logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Wpl 2024: ಕೊನೆಗೂ ಪಾಯಿಂಟ್‌ ಖಾತೆ ತೆರೆದ ಗುಜರಾತ್;‌ ಸೋತರೂ ಅಂಕಪಟ್ಟಿಯಲ್ಲಿ ಅಲುಗಾಡದ ಆರ್‌ಸಿಬಿ

WPL 2024: ಕೊನೆಗೂ ಪಾಯಿಂಟ್‌ ಖಾತೆ ತೆರೆದ ಗುಜರಾತ್;‌ ಸೋತರೂ ಅಂಕಪಟ್ಟಿಯಲ್ಲಿ ಅಲುಗಾಡದ ಆರ್‌ಸಿಬಿ

Mar 07, 2024 06:10 AM IST

Womens Premier League 2024 Points Table: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವನಿತೆಯರ ವಿರುದ್ಧದ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್ ಭರ್ಜರಿ ಗೆಲುವು ಸಾಧಿಸಿದೆ. ಸೋಲಿನೊಂದಿಗೆ ಆರ್‌ಸಿಬಿ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಕೈಚೆಲ್ಲಿದೆ. ಆದರೆ, ತಂಡವು ಎರಡನೇ ಸ್ಥಾನದಲ್ಲಿ ಭದ್ರವಾಗಿದೆ. ಸದ್ಯ ಡಬ್ಲ್ಯೂಪಿಎಲ್‌ ಅಂಕಪಟ್ಟಿ ಹೀಗಿದೆ.

  • Womens Premier League 2024 Points Table: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವನಿತೆಯರ ವಿರುದ್ಧದ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್ ಭರ್ಜರಿ ಗೆಲುವು ಸಾಧಿಸಿದೆ. ಸೋಲಿನೊಂದಿಗೆ ಆರ್‌ಸಿಬಿ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಕೈಚೆಲ್ಲಿದೆ. ಆದರೆ, ತಂಡವು ಎರಡನೇ ಸ್ಥಾನದಲ್ಲಿ ಭದ್ರವಾಗಿದೆ. ಸದ್ಯ ಡಬ್ಲ್ಯೂಪಿಎಲ್‌ ಅಂಕಪಟ್ಟಿ ಹೀಗಿದೆ.
ಆಡಿರುವ 5 ಪಂದ್ಯಗಳಲ್ಲಿ 4 ಪಂದ್ಯಗಳಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸದ್ಯ ಡೆಲ್ಲಿ ನೆಟ್ ರನ್ ರೇಟ್ +1.301 ಆಗಿದೆ.
(1 / 5)
ಆಡಿರುವ 5 ಪಂದ್ಯಗಳಲ್ಲಿ 4 ಪಂದ್ಯಗಳಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸದ್ಯ ಡೆಲ್ಲಿ ನೆಟ್ ರನ್ ರೇಟ್ +1.301 ಆಗಿದೆ.(PTI)
ಗುಜರಾತ್‌ ಜೈಂಟ್ಸ್‌ ವಿರುದ್ಧ ಸೋತರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಆಡಿರುವ ಆರು ಪಂದ್ಯಗಳಲ್ಲಿ ತಲಾ 3 ಸೋಲು ಹಾಗೂ ಗೆಲುವು ಕಂಡಿರುವ ತಂಡವು 6 ಅಂಕ ಕಲೆ ಹಾಕಿದೆ. ಆದರೆ, +0.038 ರನ್‌ ರೇಟ್‌ನೊಂದಿಗೆ ಮುಂಬೈ ತಂಡಕ್ಕಿಂತ ಒಂದು ಸ್ಥಾನ ಮೇಲಿದೆ.
(2 / 5)
ಗುಜರಾತ್‌ ಜೈಂಟ್ಸ್‌ ವಿರುದ್ಧ ಸೋತರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಆಡಿರುವ ಆರು ಪಂದ್ಯಗಳಲ್ಲಿ ತಲಾ 3 ಸೋಲು ಹಾಗೂ ಗೆಲುವು ಕಂಡಿರುವ ತಂಡವು 6 ಅಂಕ ಕಲೆ ಹಾಕಿದೆ. ಆದರೆ, +0.038 ರನ್‌ ರೇಟ್‌ನೊಂದಿಗೆ ಮುಂಬೈ ತಂಡಕ್ಕಿಂತ ಒಂದು ಸ್ಥಾನ ಮೇಲಿದೆ.(PTI)
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಸೋತ ಮುಂಬೈ ಇಂಡಿಯನ್ಸ್ ಪ್ರಸ್ತುತ ಲೀಗ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. 5 ಪಂದ್ಯಗಳಲ್ಲಿ ಆಡಿರುವ ಕೌರ್‌ ಬಳಗವು 3 ಪಂದ್ಯಗಳನ್ನು ಗೆದ್ದದೆ. ತಂಡದ ಬಳಿ 6 ಅಂಕಗಳಿವೆ. ಆದರೆ, ನೆಟ್ ರನ್ ರೇಟ್ +0.018 ಆಗಿದೆ. ನೆಟ್ ರನ್ ರೇಟ್ ಕೊರತೆಯಿಂದಾಗಿ ಮುಂಬೈ ಇಂಡಿಯನ್ಸ್ ತಂಡವು ಅಂಕಪಟ್ಟಿಯಲ್ಲಿ ಆರ್‌ಸಿಬಿಗಿಂತ ಕೆಳಗಿದೆ.
(3 / 5)
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಸೋತ ಮುಂಬೈ ಇಂಡಿಯನ್ಸ್ ಪ್ರಸ್ತುತ ಲೀಗ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. 5 ಪಂದ್ಯಗಳಲ್ಲಿ ಆಡಿರುವ ಕೌರ್‌ ಬಳಗವು 3 ಪಂದ್ಯಗಳನ್ನು ಗೆದ್ದದೆ. ತಂಡದ ಬಳಿ 6 ಅಂಕಗಳಿವೆ. ಆದರೆ, ನೆಟ್ ರನ್ ರೇಟ್ +0.018 ಆಗಿದೆ. ನೆಟ್ ರನ್ ರೇಟ್ ಕೊರತೆಯಿಂದಾಗಿ ಮುಂಬೈ ಇಂಡಿಯನ್ಸ್ ತಂಡವು ಅಂಕಪಟ್ಟಿಯಲ್ಲಿ ಆರ್‌ಸಿಬಿಗಿಂತ ಕೆಳಗಿದೆ.(PTI)
ಯುಪಿ ವಾರಿಯರ್ಸ್ ತಂಡ ಆಡಿದ ಐದು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದಿದೆ. ಉಳಿದ 3 ಪಂದ್ಯಗಳಲ್ಲಿ ಸೋತಿದೆ. ತಂಡವು ಒಟ್ಟು 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ತಂಡದ ನೆಟ್ ರನ್ ರೇಟ್ -0.073 ಆಗಿದೆ.
(4 / 5)
ಯುಪಿ ವಾರಿಯರ್ಸ್ ತಂಡ ಆಡಿದ ಐದು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದಿದೆ. ಉಳಿದ 3 ಪಂದ್ಯಗಳಲ್ಲಿ ಸೋತಿದೆ. ತಂಡವು ಒಟ್ಟು 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ತಂಡದ ನೆಟ್ ರನ್ ರೇಟ್ -0.073 ಆಗಿದೆ.(PTI)
ಕೊನೆಗೂ ಡಬ್ಲ್ಯೂಪಿಎಲ್‌ನಲ್ಲಿ ಜಯ ಕಂಡಿರುವ ಗುಜರಾತ್‌ ಜೈಂಟ್ಸ್‌ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ. ಮೊದಲ ಗೆಲುವಿನ ಬಳಿಕ 2 ಅಂಕ ಪಡೆದಿರುವ ತಂಡವು -1.278 ರನ್‌ ರೇಟ್‌ ಜೊತೆಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
(5 / 5)
ಕೊನೆಗೂ ಡಬ್ಲ್ಯೂಪಿಎಲ್‌ನಲ್ಲಿ ಜಯ ಕಂಡಿರುವ ಗುಜರಾತ್‌ ಜೈಂಟ್ಸ್‌ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ. ಮೊದಲ ಗೆಲುವಿನ ಬಳಿಕ 2 ಅಂಕ ಪಡೆದಿರುವ ತಂಡವು -1.278 ರನ್‌ ರೇಟ್‌ ಜೊತೆಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

    ಹಂಚಿಕೊಳ್ಳಲು ಲೇಖನಗಳು