logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Liger Electric Scooters: ಈ ಎಲೆಕ್ಟ್ರಿಕ್‌ ಸ್ಕೂಟರ್‌ ಬ್ಯಾಲೆನ್ಸ್‌ ನೋಡಿದರೆ ನೀವು ನಿಬ್ಬೆರಗಾಗುತ್ತೀರಿ:‌ ಶುರುವಾಗಲಿದೆ ಲೈಗರ್‌ ಫಿವರ್!

Liger Electric Scooters: ಈ ಎಲೆಕ್ಟ್ರಿಕ್‌ ಸ್ಕೂಟರ್‌ ಬ್ಯಾಲೆನ್ಸ್‌ ನೋಡಿದರೆ ನೀವು ನಿಬ್ಬೆರಗಾಗುತ್ತೀರಿ:‌ ಶುರುವಾಗಲಿದೆ ಲೈಗರ್‌ ಫಿವರ್!

Jan 15, 2023 05:10 PM IST

Liger Electric Scooters: ಸ್ವಯಂ ಸಮತೋಲನ ಕಾಯ್ದುಕೊಳ್ಳುವ ಸ್ಕೂಟರ್‌ನ್ನು ನೀವು ನೋಡಿದ್ದೀರಾ? ಹಾಗಿದ್ದರೆ ನೀವು ಲೈಗರ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಬಗ್ಗ ತಿಳಿದುಕೊಳ್ಳಲೇಬೇಕು. ಆಟೋ ಎಕ್ಸ್‌ಪೋ 2023ರಲ್ಲಿ ಪ್ರದರ್ಶನಗೊಂಡ ಲೈಗರ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಬಗ್ಗೆ ಇಲ್ಲಿದೆ ಮಾಹಿತಿ..

  • Liger Electric Scooters: ಸ್ವಯಂ ಸಮತೋಲನ ಕಾಯ್ದುಕೊಳ್ಳುವ ಸ್ಕೂಟರ್‌ನ್ನು ನೀವು ನೋಡಿದ್ದೀರಾ? ಹಾಗಿದ್ದರೆ ನೀವು ಲೈಗರ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಬಗ್ಗ ತಿಳಿದುಕೊಳ್ಳಲೇಬೇಕು. ಆಟೋ ಎಕ್ಸ್‌ಪೋ 2023ರಲ್ಲಿ ಪ್ರದರ್ಶನಗೊಂಡ ಲೈಗರ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಬಗ್ಗೆ ಇಲ್ಲಿದೆ ಮಾಹಿತಿ..
ಲೈಗರ್ ಮೊಬಿಲಿಟಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಸ್ವಯಂ ಸಮತೋಲನ ತಂತ್ರಜ್ಞಾನದೊಂದಿಗೆ ಬರುತ್ತವೆ. ಈ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ಮೊದಲ ಸ್ಕೂಟರ್‌ಗಳು ಇವು.
(1 / 6)
ಲೈಗರ್ ಮೊಬಿಲಿಟಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಸ್ವಯಂ ಸಮತೋಲನ ತಂತ್ರಜ್ಞಾನದೊಂದಿಗೆ ಬರುತ್ತವೆ. ಈ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ಮೊದಲ ಸ್ಕೂಟರ್‌ಗಳು ಇವು.(HT)
ಲೈಗರ್ ಆಟೋ ಎಕ್ಸ್‌ಪೋ 2023 ರಲ್ಲಿ X ಮತ್ತು X+ ಹೆಸರಿನ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣಗೊಳಿಸಿದೆ. ಈ ವರ್ಷವೇ ಬುಕಿಂಗ್‌ ಆರಂಭಗೊಳ್ಳಲಿದ್ದು, ಜೂನ್ ಮತ್ತು ಜುಲೈ ನಡುವೆ ಈ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.
(2 / 6)
ಲೈಗರ್ ಆಟೋ ಎಕ್ಸ್‌ಪೋ 2023 ರಲ್ಲಿ X ಮತ್ತು X+ ಹೆಸರಿನ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣಗೊಳಿಸಿದೆ. ಈ ವರ್ಷವೇ ಬುಕಿಂಗ್‌ ಆರಂಭಗೊಳ್ಳಲಿದ್ದು, ಜೂನ್ ಮತ್ತು ಜುಲೈ ನಡುವೆ ಈ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.(HT)
ಈ ಸ್ಕೂಟರ್‌ಗಳು ಸವಾರರಿಗೆ ಸಾಕಷ್ಟು ಸೌಕರ್ಯ, ಅನುಕೂಲತೆ ಮತ್ತು ಸುರಕ್ಷತೆಯನ್ನು ಒದಗಿಸುತ್ತವೆ ಎಂದು ಲೈಗರ್ ಮೊಬಿಲಿಟಿ ಹೇಳಿದೆ. ಇದೇ ವೇಳೆ 2025ರ ವೇಳೆಗೆ ಈ ಸ್ಕೂಟರ್‌ಗಳನ್ನು ವಿದೇಶಗಳಿಗೆ ರಫ್ತು ಮಾಡುವ ಗುರಿ ಇದೆ ಎಂದೂ ಕಂಪನಿ ತಿಳಿಸಿದೆ.
(3 / 6)
ಈ ಸ್ಕೂಟರ್‌ಗಳು ಸವಾರರಿಗೆ ಸಾಕಷ್ಟು ಸೌಕರ್ಯ, ಅನುಕೂಲತೆ ಮತ್ತು ಸುರಕ್ಷತೆಯನ್ನು ಒದಗಿಸುತ್ತವೆ ಎಂದು ಲೈಗರ್ ಮೊಬಿಲಿಟಿ ಹೇಳಿದೆ. ಇದೇ ವೇಳೆ 2025ರ ವೇಳೆಗೆ ಈ ಸ್ಕೂಟರ್‌ಗಳನ್ನು ವಿದೇಶಗಳಿಗೆ ರಫ್ತು ಮಾಡುವ ಗುರಿ ಇದೆ ಎಂದೂ ಕಂಪನಿ ತಿಳಿಸಿದೆ.(HT)
ಬಟನ್ ಅನ್ನು ಒತ್ತುವ ಮೂಲಕ ಸ್ಕೂಟರ್ ಅನ್ನು ಸವಾರಿ ಮಾಡುವಾಗ ಬಳಕೆದಾರರು ಸ್ವಯಂ-ಸಮತೋಲನ ತಂತ್ರಜ್ಞಾನವನ್ನು ಸಕ್ರಿಯಗೊಳಿಸಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು.
(4 / 6)
ಬಟನ್ ಅನ್ನು ಒತ್ತುವ ಮೂಲಕ ಸ್ಕೂಟರ್ ಅನ್ನು ಸವಾರಿ ಮಾಡುವಾಗ ಬಳಕೆದಾರರು ಸ್ವಯಂ-ಸಮತೋಲನ ತಂತ್ರಜ್ಞಾನವನ್ನು ಸಕ್ರಿಯಗೊಳಿಸಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು.(HT)
ಲೈಗರ್ X ಮತ್ತು ಲೈಗರ್ X+ ಎಲೆಕ್ಟ್ರಿಕ್ ಸ್ಕೂಟರ್‌ಗಳು ಲಿಕ್ವಿಡ್ ಕೂಲ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿವೆ. ಭಾರತೀಯ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಈ ಬ್ಯಾಟರಿಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಲೈಗರ್ ಮೊಬಿಲಿಟಿ ಸ್ಪಷ್ಟಪಡಿಸಿದೆ.
(5 / 6)
ಲೈಗರ್ X ಮತ್ತು ಲೈಗರ್ X+ ಎಲೆಕ್ಟ್ರಿಕ್ ಸ್ಕೂಟರ್‌ಗಳು ಲಿಕ್ವಿಡ್ ಕೂಲ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿವೆ. ಭಾರತೀಯ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಈ ಬ್ಯಾಟರಿಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಲೈಗರ್ ಮೊಬಿಲಿಟಿ ಸ್ಪಷ್ಟಪಡಿಸಿದೆ.(HT)
ಈ ಸ್ಕೂಟರ್ ಸರಿಯಾದ ಉಷ್ಣ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಸುಧಾರಿತ ಅಲ್ಗಾರಿದಮ್‌ಗಳನ್ನು ಹೊಂದಿವೆ. ಈ ಲೈಗರ್ ಎಲೆಕ್ಟ್ರಿಕ್ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 65 ಕಿ.ಮೀ.‌ ಆಗಿದೆ.
(6 / 6)
ಈ ಸ್ಕೂಟರ್ ಸರಿಯಾದ ಉಷ್ಣ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಸುಧಾರಿತ ಅಲ್ಗಾರಿದಮ್‌ಗಳನ್ನು ಹೊಂದಿವೆ. ಈ ಲೈಗರ್ ಎಲೆಕ್ಟ್ರಿಕ್ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 65 ಕಿ.ಮೀ.‌ ಆಗಿದೆ.(HT)

    ಹಂಚಿಕೊಳ್ಳಲು ಲೇಖನಗಳು