logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿರಾಟ್, ಸೆಹ್ವಾಗ್, ಪಂತ್; ಅಂಡರ್ 19 ವಿಶ್ವಕಪ್‌ನಲ್ಲಿ ಮಿಂಚಿ ಟೀಮ್ ಇಂಡಿಯಾ ಕಾಲಿಟ್ಟವರಿವರಿವರು

ವಿರಾಟ್, ಸೆಹ್ವಾಗ್, ಪಂತ್; ಅಂಡರ್ 19 ವಿಶ್ವಕಪ್‌ನಲ್ಲಿ ಮಿಂಚಿ ಟೀಮ್ ಇಂಡಿಯಾ ಕಾಲಿಟ್ಟವರಿವರಿವರು

Feb 10, 2024 07:30 AM IST

ICC Under 19 World Cup: ಅಂಡರ್-19 ವಿಶ್ವಕಪ್ ಟೂರ್ನಿಯು‌, ಭಾರತೀಯ ಹಿರಿಯ ತಂಡಕ್ಕೆ ಹೆಬ್ಬಾಗಿಲು. ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರಿಕೆಟಿಗರು ಈ ಟೂರ್ನಿಯಲ್ಲಿ ಮಿಂಚಿ ಟೀಮ್‌ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ. ಈ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ಎಂಬ ಮಾಹಿತಿ ಇಲ್ಲಿದೆ.

  • ICC Under 19 World Cup: ಅಂಡರ್-19 ವಿಶ್ವಕಪ್ ಟೂರ್ನಿಯು‌, ಭಾರತೀಯ ಹಿರಿಯ ತಂಡಕ್ಕೆ ಹೆಬ್ಬಾಗಿಲು. ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರಿಕೆಟಿಗರು ಈ ಟೂರ್ನಿಯಲ್ಲಿ ಮಿಂಚಿ ಟೀಮ್‌ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ. ಈ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ಎಂಬ ಮಾಹಿತಿ ಇಲ್ಲಿದೆ.
ವಿರಾಟ್ ಕೊಹ್ಲಿ: ವಿರಾಟ್ 2008ರಲ್ಲಿ ಅಂಡರ್‌ 19 ವಿಶ್ವಕಪ್ ಗೆದ್ದ ತಂಡದ ನಾಯಕರಾಗಿದ್ದರು. ಅಲ್ಲದೆ, ಅವರು ಪಂದ್ಯಾವಳಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ ಕೂಡಾ ಹೌದು. ಆ ಬಳಿಕ ಸ್ಥಿರ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಆ ಬಳಿಕ ನಡೆದಿದ್ದು ಇತಿಹಾಸ. 
(1 / 10)
ವಿರಾಟ್ ಕೊಹ್ಲಿ: ವಿರಾಟ್ 2008ರಲ್ಲಿ ಅಂಡರ್‌ 19 ವಿಶ್ವಕಪ್ ಗೆದ್ದ ತಂಡದ ನಾಯಕರಾಗಿದ್ದರು. ಅಲ್ಲದೆ, ಅವರು ಪಂದ್ಯಾವಳಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ ಕೂಡಾ ಹೌದು. ಆ ಬಳಿಕ ಸ್ಥಿರ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಆ ಬಳಿಕ ನಡೆದಿದ್ದು ಇತಿಹಾಸ. (X)
ಯುವರಾಜ್ ಸಿಂಗ್: 2000ದಲ್ಲಿ ಮೊಹಮ್ಮದ್ ಕೈಫ್ ನೇತೃತ್ವದಲ್ಲಿ ಭಾರತ U-19 ವಿಶ್ವಕಪ್ ಗೆದ್ದಾಗ, ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಬ್ಯಾಟ್‌ನಿಂದ ರನ್ ಗಳಿಸಿದ್ದಲ್ಲದೆ, ಚೆಂಡಿನ ಮೂಲಕ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಅಲ್ಲದೆ ಸರಣಿ ಶ್ರೇಷ್ಠ ಪ್ರಶಸ್ತಿಯೂ ಗೆದ್ದರು. ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆದ ಬಳಿಕ ಹಲವು ಪಂದ್ಯಗಳಲ್ಲಿ ಮಿಂಚಿ ಆಯ್ಕೆಗಾರರ ​​ಗಮನ ಸೆಳೆದರು. ಅವರು 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 
(2 / 10)

ವೀರೇಂದ್ರ ಸೆಹ್ವಾಗ್: 1998ರ ಅಂಡರ್‌ 19 ವಿಶ್ವಕಪ್‌ನಲ್ಲಿ, ವೀರು ಬ್ಯಾಟ್‌ಗಿಂತ ಚೆಂಡಿನ ಮೂಲಕ ಹೆಚ್ಚು ಪ್ರಭಾವ ಬೀರುವಲ್ಲಿ ಯಶಸ್ವಿಯಾದರು. ಅವರು 7 ವಿಕೆಟ್‌ಗಳನ್ನು ಪಡೆದರು. ತಮ್ಮ ಉತ್ತಮ ಪ್ರದರ್ಶನದಿಂದಾಗ ಹಿರಿಯರ ತಂಡದಲ್ಲಿ ಅವಕಾಶ ಪಡೆದರು. ಟೀಮ್‌ ಇಂಡಿಯಾದಲ್ಲಿ ಸುದೀರ್ಘ ಸಮಯಕ್ಕೆ ಆಧಾರಸ್ತಂಭವಾದರು. 
(3 / 10)

ಹರ್ಭಜನ್ ಸಿಂಗ್: 1998ರ U-19 ವಿಶ್ವಕಪ್‌ನಲ್ಲಿ ಭಜ್ಜಿ  ಆಡಿದ್ದರು. 8 ವಿಕೆಟ್‌ಗಳ ಜೊತೆಗೆ, ಉತ್ತಮ ಎಕಾನಮಿ ಕಾಯ್ದುಕೊಂಡಿದ್ದರು. 
(4 / 10)

ರೋಹಿತ್ ಶರ್ಮಾ: 2006ರ U-19 ವಿಶ್ವಕಪ್‌ನಲ್ಲಿ, ರೋಹಿತ್ ಶರ್ಮಾ ಆರು ಇನ್ನಿಂಗ್ಸ್‌ಗಳಲ್ಲಿ ಮೂರು ಅರ್ಧಶತಕ ಸಿಡಿಸಿದರು. ಅವರ ಒಟ್ಟು ಮೊತ್ತ 205 ರನ್ ಮತ್ತು ಸರಾಸರಿ 41. ಆ ಬಳಿಕ ಸ್ಥಿರ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಈಗ ಅವರು ತಂಡದ ದೊಡ್ಡ ಆಧಾರಸ್ತಂಭವಾಗಿದ್ದಾರೆ. ಸದ್ಯ ಟೀಮ್‌ ಇಂಡಿಯಾ ನಾಯಕನಾಗಿ ಬಡ್ತಿ ಪಡೆದಿದ್ದಾರೆ. 
(5 / 10)

ಚೇತೇಶ್ವರ ಪೂಜಾರ: 2006ರ U-19 ವಿಶ್ವಕಪ್‌ನಲ್ಲಿ ಪೂಜಾರ ಆಡಿದ್ದರು. ಆಡಿದ ಆರು ಇನ್ನಿಂಗ್ಸ್‌ಗಳಲ್ಲಿ ಎರಡು ಅರ್ಧಶತಕ ಮತ್ತು ಒಂದು ಶತಕ ಸೇರಿದಂತೆ 349 ರನ್‌ ಗಳಿಸಿದರು. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. 
(6 / 10)

ರವೀಂದ್ರ ಜಡೇಜಾ: ಆಲ್‌ರೌಂಡರ್ 2008ರಲ್ಲಿ U-19 ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದರು. ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಕ್ಕಿತು. ಇದೀಗ ಸುದೀರ್ಘ ಕಾಲದಿಂದ ಉತ್ತಮ ಪ್ರದರ್ಶನ ನೀಡಿ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. 
(7 / 10)

ಶಿಖರ್ ಧವನ್: ಎಡಗೈ ಬ್ಯಾಟರ್‌ 2004ರ U-19 ವಿಶ್ವಕಪ್‌ನಲ್ಲಿ ಆಡಿದ್ದರು. ಅವರು ಮೂರು ಶತಕಗಳು ಸೇರಿದಂತೆ ಏಳು ಇನ್ನಿಂಗ್ಸ್‌ಗಳಲ್ಲಿ 505 ರನ್‌ಗಳೊಂದಿಗೆ ಪಂದ್ಯಾವಳಿಯ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದರು. ಆದರೂ, ರಾಷ್ಟ್ರೀಯ ತಂಡದಲ್ಲಿ ಅವರಿಗೆ ತಡವಾಗಿ ಅವಕಾಶ ಸಿಕ್ಕಿತು.
(8 / 10)

ಸುರೇಶ್ ರೈನಾ: ಧವನ್ ಅವರಂತೆಯೇ ರೈನಾ ಕೂಡಾ 2004ರ U-19 ವಿಶ್ವಕಪ್‌ನಲ್ಲಿ ಆಡಿದ್ದರು. ಅವರು ಏಳು ಇನ್ನಿಂಗ್ಸ್‌ಗಳಲ್ಲಿ 247 ರನ್ ಗಳಿಸಿದರು. 35ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದರು. ಇವುಗಳಲ್ಲಿ ಎರಡು ಅರ್ಧಶತಕಗಳಿದ್ದವು. ಮಧ್ಯಮ ಕ್ರಮಾಂಕದಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ಯಾಟರ್ ಆಗಿದ್ದರು.‌ ಟೀಮ್‌ ಇಂಡಿಯಾಗೆ ಎಂಟ್ರಿ ಕೊಟ್ಟ ಬಳಿಕ, ಮಧ್ಯಮ ಕ್ರಮಾಂಕದ ಆಧಾರಸ್ತಂಭವಾದರು.
(9 / 10)
ಸುರೇಶ್ ರೈನಾ: ಧವನ್ ಅವರಂತೆಯೇ ರೈನಾ ಕೂಡಾ 2004ರ U-19 ವಿಶ್ವಕಪ್‌ನಲ್ಲಿ ಆಡಿದ್ದರು. ಅವರು ಏಳು ಇನ್ನಿಂಗ್ಸ್‌ಗಳಲ್ಲಿ 247 ರನ್ ಗಳಿಸಿದರು. 35ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದರು. ಇವುಗಳಲ್ಲಿ ಎರಡು ಅರ್ಧಶತಕಗಳಿದ್ದವು. ಮಧ್ಯಮ ಕ್ರಮಾಂಕದಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ಯಾಟರ್ ಆಗಿದ್ದರು.‌ ಟೀಮ್‌ ಇಂಡಿಯಾಗೆ ಎಂಟ್ರಿ ಕೊಟ್ಟ ಬಳಿಕ, ಮಧ್ಯಮ ಕ್ರಮಾಂಕದ ಆಧಾರಸ್ತಂಭವಾದರು.(AP)
ರಿಷಭ್ ಪಂತ್: 2016ರ U-19 ವಿಶ್ವಕಪ್‌ನಲ್ಲಿ 6 ಇನ್ನಿಂಗ್ಸ್‌ಗಳಲ್ಲಿ 267 ರನ್ ಗಳಿಸಿದರು. ಇದರಲ್ಲಿ ಎರಡು ಅರ್ಧಶತಕಗಳು ಸೇರಿದ್ದವು. ತಂಡದ ಆಧಾರಸ್ತಂಭಗಳಲ್ಲಿ ಒಬ್ಬರಾದ ಇಶಾನ್ ಕಿಶನ್ ಆ ವಿಶ್ವಕಪ್‌ನಲ್ಲಿ ವಿಧ್ವಂಸಕ ಆರಂಭಿಕ ಜೋಡಿಯಾಗಿದ್ದರು.
(10 / 10)

    ಹಂಚಿಕೊಳ್ಳಲು ಲೇಖನಗಳು