logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆರ್​ಸಿಬಿ ಪ್ಲೇಆಫ್​ ಹಾದಿ ಸಲೀಸು, ಆದರೂ ಇರಲಿ ಎಚ್ಚರ; ಯುಪಿ ವಾರಿಯರ್ಸ್, ಗುಜರಾತ್ ಜೈಂಟ್ಸ್​ಗೂ ಇದೆ ಅವಕಾಶ

ಆರ್​ಸಿಬಿ ಪ್ಲೇಆಫ್​ ಹಾದಿ ಸಲೀಸು, ಆದರೂ ಇರಲಿ ಎಚ್ಚರ; ಯುಪಿ ವಾರಿಯರ್ಸ್, ಗುಜರಾತ್ ಜೈಂಟ್ಸ್​ಗೂ ಇದೆ ಅವಕಾಶ

Mar 12, 2024 05:30 AM IST

WPL Points Table 2024: ಡಬ್ಲ್ಯುಪಿಎಲ್​ ಲೀಗ್ ಹಂತ ಇನ್ನೆರಡು ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಈಗಾಗಲೇ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್​ ಪ್ರವೇಶಿಸಿವೆ. ಆದರೆ ಒಂದು ಸ್ಥಾನಕ್ಕಾಗಿ 3 ತಂಡಗಳ ನಡುವೆ ಪೈಪೋಟಿ ಇನ್ನೂ ಮುಂದುವರೆದಿದೆ. ಯಾವ ತಂಡಕ್ಕೆ ಎಷ್ಟಿದೆ ಸಾಧ್ಯತೆ?

  • WPL Points Table 2024: ಡಬ್ಲ್ಯುಪಿಎಲ್​ ಲೀಗ್ ಹಂತ ಇನ್ನೆರಡು ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಈಗಾಗಲೇ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್​ ಪ್ರವೇಶಿಸಿವೆ. ಆದರೆ ಒಂದು ಸ್ಥಾನಕ್ಕಾಗಿ 3 ತಂಡಗಳ ನಡುವೆ ಪೈಪೋಟಿ ಇನ್ನೂ ಮುಂದುವರೆದಿದೆ. ಯಾವ ತಂಡಕ್ಕೆ ಎಷ್ಟಿದೆ ಸಾಧ್ಯತೆ?
ಪ್ರಸ್ತುತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಸಹ ಅಗ್ರಸ್ಥಾನದೊಂದಿಗೆ ನೇರವಾಗಿ ಫೈನಲ್​ಗೇರಲು ಸಿದ್ಧವಾಗಿದೆ. ಆಡಿದ 7ರಲ್ಲಿ 5 ಗೆಲುವು, 2 ಸೋಲು ಕಂಡಿದ್ದು 10 ಅಂಕ ಪಡೆದಿದೆ. ಆದರೆ ನೆಟ್ ರನ್ ರೇಟ್ ವಿಚಾರದಲ್ಲಿ ಡೆಲ್ಲಿಗಿಂತ ಹಿಂದಿದೆ. ಇದೀಗ ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ ಆರ್​ಸಿಬಿ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ.
(1 / 7)
ಪ್ರಸ್ತುತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಸಹ ಅಗ್ರಸ್ಥಾನದೊಂದಿಗೆ ನೇರವಾಗಿ ಫೈನಲ್​ಗೇರಲು ಸಿದ್ಧವಾಗಿದೆ. ಆಡಿದ 7ರಲ್ಲಿ 5 ಗೆಲುವು, 2 ಸೋಲು ಕಂಡಿದ್ದು 10 ಅಂಕ ಪಡೆದಿದೆ. ಆದರೆ ನೆಟ್ ರನ್ ರೇಟ್ ವಿಚಾರದಲ್ಲಿ ಡೆಲ್ಲಿಗಿಂತ ಹಿಂದಿದೆ. ಇದೀಗ ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ ಆರ್​ಸಿಬಿ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ.(PTI)
ಡೆಲ್ಲಿ ಕ್ಯಾಪಿಟಲ್ಸ್ ಸದ್ಯ ಅಗ್ರಸ್ಥಾನದಲ್ಲಿದೆ. ಆಡಿದ 7ರಲ್ಲಿ 5 ಗೆಲುವು, 2 ಸೋಲು ಕಂಡಿದ್ದು, 10 ಅಂಕ ಪಡೆದಿದೆ. ಇದೀಗ ತನ್ನ ಕೊನೆ ಲೀಗ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದ್ದು, ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸುವ ಕನಸಿನಲ್ಲಿದೆ.
(2 / 7)
ಡೆಲ್ಲಿ ಕ್ಯಾಪಿಟಲ್ಸ್ ಸದ್ಯ ಅಗ್ರಸ್ಥಾನದಲ್ಲಿದೆ. ಆಡಿದ 7ರಲ್ಲಿ 5 ಗೆಲುವು, 2 ಸೋಲು ಕಂಡಿದ್ದು, 10 ಅಂಕ ಪಡೆದಿದೆ. ಇದೀಗ ತನ್ನ ಕೊನೆ ಲೀಗ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದ್ದು, ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸುವ ಕನಸಿನಲ್ಲಿದೆ.(PTI)
3ನೇ ಸ್ಥಾನದಲ್ಲಿರುವ ಆರ್​​ಸಿಬಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮಣಿಸಿ ಪ್ಲೇಆಫ್​ಗೆ ಅರ್ಹತೆ ಪಡೆಯಲು ಸಜ್ಜಾಗಿದೆ. ಆಡಿದ 7ರಲ್ಲಿ 3 ಗೆಲುವು, 4 ಸೋಲು ಕಂಡು 6 ಅಂಕ ಪಡೆದಿದೆ. ಮುಂಬೈ ವಿರುದ್ಧ ಗೆದ್ದರೆ ಯಾವುದೇ ಟೆನ್ಶನ್ ಇಲ್ಲದೆ ನಾಕೌಟ್​ಗೇರಲಿದೆ.
(3 / 7)
3ನೇ ಸ್ಥಾನದಲ್ಲಿರುವ ಆರ್​​ಸಿಬಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮಣಿಸಿ ಪ್ಲೇಆಫ್​ಗೆ ಅರ್ಹತೆ ಪಡೆಯಲು ಸಜ್ಜಾಗಿದೆ. ಆಡಿದ 7ರಲ್ಲಿ 3 ಗೆಲುವು, 4 ಸೋಲು ಕಂಡು 6 ಅಂಕ ಪಡೆದಿದೆ. ಮುಂಬೈ ವಿರುದ್ಧ ಗೆದ್ದರೆ ಯಾವುದೇ ಟೆನ್ಶನ್ ಇಲ್ಲದೆ ನಾಕೌಟ್​ಗೇರಲಿದೆ.(PTI)
ಒಂದು ವೇಳೆ ಸೋತರೂ ಪ್ಲೇಆಫ್​ ಪ್ರವೇಶಿಸುವ ಹೆಚ್ಚಿನ ಅವಕಾಶ ಸಹ ಹೊಂದಿದೆ. ಆದರೆ ರನ್ ರೇಟ್​ ಕಾಪಾಡಿಕೊಳ್ಳಲು ಯಶಸ್ವಿಯಾಗಬೇಕು. ಸದ್ಯ ನಾಕೌಟ್ ರೇಸ್​ನಲ್ಲಿರುವ ಯುಪಿ, ಗುಜರಾತ್ ತಂಡಗಳಿಗಿಂತಲೂ ಆರ್​ಸಿಬಿ ಉತ್ತಮ ರನ್ ರೇಟ್ (+0.027) ಹೊಂದಿದೆ. ಹಾಗಾಗಿ ಬೆಂಗಳೂರು ಪ್ಲೇ ಆಫ್ ಹಾದಿ ಸಲೀಸಾಗಿದ್ದು, ಎಚ್ಚರವಹಿಸಬೇಕಿದೆ.
(4 / 7)
ಒಂದು ವೇಳೆ ಸೋತರೂ ಪ್ಲೇಆಫ್​ ಪ್ರವೇಶಿಸುವ ಹೆಚ್ಚಿನ ಅವಕಾಶ ಸಹ ಹೊಂದಿದೆ. ಆದರೆ ರನ್ ರೇಟ್​ ಕಾಪಾಡಿಕೊಳ್ಳಲು ಯಶಸ್ವಿಯಾಗಬೇಕು. ಸದ್ಯ ನಾಕೌಟ್ ರೇಸ್​ನಲ್ಲಿರುವ ಯುಪಿ, ಗುಜರಾತ್ ತಂಡಗಳಿಗಿಂತಲೂ ಆರ್​ಸಿಬಿ ಉತ್ತಮ ರನ್ ರೇಟ್ (+0.027) ಹೊಂದಿದೆ. ಹಾಗಾಗಿ ಬೆಂಗಳೂರು ಪ್ಲೇ ಆಫ್ ಹಾದಿ ಸಲೀಸಾಗಿದ್ದು, ಎಚ್ಚರವಹಿಸಬೇಕಿದೆ.(PTI)
ಗುಜರಾತ್ ವಿರುದ್ಧ ಸೋತ ಯುಪಿ ವಾರಿಯರ್ಸ್​​ಗೆ ಕೂಡ ಪ್ಲೇ ಆಫ್ ಪ್ರವೇಶಿಸಲು ಎರಡು ಮಾರ್ಗ ಇದೆ. ಒಂದು ಆರ್​​ಸಿಬಿ ಹೀನಾಯವಾಗಿ ಸೋಲಬೇಕು. ಇದರೊಂದಿಗೆ ರನ್ ರೇಟ್ ಪಾತಾಳಕ್ಕೆ ಕುಸಿಯಬೇಕು. ಮತ್ತೊಂದು ಗುಜರಾತ್, ಡೆಲ್ಲಿ ವಿರುದ್ಧ ಸೋತರೆ ಸಾಕು. ಅಥವಾ ಗೆದ್ದರೂ ಅದು ಕಡಿಮೆ ಅಂತರದ ಗೆಲುವು ಇದಾಗಿರಬೇಕು. ಆಗ ಮಾತ್ರ ನಾಕೌಟ್​ಗೇರಲು ಸಾಧ್ಯ.
(5 / 7)
ಗುಜರಾತ್ ವಿರುದ್ಧ ಸೋತ ಯುಪಿ ವಾರಿಯರ್ಸ್​​ಗೆ ಕೂಡ ಪ್ಲೇ ಆಫ್ ಪ್ರವೇಶಿಸಲು ಎರಡು ಮಾರ್ಗ ಇದೆ. ಒಂದು ಆರ್​​ಸಿಬಿ ಹೀನಾಯವಾಗಿ ಸೋಲಬೇಕು. ಇದರೊಂದಿಗೆ ರನ್ ರೇಟ್ ಪಾತಾಳಕ್ಕೆ ಕುಸಿಯಬೇಕು. ಮತ್ತೊಂದು ಗುಜರಾತ್, ಡೆಲ್ಲಿ ವಿರುದ್ಧ ಸೋತರೆ ಸಾಕು. ಅಥವಾ ಗೆದ್ದರೂ ಅದು ಕಡಿಮೆ ಅಂತರದ ಗೆಲುವು ಇದಾಗಿರಬೇಕು. ಆಗ ಮಾತ್ರ ನಾಕೌಟ್​ಗೇರಲು ಸಾಧ್ಯ.(WPL-X)
ಯುಪಿ ವಿರುದ್ಧ ಗೆದ್ದಿರುವ ಗುಜರಾತ್​ ಜೈಂಟ್ಸ್ ಪ್ಲೇಆಫ್ ಕನಸನ್ನು ವಿಸ್ತರಿಸಿಕೊಂಡಿದೆ. ಅಲ್ಲದೆ, ಗುಜರಾತ್ ತಂಡ ತನ್ನ ಕೊನೆಯ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯ. ಅದು ಕೂಡ ದೊಡ್ಡ ಅಂತರದ ಗೆಲುವಾಗಿರಬೇಕು. ಆಗ ಮಾತ್ರ ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳಲು ಸಾಧ್ಯ. ಒಂದು ವೇಳೆ ಸೋತರೆ ಲೀಗ್​ನಿಂದ ಬೀಳಲಿದೆ. ಅಲ್ಲದೆ, ಆರ್​ಸಿಬಿ, ಮುಂಬೈ ವಿರುದ್ಧ ಹೀನಾಯವಾಗಿ ಸೋಲಬೇಕು. ರನ್ ರೇಟ್ ಪಾತಾಳಕ್ಕೆ ಕುಸಿಯಬೇಕು. ಆಗ ನಾಕೌಟ್ ಪ್ರವೇಶಿಸುವ ಅವಕಾಶ ಪಡೆಯಲಿದೆ.
(6 / 7)
ಯುಪಿ ವಿರುದ್ಧ ಗೆದ್ದಿರುವ ಗುಜರಾತ್​ ಜೈಂಟ್ಸ್ ಪ್ಲೇಆಫ್ ಕನಸನ್ನು ವಿಸ್ತರಿಸಿಕೊಂಡಿದೆ. ಅಲ್ಲದೆ, ಗುಜರಾತ್ ತಂಡ ತನ್ನ ಕೊನೆಯ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯ. ಅದು ಕೂಡ ದೊಡ್ಡ ಅಂತರದ ಗೆಲುವಾಗಿರಬೇಕು. ಆಗ ಮಾತ್ರ ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳಲು ಸಾಧ್ಯ. ಒಂದು ವೇಳೆ ಸೋತರೆ ಲೀಗ್​ನಿಂದ ಬೀಳಲಿದೆ. ಅಲ್ಲದೆ, ಆರ್​ಸಿಬಿ, ಮುಂಬೈ ವಿರುದ್ಧ ಹೀನಾಯವಾಗಿ ಸೋಲಬೇಕು. ರನ್ ರೇಟ್ ಪಾತಾಳಕ್ಕೆ ಕುಸಿಯಬೇಕು. ಆಗ ನಾಕೌಟ್ ಪ್ರವೇಶಿಸುವ ಅವಕಾಶ ಪಡೆಯಲಿದೆ.(PTI)
ಆದರೆ ಗುಜರಾತ್ ಮತ್ತು ಯುಪಿಗಿಂತ ಆರ್​​ಸಿಬಿಗೆ ಹೆಚ್ಚಿನ ಅವಕಾಶ ಇದೆ. ಏಕೆಂದರೆ ಯುಪಿ ಮತ್ತು ಗುಜರಾತ್ ತಂಡಗಳ ರನ್​ ರೇಟ್​ ಮೈನಸ್​ನಲ್ಲಿದೆ. ಹಾಗಾದರೆ ಯಾರು ನಾಕೌಟ್​ಗೆ ಹೋಗುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
(7 / 7)
ಆದರೆ ಗುಜರಾತ್ ಮತ್ತು ಯುಪಿಗಿಂತ ಆರ್​​ಸಿಬಿಗೆ ಹೆಚ್ಚಿನ ಅವಕಾಶ ಇದೆ. ಏಕೆಂದರೆ ಯುಪಿ ಮತ್ತು ಗುಜರಾತ್ ತಂಡಗಳ ರನ್​ ರೇಟ್​ ಮೈನಸ್​ನಲ್ಲಿದೆ. ಹಾಗಾದರೆ ಯಾರು ನಾಕೌಟ್​ಗೆ ಹೋಗುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.(PTI)

    ಹಂಚಿಕೊಳ್ಳಲು ಲೇಖನಗಳು