logo
ಕನ್ನಡ ಸುದ್ದಿ  /  ಕ್ರೀಡೆ  /  ಸೂರ್ಯಕುಮಾರ್​ ಹ್ಯಾಟ್ರಿಕ್​ ಡಕೌಟ್​​; Ipl ಆಡೋಗು ಎಂದ ಸುನಿಲ್​ ಗವಾಸ್ಕರ್​​​

ಸೂರ್ಯಕುಮಾರ್​ ಹ್ಯಾಟ್ರಿಕ್​ ಡಕೌಟ್​​; IPL ಆಡೋಗು ಎಂದ ಸುನಿಲ್​ ಗವಾಸ್ಕರ್​​​

HT Kannada Desk HT Kannada

Mar 23, 2023 09:12 PM IST

ಸುನಿಲ್​ ಗವಾಸ್ಕರ್, ಸೂರ್ಯಕುಮಾರ್

  • ಸೂರ್ಯಕುಮಾರ್​ರ ಈ ಕಳಪೆ ಪ್ರದರ್ಶನವೇ ಭಾರತದ ಸೋಲಿಗೆ ಕಾರಣ. ಟಿ20 ಕ್ರಿಕೆಟ್​​ಗಷ್ಟೇ ಸೂಕ್ತ. ಏಕದಿನ ಮಾದರಿಗೆ ಅವರು ಸೂಟ್​ ಆಗುವುದಿಲ್ಲ ಎಂದು ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಬ್ಯಾಟಿಂಗ್​​​​ ದಿಗ್ಗಜ ಸುನಿಲ್​ ಗವಾಸ್ಕರ್​​​ (Sunil Gavaskar), ಸೂರ್ಯ ಎದುರು ಕೆಂಡ ಕಾರಿದ್ದಾರೆ.

ಸುನಿಲ್​ ಗವಾಸ್ಕರ್, ಸೂರ್ಯಕುಮಾರ್
ಸುನಿಲ್​ ಗವಾಸ್ಕರ್, ಸೂರ್ಯಕುಮಾರ್

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಟೀಮ್​ ಇಂಡಿಯಾ (India vs Australia) ಸೋತಿದೆ. ತವರಿನಲ್ಲಿ ಸಿರೀಸ್​ ಸೋತು, ಮುಖಭಂಗಕ್ಕೆ ಒಳಗಾಗಿದೆ. ಭಾರತ ಹೀನಾಯ ಪ್ರದರ್ಶನ ಮೂಲಕ ಸರಣಿ ಸೋತರೂ ಹೆಚ್ಚು ಹೆಚ್ಚು ಚರ್ಚೆಯಾಗುತ್ತಿರುವುದು ಮಾತ್ರ, ಮಿಸ್ಟರ್​​ 360 ಡಿಗ್ರಿ ಬ್ಯಾಟರ್​​​ ಸೂರ್ಯಕುಮಾರ್​​ ಯಾದವ್​.! (SuryaKumar Yadav) ಅದಕ್ಕೆ ಕಾರಣ, ಭೀಕರ ವೈಫಲ್ಯ.!

ಟ್ರೆಂಡಿಂಗ್​ ಸುದ್ದಿ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಫೆಡರೇಶನ್ ಕಪ್‌ನಲ್ಲಿ ಬಂಗಾರ ಗೆದ್ದ ನೀರಜ್‌ ಚೋಪ್ರಾ; ಕೂದಲೆಳೆ ಅಂತರದಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟ ಡಿಪಿ ಮನು

ರೆಸ್ಲರ್ ಅಮನ್ ಸೆಹ್ರಾವತ್​ಗೆ ಪ್ಯಾರಿಸ್ ಒಲಿಂಪಿಕ್ಸ್​ ಟಿಕೆಟ್; ಮೊದಲ ಬಾರಿಗೆ ಐವರು ಮಹಿಳಾ ಕುಸ್ತಿಪಟುಗಳು ಅರ್ಹತೆ

ದೋಹಾ ಡೈಮಂಡ್ ಲೀಗ್​​​ 2024: ನೀರಜ್ ಚೋಪ್ರಾಗೆ 2ನೇ ಸ್ಥಾನ; ಕೇವಲ 2 ಸೆಂಟಿ ಮೀಟರ್​​ಗಳಲ್ಲಿ ತಪ್ಪಿತು ಮೊದಲ ಸ್ಥಾನ

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸೂರ್ಯಕುಮಾರ್ ಆಡಿದ ಮೂರು ಪಂದ್ಯಗಳಲ್ಲಿ ಮೂರು ಬಾರಿಯೂ ಗೋಲ್ಡನ್​ ಡಕ್​ ಆಗಿದ್ದಾರೆ. ಈ ಭೀಕರ ವೈಫಲ್ಯಕ್ಕಾಗಿ ತೀವ್ರ ಟೀಕೆ ಎದುರಿಸುತ್ತಿದ್ದಾರೆ. ಮೂರು ಏಕದಿನ ಪಂದ್ಯಗಳಲ್ಲಿ ಅವರು ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್​​ ಒಪ್ಪಿಸಿ ಕೆಟ್ಟ ದಾಖಲೆ ಬರೆದಿದ್ದಾರೆ.

ಸೂರ್ಯಕುಮಾರ್​ರ ಈ ಕಳಪೆ ಪ್ರದರ್ಶನವೇ ಭಾರತದ ಸೋಲಿಗೆ ಕಾರಣ. ಟಿ20 ಕ್ರಿಕೆಟ್​​ಗಷ್ಟೇ ಸೂಕ್ತ. ಏಕದಿನ ಮಾದರಿಗೆ ಅವರು ಸೂಟ್​ ಆಗುವುದಿಲ್ಲ . ಸಂಜು ಸ್ಯಾಮ್ಸನ್​​​ಗೆ ಅವಕಾಶ ನೀಡಿ ಎಂದು ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಬ್ಯಾಟಿಂಗ್​​​​ ದಿಗ್ಗಜ ಸುನಿಲ್​ ಗವಾಸ್ಕರ್​​​ (Sunil Gavaskar), ಸೂರ್ಯ ಎದುರು ಕೆಂಡ ಕಾರಿದ್ದಾರೆ.

ಐಪಿಎಲ್​ ಆಡು ಹೋಗು!

T20 ಫಾರ್ಮೆಟ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಸೂರ್ಯ, ಏಕದಿನದಲ್ಲಿ ಟೀಕೆಗೆ ಗುರಿಯಾಗುತ್ತಿದ್ದಾರೆ. ಸುನಿಲ್ ಗವಾಸ್ಕರ್ ಅವರು ಸೂರ್ಯ ಆಟದ ಬಗ್ಗೆ ಕುತೂಹಲಕಾರಿ ಕಾಮೆಂಟ್‌ ಮಾಡಿದ್ದಾರೆ. ಏಕದಿನ ಕ್ರಿಕೆಟ್​​ ಬಿಟ್ಟು ಸೂರ್ಯ ಕುಮಾರ್​​ ಐಪಿಎಲ್ ಆಡುವುದು ಉತ್ತಮ ಎಂದು ಸನ್ನಿ ಹೇಳಿದ್ದಾರೆ.

ಸೂರ್ಯ 3 ಏಕದಿನ ಪಂದ್ಯಗಳಲ್ಲಿ ಡಕೌಟ್​​​ ಆಗಿರುವುದು ಬೇಸರದ ಸಂಗತಿ. ಆಟಗಾರರ ಕರಿಯರ್​​​ನಲ್ಲೂ ವೈಫಲ್ಯ ಇದ್ದಿದ್ದೇ. ಇಂತಹ ದುರಂತಗಳು ಅಪರೂಪ. ಆದರೆ ವೈಫಲ್ಯ ಎಂಬುದು ಎಲ್ಲಿರಿಗೂ ಇದೆ ಎಂದು ತಿಳಿದು ಮುಂದೆ ಸಾಗುವುದು ಒಳ್ಳೆಯದು. ನೀವಿದನ್ನು ಎಷ್ಟು ಬೇಗ ಮರೆತುಬಿಡುತ್ತೀರೋ ಅಷ್ಟು ಉತ್ತಮ ಎಂದು ಸಲಹೆ ನೀಡಿದ್ದಾರೆ.

ಸತತ 3 ಗೋಲ್ಡನ್ ಡಕೌಟ್​ ಮರೆತು ಮುಂಬರುವ ಐಪಿಎಲ್‌ನತ್ತ ಗಮನಹರಿಸಿ. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು IPLನಲ್ಲಿ ಸಾಧ್ಯವಾದಷ್ಟು ರನ್ ಗಳಿಸಿ. ಮುಂದೆ ಅಂತಾರಾಷ್ಟ್ರೀಯ ಕ್ರಿಕೆಟ್​​​ನಲ್ಲಿ ರನ್​ ಗಳಿಸಲು ನೆರವಾಗುತ್ತದೆ ಎಂದು ಗವಾಸ್ಕರ್​​ ತಿಳಿಸಿದ್ದಾರೆ. ಗವಾಸ್ಕರ್ ಜೊತೆಗೆ ನಾಯಕ ರೋಹಿತ್ ಕೂಡ ಸೂರ್ಯರನ್ನು ಬೆಂಬಲಿಸಿದ್ದಾರೆ.

ಈ ಸರಣಿಯಲ್ಲಿ ಸೂರ್ಯ ಕೇವಲ ಮೂರು ಎಸೆತಗಳಷ್ಟೇ ಆಡಿದ್ದಾರೆ. ಆದರೆ ಅದನ್ನು ಹೇಗೆ ನೋಡಬೇಕೆಂದೇ ಗೊತ್ತಾಗುತ್ತಿಲ್ಲ. ನಿಜ ಹೇಳಬೇಕೆಂದರೆ ಅವರು ಸ್ಪಿನ್ ಬೌಲಿಂಗ್​​​ಗೆ ಚೆನ್ನಾಗಿ ಆಡುತ್ತಾರೆ. ನಾವಿದನ್ನು ಕಳೆದ ಎರಡು ವರ್ಷಗಳಿಂದ ನೋಡಿದ್ದೇವೆ. 3 ಡಕೌಟ್​ ಆದರು ಎಂಬ ಕಾರಣಕ್ಕೆ ಸಾಮರ್ಥ್ಯ ಕುಗ್ಗಿದೆ ಎಂದರ್ಥವಲ್ಲ ಎಂದರು.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಅವರ ಇನ್‌ಸ್ವಿಂಗ್​​ ಎಸೆತಕ್ಕೆ ಸೂರ್ಯಕುಮಾರ್ ವಿಕೆಟ್​ ಒಪ್ಪಿಸಿದರು. 2ನೇ ODIನಲ್ಲೂ ಸ್ಟಾರ್ಕ್​​​ ಬೌಲಿಂಗ್​​​ನಲ್ಲೇ ಅದೇ ರೀತಿ ಔಟಾದರು. 3ನೇ ಏಕದಿನ ಪಂದ್ಯದಲ್ಲಿ ಆಶ್ಟನ್ ಅಗರ್ ಅವರ ಸ್ಪಿನ್​​ ಬೌಲಿಂಗ್​​​ನಲ್ಲಿ ಕ್ಲೀನ್​ ಬೌಲ್ಡ್​ ಆದರು.

ರಿಷಭ್​​ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅಲಭ್ಯತೆಯಲ್ಲಿ ಸೂರ್ಯ ಅವರಿಗೆ ಪದೇ ಪದೇ ಅವಕಾಶಗಳು ಸಿಗುತ್ತಿವೆ. ಆದರೆ, ಅವುಗಳ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ಇದುವರೆಗೆ 23 ಏಕದಿನ ಪಂದ್ಯಗಳನ್ನು ಆಡಿರುವ ಸೂರ್ಯ, 24ರ ಸರಾಸರಿಯಲ್ಲಿ 433 ರನ್ ಗಳಿಸಿದ್ದಾರೆ. ಕೊನೆಯ 10 ODI ಇನ್ನಿಂಗ್ಸ್‌ಗಳಲ್ಲಿ 100 ರನ್ ಗಳಿಸಲು ಅವರಿಗೆ ಸಾಧ್ಯವಾಗಲಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ