logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Nasa Astronomy Pictures: ಒಂದು ವಾರದಲ್ಲಿ ಬ್ರಹ್ಮಾಂಡದಲ್ಲಿ ಏನೆಲ್ಲಾ ಆಗಿದೆ?: ನಾಸಾದಿಂದ 'ವಿಶ್ವ' ದರ್ಶನ..

NASA Astronomy Pictures: ಒಂದು ವಾರದಲ್ಲಿ ಬ್ರಹ್ಮಾಂಡದಲ್ಲಿ ಏನೆಲ್ಲಾ ಆಗಿದೆ?: ನಾಸಾದಿಂದ 'ವಿಶ್ವ' ದರ್ಶನ..

Mar 03, 2023 01:50 PM IST

ನಾಸಾ ತನ್ನ ಖಗೋಳಶಾಸ್ತ್ರದ ಚಿತ್ರವನ್ನು ಪ್ರತಿದಿನ ಬಿಡುಗಡೆ ಮಾಡುತ್ತದೆ, ಪ್ರಪಂಚದಾದ್ಯಂತದ ಆಸ್ಟ್ರೋ ಫೋಟೋಗ್ರಾಫರ್‌ಗಳು ಸೆರೆಹಿಡಿದ ಆಕಾಶಕಾಯಗಳ  ಛಾಯಾಚಿತ್ರಗಳನ್ನು ಇದು ಒಳಗೊಂಡಿರುತ್ತದೆ. ವಾರದ ಪ್ರಮುಖ ನಾಸಾ ಖಗೋಳಶಾಸ್ತ್ರದ ಚಿತ್ರಗಳಾದ ಫ್ಲೇಮಿಂಗ್ ನೆಬ್ಯುಲಾ, ಕ್ರೆಸೆಂಟ್ ಮೂನ್, ಶುಕ್ರ, ಗುರು ಮತ್ತು ಇನ್ನೂ ಹೆಚ್ಚಿನದನ್ನು ಇಲ್ಲಿ ಪರಿಶೀಲಿಸಿ.

  • ನಾಸಾ ತನ್ನ ಖಗೋಳಶಾಸ್ತ್ರದ ಚಿತ್ರವನ್ನು ಪ್ರತಿದಿನ ಬಿಡುಗಡೆ ಮಾಡುತ್ತದೆ, ಪ್ರಪಂಚದಾದ್ಯಂತದ ಆಸ್ಟ್ರೋ ಫೋಟೋಗ್ರಾಫರ್‌ಗಳು ಸೆರೆಹಿಡಿದ ಆಕಾಶಕಾಯಗಳ  ಛಾಯಾಚಿತ್ರಗಳನ್ನು ಇದು ಒಳಗೊಂಡಿರುತ್ತದೆ. ವಾರದ ಪ್ರಮುಖ ನಾಸಾ ಖಗೋಳಶಾಸ್ತ್ರದ ಚಿತ್ರಗಳಾದ ಫ್ಲೇಮಿಂಗ್ ನೆಬ್ಯುಲಾ, ಕ್ರೆಸೆಂಟ್ ಮೂನ್, ಶುಕ್ರ, ಗುರು ಮತ್ತು ಇನ್ನೂ ಹೆಚ್ಚಿನದನ್ನು ಇಲ್ಲಿ ಪರಿಶೀಲಿಸಿ.
ಶುಕ್ರ-ಗುರು ಸಂಯೋಗ (ಫೆಬ್ರವರಿ 27) - ಶುಕ್ರ ಮತ್ತು ಗುರುಗ್ರಹದ  ವಿಹಂಗಮ ನೋಟವನ್ನು ಇದು ಒಳಗೊಂಢಿದೆ. ಸೌರವ್ಯೂಹದ ಒಳಭಾಗದಿಂದ ಸೂರ್ಯನ ಬೆಳಕನ್ನು ಪ್ರತಿಬಿಂಬಿಸುವ ಧೂಳಿನ ಬ್ಯಾಂಡ್‌ನ್ನು ಇಲ್ಲಿ ಗಮನಿಸಬಹುದಾಗಿದೆ,
(1 / 4)
ಶುಕ್ರ-ಗುರು ಸಂಯೋಗ (ಫೆಬ್ರವರಿ 27) - ಶುಕ್ರ ಮತ್ತು ಗುರುಗ್ರಹದ  ವಿಹಂಗಮ ನೋಟವನ್ನು ಇದು ಒಳಗೊಂಢಿದೆ. ಸೌರವ್ಯೂಹದ ಒಳಭಾಗದಿಂದ ಸೂರ್ಯನ ಬೆಳಕನ್ನು ಪ್ರತಿಬಿಂಬಿಸುವ ಧೂಳಿನ ಬ್ಯಾಂಡ್‌ನ್ನು ಇಲ್ಲಿ ಗಮನಿಸಬಹುದಾಗಿದೆ,(NASA/Ruslan Merzlyakov)
ಕ್ರೆಸೆಂಟ್ ಮೂನ್ ಮತ್ತು ಟೆಂಪಲ್ ಆಫ್ ಪೋಸಿಡಾನ್ (ಫೆಬ್ರವರಿ 28) - ಇದು ಗ್ರೀಸ್‌ನಲ್ಲಿರುವ ಪುರಾತನ ಗ್ರೀಕ್ ಪೋಸಿಡಾನ್ ದೇವಾಲಯದ ಮೇಲ್ಭಾಗದಲ್ಲಿ, ತೆಳುವಾದ ಅರ್ಧಚಂದ್ರಾಕಾರದ ಚಂದ್ರನ ಅದ್ಭುತ ಸ್ನ್ಯಾಪ್‌ಶಾಟ್ ಆಗಿದೆ. ನಾಸಾದ ಪ್ರಕಾರ, ನಾವು ಭೂಮಿಯ ಮೇಲೆ ಕಾಣುವ ಚಂದ್ರನ ಬೆಳಕು, ಚಂದ್ರನ ಬೂದು-ಬಿಳಿ ಮೇಲ್ಮೈಯಿಂದ ಪ್ರತಿಫಲಿಸುವ ಸೂರ್ಯನ ಬೆಳಕಾಗಿದೆ.
(2 / 4)
ಕ್ರೆಸೆಂಟ್ ಮೂನ್ ಮತ್ತು ಟೆಂಪಲ್ ಆಫ್ ಪೋಸಿಡಾನ್ (ಫೆಬ್ರವರಿ 28) - ಇದು ಗ್ರೀಸ್‌ನಲ್ಲಿರುವ ಪುರಾತನ ಗ್ರೀಕ್ ಪೋಸಿಡಾನ್ ದೇವಾಲಯದ ಮೇಲ್ಭಾಗದಲ್ಲಿ, ತೆಳುವಾದ ಅರ್ಧಚಂದ್ರಾಕಾರದ ಚಂದ್ರನ ಅದ್ಭುತ ಸ್ನ್ಯಾಪ್‌ಶಾಟ್ ಆಗಿದೆ. ನಾಸಾದ ಪ್ರಕಾರ, ನಾವು ಭೂಮಿಯ ಮೇಲೆ ಕಾಣುವ ಚಂದ್ರನ ಬೆಳಕು, ಚಂದ್ರನ ಬೂದು-ಬಿಳಿ ಮೇಲ್ಮೈಯಿಂದ ಪ್ರತಿಫಲಿಸುವ ಸೂರ್ಯನ ಬೆಳಕಾಗಿದೆ.(NASA/Elias Chasiotis)
ಫ್ಲೇಮಿಂಗ್ ನೆಬ್ಯುಲಾ, ಟ್ಯಾಡ್‌ಪೋಲ್ ನೆಬ್ಯುಲಾ ಮತ್ತು ಕಾಮೆಟ್ ZTF (ಮಾರ್ಚ್ 1) - ಫ್ಲೇಮಿಂಗ್ ಸ್ಟಾರ್ ನೆಬ್ಯುಲಾ ಮತ್ತು ಟ್ಯಾಡ್‌ಪೋಲ್ ನೆಬ್ಯುಲಾ ಧೂಮಕೇತು ZTF ಸಾಗುವ ದಾರಿಯಲ್ಲಿ ಕಂಡುಬಂದ ಚಿತ್ರ ಇದಾಗಿದೆ. ಫ್ಲೇಮಿಂಗ್ ಸ್ಟಾರ್ ನೆಬ್ಯುಲಾ ಎಂದು ಕರೆಯಲ್ಪಡುವ IC405, ಸುಮಾರು 1,500 ಜ್ಯೋತಿರ್ವರ್ಷಗಳ ದೂರದಲ್ಲಿದೆ. ಈ ನೆಬುಲಾ ಸುಮಾರು 5 ಬೆಳಕಿನ ವರ್ಷಗಳ ವ್ಯಾಪ್ತಿಯನ್ನು ಹೊಂದಿದೆ.
(3 / 4)
ಫ್ಲೇಮಿಂಗ್ ನೆಬ್ಯುಲಾ, ಟ್ಯಾಡ್‌ಪೋಲ್ ನೆಬ್ಯುಲಾ ಮತ್ತು ಕಾಮೆಟ್ ZTF (ಮಾರ್ಚ್ 1) - ಫ್ಲೇಮಿಂಗ್ ಸ್ಟಾರ್ ನೆಬ್ಯುಲಾ ಮತ್ತು ಟ್ಯಾಡ್‌ಪೋಲ್ ನೆಬ್ಯುಲಾ ಧೂಮಕೇತು ZTF ಸಾಗುವ ದಾರಿಯಲ್ಲಿ ಕಂಡುಬಂದ ಚಿತ್ರ ಇದಾಗಿದೆ. ಫ್ಲೇಮಿಂಗ್ ಸ್ಟಾರ್ ನೆಬ್ಯುಲಾ ಎಂದು ಕರೆಯಲ್ಪಡುವ IC405, ಸುಮಾರು 1,500 ಜ್ಯೋತಿರ್ವರ್ಷಗಳ ದೂರದಲ್ಲಿದೆ. ಈ ನೆಬುಲಾ ಸುಮಾರು 5 ಬೆಳಕಿನ ವರ್ಷಗಳ ವ್ಯಾಪ್ತಿಯನ್ನು ಹೊಂದಿದೆ.(NASA/Thomas Roell)
NGC 3169 ಮತ್ತು NGC 3166 ಗ್ಯಾಲಕ್ಸಿ (ಮಾರ್ಚ್ 2) - ಇದು ಸ್ಪೈರಲ್ ಗ್ಯಾಲಕ್ಸಿ NGC 3169 ಮತ್ತು ಅದರ ನೆರೆಯ NGC 3166 ನ ನಾಕ್ಷತ್ರಿಕ ಸ್ನ್ಯಾಪ್‌ಶಾಟ್ ಆಗಿದೆ. NGC 3169 ಸುಮಾರು 70 ಮಿಲಿಯನ್ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ ನಾಸಾ ಪ್ರಕಾರ ಇದು ಲಿಯೋ I ಗುಂಪಿನ ಗ್ಯಾಲಕ್ಸಿಗಳ ಭಾಗವಾಗಿದೆ, ಇದು ಕನ್ಯಾರಾಶಿ ಸೂಪರ್‌ಕ್ಲಸ್ಟರ್ ಎಂದು ಕರೆಯಲ್ಪಡುವ ದೊಡ್ಡ ಗ್ಯಾಲಕ್ಸಿಯ ಗುಂಪಿನ ಭಾಗವಾಗಿದೆ.
(4 / 4)
NGC 3169 ಮತ್ತು NGC 3166 ಗ್ಯಾಲಕ್ಸಿ (ಮಾರ್ಚ್ 2) - ಇದು ಸ್ಪೈರಲ್ ಗ್ಯಾಲಕ್ಸಿ NGC 3169 ಮತ್ತು ಅದರ ನೆರೆಯ NGC 3166 ನ ನಾಕ್ಷತ್ರಿಕ ಸ್ನ್ಯಾಪ್‌ಶಾಟ್ ಆಗಿದೆ. NGC 3169 ಸುಮಾರು 70 ಮಿಲಿಯನ್ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ ನಾಸಾ ಪ್ರಕಾರ ಇದು ಲಿಯೋ I ಗುಂಪಿನ ಗ್ಯಾಲಕ್ಸಿಗಳ ಭಾಗವಾಗಿದೆ, ಇದು ಕನ್ಯಾರಾಶಿ ಸೂಪರ್‌ಕ್ಲಸ್ಟರ್ ಎಂದು ಕರೆಯಲ್ಪಡುವ ದೊಡ್ಡ ಗ್ಯಾಲಕ್ಸಿಯ ಗುಂಪಿನ ಭಾಗವಾಗಿದೆ.(NASA/Mike Selby/Mark Hanson)
RCW 86 ಸೂಪರ್‌ನೋವಾ ಅವಶೇಷ (ಮಾರ್ಚ್ 3) - RCW 86 ಹೆಸರಿನ ನಕ್ಷತ್ರದ ಸೂಪರ್‌ನೋವಾ ಸ್ಫೋಟದ ನಂತರ ಉಳಿದ ಅದರ ಅವಶೇಷಗಳ ಚಿತ್ರ ಇದಾಗಿದೆ. ನಾಸಾದ ಖಗೋಳಶಾಸ್ತ್ರದ ಚಿತ್ರವು, ಸೂಪರ್‌ನೋವಾ ಅವಶೇಷ RCW 86 ನ ಅತ್ಯಂತ ಅಪರೂಪದ ಮತ್ತು ಐತಿಹಾಸಿಕ ಸ್ನ್ಯಾಪ್‌ಶಾಟ್ ಆಗಿದೆ, ಇದು ಸುಮಾರು 100 ಜ್ಯೋತಿರ್ವರ್ಷಗಳಷ್ಟು ಪ್ರದೇಶವನ್ನು ವ್ಯಾಪಿಸಿದೆ. ಇದು ಭೂಮಿಯಿಂದ ಸುಮಾರು 8,000 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ.
(5 / 4)
RCW 86 ಸೂಪರ್‌ನೋವಾ ಅವಶೇಷ (ಮಾರ್ಚ್ 3) - RCW 86 ಹೆಸರಿನ ನಕ್ಷತ್ರದ ಸೂಪರ್‌ನೋವಾ ಸ್ಫೋಟದ ನಂತರ ಉಳಿದ ಅದರ ಅವಶೇಷಗಳ ಚಿತ್ರ ಇದಾಗಿದೆ. ನಾಸಾದ ಖಗೋಳಶಾಸ್ತ್ರದ ಚಿತ್ರವು, ಸೂಪರ್‌ನೋವಾ ಅವಶೇಷ RCW 86 ನ ಅತ್ಯಂತ ಅಪರೂಪದ ಮತ್ತು ಐತಿಹಾಸಿಕ ಸ್ನ್ಯಾಪ್‌ಶಾಟ್ ಆಗಿದೆ, ಇದು ಸುಮಾರು 100 ಜ್ಯೋತಿರ್ವರ್ಷಗಳಷ್ಟು ಪ್ರದೇಶವನ್ನು ವ್ಯಾಪಿಸಿದೆ. ಇದು ಭೂಮಿಯಿಂದ ಸುಮಾರು 8,000 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ.(NASA/CTIO/NOIRLab/DOE/NSF/AURA)

    ಹಂಚಿಕೊಳ್ಳಲು ಲೇಖನಗಳು