logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿ20ಐ ಕ್ರಿಕೆಟ್​​ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಅತ್ಯಧಿಕ ರನ್ ಗಳಿಸಿದ ಭಾರತೀಯ ಆಟಗಾರರು

ಟಿ20ಐ ಕ್ರಿಕೆಟ್​​ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಅತ್ಯಧಿಕ ರನ್ ಗಳಿಸಿದ ಭಾರತೀಯ ಆಟಗಾರರು

May 07, 2024 10:00 AM IST

Most runs against Pakistan : ಟಿ20ಐ ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಅತ್ಯಧಿಕ ರನ್ ಕಲೆ ಹಾಕಿದ ಭಾರತದ ಟಾಪ್​-5 ಆಟಗಾರರು ಯಾರು ಎಂಬುದನ್ನು ಈ ಮುಂದೆ ನೋಡೋಣ.

  • Most runs against Pakistan : ಟಿ20ಐ ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಅತ್ಯಧಿಕ ರನ್ ಕಲೆ ಹಾಕಿದ ಭಾರತದ ಟಾಪ್​-5 ಆಟಗಾರರು ಯಾರು ಎಂಬುದನ್ನು ಈ ಮುಂದೆ ನೋಡೋಣ.
ಪಾಕಿಸ್ತಾನ ವಿರುದ್ಧ ಅತಿ ಹೆಚ್ಚು ಟಿ20ಐ ರನ್ ಗಳಿಸಿದ ಆಟಗಾರರ ಕಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. 10 ಪಂದ್ಯಗಳಲ್ಲಿ 81.33ರ ಬ್ಯಾಟಿಂಗ್ ಸರಾಸರಿಯಲ್ಲಿ 488 ರನ್ ಸಿಡಿಸಿದ್ದಾರೆ. ಇದರಲ್ಲಿ ಐದು ಅರ್ಧಶತಕಗಳೂ ಸೇರಿವೆ. ಬ್ಯಾಟಿಂಗ್ ಸ್ಟ್ರೈಕ್​ರೇಟ್​​​ 123.85. ಗರಿಷ್ಠ ಸ್ಕೋರ್ ಅಜೇಯ 82.
(1 / 5)

ಯುವರಾಜ್ ಸಿಂಗ್​ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಎಡಗೈ ಬ್ಯಾಟ್ಸ್​ಮನ್​ ಪಾಕ್​ ವಿರುದ್ಧ ಆಡಿರುವ 8 ಟಿ20ಐಗಳಲ್ಲಿ 1 ಅರ್ಧಶತಕ ಸಹಿತ 155 ರನ್ ಗಳಿಸಿದ್ದಾರೆ. 2007ರಲ್ಲಿ ಪಾಕ್ ವಿರುದ್ಧ ಮೊದಲ ಟಿ20ಐ ಆಡಿದ್ದರು. ಬ್ಯಾಟಿಂಗ್ ಸರಾಸರಿ 25.83. ಬ್ಯಾಟಿಂಗ್ ಸ್ಟ್ರೈಕ್​ರೇಟ್ 109.92. ಗರಿಷ್ಠ ಸ್ಕೋರ್​ 72.
(2 / 5)

ಗೌತಮ್ ಗಂಭೀರ್​ ಪಾಕಿಸ್ತಾನ ವಿರುದ್ಧ ಅತ್ಯಧಿಕ ರನ್ ಗಳಿಸಿದ ಭಾರತದ ಮೂರನೇ ಬ್ಯಾಟರ್​​. ಬದ್ಧವೈರಿ ವಿರುದ್ಧ 5 ಟಿ20ಐ ಆಡಿರುವ ಗೌತಿ, 139 ರನ್ ಗಳಿಸಿದ್ದಾರೆ. 2007ರ ಟಿ20 ವಿಶ್ವಕಪ್ ಫೈನಲ್​​ನಲ್ಲಿ ಇದೇ ತಂಡದ ವಿರುದ್ಧ 75 ರನ್​ಗಳ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಬ್ಯಾಟಿಂಗ್ ಸ್ಟ್ರೈಕ್​ರೇಟ್ 125.22. ಬ್ಯಾಟಿಂಗ್ ಸರಾಸರಿ 27.80. 
(3 / 5)

ನಾಲ್ಕನೇ ಸ್ಥಾನದಲ್ಲಿರುವ ರೋಹಿತ್​ ಶರ್ಮಾ ಪಾಕಿಸ್ತಾನ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಆಡಿದ 11 ಪಂದ್ಯಗಳಲ್ಲಿ ಕೇವಲ 114 ರನ್ ಗಳಿಸಿದ್ದಾರೆ. 2007ರ ಟಿ20 ವಿಶ್ವಕಪ್​ ಫೈನಲ್​ನಲ್ಲಿ ಅಜೇಯ 30 ರನ್ ಗಳಿಸಿದ್ದ ರೋಹಿತ್​ ಸ್ಟ್ರೈಕ್​ರೇಟ್ 118.75. ಬ್ಯಾಟಿಂಗ್ ಸರಾಸರಿ 14.25. ಗರಿಷ್ಠ ಸ್ಕೋರ್ 30*. ಒಂದು ಅರ್ಧಶತಕವನ್ನೂ ದಾಖಲಿಸಿಲ್ಲ ಹಿಟ್​ಮ್ಯಾನ್.
(4 / 5)

ಎಂಎಸ್ ಧೋನಿ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಪಾಕ್ ವಿರುದ್ಧ ಆಡಿರುವ 8 ಟಿ20ಐ ಪಂದ್ಯಗಳಲ್ಲಿ 93 ರನ್ ಬಾರಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 23.25. ಬ್ಯಾಟಿಂಗ್ ಸ್ಟ್ರೈಕ್​ರೇಟ್ 119.23. ಎಂಎಸ್ ಧೋನಿ ಸಹ ಒಂದು ಅರ್ಧಶತಕವನ್ನೂ ಸಿಡಿಸಿಲ್ಲ.
(5 / 5)

    ಹಂಚಿಕೊಳ್ಳಲು ಲೇಖನಗಳು