logo
ಕನ್ನಡ ಸುದ್ದಿ  /  ಕ್ರೀಡೆ  /  Asian Games: ಚೈನೀಸ್‌ ತೈಪೆ ವಿರುದ್ಧ ಭರ್ಜರಿ ಜಯ; ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ ಭಾರತ ವಾಲಿಬಾಲ್ ತಂಡ

Asian Games: ಚೈನೀಸ್‌ ತೈಪೆ ವಿರುದ್ಧ ಭರ್ಜರಿ ಜಯ; ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ ಭಾರತ ವಾಲಿಬಾಲ್ ತಂಡ

Jayaraj HT Kannada

Sep 22, 2023 04:26 PM IST

ಚೈನೀಸ್ ತೈಪೆ ವಿರುದ್ಧ ಗೆಲುವಿನ ಖುಷಿಯಲ್ಲಿ ಭಾರತ ವಾಲಿಬಾಲ್‌ ತಂಡ

    • Volleyball: ಏಷ್ಯನ್‌ ಗೇಮ್ಸ್‌ ವಾಲಿಬಾಲ್‌ ಪಂದ್ಯದಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿರುವ ಭಾರತ ತಂಡವು, ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಜಪಾನ್ ಅಥವಾ ಕಜಕಿಸ್ತಾನವನ್ನು ಎದುರಿಸಲಿದೆ.
ಚೈನೀಸ್ ತೈಪೆ ವಿರುದ್ಧ ಗೆಲುವಿನ ಖುಷಿಯಲ್ಲಿ ಭಾರತ ವಾಲಿಬಾಲ್‌ ತಂಡ
ಚೈನೀಸ್ ತೈಪೆ ವಿರುದ್ಧ ಗೆಲುವಿನ ಖುಷಿಯಲ್ಲಿ ಭಾರತ ವಾಲಿಬಾಲ್‌ ತಂಡ (SAI)

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಭಾರತ ವಾಲಿಬಾಲ್‌ ತಂಡ ಅದ್ಭುತ ಪ್ರದರ್ಶನ ಮುಂದುವರೆಸಿದೆ. ಪುರುಷರ ವಾಲಿಬಾಲ್ ತಂಡವು ಶುಕ್ರವಾರ ಹ್ಯಾಂಗ್‌ಝೌನಲ್ಲಿ ನಡೆದ ಪಂದ್ಯದಲ್ಲಿ ಚೈನೀಸ್ ತೈಪೆ ವಿರುದ್ಧ 3-0 ಅಂತರದಿಂದ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಏಷ್ಯನ್‌ ಗೇಮ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಟ್ರೆಂಡಿಂಗ್​ ಸುದ್ದಿ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ ನಿವೃತ್ತಿ; ಈ ದಿನವೇ ದಿಗ್ಗಜ ಆಟಗಾರನ ಕೊನೆಯ ಪಂದ್ಯ

ಫೆಡರೇಶನ್ ಕಪ್‌ನಲ್ಲಿ ಬಂಗಾರ ಗೆದ್ದ ನೀರಜ್‌ ಚೋಪ್ರಾ; ಕೂದಲೆಳೆ ಅಂತರದಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟ ಡಿಪಿ ಮನು

ರೆಸ್ಲರ್ ಅಮನ್ ಸೆಹ್ರಾವತ್​ಗೆ ಪ್ಯಾರಿಸ್ ಒಲಿಂಪಿಕ್ಸ್​ ಟಿಕೆಟ್; ಮೊದಲ ಬಾರಿಗೆ ಐವರು ಮಹಿಳಾ ಕುಸ್ತಿಪಟುಗಳು ಅರ್ಹತೆ

ಈ ಹಿಂದಿನ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಕೊರಿಯಾ ವಿರುದ್ಧ ರೋಚಕ ಗೆಲುವು ಸಾಧಿಸಿದ್ದ ಭಾರತ, ಇದೀಗ ಚೈನೀಸ್ ತೈಪೆ ತಂಡವನ್ನು ಕೂಡಾ ಸುಲಭವಾಗಿ ಮಣಿಸಿದೆ. ಒಂದು ಗಂಟೆ 25 ನಿಮಿಷಗಳ ಕಾಲ ನಡೆದ ಪೈಪೋಟಿಯಲ್ಲಿ 25-22, 25-22 ಹಾಗೂ 25-21 ರ ರೋಚಕ ಅಂತರದಿಂದ ಗೆದ್ದು ಬೀಗಿದೆ. ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತವು ಬಲಿಷ್ಠ ಜಪಾನ್ ಅಥವಾ ಕಜಕಿಸ್ತಾನ ತಂಡವನ್ನು ಎದುರಿಸಲಿದೆ. ಈ ಪಂದ ಭಾನುವಾರ ಕ್ವಾರ್ಟರ್‌ ಫೈನಲ್‌ ಪಂದ್ಯ ನಡೆಯಲಿದೆ.

ನಾಲ್ಕನೇ ಏಷ್ಯನ್‌ ಗೇಮ್ಸ್‌ ಪದಕದ ನಿರೀಕ್ಷೆಯಲ್ಲಿ ಭಾರತ

"ಅವರದ್ದು ಅನುಭವಿ ತಂಡ. ಹೀಗಾಗಿ ಅವರು ವೇಗವಾಗಿ ಆಡುತ್ತಾರೆ. ಮೊದಲ ಎರಡು ಸೆಟ್‌ಗಳಲ್ಲಿ ಅವರು ಮುನ್ನಡೆ ಸಾಧಿಸಿದರು. ಆದರೆ ನಮ್ಮ ತಂಡವು ಉತ್ತಮವಾಗಿ ಆಡಿ ಮುನ್ನಡೆ ಸಾಧಿಸಿತು" ಎಂದು ಭಾರತ ತಂಡದ ನಾಯಕ ವಿನಿತ್ ಪಂದ್ಯದ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಭಾರತ ತಂಡವು ಆರಂಭದಲ್ಲಿ 6-10 ಅಂಕಗಳಿಂದ ಹಿನ್ನಡೆಯಲ್ಲಿತ್ತು. ಆದರೆ ಎರಿನ್ ವರ್ಗೀಸ್ ತಂಡದ ಅಂಕವವನ್ನು 11-13ಕ್ಕೇರಿಸುವಲ್ಲಿ ನೆರವಾದರು.

"ಪಾಕಿಸ್ತಾನ ಕೂಡ ಚೈನೀಸ್ ತೈಪೆ ತಂಡವನ್ನು 3-0 ಅಂತರದಿಂದ ಸೋಲಿಸಿತ್ತು. ಹೀಗಾಗಿ ನಾವು ಅವರನ್ನು ಸೋಲಿಸುವ ಒತ್ತಡದಲ್ಲಿದ್ದೆವು. ಕೊರಿಯಾ ಮತ್ತು ಚೈನೀಸ್ ತೈಪೆ ವಿರುದ್ಧ ಬ್ಯಾಕ್-ಟು-ಬ್ಯಾಕ್ ಗೆಲುವುಗಳೊಂದಿಗೆ,ಮುಂದೆ ಜಪಾನ್ ವಿರುದ್ಧದ ಆಡಲು ಮಾನಸಿಕ ಧೈರ್ಯ ಹೆಚ್ಚಿದೆ. ನಾವು ಯಾವ ತಂಡಕ್ಕಿಂತಲೂ ಕೀಳಲ್ಲ. ಜಪಾನ್ ಉತ್ತಮ ತಂಡ. ಅವರಿಂದ ಕಠಿಣ ಸ್ಪರ್ಧೆಯನ್ನು ನಿರೀಕ್ಷಿಸುತ್ತೇವೆ" ಎಂದು ಭಾರತ ತಂಡದ ಸಹಾಯಕ ಕೋಚ್ ಜೈದೀಪ್ ಸರ್ಕಾರ್ ಹೇಳಿದ್ದಾರೆ.

ಮೂರು ಪದಕ ಗೆದ್ದಿದೆ ಭಾರತ

ಭಾರತದ ಪುರುಷರ ವಾಲಿಬಾಲ್‌ ತಂಡವು ಏಷ್ಯನ್‌ ಗೇಮ್ಸ್‌ನಲ್ಲಿ ಇದುವರೆಗೆ ಒಟ್ಟು ಮೂರು ಪದಕಗಳನ್ನು ಗೆದ್ದಿದೆ. 1962ರಲ್ಲಿ ರನ್ನರ್ ಅಪ್ ಆಗಿರುವ ಭಾರತ, ತನ್ನ‌ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಅದರ ಹೊರತಾಗಿ 1958 ಮತ್ತು 1986ರಲ್ಲಿ ಕಂಚಿನ ಪದಕಗಳನ್ನು ಗೆದ್ದಿತ್ತು. ಭಾರತವು ಕೊನೆಯ ಪದಕವನ್ನು ಗೆದ್ದು 37 ವರ್ಷಗಳಾಗಿವೆ.

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಪುರುಷರ ವಾಲಿಬಾಲ್‌ ವಿಭಾಗದಲ್ಲಿ ಒಟ್ಟು 19 ತಂಡಗಳು ಭಾಗವಹಿಸುತ್ತಿವೆ. ಜಪಾನ್, ಚೀನಾ ಮತ್ತು ದಕ್ಷಿಣ ಕೊರಿಯಾ ತಂಡಗಳನ್ನು ಬಲಿಷ್ಠ ತಂಡಗಳೆಂದು ಪರಿಗಣಿಸಲಾಗಿದೆ. ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ವಾಲಿಬಾಲ್‌ನಲ್ಲಿ ಜಪಾನ್ 16 ಚಿನ್ನದೊಂದಿಗೆ 27 ಬಾರಿ ಪೋಡಿಯಂ ಫಿನಿಶ್‌ ಮಾಡಿದೆ. ಆತಿಥೇಯ ಚೀನಾ 11 ಚಿನ್ನದೊಂದಿಗೆ ಎರಡನೇ ಮತ್ತು ಕೊರಿಯಾ ಐದು ಚಿನ್ನದ ಪದಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ