logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sperm Contest: 20 ವೀರ್ಯ ಕೊಟ್ಟರೆ 70000 ರೂಪಾಯಿ ಸಿಗುತ್ತೆ, ಚೀನಾದಲ್ಲಿ ವಿದ್ಯಾರ್ಥಿಗಳ ವೀರ್ಯಕ್ಕೆ ಬಹುಬೇಡಿಕೆ

Sperm contest: 20 ವೀರ್ಯ ಕೊಟ್ಟರೆ 70000 ರೂಪಾಯಿ ಸಿಗುತ್ತೆ, ಚೀನಾದಲ್ಲಿ ವಿದ್ಯಾರ್ಥಿಗಳ ವೀರ್ಯಕ್ಕೆ ಬಹುಬೇಡಿಕೆ

Sep 22, 2023 06:28 PM IST

Sperm contest in China: ಚೀನಾದಲ್ಲಿ ಜನನ ಪ್ರಮಾಣ ಇಳಿಕೆಯನ್ನು ತಪ್ಪಿಸಲು ಅಲ್ಲಿ ಈಗ ವೀರ್ಯಾಣು ಸಂಗ್ರಹ ಶುರುವಾಗಿದೆ. ವಿದ್ಯಾರ್ಥಿಗಳ ವೀರ್ಯಾಣುವಿಗೆ ಬಹಳ ಬೇಡಿಕೆ. ಹೀಗಾಗಿ ಅಲ್ಲಿನ ವೀರ್ಯ ಬ್ಯಾಂಕ್ ಕಂಪನಿಯೊಂದು ಇದಕ್ಕಾಗಿ ಸ್ಪರ್ಧೆಯನ್ನೇ ಏರ್ಪಡಿಸಿದೆ.

  • Sperm contest in China: ಚೀನಾದಲ್ಲಿ ಜನನ ಪ್ರಮಾಣ ಇಳಿಕೆಯನ್ನು ತಪ್ಪಿಸಲು ಅಲ್ಲಿ ಈಗ ವೀರ್ಯಾಣು ಸಂಗ್ರಹ ಶುರುವಾಗಿದೆ. ವಿದ್ಯಾರ್ಥಿಗಳ ವೀರ್ಯಾಣುವಿಗೆ ಬಹಳ ಬೇಡಿಕೆ. ಹೀಗಾಗಿ ಅಲ್ಲಿನ ವೀರ್ಯ ಬ್ಯಾಂಕ್ ಕಂಪನಿಯೊಂದು ಇದಕ್ಕಾಗಿ ಸ್ಪರ್ಧೆಯನ್ನೇ ಏರ್ಪಡಿಸಿದೆ.
ಜನಸಂಖ್ಯೆಯ ದೃಷ್ಟಿಯಿಂದ ಚೀನಾ ಈಗ ಎರಡನೇ ಸ್ಥಾನದಲ್ಲಿದೆ. ಭಾರತ ಮೊದಲ ಸ್ಥಾನದಲ್ಲಿದೆ. ಚೀನಾ ಜನಸಂಖ್ಯೆ ವಿಚಾರದಲ್ಲಿ ವಿಚಿತ್ರ ಸನ್ನಿವೇಶ ಎದುರಿಸುತ್ತಿದೆ. ಅಲ್ಲಿನ ಪುರುಷರಲ್ಲಿ ವೀರ್ಯ ಸಂಖ್ಯೆ ಕುಸಿದಿದೆ. ಜನನ ಪ್ರಮಾಣ ಇಳಿಕೆಯಾಗಿದೆ. 
(1 / 6)
ಜನಸಂಖ್ಯೆಯ ದೃಷ್ಟಿಯಿಂದ ಚೀನಾ ಈಗ ಎರಡನೇ ಸ್ಥಾನದಲ್ಲಿದೆ. ಭಾರತ ಮೊದಲ ಸ್ಥಾನದಲ್ಲಿದೆ. ಚೀನಾ ಜನಸಂಖ್ಯೆ ವಿಚಾರದಲ್ಲಿ ವಿಚಿತ್ರ ಸನ್ನಿವೇಶ ಎದುರಿಸುತ್ತಿದೆ. ಅಲ್ಲಿನ ಪುರುಷರಲ್ಲಿ ವೀರ್ಯ ಸಂಖ್ಯೆ ಕುಸಿದಿದೆ. ಜನನ ಪ್ರಮಾಣ ಇಳಿಕೆಯಾಗಿದೆ. 
ಜನನ ಪ್ರಮಾಣ ಇಳಿಕೆ, ಪುರುಷರಲ್ಲಿ ವೀರ್ಯ ಸಂಖ್ಯೆ ಕುಸಿತದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಚೀನಾ ಹೊಸ ಉಪಕ್ರಮಕ್ಕೆ ಮುಂದಾಗಿದೆ, ಚೀನಾದ ಹ್ಯೂಮನ್ ಸ್ಪರ್ಮ್‌ ಬ್ಯಾಂಕ್ ಒಂದು ವೀರ್ಯ ಸಂಗ್ರಹಿಸುವ ಸ್ಪರ್ಧೆ ಆಯೋಜಿಸಿದೆ. 
(2 / 6)
ಜನನ ಪ್ರಮಾಣ ಇಳಿಕೆ, ಪುರುಷರಲ್ಲಿ ವೀರ್ಯ ಸಂಖ್ಯೆ ಕುಸಿತದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಚೀನಾ ಹೊಸ ಉಪಕ್ರಮಕ್ಕೆ ಮುಂದಾಗಿದೆ, ಚೀನಾದ ಹ್ಯೂಮನ್ ಸ್ಪರ್ಮ್‌ ಬ್ಯಾಂಕ್ ಒಂದು ವೀರ್ಯ ಸಂಗ್ರಹಿಸುವ ಸ್ಪರ್ಧೆ ಆಯೋಜಿಸಿದೆ. (Freepik)
ಸೌತ್‌ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ಹೆನಾನ್ ಪ್ರಾಂತೀಯ ಹ್ಯೂಮನ್ ಸ್ಪರ್ಮ್ ಬ್ಯಾಂಕ್ ಆಯೋಜಿಸಿರುವ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಬಹುದು. ಅವರಿಂದ 8ರಿಂದ 20 ವೀರ್ಯಗಳನ್ನು ಸಂಗ್ರಹಿಸುವ ನಿರೀಕ್ಷೆಯಲ್ಲಿದೆ ಸ್ಪರ್ಮ್‌ ಬ್ಯಾಂಕ್.
(3 / 6)
ಸೌತ್‌ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ಹೆನಾನ್ ಪ್ರಾಂತೀಯ ಹ್ಯೂಮನ್ ಸ್ಪರ್ಮ್ ಬ್ಯಾಂಕ್ ಆಯೋಜಿಸಿರುವ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಬಹುದು. ಅವರಿಂದ 8ರಿಂದ 20 ವೀರ್ಯಗಳನ್ನು ಸಂಗ್ರಹಿಸುವ ನಿರೀಕ್ಷೆಯಲ್ಲಿದೆ ಸ್ಪರ್ಮ್‌ ಬ್ಯಾಂಕ್.(Freepik)
ಸ್ಪರ್ಧಿಗಳಿಗೆ ಒಟ್ಟು 50 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಇದರಲ್ಲಿ ಅವರು ಗರಿಷ್ಠ 20 ಬಾರಿ ವೀರ್ಯವನ್ನು ದಾನ ಮಾಡಬಹುದು. ಆ ವೀರ್ಯ ದಾನಕ್ಕೆ 6100 ಯುವಾನ್ ನಗದು ಪಾವತಿಸಲಾಗುತ್ತದೆ. ಭಾರತೀಯ ಕರೆನ್ಸಿಯಲ್ಲಿ ಹೆಚ್ಚು ಕಡಿಮೆ 70 ಸಾವಿರ ರೂಪಾಯಿ ಆಗುತ್ತದೆ. 
(4 / 6)
ಸ್ಪರ್ಧಿಗಳಿಗೆ ಒಟ್ಟು 50 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಇದರಲ್ಲಿ ಅವರು ಗರಿಷ್ಠ 20 ಬಾರಿ ವೀರ್ಯವನ್ನು ದಾನ ಮಾಡಬಹುದು. ಆ ವೀರ್ಯ ದಾನಕ್ಕೆ 6100 ಯುವಾನ್ ನಗದು ಪಾವತಿಸಲಾಗುತ್ತದೆ. ಭಾರತೀಯ ಕರೆನ್ಸಿಯಲ್ಲಿ ಹೆಚ್ಚು ಕಡಿಮೆ 70 ಸಾವಿರ ರೂಪಾಯಿ ಆಗುತ್ತದೆ. (Freepik)
ವೀರ್ಯದಾನ ಮಾಡಲು ಬಂದು ಹೋಗುವ ವೆಚ್ಚವನ್ನು ಸಂಸ್ಥೆಯೇ ಭರಿಸಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಸಂಸ್ಥೆಯು ಅಲ್ಲಿನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಆಹ್ವಾನಿಸಿದೆ.
(5 / 6)
ವೀರ್ಯದಾನ ಮಾಡಲು ಬಂದು ಹೋಗುವ ವೆಚ್ಚವನ್ನು ಸಂಸ್ಥೆಯೇ ಭರಿಸಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಸಂಸ್ಥೆಯು ಅಲ್ಲಿನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಆಹ್ವಾನಿಸಿದೆ.
ಈ ವೀರ್ಯ ಸಂಗ್ರಹ ಸ್ಪರ್ಧೆಯಲ್ಲ ಭಾಗವಹಿಸುವ ಸ್ಪರ್ಧಿಗಳಿಗೆ ವಯೋಮಿತಿಯನ್ನೂ ನಿಗದಿಪಡಿಸಲಾಗಿದೆ. 20 ವರ್ಷದಿಂದ 45 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಮಾತ್ರವೇ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ವೀರ್ಯ ದಾನಿಗಳ ಎತ್ತರ 1.65 ಮೀಟರ್ ಆಗಿರಬೇಕು. ಉತ್ತಮ ವೀರ್ಯ ಹೊಂದಿರುವವರಿಗೆ ಪ್ರತ್ಯೇಕ ಬಹುಮಾನವಿದೆ ಎಂದೂ ಸ್ಪರ್ಮ್‌ ಬ್ಯಾಂಕ್ ಘೋಷಿಸಿದೆ. (ಸಾಂಕೇತಿಕ ಚಿತ್ರ)
(6 / 6)

    ಹಂಚಿಕೊಳ್ಳಲು ಲೇಖನಗಳು