logo
ಕನ್ನಡ ಸುದ್ದಿ  /  ಕ್ರೀಡೆ  /  India Vs Australia 3rd Odi: ನಿರ್ಣಾಯಕ ಪಂದ್ಯ ಸೋತು ಸರಣಿ ಕಳೆದುಕೊಂಡ ಭಾರತ; ವಿಶ್ವಕಪ್ ವರ್ಷದಲ್ಲಿ ರೋಹಿತ್ ಪಡೆಯ ಕಳಪೆ ಪ್ರದರ್ಶನ!

India vs Australia 3rd ODI: ನಿರ್ಣಾಯಕ ಪಂದ್ಯ ಸೋತು ಸರಣಿ ಕಳೆದುಕೊಂಡ ಭಾರತ; ವಿಶ್ವಕಪ್ ವರ್ಷದಲ್ಲಿ ರೋಹಿತ್ ಪಡೆಯ ಕಳಪೆ ಪ್ರದರ್ಶನ!

HT Kannada Desk HT Kannada

Mar 22, 2023 10:10 PM IST

ಭಾರತಕ್ಕೆ ಸೋಲು

  • ಇದೇ ಅಂತರದಿಂದ ಭಾರತ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಸರಣಿ ಗೆದ್ದಿತ್ತು. ಇದಕ್ಕೆ ಪ್ರತೀಕಾರ ತೀರಿಸಿಕೊಂಡಿರುವ ಆಸೀಸ್‌, ಏಕದಿನ ಸರಣಿಯನ್ನು ಅದೇ ಅಂತರದಲ್ಲಿ ಗೆದ್ದುಕೊಂಡಿದೆ. ಆ ಮೂಲಕ ಭಾರತದಲ್ಲೇ ಈ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಬಲಿಷ್ಠ ತಂಡವಾಗಿ ಮುನ್ನುಗ್ಗಿದೆ.

ಭಾರತಕ್ಕೆ ಸೋಲು
ಭಾರತಕ್ಕೆ ಸೋಲು (ANI)

ಚೆನ್ನೈ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ಸರಣಿ ನಿರ್ಣಾಯಕ ಪಂದ್ಯದಲ್ಲಿ ರೋಹಿತ್‌ ಶರ್ಮಾ ಪಡೆ ಮುಗ್ಗರಿಸಿದೆ. ಸರಣಿ ಗೆಲುವಿಗೆ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಭಾರತ, ಅಂತಿಮವಾಗಿ ಆಸೀಸ್‌ ಆಟಕ್ಕೆ ತಲೆಬಾಗಿ 1-2 ಅಂತರದಿಂದ ಸರಣಿ ಕಳೆದುಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ ನಿವೃತ್ತಿ; ಈ ದಿನವೇ ದಿಗ್ಗಜ ಆಟಗಾರನ ಕೊನೆಯ ಪಂದ್ಯ

ಫೆಡರೇಶನ್ ಕಪ್‌ನಲ್ಲಿ ಬಂಗಾರ ಗೆದ್ದ ನೀರಜ್‌ ಚೋಪ್ರಾ; ಕೂದಲೆಳೆ ಅಂತರದಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟ ಡಿಪಿ ಮನು

ರೆಸ್ಲರ್ ಅಮನ್ ಸೆಹ್ರಾವತ್​ಗೆ ಪ್ಯಾರಿಸ್ ಒಲಿಂಪಿಕ್ಸ್​ ಟಿಕೆಟ್; ಮೊದಲ ಬಾರಿಗೆ ಐವರು ಮಹಿಳಾ ಕುಸ್ತಿಪಟುಗಳು ಅರ್ಹತೆ

ದೋಹಾ ಡೈಮಂಡ್ ಲೀಗ್​​​ 2024: ನೀರಜ್ ಚೋಪ್ರಾಗೆ 2ನೇ ಸ್ಥಾನ; ಕೇವಲ 2 ಸೆಂಟಿ ಮೀಟರ್​​ಗಳಲ್ಲಿ ತಪ್ಪಿತು ಮೊದಲ ಸ್ಥಾನ

ಆಸೀಸ್‌ ಗಳಿಸಿದ 269 ರನ್‌ಗಳಿಗೆ ಪ್ರತಿಯಾಗಿ ಚೇಸಿಂಗ್‌ ಆರಂಭಿಸಿದ ಭಾರತ, ಉತ್ತಮ ಆರಂಭದ ಹೊರತಾಗಿಯೂ ಗುರಿ ತಲುಪುವಲ್ಲಿ ವಿಫಲವಾಯ್ತು. ಅಂತಿಮವಾಗಿ 49.1 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ ಕಳೆದುಕೊಂಡು 248 ರನ್‌ ಗಳಿಸಲಷ್ಟೇ ಶಕ್ತವಾಯ್ತು. ಆ ಮೂಲಕ ಸ್ಮಿತ್‌ ಪಡೆಯು 21 ರನ್‌ಗಳ ರೋಚಕ ಅಂತರದಿಂದ ಪಂದ್ಯ ಗೆಲ್ಲುವುದರೊಂದಿಗೆ ಏಕದಿನ ಸರಣಿ ವಶಪಡಿಸಿಕೊಂಡಿತು.

ಇದೇ ಅಂತರದಿಂದ ಭಾರತವು ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಸರಣಿ ಗೆದ್ದಿತ್ತು. ಇದಕ್ಕೆ ಪ್ರತೀಕಾರ ತೀರಿಸಿಕೊಂಡಿರುವ ಆಸೀಸ್‌, ಏಕದಿನ ಸರಣಿಯನ್ನು ಅದೇ ಅಂತರದಲ್ಲಿ ಗೆದ್ದುಕೊಂಡಿದೆ. ಆ ಮೂಲಕ ಭಾರತದಲ್ಲೇ ಈ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಬಲಿಷ್ಠ ತಂಡವಾಗಿ ಮುನ್ನುಗ್ಗಿದೆ.

ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಉತ್ತಮ ಆರಂಭ ಒದಗಿಸಿದರು. ಇಬ್ಬರೂ ಮೊದಲ ವಿಕೆಟ್‌ಗೆ 65 ರನ್‌ಗಳ ಜೊತೆಯಾಟವಾಡಿದರು. ರೋಹಿತ್‌ 30 ರನ್‌ ಗಳಿಸಿ ಔಟಾದರೆ, ಗಿಲ್‌ 37 ರನ್‌ ಗಳಿಸಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಜವಾಬ್ದಾರಿಯುತ ಆಟ ಪ್ರದರ್ಶಿಸಿದ ರಾಹುಲ್‌ 32 ರನ್‌ ಗಳಿಸಿ ಬೌಂಡರಿ ಲೈನ್‌ನಲ್ಲಿ ಕ್ಯಾಚ್‌ ನೀಡಿ ಔಟಾದರು. ಕಳೆದ ಪಂದ್ಯದಲ್ಲಿ ಕೆಳಕ್ರಮಾಂಕದಲ್ಲಿ ಬ್ಯಾಟ್‌ ಬೀಸಿ ಅಜೇಯರಾಗಿ ಉಳಿದಿದ್ದ ಅಕ್ಷರ್‌ ಪಟೇಲ್‌, ಇಂದು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಲು ಬಂದರು. ಆದರೆ, ಅನಗತ್ಯ ರನ್‌ ಕದಿಯಲು ಹೋಗಿ ಕೇವಲ 2 ರನ್‌ ಗಳಿಸಿದ್ದ ವೇಳೆ ರನೌಟ್‌ ಆದರು.

ಇದೇ ವೇಳೆ ತಾಳ್ಮೆಯ ಆಟವಾಡಿದ ವಿರಾಟ್‌ ಕೊಹ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. 72 ಎಸೆತಗಳನ್ನು ಎದುರಿಸಿದ ಕೊಹ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್‌ ಸಹಿತ 54 ರನ್‌ ಸಿಡಿಸಿ, ವಾರ್ನರ್‌ಗೆ ಕ್ಯಾಚ್‌ ನೀಡಿ ಹೊರನಡೆದರು. ಈ ವೇಳೆ ಬಂದ ಸೂರ್ಯಕುಮಾರ್‌ ಯಾದವ್‌, ಗೋಲ್ಡನ್‌ ಡಕ್‌ಗೆ ಬಲಿಯಾಗಿ ಬಂದ ವೇಗದಲ್ಲೇ ಮತ್ತೆ ಪೆವಿಲಿಯನ್‌ ಸೇರಿಕೊಂಡರು. ಕೆಲ ಹೊತ್ತು ನಿಧಾನಗತಿಯ ಆಟವಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಯತ್ನಿಸಿದ ಹಾರ್ದಿಕ್‌ ಪಂಡ್ಯಾ ಮತ್ತು ಜಡೇಜಾ, ಒಬ್ಬರ ಬಳಿಕ ಮತ್ತೊಬ್ಬರಂತೆ ಔಟಾದರು. ಪಾಂಡ್ಯ 40 ರನ್‌ ಗಳಿಸಿದರೆ, ಜಡೇಜಾ ಆಟ 18 ರನ್‌ಗಳಿಗೆ ಸೀಮಿತವಾಯ್ತು. ಜಡ್ಡು ನಿರ್ಗಮನದೊಂದಿಗೆ ಭಾರತದ ಗೆಲುವಿನ ಆಸೆ ಕಮರಿತು.

ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ, 49 ಓವರ್‌ನಲ್ಲಿ 269 ರನ್‌ ಗಳಿಸಿ ಆಲೌಟ್‌ ಆಯ್ತು. ಭಾರತದ ಪರ ಪಾಂಡ್ಯ ಮತ್ತು ಕುಲ್ದೀಪ್‌ ತಲಾ ಮೂರು ವಿಕೆಟ್‌ ಕಬಳಿಸಿದರೆ, ಸಿರಾಜ್‌ ಮತ್ತು ಅಕ್ಸರ್‌ ತಲಾ ಒಂದು ವಿಕೆಟ್‌ ಪಡೆದರು.

ಆಸೀಸ್‌ ಪರ ಆರಂಭಿಕರಾದ ಹೆಡ್‌ 33 ರನ್‌ ಗಳಿಸಿದರೆ, ಮಿಚೆಲ್‌ ಮಾರ್ಶ್‌ ಎಸೆತಕ್ಕೊಂಡರಂತೆ ರನ್‌ ಗಳಿಸಿ(47) ಅರ್ಧಶತಕ ವಂಚಿತರಾದರು. ನಾಯಕ ಸ್ಮಿತ್‌ ಡಕೌಟ್‌ ಆದರು. ಇವರಿಬ್ಬರು ಮಾತ್ರವಲ್ಲದೆ ಮಿಚೆಲ್‌ ಮಾರ್ಷ್‌ಗೂ ಹಾರ್ದಿಕ್‌ ಪಾಂಡ್ಯ ಪೆವಿಲಿಯನ್‌ ಹಾದಿ ತೋರಿಸಿದರು. ಈ ಪಂದ್ಯಕ್ಕೆ ಪುನರಾಗಮಮನ ಮಾಡಿದ್ದ ಡೇವಿಡ್‌ ವಾರ್ನರ್‌ 23 ರನ್‌ ಗಳಿಸಿ ನಿರ್ಗಮಿಸಿದರೆ, ಲ್ಯಾಬುಶೆನ್‌ 28 ರನ್‌ ಗಳಿಸಿ ಔಟಾದರು. ಅಲೆಕ್ಸ್‌ ಕ್ಯಾರಿ 38 ರನ್‌ ಗಳಿಸಿ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು. ಸ್ಟೋಯ್ನಿಸ್‌ ಮತ್ತು ಅಬಾಟ್‌ ಕ್ರಮವಾಗಿ 25 ಮತ್ತು 26 ರನ್‌ ಗಳಿಸಿದರು.

ರೋಹಿತ್‌ ಶರ್ಮಾ ದಾಖಲೆ

ಈ ಪಂದ್ಯದಲ್ಲಿ ಟೀಮ್‌ ಇಂಡಿಯಾ ನಾಯಕ ದಾಖಲೆಯೊಂದನ್ನು ಬರೆದಿದ್ದಾರೆ. ಏಷ್ಯಾದಲ್ಲಿ 10,000 ಅಂತಾರಾಷ್ಟ್ರೀಯ ರನ್ ಪೂರೈಸಿದ 8ನೇ ಭಾರತೀಯ ಬ್ಯಾಟರ್ ಎಂಬ ಖ್ಯಾತಿಗೆ ಹಿಟ್‌ಮ್ಯಾನ್‌ ಪಾತ್ರರಾಗಿದ್ದಾರೆ. ಈಗಾಗಲೇ ತೆಂಡೂಲ್ಕರ್, ವಿರಾಟ್, ದ್ರಾವಿಡ್, ಸೆಹ್ವಾಗ್, ಎಂಎಸ್ ಧೋನಿ, ಮೊಹಮ್ಮದ್ ಅಜರುದ್ದೀನ್ ಮತ್ತು ಸೌರವ್ ಗಂಗೂಲಿ ಏಷ್ಯಾದಲ್ಲಿ 10 ಸಾವಿರ ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿದ್ದಾರೆ. ಈಗ ಈ ಪಟ್ಟಿಗೆ ರೋಹಿತ್ ಶರ್ಮಾ ಕೂಡಾ ಸೇರಿಕೊಂಡಿದ್ದಾರೆ. ಏಷ್ಯಾದಲ್ಲಿ ಆಡಿದ 247 ಪಂದ್ಯಗಳಲ್ಲಿ ಮುಂಬೈಕರ್‌ 10,026 ರನ್ ಗಳಿಸಿದ್ದಾರೆ.‌

ಮತ್ತೆ ಡಕೌಟ್ ಆದ ಸೂರ್ಯಕುಮಾರ್‌ ಯಾದವ್!

ಆಸೀಸ್‌ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ, ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್‌ ಯಾದವ್‌ ಶೂನ್ಯಕ್ಕೆ ನಿರ್ಗಮಿಸಿದ್ದರು. ಆದರೂ ಮೂರನೇ ಏಕದಿನ ಪಂದ್ಯದಲ್ಲಿ ಮತ್ತೆ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದರು. ಆದರೆ, ಸತತ ಮೂರನೇ ಪಂದ್ಯದಲ್ಲೂ ಗೋಲ್ಡನ್‌ ಡಕ್‌ಗೆ ಬಲಿಯಾಗುವ ಮೂಲಕ ಸ್ಕೈ ಕಳಪೆ ದಾಖಲೆ ನಿರ್ಮಿಸಿದ್ದಾರೆ. ಇಂದಿನ ಪಂದ್ಯದಲ್ಲೂ ತಾವು ಎದುರಿಸಿದ ಮೊದಲ ಎಸೆತದಲ್ಲೇ ಕ್ಲೀನ್‌ ಬೌಲ್ಡ್‌ ಆಗುವ ಗೋಲ್ಡನ್‌ ಡಕ್‌ಗೆ ಬಲಿಯಾದರು. ಹೀಗಾಗಿ ಏಕದಿನ ಕ್ರಿಕೆಟ್‌ನಲ್ಲಿ ಮುಂದೆ ಸೂರ್ಯಕುಮಾರ್‌ ಸ್ಥಾನದ ಬಗ್ಗೆ ಪ್ರಶ್ನೆಗಳು ಏಳುವ ಸಾಧ್ಯತೆ ಇದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ