logo
ಕನ್ನಡ ಸುದ್ದಿ  /  ಕ್ರೀಡೆ  /  ಇಂದಿನಿಂದ ಏಷ್ಯನ್ ಕ್ರೀಡೋತ್ಸವ; ವರ್ಣರಂಜಿತ ಉದ್ಘಾಟನೆ ಎಷ್ಟೊತ್ತಿಗೆ, ವೀಕ್ಷಿಸುವುದೇಗೆ? ಕ್ರೀಡಾಕೂಟದ ಸಂಪೂರ್ಣ ಮಾಹಿತಿ ಇಲ್ಲಿದೆ

ಇಂದಿನಿಂದ ಏಷ್ಯನ್ ಕ್ರೀಡೋತ್ಸವ; ವರ್ಣರಂಜಿತ ಉದ್ಘಾಟನೆ ಎಷ್ಟೊತ್ತಿಗೆ, ವೀಕ್ಷಿಸುವುದೇಗೆ? ಕ್ರೀಡಾಕೂಟದ ಸಂಪೂರ್ಣ ಮಾಹಿತಿ ಇಲ್ಲಿದೆ

Prasanna Kumar P N HT Kannada

Sep 23, 2023 10:00 AM IST

ಇಂದಿನಿಂದ ಏಷ್ಯನ್ ಕ್ರೀಡೋತ್ಸವ.

    • Asian Games Opening Ceremony 2023: ಏಷ್ಯನ್​ ಗೇಮ್ಸ್​ಗೆ ವರ್ಣರಂಜಿತ ಆರಂಭೋತ್ಸವದೊಂದಿಗೆ ಇಂದು (ಸೆ.23) ಅಧಿಕೃತ ಚಾಲನೆ ಸಿಗಲಿದೆ. ಏಷ್ಯಾದ 45 ದೇಶಗಳು, 40 ಕ್ರೀಡೆಗಳಲ್ಲಿ ಸೆಣಸಾಟ ನಡೆಸಲಿರುವ ಈ ಕ್ರೀಡಾಕೂಟದಲ್ಲಿ 12 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಇಂದಿನಿಂದ ಏಷ್ಯನ್ ಕ್ರೀಡೋತ್ಸವ.
ಇಂದಿನಿಂದ ಏಷ್ಯನ್ ಕ್ರೀಡೋತ್ಸವ.

ಒಲಿಂಪಿಕ್ಸ್, ಕಾಮನ್​​ವೆಲ್ತ್​ಗಳಂತೆ ಏಷ್ಯಾದ ದೇಶಗಳನ್ನು ಒಟ್ಟುಗೂಡಿಸುವ ಕ್ರೀಡಾಕೂಟವೇ ಏಷ್ಯನ್ ಗೇಮ್ಸ್ (Asian Games 2023). ಇದು ಏಷ್ಯಾದ ಅತಿದೊಡ್ಡ ಕ್ರೀಡಾಹಬ್ಬ. ಏಷ್ಯಾಡ್ ಎಂದೇ ಜನಪ್ರಿಯಗೊಂಡಿರುವ ಈ ಕ್ರೀಡಾಕೂಟದ ಚೊಚ್ಚಲ ಆವೃತ್ತಿಗೆ ಆತಿಥ್ಯ ವಹಿಸಿದ್ದು, ಭಾರತ ಎಂಬುದು ವಿಶೇಷ. ಸದ್ಯ19ನೇ ಆವೃತ್ತಿಯ ಏಷ್ಯನ್ ಕ್ರೀಡಾಕೂಟಕ್ಕೆ ಚೀನಾದ ಹ್ಯಾಂಗ್​ಝೌ (China, Hangzhou) ಸಜ್ಜಾಗಿ ನಿಂತಿದೆ.

ಟ್ರೆಂಡಿಂಗ್​ ಸುದ್ದಿ

Bengaluru Weather: ಆರ್‌ಸಿಬಿ ಅಭಿಮಾನಿಗಳು ಚಿಂತಿಸಬೇಕಾದ್ದಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ ಸಬ್‌ಏರ್‌ ಸಿಸ್ಟಮ್‌, ಏನದು

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ ನಿವೃತ್ತಿ; ಈ ದಿನವೇ ದಿಗ್ಗಜ ಆಟಗಾರನ ಕೊನೆಯ ಪಂದ್ಯ

ಈಗಾಗಲೇ 4 ದಿನಗಳಿಂದಲೇ ಕ್ರೀಡೆಗಳು ಶುರುವಾಗಿರುವುದರ ನಡುವೆ ವರ್ಣರಂಜಿತ ಆರಂಭೋತ್ಸವದೊಂದಿಗೆ ಇಂದು (ಸೆ.23) ಅಧಿಕೃತ ಚಾಲನೆ ಸಿಗಲಿದೆ. ಏಷ್ಯಾದ 45 ದೇಶಗಳು, 40 ಕ್ರೀಡೆಗಳಲ್ಲಿ ಸೆಣಸಾಟ ನಡೆಸಲಿರುವ ಈ ಕ್ರೀಡಾಕೂಟದಲ್ಲಿ ಒಲಿಂಪಿಕ್ಸ್​ಗಿಂತಲೂ ಹೆಚ್ಚಿನ ಅಂದರೆ 12 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಕೊರೊನಾ ಕಾರಣದಿಂದ ಒಂದು ವರ್ಷ ತಡವಾಗಿ ಆರಂಭಗೊಂಡಿದೆ.

ಈ ಕ್ರೀಡೋತ್ಸವದಲ್ಲಿ ಪದಕಗಳ ಶತಕ ಸಿಡಿಸುವ ಹಂಬಲದೊಂದಿಗೆ ಭಾರತ ತಂಡ ಕಣಕ್ಕಿಳಿಯಲು ಸಜ್ಜಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸುತ್ತಿರುವ ನಮ್ಮ ಕ್ರೀಡಾಪಟುಗಳು ಚಿನ್ನ ಗೆಲ್ಲುವ ಇರಾದೆಯಲ್ಲಿದ್ದಾರೆ. ಅತಿದೊಡ್ಡ ಕ್ರೀಡಾಕೂಟದ ಆಯೋಜನೆಗೆ ಚೀನಾ ಸಿದ್ಧವಾಗಿದೆ. ಹ್ಯಾಂಗ್​​​ಝೌ ಒಲಿಂಪಿಕ್ ಸ್ಪೋರ್ಟ್ಸ್​ ಎಕ್ಸ್​ಪೋ ಸೆಂಟರ್​​​ನಲ್ಲಿ ವರ್ಣರಂಜಿತ ಚಾಲನೆ ಸಿಗಲಿದೆ.

ಎಷ್ಟೊತ್ತಿಗೆ ಸಮಾರಂಭ ಉದ್ಘಾಟನೆ?

ಭಾರತದ ಧ್ವಜಧಾರಿಗಳು ಯಾರು?

ಈ ವರ್ಣರಂಜಿತ ಸಮಾರಂಭದಲ್ಲಿ ಪರಿಸರ ಸಂದೇಶವನ್ನೂ ಸಾರಲಿದೆ. ಚೀನಾದ ಅಧ್ಯಕ್ಷ ಕ್ಸಿಜಿನ್​ ಪಿಂಗ್​ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಎಲ್ಲೆಡೆಯೂ ಹಸಿರು ವಿದ್ಯುತ್ ಬಳಸಲಾಗುತ್ತಿದೆ. ಹಾಗಾಗಿ, ಉದ್ಘಾಟನಾ ಸಮಾರಂಭದಲ್ಲಿ ಸಿಡಿಮದ್ದು ಇರುವುದಿಲ್ಲ. ಇಂದು ಸಂಜೆ 5.30ಕ್ಕೆ (ಭಾರತೀಯ ಕಾಲಮಾನ) ಸಮಾರಂಭ ಆರಂಭವಾಗಲಿದೆ. ಹರ್ಮಾನ್ ಪ್ರೀತ್ ಸಿಂಗ್, ಲವ್ಲಿನಾ ಬೊರ್ಗೋಹೈನ್ ಭಾರತದ ದ್ವಜಧಾರಿಗಳು.

ಎಲ್ಲಿ ವೀಕ್ಷಿಸಬೇಕು?

ಉದ್ಘಾಟನಾ ಸಮಾರಂಭವನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಲೈವ್ ಆಗಿ ವೀಕ್ಷಿಸಬಹುದು. ಸೋನಿ LIV ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಸಹ ಲಭ್ಯವಿರುತ್ತದೆ. ಸೋನಿ ನೆಟ್‌ವರ್ಕ್ ಹೊರತಾಗಿ, ಡಿಡಿ ಸ್ಪೋರ್ಟ್ಸ್ ಸಹ ಭಾರತದಲ್ಲಿ ಉದ್ಘಾಟನಾ ಸಮಾರಂಭವನ್ನು ಲೈವ್ ಸ್ಟ್ರೀಮ್ ಮಾಡಲಿದೆ.

ಭಾರತ 655 ಅಥ್ಲೀಟ್​ಗಳು ಭಾಗಿ

ಏಷ್ಯಾಡ್‌ನಲ್ಲಿ 39 ಕ್ರೀಡಾ ವಿಭಾಗಗಳಲ್ಲಿ 655 ಭಾರತೀಯ ಅಥ್ಲೀಟ್‌ಗಳು ಭಾಗವಹಿಸಲಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಂತೆ, ಮೊದಲ ಬಾರಿಗೆ ಲಿಂಗ ಸಮಾನತೆಯನ್ನು ಸಂಕೇತಿಸಲು, ಪ್ರತಿ ದೇಶವೂ ಇಬ್ಬರು ಧ್ವಜಧಾರಿಗಳನ್ನು ಹೊಂದಿರುತ್ತದೆ. ಭಾರತದ ಹಾಕಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಟೋಕಿಯೊ ಒಲಿಂಪಿಕ್ ಕಂಚಿನ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್ ಈ ವರ್ಷದ ಆವೃತ್ತಿಯಲ್ಲಿ ಭಾರತದ ಧ್ವಜಧಾರಿಗಳಾಗಿದ್ದಾರೆ.

ಯಾವ ಕ್ರೀಡೆಯಲ್ಲಿ ಚಿನ್ನದ ನಿರೀಕ್ಷೆ?

ಮಹಿಳಾ ಮತ್ತು ಪುರುಷ ಕ್ರಿಕೆಟ್​, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಚೆಸ್, ಕಬ್ಬಡಿ, ಹಾಕಿ, ವೇಟ್​ ಲಿಫ್ಟಿಂಗ್​, ಶೂಟಿಂಗ್ ಟೆನಿಸ್, ಕುಸ್ತಿ, ಬಾಕ್ಸಿಂಗ್, ಅಥ್ಲೆಟಿಕ್ಸ್​​ ಸೇರಿದಂತೆ ಪ್ರಮುಖ ವಿಭಾಗಗಳಲ್ಲಿ ಭಾರತಕ್ಕೆ ಚಿನ್ನ ಸಿಗುವ ಸಾಧ್ಯತೆ ಇದೆ. ಕನ್ನಡಿಗರು 38 ಮಂದಿ ಕಣಕ್ಕೆ. ಮುಂದಿನ ವರ್ಷದ ಪ್ಯಾರೀಸ್​ ಒಲಿಂಪಿಕ್ಸ್​​ಗೆ ಸಿದ್ಧತೆ ನಡೆಸಲು ಮತ್ತು ಅರ್ಹತೆ ಪಡೆಯಲು ಈ ಕ್ರೀಡಾಕೂಟದಲ್ಲಿ ಅವಕಾಶ ಇದೆ. ಹಾಕಿ ಸಹಿತ 9 ಕ್ರೀಡೆಗಳಲ್ಲಿ ಚಿನ್ನ ಗೆದ್ದರೆ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯಬಹುದು.

ಏಷ್ಯನ್ ಗೇಮ್ಸ್​ನಲ್ಲಿ ಭಾರತ ಪ್ರದರ್ಶನ

1951ರಿಂದ ಹಿಡಿದು 2018ರವರೆಗೂ ನಡೆದ 18 ಆವೃತ್ತಿಗಳಲ್ಲಿ ಭಾರತ ಒಟ್ಟು 155 ಚಿನ್ನ ಗೆದ್ದಿದೆ. 201 ಬೆಳ್ಳಿ, 316 ಕಂಚಿನ ಪಕದಗಳಿಗೆ ಮುತ್ತಿಕ್ಕಿದೆ. ಒಟ್ಟು 672 ಪದಕಗಳನ್ನು ಗೆದ್ದಿದೆ. ಈ ಪೈಕಿ ಅತಿಹೆಚ್ಚು ಪದಕಗಳ ಗೆದ್ದಿರುವವರ ಪಟ್ಟಿಯಲ್ಲಿ ಭಾರತಕ್ಕೆ 5ನೇ ಸ್ಥಾನ. ಮೊದಲ ಸ್ಥಾನದಲ್ಲಿ ಚೀನಾ 3187 ಪದಕ, ಜಪಾನ್ 3054, ಸೌತ್ ಕೊರಿಯಾ, 2235, ಇರಾನ್ 557 (ಅಧಿಕ ಚಿನ್ನ ಗೆದ್ದಿದೆ) ಅಗ್ರ 4 ಸ್ಥಾನದಲ್ಲಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ