logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Asteroids: ಇಂದಿನಿಂದ ಜುಲೈ 10ರವರೆಗೆ ಭೂಮಿಯತ್ತ 5 ಕ್ಷುದ್ರಗ್ರಹ, 31ರಿಂದ 880 ಅಡಿ ಗಾತ್ರ, ಒಂದಕ್ಕಿಂತ ಒಂದು ಸ್ಪೀಡು, ನಾಸಾದಿಂದ ಮಾಹಿತಿ

Asteroids: ಇಂದಿನಿಂದ ಜುಲೈ 10ರವರೆಗೆ ಭೂಮಿಯತ್ತ 5 ಕ್ಷುದ್ರಗ್ರಹ, 31ರಿಂದ 880 ಅಡಿ ಗಾತ್ರ, ಒಂದಕ್ಕಿಂತ ಒಂದು ಸ್ಪೀಡು, ನಾಸಾದಿಂದ ಮಾಹಿತಿ

Jul 05, 2023 06:14 PM IST

Asteroids Near Earth: ಮುಂದಿನ ಕೆಲವೇ ದಿನಗಳಲ್ಲಿ ಐದು ಕ್ಷುದ್ರಗ್ರಹಗಳು ಭೂಮಿಯ ಸನಿಹಕ್ಕೆ ಬರುತ್ತಿದೆ ಎಂದು ನಾಸಾ ತಿಳಿಸಿದೆ. ಈ ಕ್ಷುದ್ರಗ್ರಹಗಳ ಆಕಾರ, ವೇಗ, ದೂರ, ಗಾತ್ರ ಇತ್ಯಾದಿ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಕ್ಷುದ್ರಗ್ರಹಗಳೆಂಬ ಆಕಾಶಕಾಯಗಳ ಕುರಿತು ಆಸಕ್ತಿಯುಳ್ಳ ಖಗೋಳಪ್ರಿಯರಿಗೆ ಇದು ಇಂಟ್ರೆಸ್ಟಿಂಗ್‌ ಮಾಹಿತಿ.

Asteroids Near Earth: ಮುಂದಿನ ಕೆಲವೇ ದಿನಗಳಲ್ಲಿ ಐದು ಕ್ಷುದ್ರಗ್ರಹಗಳು ಭೂಮಿಯ ಸನಿಹಕ್ಕೆ ಬರುತ್ತಿದೆ ಎಂದು ನಾಸಾ ತಿಳಿಸಿದೆ. ಈ ಕ್ಷುದ್ರಗ್ರಹಗಳ ಆಕಾರ, ವೇಗ, ದೂರ, ಗಾತ್ರ ಇತ್ಯಾದಿ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಕ್ಷುದ್ರಗ್ರಹಗಳೆಂಬ ಆಕಾಶಕಾಯಗಳ ಕುರಿತು ಆಸಕ್ತಿಯುಳ್ಳ ಖಗೋಳಪ್ರಿಯರಿಗೆ ಇದು ಇಂಟ್ರೆಸ್ಟಿಂಗ್‌ ಮಾಹಿತಿ.
Asteroid 2023 HO6: ಈ ಕ್ಷುದ್ರಗ್ರಹ ಇಂದು ಭೂಮಿಯ ತುಂಬಾ ಹತ್ತಿರಕ್ಕೆ ಬರಲಿದೆ. ಇದು ಸುಮಾರು 570 ಅಡಿ ಗಾತ್ರದ ಕ್ಷುದ್ರಗ್ರಹ. ಇದು ಗಂಟೆಗೆ  27969  ಕಿ.ಮೀ. ವೇಗದಲ್ಲಿ ಬರುತ್ತಿದ್ದು, ಭೂಮಿಯಿಂದ ಸುಮಾರು 2 ದಶಲಕ್ಷ ಕಿ.ಮೀ. ಹತ್ತಿರಕ್ಕೆ ಬರಲಿದೆ. ಇವುಗಳ ವೇಗಕ್ಕೆ ಹೋಲಿಸಿದರೆ ಇಷ್ಟು ಕಿ.ಮೀ.  ಅಂದುಕೊಂಡಷ್ಟು ದೂರವಲ್ಲ. 
(1 / 5)
Asteroid 2023 HO6: ಈ ಕ್ಷುದ್ರಗ್ರಹ ಇಂದು ಭೂಮಿಯ ತುಂಬಾ ಹತ್ತಿರಕ್ಕೆ ಬರಲಿದೆ. ಇದು ಸುಮಾರು 570 ಅಡಿ ಗಾತ್ರದ ಕ್ಷುದ್ರಗ್ರಹ. ಇದು ಗಂಟೆಗೆ  27969  ಕಿ.ಮೀ. ವೇಗದಲ್ಲಿ ಬರುತ್ತಿದ್ದು, ಭೂಮಿಯಿಂದ ಸುಮಾರು 2 ದಶಲಕ್ಷ ಕಿ.ಮೀ. ಹತ್ತಿರಕ್ಕೆ ಬರಲಿದೆ. ಇವುಗಳ ವೇಗಕ್ಕೆ ಹೋಲಿಸಿದರೆ ಇಷ್ಟು ಕಿ.ಮೀ.  ಅಂದುಕೊಂಡಷ್ಟು ದೂರವಲ್ಲ. (Pixabay)
Asteroid 2023 ME4: ಈ ಆಕಾಶ ಬಂಡೆಯು ಭೂಮಿಯತ್ತ ಬರುತ್ತಿದ್ದು, ನಾಳೆ ಭೂಮಿಯ ಸನಿಹಕ್ಕೆ ಬರಲಿದೆ. ಇದು 100 ಅಡಿ ಗಾತ್ರದ ಬಂಡೆ. ಇದು ಗಂಟೆಗೆ ಸುಮಾರು  38401  ಕಿ.ಮೀ. ವೇಗದಲ್ಲಿ ಬರುತ್ತಿದೆ. ಇದು ಭೂಮಿಯಿಂದ 1.1 ದಶಲಕ್ಷ ಕಿ.ಮೀ. ಹತ್ತಿರಕ್ಕೆ ಬರಲಿದೆ. 
(2 / 5)
Asteroid 2023 ME4: ಈ ಆಕಾಶ ಬಂಡೆಯು ಭೂಮಿಯತ್ತ ಬರುತ್ತಿದ್ದು, ನಾಳೆ ಭೂಮಿಯ ಸನಿಹಕ್ಕೆ ಬರಲಿದೆ. ಇದು 100 ಅಡಿ ಗಾತ್ರದ ಬಂಡೆ. ಇದು ಗಂಟೆಗೆ ಸುಮಾರು  38401  ಕಿ.ಮೀ. ವೇಗದಲ್ಲಿ ಬರುತ್ತಿದೆ. ಇದು ಭೂಮಿಯಿಂದ 1.1 ದಶಲಕ್ಷ ಕಿ.ಮೀ. ಹತ್ತಿರಕ್ಕೆ ಬರಲಿದೆ. (Pixabay)
Asteroid 2023 LH2: ಇದು ಸುಮಾರು 110 ಅಡಿ ಗಾತ್ರದ ಕ್ಷುದ್ರಗ್ರಹ. ಇದು ಭೂಮಿಯ ಸಮೀಪ ನಾಳೆ ಬರಲಿದೆ. ಇದು ಗಂಟೆಗೆ ಗರಿಷ್ಠ 28544  ವೇಗದಲ್ಲಿ ಬರುತ್ತಿದೆ. ಇದು ಭೂಮಿಯಿಂದ 7.2  ದಶಲಕ್ಷ ಕಿ.ಮೀ. ಹತ್ತಿರಕ್ಕೆ ಬರಲಿದೆ. 
(3 / 5)
Asteroid 2023 LH2: ಇದು ಸುಮಾರು 110 ಅಡಿ ಗಾತ್ರದ ಕ್ಷುದ್ರಗ್ರಹ. ಇದು ಭೂಮಿಯ ಸಮೀಪ ನಾಳೆ ಬರಲಿದೆ. ಇದು ಗಂಟೆಗೆ ಗರಿಷ್ಠ 28544  ವೇಗದಲ್ಲಿ ಬರುತ್ತಿದೆ. ಇದು ಭೂಮಿಯಿಂದ 7.2  ದಶಲಕ್ಷ ಕಿ.ಮೀ. ಹತ್ತಿರಕ್ಕೆ ಬರಲಿದೆ. (Pixabay)
Asteroid 2019 LH5: ಇದು ಜುಲೈ 7ರಂದು ಭೂಮಿಯ ಸಮೀಪ ಬರಲಿದೆ. ಇದು 880 ಅಡಿ ಗಾತ್ರ ಹೊಂದಿದೆ. ಇದು ಗಂಟೆಗೆ ಗರಿಷ್ಠ 77938  ಕಿ.ಮೀ. ವೇಗದಲ್ಲಿ ಆಗಮಿಸಲಿದೆ. ಇದು ಭೂಮಿಯಿಂದ 5.7 ಮಿಲಿಯನ್‌ ಕಿ.ಮೀ. ದೂರದಲ್ಲಿ ಹಾದು ಹೋಗುವ ನಿರೀಕ್ಷೆಯಿದೆ. 
(4 / 5)
Asteroid 2019 LH5: ಇದು ಜುಲೈ 7ರಂದು ಭೂಮಿಯ ಸಮೀಪ ಬರಲಿದೆ. ಇದು 880 ಅಡಿ ಗಾತ್ರ ಹೊಂದಿದೆ. ಇದು ಗಂಟೆಗೆ ಗರಿಷ್ಠ 77938  ಕಿ.ಮೀ. ವೇಗದಲ್ಲಿ ಆಗಮಿಸಲಿದೆ. ಇದು ಭೂಮಿಯಿಂದ 5.7 ಮಿಲಿಯನ್‌ ಕಿ.ಮೀ. ದೂರದಲ್ಲಿ ಹಾದು ಹೋಗುವ ನಿರೀಕ್ಷೆಯಿದೆ. (Pixabay)
Asteroid 2018 NW: ಇದು ಭೂಮಿಯ ಸಮೀಪ ಜುಲೈ 10ಕ್ಕೆ ಆಗಮಿಸಲಿದೆ. ಇದು ಪುಟಾಣಿ ಕ್ಷುದ್ರಗ್ರಹ. ಅಂದರೆ 31 ಅಡಿ ಗಾತ್ರ ಇರಲಿದೆ. ಇದು ಭೂಮಿಯಿಂದ 6.9 ದಶಲಕ್ಷ ಕಿ.ಮೀ. ಹತ್ತಿರಕ್ಕೆ ಬರಲಿದೆ ಎಂದು ನಾಸಾ ತಿಳಿಸಿದೆ.
(5 / 5)
Asteroid 2018 NW: ಇದು ಭೂಮಿಯ ಸಮೀಪ ಜುಲೈ 10ಕ್ಕೆ ಆಗಮಿಸಲಿದೆ. ಇದು ಪುಟಾಣಿ ಕ್ಷುದ್ರಗ್ರಹ. ಅಂದರೆ 31 ಅಡಿ ಗಾತ್ರ ಇರಲಿದೆ. ಇದು ಭೂಮಿಯಿಂದ 6.9 ದಶಲಕ್ಷ ಕಿ.ಮೀ. ಹತ್ತಿರಕ್ಕೆ ಬರಲಿದೆ ಎಂದು ನಾಸಾ ತಿಳಿಸಿದೆ.(Pixabay)

    ಹಂಚಿಕೊಳ್ಳಲು ಲೇಖನಗಳು