logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Nasa Astronomy Pictures: ನಾಸಾದಿಂದ 'ಬ್ರಹ್ಮಾಂಡ ದರ್ಶನ': ವಿಶ್ವದ ಸೌಂದರ್ಯಕ್ಕೆ ಈ ಫೋಟೋಗಳೇ ನಿದರ್ಶನ..

NASA Astronomy Pictures: ನಾಸಾದಿಂದ 'ಬ್ರಹ್ಮಾಂಡ ದರ್ಶನ': ವಿಶ್ವದ ಸೌಂದರ್ಯಕ್ಕೆ ಈ ಫೋಟೋಗಳೇ ನಿದರ್ಶನ..

Feb 10, 2023 04:30 PM IST

ನಕ್ಷತ್ರಗಳು, ಗ್ಯಾಲಕ್ಸಿಗಳು, ಗ್ರಹಗಳು, ಕಪ್ಪು ಕುಳಿಗಳು ಮತ್ತು ಇತರ ಆಕಾಶ ವಸ್ತುಗಳ ಚಿತ್ರಗಳನ್ನು ಹಂಚಿಕೊಳ್ಳುವ ದಿನನಿತ್ಯದ ಆಧಾರದ ಮೇಲೆ, ನಾಸಾ ತನ್ನ ಖಗೋಳಶಾಸ್ತ್ರೀಯ ಚಿತ್ರವನ್ನು ಪ್ರಕಟಿಸುತ್ತದೆ. ಈ ವಾರದ ಚಿತ್ರಗಳು ನೆಬ್ಯುಲ್ಯಾ, ನೇಕ್ರಿಯಸ್ ಕ್ಲೌಡ್ಸ್,  ZTF ಧೂಮಕೇತು ಮತ್ತು ಹೆಚ್ಚಿನವುಗಳನ್ನು ಒಳಗೊಂಡಿವೆ. ಆದ್ದರಿಂದ ವಾರದ ಟಾಪ್ 5 ನಾಸಾ ಖಗೋಳಶಾಸ್ತ್ರೀಯ ಚಿತ್ರಗಳನ್ನು ಪರಿಶೀಲಿಸಿ.

  • ನಕ್ಷತ್ರಗಳು, ಗ್ಯಾಲಕ್ಸಿಗಳು, ಗ್ರಹಗಳು, ಕಪ್ಪು ಕುಳಿಗಳು ಮತ್ತು ಇತರ ಆಕಾಶ ವಸ್ತುಗಳ ಚಿತ್ರಗಳನ್ನು ಹಂಚಿಕೊಳ್ಳುವ ದಿನನಿತ್ಯದ ಆಧಾರದ ಮೇಲೆ, ನಾಸಾ ತನ್ನ ಖಗೋಳಶಾಸ್ತ್ರೀಯ ಚಿತ್ರವನ್ನು ಪ್ರಕಟಿಸುತ್ತದೆ. ಈ ವಾರದ ಚಿತ್ರಗಳು ನೆಬ್ಯುಲ್ಯಾ, ನೇಕ್ರಿಯಸ್ ಕ್ಲೌಡ್ಸ್,  ZTF ಧೂಮಕೇತು ಮತ್ತು ಹೆಚ್ಚಿನವುಗಳನ್ನು ಒಳಗೊಂಡಿವೆ. ಆದ್ದರಿಂದ ವಾರದ ಟಾಪ್ 5 ನಾಸಾ ಖಗೋಳಶಾಸ್ತ್ರೀಯ ಚಿತ್ರಗಳನ್ನು ಪರಿಶೀಲಿಸಿ.
ರೋಸೆಟ್ಟೆ ನೀಹಾರಿಕೆ (ಫೆಬ್ರವರಿ 6) - ಭೂಮಿಯಿಂದ ಸುಮಾರು 5200 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಈ ನಿಹಾರಿಕೆಯ ಚಿತ್ರವನ್ನು, ಕಳೆದ ಫೆಬ್ರವರಿ 6 ರಂದು ನಾಸಾ ಬಿಡುಗಡೆ ಮಾಡಿದೆ. ರೊಸೆಟ್ಟೆ ನೀಹಾರಿಕೆಯು ನಕ್ಷತ್ರಗಳ ಪ್ರಕಾಶಮಾನವಾದ ಸಮೂಹವಾಗಿದ್ದು, NGC 2244 ಎಂತಲೂ ಇದನ್ನು ಕರೆಯಲಾಗುತ್ತದೆ. ಇಲ್ಲಿನ ನಕ್ಷತ್ರಗಳು ಕೆಲವು ಮಿಲಿಯನ್ ವರ್ಷಗಳ ಹಿಂದೆ ಸುತ್ತಮುತ್ತಲಿನ ಅನಿಲದಿಂದ ರೂಪುಗೊಂಡವು. ಮೊನೊಸೆರೊಸ್ ಸಮೂಹದಲ್ಲಿ ಬೈನಾಕ್ಯುಲರ್‌ಗಳ ಮೂಲಕ ಗೋಚರಿಸುವ ರೋಸೆಟ್ಟೆ ನೀಹಾರಿಕೆಯ ಕೇಂದ್ರವು, ಸುಮಾರು 50 ಜ್ಯೋತೀರ್ವರ್ಷ ವ್ಯಾಸವನ್ನು ಹೊಂದಿದೆ.
(1 / 4)
ರೋಸೆಟ್ಟೆ ನೀಹಾರಿಕೆ (ಫೆಬ್ರವರಿ 6) - ಭೂಮಿಯಿಂದ ಸುಮಾರು 5200 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಈ ನಿಹಾರಿಕೆಯ ಚಿತ್ರವನ್ನು, ಕಳೆದ ಫೆಬ್ರವರಿ 6 ರಂದು ನಾಸಾ ಬಿಡುಗಡೆ ಮಾಡಿದೆ. ರೊಸೆಟ್ಟೆ ನೀಹಾರಿಕೆಯು ನಕ್ಷತ್ರಗಳ ಪ್ರಕಾಶಮಾನವಾದ ಸಮೂಹವಾಗಿದ್ದು, NGC 2244 ಎಂತಲೂ ಇದನ್ನು ಕರೆಯಲಾಗುತ್ತದೆ. ಇಲ್ಲಿನ ನಕ್ಷತ್ರಗಳು ಕೆಲವು ಮಿಲಿಯನ್ ವರ್ಷಗಳ ಹಿಂದೆ ಸುತ್ತಮುತ್ತಲಿನ ಅನಿಲದಿಂದ ರೂಪುಗೊಂಡವು. ಮೊನೊಸೆರೊಸ್ ಸಮೂಹದಲ್ಲಿ ಬೈನಾಕ್ಯುಲರ್‌ಗಳ ಮೂಲಕ ಗೋಚರಿಸುವ ರೋಸೆಟ್ಟೆ ನೀಹಾರಿಕೆಯ ಕೇಂದ್ರವು, ಸುಮಾರು 50 ಜ್ಯೋತೀರ್ವರ್ಷ ವ್ಯಾಸವನ್ನು ಹೊಂದಿದೆ.(NASA/Lyman Insley)
ಅಪರೂಪದ ಹಸಿರು ಧೂಮಕೇತು ZTF (ಫೆಬ್ರವರಿ 7) - ಅಪರೂಪದ ಹಸಿರು ಧೂಮಕೇತು ZTF ಸುಮಾರು 50,000 ವರ್ಷಗಳ ಅವಧಿಯ ನಂತರ\, ಫೆಬ್ರವರಿ 1ರಂದು ಭೂಮಿಯ ಸಮೀಪದಿಂದ ಹಾದು ಹೋಗಿದೆ. ಈ ಧೂಮಕೇತು ಜೊತೆಗೆ, ಬಿಗ್ ಡಿಪ್ಪರ್ ಮತ್ತು ಲಿಟಲ್ ಡಿಪ್ಪರ್ ಅನ್ನು ಸಹ ನಾವು ಕಾಣಬಹುದು. ಬಿಗ್ ಡಿಪ್ಪರ್ ಎಂಬುದು ಉರ್ಸಾ ಮೇಜರ್ ಅಥವಾ ಗ್ರೇಟ್ ಬೇರ್ ನಕ್ಷತ್ರಪುಂಜದಲ್ಲಿ ಏಳು ಪ್ರಕಾಶಮಾನವಾದ ನಕ್ಷತ್ರಗಳಿಂದ ರೂಪುಗೊಂಡ ಆಕಾರವನ್ನು ವಿವರಿಸಲು ಬಳಸಲಾಗುವ ಜನಪ್ರಿಯ ಪದವಾಗಿದೆ.
(2 / 4)
ಅಪರೂಪದ ಹಸಿರು ಧೂಮಕೇತು ZTF (ಫೆಬ್ರವರಿ 7) - ಅಪರೂಪದ ಹಸಿರು ಧೂಮಕೇತು ZTF ಸುಮಾರು 50,000 ವರ್ಷಗಳ ಅವಧಿಯ ನಂತರ\, ಫೆಬ್ರವರಿ 1ರಂದು ಭೂಮಿಯ ಸಮೀಪದಿಂದ ಹಾದು ಹೋಗಿದೆ. ಈ ಧೂಮಕೇತು ಜೊತೆಗೆ, ಬಿಗ್ ಡಿಪ್ಪರ್ ಮತ್ತು ಲಿಟಲ್ ಡಿಪ್ಪರ್ ಅನ್ನು ಸಹ ನಾವು ಕಾಣಬಹುದು. ಬಿಗ್ ಡಿಪ್ಪರ್ ಎಂಬುದು ಉರ್ಸಾ ಮೇಜರ್ ಅಥವಾ ಗ್ರೇಟ್ ಬೇರ್ ನಕ್ಷತ್ರಪುಂಜದಲ್ಲಿ ಏಳು ಪ್ರಕಾಶಮಾನವಾದ ನಕ್ಷತ್ರಗಳಿಂದ ರೂಪುಗೊಂಡ ಆಕಾರವನ್ನು ವಿವರಿಸಲು ಬಳಸಲಾಗುವ ಜನಪ್ರಿಯ ಪದವಾಗಿದೆ.(NASA/Petr Horalek/Institute of Physics in Opava)
ವಿಂಡ್-ಆಕಾರದ ನೀಹಾರಿಕೆ (ಫೆಬ್ರವರಿ 8) - ಫೆಬ್ರುವರಿ 8ರಂದು ನಾಸಾದ ಖಗೋಳಶಾಸ್ತ್ರೀಯ ಚಿತ್ರವು ಸ್ಟೆಲ್ಲಾರ್ ವಿಂಡ್-ಆಕಾರದ ನೆಬ್ಯುಲಾ RCW 58ರ ಮೋಡಿಮಾಡುವ ಸ್ನ್ಯಾಪ್‌ಶಾಟ್ ಆಗಿದೆ. ಇದು ಭೂಮಿಯಿಂದ ಸುಮಾರು 13,000 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ಕ್ಯಾರಿನಾ ನಕ್ಷತ್ರಪುಂಜದಲ್ಲಿದೆ. ನೆಬ್ಯುಲಾವು ಮಧ್ಯದಲ್ಲಿ ಬೃಹತ್ ನಕ್ಷತ್ರವನ್ನು ಹೊಂದಿದೆ. ಇದು ನಮ್ಮ ಸೂರ್ಯನಿಗಿಂತ 100 ಪಟ್ಟು ದೊಡ್ಡದಾಗಿದ್ದು, ಮಿಲಿಯನ್ ಪಟ್ಟು ಹೆಚ್ಚು ಪ್ರಕಾಶಮಾನವಾಗಿದೆ. ಈ ನಕ್ಷತ್ರವು ಸೂರ್ಯನ ಮೇಲ್ಮೈ ತಾಪಮಾನಕ್ಕಿಂತ 30 ಪಟ್ಟು ಹೆಚ್ಚು. ಈ ನಕ್ಷತ್ರಗಳು ತಮ್ಮ ಹೊರ ಪದರದ ಮೂಲಕ, ಹೆಚ್ಚಿನ ವೇಗದ ನಾಕ್ಷತ್ರಿಕ ಮಾರುತಗಳನ್ನು ಹೊರಹಾಕುತ್ತವೆ.
(3 / 4)
ವಿಂಡ್-ಆಕಾರದ ನೀಹಾರಿಕೆ (ಫೆಬ್ರವರಿ 8) - ಫೆಬ್ರುವರಿ 8ರಂದು ನಾಸಾದ ಖಗೋಳಶಾಸ್ತ್ರೀಯ ಚಿತ್ರವು ಸ್ಟೆಲ್ಲಾರ್ ವಿಂಡ್-ಆಕಾರದ ನೆಬ್ಯುಲಾ RCW 58ರ ಮೋಡಿಮಾಡುವ ಸ್ನ್ಯಾಪ್‌ಶಾಟ್ ಆಗಿದೆ. ಇದು ಭೂಮಿಯಿಂದ ಸುಮಾರು 13,000 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ಕ್ಯಾರಿನಾ ನಕ್ಷತ್ರಪುಂಜದಲ್ಲಿದೆ. ನೆಬ್ಯುಲಾವು ಮಧ್ಯದಲ್ಲಿ ಬೃಹತ್ ನಕ್ಷತ್ರವನ್ನು ಹೊಂದಿದೆ. ಇದು ನಮ್ಮ ಸೂರ್ಯನಿಗಿಂತ 100 ಪಟ್ಟು ದೊಡ್ಡದಾಗಿದ್ದು, ಮಿಲಿಯನ್ ಪಟ್ಟು ಹೆಚ್ಚು ಪ್ರಕಾಶಮಾನವಾಗಿದೆ. ಈ ನಕ್ಷತ್ರವು ಸೂರ್ಯನ ಮೇಲ್ಮೈ ತಾಪಮಾನಕ್ಕಿಂತ 30 ಪಟ್ಟು ಹೆಚ್ಚು. ಈ ನಕ್ಷತ್ರಗಳು ತಮ್ಮ ಹೊರ ಪದರದ ಮೂಲಕ, ಹೆಚ್ಚಿನ ವೇಗದ ನಾಕ್ಷತ್ರಿಕ ಮಾರುತಗಳನ್ನು ಹೊರಹಾಕುತ್ತವೆ.(NASA/Mike Selby/Mark Hanson)
ನೇಕ್ರಿಯಸ್ ಕ್ಲೌಡ್ಸ್ (ಫೆಬ್ರವರಿ 9) - ನೇಕ್ರಿಯಸ್ ಮೋಡಗಳು ಅಪರೂಪದ ಧ್ರುವ ವಾಯುಮಂಡಲದ ಮೋಡಗಳಾಗಿದ್ದು, ಸಾಮಾನ್ಯವಾಗಿ ಮೋಡರಹಿತವಾದ ಕೆಳ ವಾಯುಮಂಡಲದಲ್ಲಿ, ಅಸಾಮಾನ್ಯವಾಗಿ ತಣ್ಣನೆಯ ಉಷ್ಣತೆಯು ಐಸ್ ಸ್ಫಟಿಕಗಳನ್ನು ರೂಪಿಸಿದಾಗ ರೂಪುಗೊಳ್ಳುತ್ತದೆ. ಫೆಬ್ರವರಿ 9ರಂದು ನಾಸಾದ ಖಗೋಳಶಾಸ್ತ್ರೀಯ ಚಿತ್ರವು, ಸ್ವೀಡಿಷ್ ಆಕಾಶದಲ್ಲಿ ಗೋಚರಿಸುವ ಬೆರಗುಗೊಳಿಸುವ ನ್ಯಾಕ್ರಿಯಸ್ ಮೋಡಗಳನ್ನು ಒಳಗೊಂಡಿದೆ. ಅವು ಸುಮಾರು 15ಕಿ.ಮೀ.ಯಿಂದ 25 ಕಿ.ಮೀ ಎತ್ತರದಲ್ಲಿ ಕೆಳಗಿನ ವಾಯುಮಂಡಲದಲ್ಲಿ ರಚನೆಯಾಗುತ್ತವೆ.
(4 / 4)
ನೇಕ್ರಿಯಸ್ ಕ್ಲೌಡ್ಸ್ (ಫೆಬ್ರವರಿ 9) - ನೇಕ್ರಿಯಸ್ ಮೋಡಗಳು ಅಪರೂಪದ ಧ್ರುವ ವಾಯುಮಂಡಲದ ಮೋಡಗಳಾಗಿದ್ದು, ಸಾಮಾನ್ಯವಾಗಿ ಮೋಡರಹಿತವಾದ ಕೆಳ ವಾಯುಮಂಡಲದಲ್ಲಿ, ಅಸಾಮಾನ್ಯವಾಗಿ ತಣ್ಣನೆಯ ಉಷ್ಣತೆಯು ಐಸ್ ಸ್ಫಟಿಕಗಳನ್ನು ರೂಪಿಸಿದಾಗ ರೂಪುಗೊಳ್ಳುತ್ತದೆ. ಫೆಬ್ರವರಿ 9ರಂದು ನಾಸಾದ ಖಗೋಳಶಾಸ್ತ್ರೀಯ ಚಿತ್ರವು, ಸ್ವೀಡಿಷ್ ಆಕಾಶದಲ್ಲಿ ಗೋಚರಿಸುವ ಬೆರಗುಗೊಳಿಸುವ ನ್ಯಾಕ್ರಿಯಸ್ ಮೋಡಗಳನ್ನು ಒಳಗೊಂಡಿದೆ. ಅವು ಸುಮಾರು 15ಕಿ.ಮೀ.ಯಿಂದ 25 ಕಿ.ಮೀ ಎತ್ತರದಲ್ಲಿ ಕೆಳಗಿನ ವಾಯುಮಂಡಲದಲ್ಲಿ ರಚನೆಯಾಗುತ್ತವೆ.(NASA/ Dennis Lehtonen)
ಅಟ್ಲಾಸ್‌ ಧೂಮಕೇತು (ಫೆಬ್ರವರಿ 10)- ಫೆಬ್ರುವರಿ 10ರಂದು ನಾಸಾದ ಖಗೋಳಶಾಸ್ತ್ರೀಯ ಚಿತ್ರವು, ಔರಿಗಾ ನಕ್ಷತ್ರಪುಂಜದ ಬಳಿ  C/2022 U2 (ಅಟ್ಲಾಸ್)‌ ಧೂಮಕೇತು, ZTF ಧೂಮಕೇತುವಿನ ಜೊತೆಗೆ ಪಯಣಿಸುವ ಚಿತ್ರವನ್ನು ಒಳಗೊಂಡಿದೆ. ಜರ್ಮನಿಯ ಬವೇರಿಯನ್ ಅರಣ್ಯದಲ್ಲಿರುವ ಉದ್ಯಾನ ವೀಕ್ಷಣಾಲಯದಿಂದ, ಫೆಬ್ರವರಿ 6ರ ರಾತ್ರಿ ಈ ಅಪರೂಪದ ವಿದ್ಯಮಾನವನ್ನು ಸೆರೆಹಿಡಿಯಲಾಗಿದೆ, ಔರಿಗಾ ನಕ್ಷತ್ರಪುಂಜದ ಕಡೆಗೆ ನಕ್ಷತ್ರಗಳ ಕ್ಷೇತ್ರವು ಸುಮಾರು 2.5 ಡಿಗ್ರಿಗಳಷ್ಟು ವ್ಯಾಪಿಸಿದೆ.
(5 / 4)
ಅಟ್ಲಾಸ್‌ ಧೂಮಕೇತು (ಫೆಬ್ರವರಿ 10)- ಫೆಬ್ರುವರಿ 10ರಂದು ನಾಸಾದ ಖಗೋಳಶಾಸ್ತ್ರೀಯ ಚಿತ್ರವು, ಔರಿಗಾ ನಕ್ಷತ್ರಪುಂಜದ ಬಳಿ  C/2022 U2 (ಅಟ್ಲಾಸ್)‌ ಧೂಮಕೇತು, ZTF ಧೂಮಕೇತುವಿನ ಜೊತೆಗೆ ಪಯಣಿಸುವ ಚಿತ್ರವನ್ನು ಒಳಗೊಂಡಿದೆ. ಜರ್ಮನಿಯ ಬವೇರಿಯನ್ ಅರಣ್ಯದಲ್ಲಿರುವ ಉದ್ಯಾನ ವೀಕ್ಷಣಾಲಯದಿಂದ, ಫೆಬ್ರವರಿ 6ರ ರಾತ್ರಿ ಈ ಅಪರೂಪದ ವಿದ್ಯಮಾನವನ್ನು ಸೆರೆಹಿಡಿಯಲಾಗಿದೆ, ಔರಿಗಾ ನಕ್ಷತ್ರಪುಂಜದ ಕಡೆಗೆ ನಕ್ಷತ್ರಗಳ ಕ್ಷೇತ್ರವು ಸುಮಾರು 2.5 ಡಿಗ್ರಿಗಳಷ್ಟು ವ್ಯಾಪಿಸಿದೆ.(NASA/Stefan Bemmerl)

    ಹಂಚಿಕೊಳ್ಳಲು ಲೇಖನಗಳು