logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಪ್ಪು ನಾಯಿ ಕೂಡ ಬಿಳಿಯಾದೀತೆ; ಈ ಪ್ರಶ್ನೆಗೆ ಇಲ್ಲಿದೆ ಉತ್ತರ, ಒಕ್ಲಹಾಮಾದ ಈ ನಾಯಿ ಎರಡೇ ವರ್ಷದಲ್ಲಿ ಬಿಳಿಯಾಯಿತಂತೆ! ಹೇಗೆ?,ಇಲ್ಲಿದೆ ಫೋಟೋಸ್

ಕಪ್ಪು ನಾಯಿ ಕೂಡ ಬಿಳಿಯಾದೀತೆ; ಈ ಪ್ರಶ್ನೆಗೆ ಇಲ್ಲಿದೆ ಉತ್ತರ, ಒಕ್ಲಹಾಮಾದ ಈ ನಾಯಿ ಎರಡೇ ವರ್ಷದಲ್ಲಿ ಬಿಳಿಯಾಯಿತಂತೆ! ಹೇಗೆ?,ಇಲ್ಲಿದೆ ಫೋಟೋಸ್

Apr 30, 2024 12:14 PM IST

ಕಪ್ಪು ನಾಯಿ ಬಿಳಿಯಾದೀತೇ?, ತೆನಾಲಿರಾಮನ ನೀತಿ ಕಥೆಯ ಶೀರ್ಷಿಕೆ ಇದು. ಬಹುತೇಕರಿಗೆ ಈ ಕಥೆ ಗೊತ್ತೇ ಇದೆ. ನೇರ ವಿಷಯಕ್ಕೆ ಬರೋಣ. ಅಮೆರಿಕದ ಒಕ್ಲಹಾಮಾದ ಈ ಲಾಬ್ರಡಾರ್ ರಿಟ್ರೀವರ್‌ ನಾಯಿ ಎರಡೇ ವರ್ಷದಲ್ಲಿ ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗಿದೆ. ತೆನಾಲಿರಾಮನ ಕಥೆಯಲ್ಲಿರುವಂತೆ ನಾಯಿಯ ಮೈಯನ್ನು ತಿಕ್ಕಿ ತಿಕ್ಕಿ ತೊಳೆದು ಬಿಳಿಯಾದುದಲ್ಲ ಮತ್ತೆ ಇದು..!

ಕಪ್ಪು ನಾಯಿ ಬಿಳಿಯಾದೀತೇ?, ತೆನಾಲಿರಾಮನ ನೀತಿ ಕಥೆಯ ಶೀರ್ಷಿಕೆ ಇದು. ಬಹುತೇಕರಿಗೆ ಈ ಕಥೆ ಗೊತ್ತೇ ಇದೆ. ನೇರ ವಿಷಯಕ್ಕೆ ಬರೋಣ. ಅಮೆರಿಕದ ಒಕ್ಲಹಾಮಾದ ಈ ಲಾಬ್ರಡಾರ್ ರಿಟ್ರೀವರ್‌ ನಾಯಿ ಎರಡೇ ವರ್ಷದಲ್ಲಿ ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗಿದೆ. ತೆನಾಲಿರಾಮನ ಕಥೆಯಲ್ಲಿರುವಂತೆ ನಾಯಿಯ ಮೈಯನ್ನು ತಿಕ್ಕಿ ತಿಕ್ಕಿ ತೊಳೆದು ಬಿಳಿಯಾದುದಲ್ಲ ಮತ್ತೆ ಇದು..!
ಒಕ್ಲಹಾಮಾದ ಈ ಕಪ್ಪು ನಾಯಿ (ಲಾಬ್ರಡಾರ್ ರಿಟ್ರೀವರ್‌ ತಳಿಯದ್ದು) ಬಿಳಿಯಾಗಿದೆ ನೋಡಿ. ಹೌದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಷಯ ಇದು. ಎರಡು ವರ್ಷದ ಅವಧಿಯಲ್ಲಿ ಕಪ್ಪು ನಾಯಿ ಹಂತ ಹಂತವಾಗಿ ಬಿಳಿಯಾಗಿ ಪೂರ್ಣ ಬಿಳಿ ನಾಯಿಯಾಗಿದೆ. ಪ್ರತಿ ಹಂತದ ಫೋಟೋವನ್ನು ನಾಯಿಯ ಮಾಲೀಕರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
(1 / 6)
ಒಕ್ಲಹಾಮಾದ ಈ ಕಪ್ಪು ನಾಯಿ (ಲಾಬ್ರಡಾರ್ ರಿಟ್ರೀವರ್‌ ತಳಿಯದ್ದು) ಬಿಳಿಯಾಗಿದೆ ನೋಡಿ. ಹೌದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಷಯ ಇದು. ಎರಡು ವರ್ಷದ ಅವಧಿಯಲ್ಲಿ ಕಪ್ಪು ನಾಯಿ ಹಂತ ಹಂತವಾಗಿ ಬಿಳಿಯಾಗಿ ಪೂರ್ಣ ಬಿಳಿ ನಾಯಿಯಾಗಿದೆ. ಪ್ರತಿ ಹಂತದ ಫೋಟೋವನ್ನು ನಾಯಿಯ ಮಾಲೀಕರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕಪ್ಪು ನಾಯಿಯ ಹೆಸರು ಬಸ್ಟರ್. ಈ ನಾಯಿ ಮ್ಯಾಟ್‌ ಸ್ಮಿತ್ (TallyMatty) ಎಂಬುವವರಿಗೆ ಸೇರಿದ್ದು. ಅವರು ಕಪ್ಪು ಬಣ್ಣದ ಬಸ್ಟರ್ ಬಿಳಿ ಬಣ್ಣದ ಬಸ್ಟರ್ ಆಗಿ ರೂಪಾಂತರ ಹೊಂದಿದ್ದು ಹೇಗೆ ಎಂಬುದನ್ನು ರೆಡ್ಡಿಟ್‌ನಲ್ಲಿ ಫೋಟೋಗಳ ಸಹಿತ ವಿವರಿಸಿದ್ದಾರೆ. 2021 ರ ಕೊನೆಯಲ್ಲಿ, ಎರಡು ವರ್ಷದ ವಯಸ್ಸಿನಲ್ಲಿ, ಬಸ್ಟರ್‌ಗೆ ವಿಟಲಿಗೋ ರೋಗ ಇದೆ ಎಂದು ಡಾಕ್ಟರ್ ನಿರ್ಧರಿಸಿದ್ದರು.
(2 / 6)
ಕಪ್ಪು ನಾಯಿಯ ಹೆಸರು ಬಸ್ಟರ್. ಈ ನಾಯಿ ಮ್ಯಾಟ್‌ ಸ್ಮಿತ್ (TallyMatty) ಎಂಬುವವರಿಗೆ ಸೇರಿದ್ದು. ಅವರು ಕಪ್ಪು ಬಣ್ಣದ ಬಸ್ಟರ್ ಬಿಳಿ ಬಣ್ಣದ ಬಸ್ಟರ್ ಆಗಿ ರೂಪಾಂತರ ಹೊಂದಿದ್ದು ಹೇಗೆ ಎಂಬುದನ್ನು ರೆಡ್ಡಿಟ್‌ನಲ್ಲಿ ಫೋಟೋಗಳ ಸಹಿತ ವಿವರಿಸಿದ್ದಾರೆ. 2021 ರ ಕೊನೆಯಲ್ಲಿ, ಎರಡು ವರ್ಷದ ವಯಸ್ಸಿನಲ್ಲಿ, ಬಸ್ಟರ್‌ಗೆ ವಿಟಲಿಗೋ ರೋಗ ಇದೆ ಎಂದು ಡಾಕ್ಟರ್ ನಿರ್ಧರಿಸಿದ್ದರು.(@redditt/TallyMatty)
ಏನಿದು ವಿಟಲಿಗೋ ರೋಗ? ನಾಯಿಗಳಲ್ಲಿ ಕಂಡುಬರುವ ಈ ರೋಗ ಸ್ಥಿತಿಯು,ಚರ್ಮ, ಕೂದಲು, ಮೂತಿ ಮತ್ತು ತುಟಿಗಳ ಭಾಗದಲ್ಲಿ ಬಣ್ಣ ಕಳೆದುಕೊಳ್ಳುವ ಕಾಯಿಲೆಯಿಂದ ಉಂಟಾಗುತ್ತದೆ, ಹಾಗೆಯೇ ಬಾಯಿ ಮತ್ತು ಮುಖದ ಲೋಳೆಪೊರೆಯ ವರ್ಣದ್ರವ್ಯ ಅಥವಾ ಬಣ್ಣ ಮಾಸುವಂತೆ ಮಾಡುತ್ತದೆ. ಆದರೆ, ನಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರದು ಎಂದು ಡಾಕ್ಟರ್ ಹೇಳಿದ್ದರು. 
(3 / 6)
ಏನಿದು ವಿಟಲಿಗೋ ರೋಗ? ನಾಯಿಗಳಲ್ಲಿ ಕಂಡುಬರುವ ಈ ರೋಗ ಸ್ಥಿತಿಯು,ಚರ್ಮ, ಕೂದಲು, ಮೂತಿ ಮತ್ತು ತುಟಿಗಳ ಭಾಗದಲ್ಲಿ ಬಣ್ಣ ಕಳೆದುಕೊಳ್ಳುವ ಕಾಯಿಲೆಯಿಂದ ಉಂಟಾಗುತ್ತದೆ, ಹಾಗೆಯೇ ಬಾಯಿ ಮತ್ತು ಮುಖದ ಲೋಳೆಪೊರೆಯ ವರ್ಣದ್ರವ್ಯ ಅಥವಾ ಬಣ್ಣ ಮಾಸುವಂತೆ ಮಾಡುತ್ತದೆ. ಆದರೆ, ನಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರದು ಎಂದು ಡಾಕ್ಟರ್ ಹೇಳಿದ್ದರು. (@redditt/TallyMatty)
ಮೊದಲಿಗೆ, ಬಸ್ಟರ್‌ನ ಕಣ್ಣುಗಳು, ಮೂಗು ಮತ್ತು ಗಲ್ಲದ ಸುತ್ತಲೂ ಸಣ್ಣ ಬಿಳಿ ತೇಪೆಗಳನ್ನು ಮ್ಯಾಟ್ ಗಮನಿಸಿದನು, ಆದರೆ ವಿಟಲಿಗೋ ರೋಗನಿರ್ಣಯದ ಒಂಬತ್ತು ತಿಂಗಳ ನಂತರ, ನಾಯಿಯ ಮುಖವು ಕಲೆಗಳಿಂದ ಕೂಡಿತ್ತು. ಎರಡೂವರೆ ವರ್ಷದೊಳಗೆ ಕಪ್ಪು ಬಣ್ಣದಲ್ಲಿದ್ದ ಬಸ್ಟರ್ ಹಂತ ಹಂತವಾಗಿ ಬಿಳಿ ಬಣ್ಣದ ನಾಯಿಯಾಗಿ ರೂಪಾಂತರ ಹೊಂದಿತು.
(4 / 6)
ಮೊದಲಿಗೆ, ಬಸ್ಟರ್‌ನ ಕಣ್ಣುಗಳು, ಮೂಗು ಮತ್ತು ಗಲ್ಲದ ಸುತ್ತಲೂ ಸಣ್ಣ ಬಿಳಿ ತೇಪೆಗಳನ್ನು ಮ್ಯಾಟ್ ಗಮನಿಸಿದನು, ಆದರೆ ವಿಟಲಿಗೋ ರೋಗನಿರ್ಣಯದ ಒಂಬತ್ತು ತಿಂಗಳ ನಂತರ, ನಾಯಿಯ ಮುಖವು ಕಲೆಗಳಿಂದ ಕೂಡಿತ್ತು. ಎರಡೂವರೆ ವರ್ಷದೊಳಗೆ ಕಪ್ಪು ಬಣ್ಣದಲ್ಲಿದ್ದ ಬಸ್ಟರ್ ಹಂತ ಹಂತವಾಗಿ ಬಿಳಿ ಬಣ್ಣದ ನಾಯಿಯಾಗಿ ರೂಪಾಂತರ ಹೊಂದಿತು.(@redditt/TallyMatty)
ನಾಯಿಯ ಬಣ್ಣ ಬದಲಾಗುತ್ತದೆ ಎಂಬ ಅರಿವು ಮೊದಲೇ ಇದ್ದ ಕಾರಣ, ಮ್ಯಾಟ್‌ ಸ್ಮಿತ್ ಪ್ರತಿಯೊಂದನ್ನೂ ದಾಖಲೀಕರಿಸುತ್ತ ಬಂದಿದ್ದರು. ಈ ರೋಗ ಪತ್ತೆಯಾದಾಗ ಫೋಟೋ, ವಿಡಿಯೋ ತೆಗೆದು ಇಟ್ಟುಕೊಂಡಿದ್ದ ಮ್ಯಾಟ್‌ ಸ್ಮಿತ್‌, ಅದನ್ನು ಅಂದು ಶೇರ್ ಮಾಡಿದ್ದರು. ಅದಾಗಿ ಪ್ರತಿ ಹಂತದ ಫೋಟೋ, ವಿಡಿಯೋಗಳನ್ನು ಇಟ್ಟುಕೊಂಡಿದ್ದರು.
(5 / 6)
ನಾಯಿಯ ಬಣ್ಣ ಬದಲಾಗುತ್ತದೆ ಎಂಬ ಅರಿವು ಮೊದಲೇ ಇದ್ದ ಕಾರಣ, ಮ್ಯಾಟ್‌ ಸ್ಮಿತ್ ಪ್ರತಿಯೊಂದನ್ನೂ ದಾಖಲೀಕರಿಸುತ್ತ ಬಂದಿದ್ದರು. ಈ ರೋಗ ಪತ್ತೆಯಾದಾಗ ಫೋಟೋ, ವಿಡಿಯೋ ತೆಗೆದು ಇಟ್ಟುಕೊಂಡಿದ್ದ ಮ್ಯಾಟ್‌ ಸ್ಮಿತ್‌, ಅದನ್ನು ಅಂದು ಶೇರ್ ಮಾಡಿದ್ದರು. ಅದಾಗಿ ಪ್ರತಿ ಹಂತದ ಫೋಟೋ, ವಿಡಿಯೋಗಳನ್ನು ಇಟ್ಟುಕೊಂಡಿದ್ದರು.(@redditt/TallyMatty)
ಇತ್ತೀಚೆಗೆ ನಾಯಿ ಸಂಪೂರ್ಣ ಬಿಳಿಯಾದ ನಂತರದಲ್ಲಿ ಬಸ್ಟರ್‌ನ ಬಣ್ಣ ಬದಲಾವಣೆಯ ಹಂತಗಳ ಫೋಟೋಗಳನ್ನು ಶೇರ್ ಮಾಡಿಕೊಂಡು, ವಿವರವನ್ನು ಹಂಚಿಕೊಂಡಿದ್ದಾರೆ. ನಾಯಿ ಬಿಳಿಬಣ್ಣಕ್ಕೆ ತಿರುಗಿದರೂ ಆರೋಗ್ಯವಾಗಿ ಇದೆ ಎಂದು ಅಪ್ಡೇಟ್ ನೀಡಿದ್ದಾರೆ. ಆದ್ದರಿಂದ ಕಪ್ಪು ನಾಯಿ ಬಿಳಿಯಾಗಿ ರೂಪಾಂತರ ಹೊಂದಿದ ವಿಚಾರ ಈಗ ಜಗತ್ತಿನ ಗಮನಸೆಳೆದಿದೆ.
(6 / 6)
ಇತ್ತೀಚೆಗೆ ನಾಯಿ ಸಂಪೂರ್ಣ ಬಿಳಿಯಾದ ನಂತರದಲ್ಲಿ ಬಸ್ಟರ್‌ನ ಬಣ್ಣ ಬದಲಾವಣೆಯ ಹಂತಗಳ ಫೋಟೋಗಳನ್ನು ಶೇರ್ ಮಾಡಿಕೊಂಡು, ವಿವರವನ್ನು ಹಂಚಿಕೊಂಡಿದ್ದಾರೆ. ನಾಯಿ ಬಿಳಿಬಣ್ಣಕ್ಕೆ ತಿರುಗಿದರೂ ಆರೋಗ್ಯವಾಗಿ ಇದೆ ಎಂದು ಅಪ್ಡೇಟ್ ನೀಡಿದ್ದಾರೆ. ಆದ್ದರಿಂದ ಕಪ್ಪು ನಾಯಿ ಬಿಳಿಯಾಗಿ ರೂಪಾಂತರ ಹೊಂದಿದ ವಿಚಾರ ಈಗ ಜಗತ್ತಿನ ಗಮನಸೆಳೆದಿದೆ.(@redditt/TallyMatty)

    ಹಂಚಿಕೊಳ್ಳಲು ಲೇಖನಗಳು