logo
ಕನ್ನಡ ಸುದ್ದಿ  /  Sports  /  Cricket News Csk Without Ms Dhoni Same Like A Body Without A Soul Shocking Comments Aakash Chopra On Msd Retention Prs

MS Dhoni: ಎಂಎಸ್​ ಧೋನಿ ಇಲ್ಲದ ಸಿಎಸ್​ಕೆ​ ತಂಡವು ಹೆಣಕ್ಕೆ ಸಮಾನ; ಅಚ್ಚರಿ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ, ಕಿಡಿಕಾರಿದ ಅಭಿಮಾನಿಗಳು

Prasanna Kumar P N HT Kannada

Jun 07, 2023 05:19 AM IST

ಆಕಾಶ್​ ಚೋಪ್ರಾ ಮತ್ತು ಎಂಎಸ್​ ಧೋನಿ

    • ಎಂಎಸ್​ ಧೋನಿ (MS Dhoni) ಐಪಿಎಲ್​​ (IPL) ನಿವೃತ್ತಿಯ ಕುರಿತು ಮಾಜಿ ಕ್ರಿಕೆಟಿಗ ಆಕಾಶ್​ ಚೋಪ್ರಾ (Aakash Chopra) ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಆದರೆ ಈ ಹೇಳಿಕೆ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಹಾಗಾಗಿ ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.
ಆಕಾಶ್​ ಚೋಪ್ರಾ ಮತ್ತು ಎಂಎಸ್​ ಧೋನಿ
ಆಕಾಶ್​ ಚೋಪ್ರಾ ಮತ್ತು ಎಂಎಸ್​ ಧೋನಿ

16ನೇ ಆವೃತ್ತಿಯ ಇಂಡಿಯನ್​​ ಪ್ರೀಮಿಯರ್ ಲೀಗ್​​ನಲ್ಲಿ (IPL 2023) ಚೆನ್ನೈ ಸೂಪರ್ ಕಿಂಗ್ಸ್ (Chennai Super Kings)​ ದಾಖಲೆಯ ಟ್ರೋಫಿ ಗೆದ್ದುಕೊಂಡಿತು. ಫೈನಲ್​ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans)​ ತಂಡವನ್ನು ಮಣಿಸಿ 5ನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿತು. ಆ ಮೂಲಕ ಐದು ಸಲ ಚಾಂಪಿಯನ್​​ ಪಟ್ಟ ಅಲಂಕರಿಸಿದ ಮುಂಬೈ ಇಂಡಿಯನ್ಸ್ (Mumbai Indians)​ ದಾಖಲೆಯನ್ನು ಸರಿಗಟ್ಟಿತು. ಇದಕ್ಕೆಲ್ಲಾ ಕಾರಣ, ನಾಯಕ ಎಂಎಸ್​ ಧೋನಿ (MS Dhoni).

ಟ್ರೆಂಡಿಂಗ್​ ಸುದ್ದಿ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್​​ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಐಪಿಎಲ್​ನ ಅತ್ಯಂತ ಯಶಸ್ವಿ ನಾಯಕ ಎನಿಸಿರುವ ಧೋನಿ, ಚೆನ್ನೈ ತಂಡಕ್ಕೆ 5 ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಅಲ್ಲದೆ, 10 ಬಾರಿ ತಂಡವನ್ನು ಫೈನಲ್​​ಗೇರಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಹಿರಿಯ ಆಟಗಾರರನ್ನೇ ತಂಡದಲ್ಲಿಟ್ಟುಕೊಂಡು, ಯಶಸ್ವಿಯಾಗಿ ಮುನ್ನಡೆಸುವ ಮಾಸ್ಟರ್​ ಎಂದು ಕರೆಸಿಕೊಂಡಿದ್ದಾರೆ. ಇಂತಹ ಸಿಎಸ್​ಕೆ ತಂಡದಲ್ಲಿ ಇಲ್ಲದಿದ್ದರೆ ಹೇಗಿರುತ್ತದೆ? ಅದಕ್ಕೆ ಉತ್ತರ ಮಾಜಿ ಕ್ರಿಕೆಟಿಗ ಕೊಟ್ಟಿದ್ದಾರೆ ನೋಡಿ.

ಸದ್ಯ ಎಂಎಸ್​ ಧೋನಿ ಮುಂದಿನ ವರ್ಷ ಆಡುತ್ತಾರೆ ಇಲ್ಲವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮಾಹಿ ಕೂಡ ತನ್ನ ನಿಲುವನ್ನು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದ್ದಾರೆ. ಇನ್ನೂ 8-9 ತಿಂಗಳು ಕಾಲ ಸಮಯ ಇದೆ. ನನ್ನ ದೇಹ ಕ್ರಿಕೆಟ್​ ಆಡಲು ಸ್ಪಂದಿಸುತ್ತದೆಯೇ ಇಲ್ಲವೇ ಎಂದು ಅರಿತು, ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ. ಈ ಬೆನ್ನಲ್ಲೇ ಮಾಜಿ ಕ್ರಿಕೆಟಿಗ​ ಆಕಾಶ್​ ಚೋಪ್ರಾ (Aakash Chopra) ಹೇಳಿಕೆ ಕೆಂಗಣ್ಣಿಗೆ ಗುರಿಯಾಗಿದೆ.

ಧೋನಿ ಇಲ್ಲದ ಸಿಎಸ್​ಕೆ ಶವಕ್ಕೆ ಸಮ

ಕಾಮೆಂಟೇಟರ್​ ಕೂಡ ಆಗಿರುವ ಆಕಾಶ್​ ಚೋಪ್ರಾ, ಧೋನಿ ಇಲ್ಲದ ಸಿಎಸ್​ಕೆ ತಂಡವನ್ನು ಒಂದು ಶವಕ್ಕೆ ಹೋಲಿಸಿದ್ದಾರೆ. ಇದೇ ಧೋನಿಗೆ ಕೊನೆಯ ಐಪಿಎಲ್​ ಎಂದು ಪ್ರೇಕ್ಷಕರು, ಮೈದಾನಕ್ಕೆ ದಂಡು ದಂಡಾಗಿ ಬಂದಿದ್ದರು. ಸಿಎಸ್​ಕೆ ಆಡಿದ ಎಲ್ಲ ಸ್ಟೇಡಿಯಂಗಳು ತುಂಬಿ ತುಳಿದ್ದವು. ಒಂದು ವೇಳೆ ಮಾಹಿ ನಿವೃತ್ತಿ ಘೋಷಿಸಿದರೆ, ಸಿಎಸ್​ಕೆ ಪಂದ್ಯಕ್ಕೆ ಇದೇ ರೀತಿ ಮೈದಾನಗಳು ತುಂಬುತ್ತವಾ ಎಂಬುದು ಎಲ್ಲರ ಪ್ರಶ್ನೆ.

ಈ ಬಗ್ಗೆಯೇ ಮಾತನಾಡಿದ ಆಕಾಶ್​ ಚೋಪ್ರಾ, ಐಪಿಎಲ್​​​ 2022ರ ಸೀಸನ್​​ನಲ್ಲಿ ಧೋನಿ ಅವರನ್ನು ರಿಟೇನ್​ ಮಾಡಿಕೊಳ್ಳುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಏಕಂದರೆ ಮೂರು ಆವೃತ್ತಿಗಳಲ್ಲಿ ಆಡುತ್ತಾರೋ ಇಲ್ಲವೋ ಎಂದು ತಿಳಿಯದ ಆಟಗಾರರನ್ನು ಉಳಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಅವರ ಬದಲಿಗೆ ಬೇರೆಯವರಿಗೆ ಅವಕಾಶ ನೀಡುತ್ತಾರೆ ಎಂದು ನಿರ್ಧರಿಸಿದ್ದೆ ಎಂದು ಹೇಳಿದ್ದಾರೆ.

ಆದರೆ, ಎಂಎಸ್​ ಧೋನಿ ಇಲ್ಲದ ಚೆನ್ನೈ ಸೂಪರ್ ಕಿಂಗ್ಸ್​ ಜೀವವಿಲ್ಲದ ಶವಕ್ಕೆ ಸಮಾನ ಎಂಬುದು ಈಗ ಅರ್ಥವಾಗಿದೆ. ಮಾಹಿ ನಿವೃತ್ತಿಯಾದ ಬಳಿಕ ಚೆನ್ನೈಗೆ ಈ ರೀತಿಯ ಬೆಂಬಲ ಸಿಗುತ್ತದೆಂದು ನಾನು ಭಾವಿಸಲ್ಲ. ಧೋನಿ ಸ್ಥಾನಕ್ಕೆ ಬರುವ ನಾಯಕ ಹೆಚ್ಚಿನ ಒತ್ತಡಕ್ಕೆ ಒಳಗಾಗುವುದು ಖಚಿತ. ಮಾಹಿ ಮುನ್ನಡೆಸಿದ ತಂಡವನ್ನು ಇತರರು ಮುನ್ನಡೆಸುವುದು ಅಷ್ಟು ಸುಲಭವಲ್ಲ ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಜಡ್ಡು ರೂಪದಲ್ಲಿ ಎಲ್ರಿಗೂ ಗೊತ್ತಾಗಿದೆ

ನಾಯಕತ್ವ ಸುಲಭವಲ್ಲ ಎಂಬುದು 15ನೇ ಆವೃತ್ತಿಯಲ್ಲಿ ರವೀಂದ್ರ ಜಡೇಜಾ ರೂಪದಲ್ಲಿ ಎಲ್ಲರಿಗೂ ಅರ್ಥವಾಗಿದೆ. ಇನ್ನು ಮುಂದೆ ಜಡ್ಡು ಕ್ಯಾಪ್ಟನ್​ ವಿಷಯಕ್ಕೆ ತಲೆ ಹಾಕುವುದಿಲ್ಲ. ಧೋನಿ ಇನ್ನೂ ಒಂದು ವರ್ಷ ಆಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರಿಗೆ ಇದೇ ಕೊನೆ ಸೀಸನ್​ ಎಂಬ ಪ್ರಚಾರ ನಡೆದಿದೆ. ಆದರೆ, ಯಲ್ಲೋ ಆರ್ಮಿ ಮೂರು ವರ್ಷಕ್ಕಾಗಿಯೇ ರಿಟೇನ್​ ಮಾಡಿಕೊಂಡಿದೆ ಎಂದುಕೊಳ್ಳುವುದಿಲ್ಲ ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ ಮಾಜಿ ಕ್ರಿಕೆಟಿಗ.

ಜಡೇಜಾ ಅವರು ಆಡುವವರೆಗೂ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಉಳಿಯುತ್ತಾರೆ. ಬೇರೆ ತಂಡಕ್ಕೆ ಹೋಗಲು ಬಯಸದ ಹೊರತು, ಜಡ್ಡು ಕೂಡ ಸಿಎಸ್‌ಕೆಯಿಂದ ತನ್ನನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಪ್ರತಿಕ್ರಿಯಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು