logo
ಕನ್ನಡ ಸುದ್ದಿ  /  Sports  /  Cricket News Ipl 2023 Suryakumar Yadav Tattoos And Its Significance Sky Records Mumbai Indians Evil Eye Tattoo Jra

Suryakumar Yadav: ಸೂರ್ಯಕುಮಾರ್ ಟ್ಯಾಟೂ ಸೀಕ್ರೆಟ್ ನಿಮಗೊತ್ತಾ; ದೃಷ್ಟಿ ಬೀಳುತ್ತೆ ಅಂತಾ ಪತ್ನಿ ಹೇಳಿದ್ದಕ್ಕೆ ಹಚ್ಚೆ ಹಾಕಿಸಿದ್ದ ಸ್ಕೈ

Jayaraj HT Kannada

May 27, 2023 03:48 PM IST

ಸೂರ್ಯಕುಮಾರ್ ಯಾದವ್

    • Suryakumar Yadav Tattoos: ಸೂರ್ಯಕುಮಾರ್  ಯಾದವ್ ತಮ್ಮ ದೇಹದ ಮೇಲೆ ಹಾಕಿಸಿಕೊಂಡಿರುವ ಟ್ಯಾಟೂಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರ ಅರ್ಥ ಹಾಗೂ ಮಹತ್ವದ ಜೊತೆಗೆ ತಮ್ಮ ನೆಚ್ಚಿ ಹಚ್ಚೆ ಯಾವುದು ಎಂಬುದನ್ನು ಬಹಿರಂಗಪಡಿಸಿದ್ದಾರೆ. 
ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್ (‌Instagram)

ಕ್ರಿಕೆಟ್ ಆಟಗಾರರಿಗೆ ತಮ್ಮ ಆಟದ ಹೊರತಾಗಿ ಇನ್ನೂ ಕೆಲವು ವಿಷಯದ ಬಗೆಗೆ ಹೆಚ್ಚು ಆಸಕ್ತಿ ಅಥವಾ ಕ್ರೇಝ್‌ ಇರುತ್ತದೆ. ಸಾಮಾನ್ಯವಾಗಿ ಬಹುತೇಕ ಎಲ್ಲಾ ಭಾರತೀಯ ಕ್ರಿಕೆಟಿಗರ ಕೈಯಲ್ಲಿಯೂ ಟ್ಯಾಟೂವನ್ನು ಕಾಣಬಹುದು. ಹೆಚ್ಚಿನ ಕ್ರಿಕೆಟಿಗರು ತಮ್ಮ ಎರಡೂ ಕೈಗಳಲ್ಲಿಯೂ ಹಚ್ಚೆ ಹಾಕಿಸಿಕೊಂಡಿದ್ದಾರೆ. ವಿರಾಟ್‌ ಕೊಹ್ಲಿ, ಕೆಎಲ್‌ ರಾಹುಲ್‌, ಹಾರ್ದಿಕ್‌ ಪಾಂಡ್ಯ, ಸೂರ್ಯಕುಮಾರ್‌ ಯಾದವ್‌ ಹೀಗೆ ಒಬ್ಬೊಬ್ಬರ ಟ್ಯಾಟೂ ಡಿಸೈನ್‌ಗಳು ಒಂದೊಂದು ರೀತಿ ಇರುತ್ತವೆ.

ಟ್ರೆಂಡಿಂಗ್​ ಸುದ್ದಿ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್​​ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಭಾರತ ಟಿ20 ತಂಡದ ಪ್ರಮುಖ ಬ್ಯಾಟರ್‌ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರ ಸೂರ್ಯಕುಮಾರ್ ಯಾದವ್ ಕೈಯಲ್ಲೂ ಟ್ಯಾಟೂಗಳಿವೆ. ತಮ್ಮ ದೇಹದಲ್ಲಿ ಇರುವ ಹಚ್ಚೆಗಳ ಬಗ್ಗೆ ಖುದ್ದು ಸೂರ್ಯಕುಮಾರ್‌ ಅವರೇ ವಿವರಿಸಿದ್ದಾರೆ. ತಮ್ಮ ಮೈಯಲ್ಲಿರುವ ಹಚ್ಚೆಯ ವಿಧ, ಅವುಗಳ ಪ್ರಾಮುಖ್ಯತೆ ಮತ್ತು ಟ್ಯಾಟೂವನ್ನು ತಮ್ಮ ದೇಹಕ್ಕೆ ಹಾಕಿಸಿಕೊಳ್ಳುವಲ್ಲಿ ಪ್ರಭಾವ ಬೀರಿದ ಅಂಶಗಳ ಬಗ್ಗೆ ಅವರೇ ತಿಳಿಸಿದ್ದಾರೆ.

ತಾವು ಹಾಕಿಸಿಕೊಂಡ ಮೊದಲನೆಯ ಟ್ಯಾಟೂದಲ್ಲಿ ತಮ್ಮ ತಂದೆ-ತಾಯಿಯ ಚಿತ್ರ ಬರೆಸಿದ್ದರಂತೆ. ಅದನ್ನು ನೋಡಿದ ಅವರ ತಂದೆ ತಾಯಿ, ಮತ್ತಷ್ಟು ಟ್ಯಾಟೂ ಹಾಕಿಸಿಕೊಳ್ಳಲು ಪರೋಕ್ಷವಾಗಿ ಅನುಮತಿ ನೀಡಿದ್ದರಂತೆ. ಹೆತ್ತವರನ್ನು ಇಂಪ್ರೆಸ್‌ ಮಾಡಲು ಸೂರ್ಯ ಈ ಮಾರ್ಗ ಅನುಸರಿಸಿದ್ದರು. “ನನ್ನ ತಾಯಿ ಮತ್ತು ತಂದೆಯ ಹೆಸರಿನ ಹಚ್ಚೆ ಇದೆ. ಇದು ನನ್ನ ಮೊದಲ ಟ್ಯಾಟೂ. ಅದನ್ನು ತೋರಿಸಿದ ಬಳಿಕ ನಾನು ಮತ್ತಷ್ಟು ಟ್ಯಾಟೂ ಹಾಕಿಸಿಕೊಳ್ಳಲು ಅನುಮತಿ ಪಡೆಯಲು ಸುಲಭವಾಯ್ತು” ಎಂದು ಸೂರ್ಯಕುಮಾರ್ ಜಿಯೋ ಸಿನಿಮಾಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಕೈಯಲ್ಲಿರುವ ಎವಿಲ್‌ ಐ(evil eye tattoo) ಹಚ್ಚೆಯನ್ನು ಹಾಕಿಸಲು ಅವರ ಪತ್ನಿ ಹೇಳಿದ್ದರಂತೆ. ಏಕೆಂದರೆ ತಮಗೆ ಹೆಚ್ಚು ಜನರ ದೃಷ್ಟಿ ಬೀಳುತ್ತದೆ ಎಂದು ಈ ಸಲಹೆ ನೀಡಿದ್ದರಂತೆ. ತಮ್ಮ ಪತ್ನಿಯನ್ನು ಪ್ರೀತಿಸುವ ಸೂರ್ಯ, ಅವರಿಗಾಗಿಯೂ ಹಚ್ಚೆ ಹಾಕಿಸಿದ್ದಾರಂತೆ. ಅಲ್ಲದೆ ಅದು ತಮ್ಮ ಹೃದಯಕ್ಕೆ ಹತ್ತಿರವಾಗಿದೆ ಎಂದು ಅವರು ಹೇಳುತ್ತಾರೆ.

ಕೈಯಲ್ಲಿರುವ ಸಿಂಹದ ಹಚ್ಚೆ ಬಗ್ಗೆ ಮಾತನಾಡುತ್ತಾ ನಗೆಚಟಾಕಿ ಹಾರಿಸಿದ ಸೂರ್ಯ, "ಇದು ಶಾಂತ ಸಿಂಹದ ಟ್ಯಾಟೂ. ಅದರಂತೆಯೇ ನಾನು ಕೂಡಾ ಶಾಂತ ಸಿಂಹ" ಎಂದು ಹೇಳುತ್ತಾರೆ.

ಸೂರ್ಯನ ನೆಚ್ಚಿನ ಟ್ಯಾಟೂ ಯಾವುದು?

ಸೂರ್ಯಕುಮಾರ್ ತಮ್ಮ ನೆಚ್ಚಿನ ಟ್ಯಾಟೂ ಯಾವುದು ಎಂಬುದನ್ನು ಕೂಡಾ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, "ನನ್ನ ಭುಜದ ಮೇಲೆ ನನ್ನ ತಾಯಿ ಮತ್ತು ತಂದೆಯ ಭಾವಚಿತ್ರವಿದೆ. ಅದು 4ರಿಂದ 5 ವರ್ಷಗಳಷ್ಟು ಹಳೆಯದು. ಅದು ನನ್ನ ಫೇವರೆಟ್‌ ಟ್ಯಾಟೂ," ಎಂದು ತಿಳಿಸಿದ್ದಾರೆ.

ಬಾಣದ ಗುರುತಿನ ಟ್ಯಾಟೂ ಅರ್ಥವೇನು?

ಸೂರ್ಯಕುಮಾರ್ ಯಾದವ್ ಅವರು ತಮ್ಮ ತೋಳಿನ ಮೇಲೆ ಬಾಣಗಳ ಹಚ್ಚೆ ಹಾಕಿಸಿಕೊಂಡಿದ್ದಾರೆ.‌ ಇದರ ಅರ್ಥವನ್ನು ಕೂಡಾ ಅವರೇ ವಿವರಿಸಿದ್ದಾರೆ. ಜೀವನವು ಒಮ್ಮೆ ನಾವು ಹಿಂದಿ ಬಿದ್ದಾಗ, ಅದು ನಮ್ಮನ್ನು ಮುಂದಕ್ಕೆ ಕೊಂಡೊಯ್ಯುತ್ತದೆ ಎಂಬುದನ್ನು ಬಾಣದ ಗುರುತು ಸೂಚಿಸುತ್ತದೆ ಎಂದು ಸೂರ್ಯ ಹೇಳಿದ್ದಾರೆ. “ಇದಕ್ಕೆ ಉದಾಹರಣೆ ಆಸ್ಟ್ರೇಲಿಯಾ ವಿರುದ್ಧ ನನ್ನಮೂರು ಡಕೌಟ್,” ಎಂದು ನಗುತ್ತಾ ಹೇಳಿದ್ದಾರೆ.

ಕೈ ಮಾತ್ರವಲ್ಲದೆ ತಮ್ಮ ಕಾಲಿನ ಮೇಲೆಯೂ ಸೂರ್ಯ ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದು "ಒಂದು ಬಾರಿ ಒಂದು ಹೆಜ್ಜೆ" ಎಂಬ ಕಲ್ಪನೆಯನ್ನು ಸೂಚಿಸುತ್ತದೆಯಂತೆ.

ಮಧ್ಯಮ ಕ್ರಮಾಂಕದ ಬ್ಯಾಟರ್ ತೋಳಿನ ಮೇಲ್ಭಾಗದಲ್ಲಿ ನ್ಯೂಜಿಲೆಂಡ್‌ನ ಮಾವೋರಿ ಬುಡಕಟ್ಟು ಜನಾಂಗಕ್ಕೆ‌ (Maori tribe) ಸಂಬಂಧಿಸಿದ ಅತ್ಯಂತ ವಿಶಿಷ್ಟ ಟ್ಯಾಟೂ ಇದೆ. ಇದರ ಅರ್ಥವನ್ನು ಕೂಡಾ ಅವರು ಚೆನ್ನಾಗಿ ಅರಿತುಕೊಂಡಿದ್ದಾರೆ. “ನಾನು ನ್ಯೂಜಿಲ್ಯಾಂಡ್ ಪ್ರವಾಸದಲ್ಲಿದ್ದಾಗ, ಮಾವೋರಿ ಬುಡಕಟ್ಟಿನ ಈ ವಿನ್ಯಾಸದ ಬಗ್ಗೆ ನನಗೆ ಅರಿವಾಯಿತು. ಈ ಡಿಸೈನ್‌ ಅದೃಷ್ಟ ಮತ್ತು ಪ್ರೀತಿಯ ಸಂಕೇತ ಎಂಬುದು ನನಗೆ ತಿಳಿಯಿತು. ಅಲ್ಲದೆ ಇದು ನಮ್ಮನ್ನು ಶಾಂತವಾಗಿರಿಸುತ್ತದೆ ಎಂದು ನನಗೆ ಹೇಳಿದ ವ್ಯಕ್ತಿಯನ್ನು ನಾನು ಭೇಟಿಯಾಗಿ ಟ್ಯಾಟೂ ಹಾಕಿಸಿಕೊಂಡೆ” ಎಂದು ಸೂರ್ಯಕುಮಾರ್ ಹೇಳಿದ್ದಾರೆ.

ಸೂರ್ಯ ಅವರು ಮುಂದೆ ಮತ್ತೊಂದು ಟ್ಯಾಟೂ ಹಾಕಿಸಿಕೊಳ್ಳುವ ಯೋಚನೆಯಲ್ಲಿದಿದ್ದಾರೆ. ಅದರಲ್ಲಿ ಎಲ್ಲಾ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಪಡೆದ ಕ್ಯಾಪ್ ಸಂಖ್ಯೆಗಳ (ಟೆಸ್ಟ್, ಏಕದಿನ ಮತ್ತು ಟಿ20ಗಳು), ಸಂಖ್ಯೆಯನ್ನು ಹಾಕಿಸುತ್ತಾರಂತೆ.

    ಹಂಚಿಕೊಳ್ಳಲು ಲೇಖನಗಳು