್ಚು. ಆದರೆ ಕಾಜಲ್‌ ವರ್ಕೌಟ್‌ ಮಾಡಿ ಮತ್ತೆ ಮೊದಲಿನಂತೆ ಆಗಿದ್ದಾರೆ. 
(3 / 13)

ಕಾಜಲ್‌ ಮೂಲತ: ಮಹಾರಾಷ್ಟ್ರದ ಮುಂಬೈನವರು. 2004ರಲ್ಲಿ ಹಿಂದಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಕಾಜಲ್‌ 2007ರಲ್ಲಿ ಲಕ್ಷ್ಮಿ ಕಲ್ಯಾಣಂ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಬಂದರು. 
(4 / 13)

ಮಹಾರಾಷ್ಟ್ರಕ್ಕೆ ಸೇರಿದವರಾದರೂ ಕಾಜಲ್‌ ಹೆಸರು ಮಾಡಿದ್ದು ಮಾತ್ರ ಟಾಲಿವುಡ್‌ನಲ್ಲಿ. ಈ ಚೆಲುವೆ ಈಗ ತೆಲುಗು ಹುಡುಗಿಯೇ ಆಗಿ ಹೋಗಿದ್ದಾರೆ. ತೆಲುಗಿನಲ್ಲಿ ಅತಿ ಹೆಚ್ಚು ಫ್ಯಾನ್‌ ಫಾಲೋಯಿಂಗ್‌ ಹೊಂದಿರುವ ನಟಿಯರಲ್ಲಿ ಕಾಜಲ್‌ ಕೂಡಾ ಒಬ್ಬರು. 
(5 / 13)

ಚಂದಮಾಮ, ಸರೋಜಾ, ಆಟಾಡಿಸ್ತಾ, ಮಗಧೀರ, ಆರ್ಯ 2, ಡಾರ್ಲಿಂಗ್, ಬೃಂದಾವನಂ, ಮಿಸ್ಟರ್‌ ಪರ್ಫೆಕ್ಟ್‌, ಸಿಂಗಂ, ಬ್ಯುಸ್ನೆಸ್‌ಮ್ಯಾನ್‌, ತುಪಾಕಿ, ನಾಯಕ್‌, ಟೆಂಪರ್‌, ಮಾರಿ, ಸೈಜ್‌ ಝೀರೋ, ಎಂಎಲ್‌ಎ, ಕವಚಂ, ಸೀತಾ ಸೇರಿ ಅನೇಕ ತೆಲುಗು ಸಿನಿಮಾಗಳಲ್ಲಿ ಕಾಜಲ್‌ ನಟಿಸಿದ್ದಾರೆ. 
(6 / 13)

ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ಕಾಜಲ್‌ ಅಗರ್‌ವಾಲ್‌ 2020 ರಲ್ಲಿ ತಮ್ಮ ಧೀರ್ಘಕಾಲದ ಸ್ನೇಹಿತ ಗೌತಮ್ ಕಿಚ್ಲು ಅವರನ್ನು ವಿವಾಹವಾದರು.  ಮೊದಲು ಒಪ್ಪಿಕೊಂಡಿದ್ದ ಎಲ್ಲಾ ಪ್ರಾಜೆಕ್ಟ್​​​​ಗಳನ್ನು ಮುಗಿಸಿ ಫ್ಯಾಮಿಲಿ ಕಡೆಗೆ ಗಮನ ನೀಡಿದರು.
(7 / 13)

ಏಪ್ರಿಲ್‌ 2022ರಲ್ಲಿ ಕಾಜಲ್‌ ಅಗರ್‌ವಾಲ್‌ ಗಂಡು ಮಗುವಿಗೆ ಜನ್ಮ ನೀಡಿದರು. ಮಗುವಿಗೆ ನೀಲ್‌ ಕಿಚ್ಲು ಎಂದು ಹೆಸರಿಟ್ಟಿದ್ದಾರೆ. 
(8 / 13)

3 ವರ್ಷಗಳ ಗ್ಯಾಪ್‌ ಬಳಿಕ ಕಾಜಲ್‌ ಮತ್ತೆ ಮೊದಲಿನಂತೆ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಗರ್ಭಿಣಿ ಆಗಿದ್ದಾಗ ದಪ್ಪ ಇದ್ದ ಕಾಜಲ್‌ ಈಗ ಮತ್ತೆ ಸ್ಲಿಮ್‌ ಆಗಿದ್ದಾರೆ. 
(9 / 13)

ಸಿನಿಮಾ ಜೊತೆಗೆ ಕೆಲವೊಂದು ಜಾಹೀರಾತುಗಳಲ್ಲಿ ಕೂಡಾ ಕಾಜಲ್‌ ಅಗರ್‌ವಾಲ್‌ ನಟಿಸುತ್ತಿದ್ದಾರೆ. 
(10 / 13)
ಸಿನಿಮಾ ಜೊತೆಗೆ ಕೆಲವೊಂದು ಜಾಹೀರಾತುಗಳಲ್ಲಿ ಕೂಡಾ ಕಾಜಲ್‌ ಅಗರ್‌ವಾಲ್‌ ನಟಿಸುತ್ತಿದ್ದಾರೆ. 
ಮತ್ತೆ ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ ಪತಿ ಹಾಗೂ ಮಗುವಿನ ಕಡೆಗೆ ಸರಿಯಾಗಿ ಗಮನ ನೀಡಲಾಗುತ್ತಿಲ್ಲ. ಆದ್ದರಿಂದ ಈಗ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿ ಕಾಜಲ್‌ ನಟನೆಗೆ ಶಾಶ್ವತವಾಗಿ ಗುಡ್‌ ಬೈ ಹೇಳಲಿದ್ದಾರೆ ಎಂದು ಟಾಲಿವುಡ್‌ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. 
(11 / 13)

ಕಾಜಲ್‌ ನಿರ್ಧಾರ ಕೇಳಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ದಯವಿಟ್ಟು ನಿರ್ಧಾರ ಬದಲಿಸಿ, ಚಿತ್ರರಂಗ ತೊರೆಯುವ ಯೋಚನೆ ಮಾಡಬೇಡಿ ಎಂದು ಮನವಿ ಮಾಡುತ್ತಿದ್ದಾರೆ. 
(12 / 13)

ಸದ್ಯಕ್ಕೆ ಕಾಜಲ್‌ ತೆಲುಗಿನ ಭಗವಂತ್‌ ಕೇಸರಿ, ತಮಿಳಿನಲ್ಲಿ ಇಂಡಿಯನ್‌ 2, ಪ್ಯಾರಿಸ್‌ ಪ್ಯಾರಿಸ್‌, ಹಿಂದಿಯಲ್ಲಿ ಉಮಾ, ಹೆಸರಿಡದ ಇನ್ನೂ 2 ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. 
(13 / 13)

    ಹಂಚಿಕೊಳ್ಳಲು ಲೇಖನಗಳು