logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇಂದು ಪ್ರಧಾನಿ ಮೋದಿ ಅವರಿಂದ ವಾರಣಾಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಿಲಾನ್ಯಾಸ; ಸಚಿನ್ ಸೇರಿ ಕ್ರಿಕೆಟ್ ದಿಗ್ಗಜರು ಭಾಗಿ; ಫೋಟೋಸ್

ಇಂದು ಪ್ರಧಾನಿ ಮೋದಿ ಅವರಿಂದ ವಾರಣಾಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಿಲಾನ್ಯಾಸ; ಸಚಿನ್ ಸೇರಿ ಕ್ರಿಕೆಟ್ ದಿಗ್ಗಜರು ಭಾಗಿ; ಫೋಟೋಸ್

Sep 23, 2023 02:45 PM IST

ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೆಪ್ಟೆಂಬರ್ 23, ಶನಿವಾರ) ತಮ್ಮ ಲೋಕಸಭಾ ಕ್ಷೇತ್ರದ ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಸಚಿನ್ ಸೇರಿದಂತೆ ಕ್ರಿಕೆಟ್ ದಿಗ್ಗಜರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. 

ವಾರಣಾಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡ್ಯೂಲ್ಕರ್, ಸುನಿಲ್ ಗವಾಸ್ಕರ್, ಕಪಿಲ್ ದೇವ್, ರವಿಶಾಸ್ತ್ರಿ ಸೇರಿದಂತೆ ಹಲವರು ಉತ್ತರ ಪ್ರದೇಶದ ವಾರಣಾಸಿಗೆ ಆಗಮಿಸಿದ್ದಾರೆ.
(1 / 5)

ವಾರಣಾಸಿಗೆ ಭೇಟಿ ನೀಡಿರುವ ಸಚಿನ್ ತೆಂಡ್ಯೂಲ್ಕರ್ ಬಾಬಾ ಶ್ರೀ ಕಾಶಿ ವಿಶ್ವನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇತರೆ ಗಣ್ಯರು ಈ ವೇಳೆ ಉಪಸ್ಥಿತರಿದ್ದರು. 450 ಕೋಟಿ ರೂಪಾಯಿಗಳ ವೆಚ್ಚದಲ್ಲಿ ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲಾಗುತ್ತಿದೆ.
(2 / 5)

ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್‌ ಶಾ, ಬಿಸಿಸಿಐ ಉಪಾಧ್ಯಾಕ್ಷ ರಾಜೀವ್ ಶುಕ್ಲಾ, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ಸೈಯದ್ ಕಿರ್ಮಾನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಾರಣಾಸಿ ಸ್ಟೇಡಿಯಂ ನಿರ್ಮಾಣಕ್ಕೆ ಬಿಸಿಸಿಐ 330 ಕೋಟಿ ರೂಪಾಯಿ ಖರ್ಚು ಮಾಡಲಿದೆ.
(3 / 5)

2025ರ ವೇಳೆಗೆ ಸ್ಟೇಡಿಯಂ ನಿರ್ಮಾಣದ ಕಾಮಗಾರಿ ಮುಗಿಸುವ ಗುರಿ ಹೊಂದಲಾಗಿದ್ದು, ಸ್ಟೇಡಿಯಂನಲ್ಲಿ ಶಿವನ ತ್ರಿಶೂಲ ಆಕಾರದಲ್ಲಿ ಮೈದಾನದ ದೀಪದ ಸ್ಥಂಭಗಳು ಹಾಗೂ ಕಟ್ಟಡದ ವಿನ್ಯಾಸವನ್ನು ಡಮರುಗ ಮಾದರಿಯಲ್ಲಿ ವಿನ್ಯಾಸ ಮಾಡಲಾಗುತ್ತಿದೆ.ಕ್ರೀಡಾಂಗಣ ನಿರ್ಮಾಣಕ್ಕೆ ಬೇಕಾಗಿರುವ ಭೂಮಿ ಸ್ವಾಧೀನಕ್ಕಾಗಿ ಯುಪಿ ಸಿಎಂ ಯೋಗಿ ಆದಿತ್ಯನಾಥ ಸರ್ಕಾರ 121 ಕೋಟಿ ರೂಪಾಯಿ ಖರ್ಚು ಮಾಡಿದೆ.
(4 / 5)

ಸಚಿನ್ ತೆಂಡ್ಯೂಲ್ಕರ್, ಜಯ್ ಶಾ ಸೇರಿ ಹಲವರು ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ವಾರಣಾಸಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ 30.000 ಆಸನಗಳ ಸಾಮರ್ಥ್ಯವನ್ನು ಹೊಂದಿರಲಿದೆ. 2025ರ ಡಿಸೆಂಬರ್ ವೇಳೆಗೆ ಸ್ಟೇಡಿಯಂ ಸೇವೆಗೆ ಸಿಗುವ ಸಾಧ್ಯತೆ ಇದೆ.
(5 / 5)

    ಹಂಚಿಕೊಳ್ಳಲು ಲೇಖನಗಳು