logo
ಕನ್ನಡ ಸುದ್ದಿ  /  ಕ್ರೀಡೆ  /  Asian Games: ಪ್ರೀ ಕ್ವಾರ್ಟರ್ ಪ್ರವೇಶಿಸಿದ ಭಾರತ ಪುರುಷ ಮತ್ತು ಮಹಿಳೆಯರ ಟೇಬಲ್ ಟೆನಿಸ್ ತಂಡ

Asian Games: ಪ್ರೀ ಕ್ವಾರ್ಟರ್ ಪ್ರವೇಶಿಸಿದ ಭಾರತ ಪುರುಷ ಮತ್ತು ಮಹಿಳೆಯರ ಟೇಬಲ್ ಟೆನಿಸ್ ತಂಡ

Jayaraj HT Kannada

Sep 23, 2023 05:55 PM IST

ಭಾರತ ವನಿತೆಯರ ಟೇಬಲ್‌ ಟೆನಿಸ್ ತಂಡ

    • Asian Games 2023: ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಪುರುಷರ ಮತ್ತು ಮಹಿಳೆಯರ ಟೇಬಲ್ ಟೆನಿಸ್ ತಂಡಗಳು ಪ್ರೀ ಕ್ವಾರ್ಟರ್ ಫೈನಲ್‌ ಪ್ರವೇಶಿಸಿವೆ.
ಭಾರತ ವನಿತೆಯರ ಟೇಬಲ್‌ ಟೆನಿಸ್ ತಂಡ
ಭಾರತ ವನಿತೆಯರ ಟೇಬಲ್‌ ಟೆನಿಸ್ ತಂಡ (SAI)

ಏಷ್ಯನ್ ಗೇಮ್ಸ್‌ನಲ್ಲಿ (Asian Games) ಶನಿವಾರ ನಡೆದ ಗುಂಪು ಹಂತದ ಪಂದ್ಯದಲ್ಲಿ ಭಾರತ ಪುರುಷರ ಮತ್ತು ಮಹಿಳೆಯರ ಟೇಬಲ್ ಟೆನಿಸ್ ತಂಡಗಳು ಪ್ರೀ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿವೆ. ಉಭಯ ತಂಡಗಳು ತಜಕಿಸ್ತಾನ ಮತ್ತು ನೇಪಾಳ ವಿರುದ್ಧ 3-0 ಅಂತರದ ಜಯ ಸಾಧಿಸಿ, ಮುಂದಿನ ಹಂತಕ್ಕೆ ಪ್ರವೇಶಿಸಿವೆ.

ಟ್ರೆಂಡಿಂಗ್​ ಸುದ್ದಿ

ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ ನಿವೃತ್ತಿ; ಈ ದಿನವೇ ದಿಗ್ಗಜ ಆಟಗಾರನ ಕೊನೆಯ ಪಂದ್ಯ

ಫೆಡರೇಶನ್ ಕಪ್‌ನಲ್ಲಿ ಬಂಗಾರ ಗೆದ್ದ ನೀರಜ್‌ ಚೋಪ್ರಾ; ಕೂದಲೆಳೆ ಅಂತರದಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟ ಡಿಪಿ ಮನು

ರೆಸ್ಲರ್ ಅಮನ್ ಸೆಹ್ರಾವತ್​ಗೆ ಪ್ಯಾರಿಸ್ ಒಲಿಂಪಿಕ್ಸ್​ ಟಿಕೆಟ್; ಮೊದಲ ಬಾರಿಗೆ ಐವರು ಮಹಿಳಾ ಕುಸ್ತಿಪಟುಗಳು ಅರ್ಹತೆ

ದೋಹಾ ಡೈಮಂಡ್ ಲೀಗ್​​​ 2024: ನೀರಜ್ ಚೋಪ್ರಾಗೆ 2ನೇ ಸ್ಥಾನ; ಕೇವಲ 2 ಸೆಂಟಿ ಮೀಟರ್​​ಗಳಲ್ಲಿ ತಪ್ಪಿತು ಮೊದಲ ಸ್ಥಾನ

ಭಾರತ ಪುರುಷರ ತಂಡದ ಮಾನವ್ ಠಾಕರ್ ಅವರು ಅಫ್ಜಲ್ಖೋನ್ ಮಹ್ಮುದೋವ್ ಅವರನ್ನು 11-8, 11-5, 11-8 ರಿಂದ ಸೋಲಿಸಿ ಉತ್ತಮ ಆರಂಭ ನೀಡಿದರು. ಬಳಿಕ ಎರಡನೇ ಸುತ್ತಿನಲ್ಲಿ ಮನುಷ್ ಶಾ ಅವರು 13-11, 11-7, 11-5 ಅಂತರದಿಂದ ಉಬೈದುಲ್ಲೊ ಸುಲ್ಟೋನೊವ್ ವಿರುದ್ಧ ಜಯಗಳಿಸಿ, ಭಾರತಕ್ಕೆ 2-0 ಮುನ್ನಡೆ ತಂಡದುಕೊಟ್ಟರು. ಕೊನೆಯಲ್ಲಿ ಹರ್ಮೀತ್ ದೇಸಾಯಿ ಅವರು ಇಬ್ರೋಕಿಮ್ ಇಸ್ಮೊಯಿಲ್ಜೋಡಾ ವಿರುದ್ಧ 11-1, 11-3, 11-5 ಸುಲಭ ಜಯದೊಂದಿಗೆ ಭಾರತಕ್ಕೆ ಗೆಲುವು ತಂದುಕೊಟ್ಟರು.

ಶುಕ್ರವಾರದ ಪಂದ್ಯದಲ್ಲಿ ಸಿಂಗಾಪುರವನ್ನು ಮಣಿಸಿದ್ದ ಭಾರತದ ವನಿತೆಯರು, ನೇಪಾಳದ ದಿಯಾ ಚಿತಾಲೆ 11-1, 11-6, 11-8 ಸೆಟ್‌ಗಳಿಂದ ಸಿಕ್ಕಾ ಶ್ರೇಷ್ಠಾ ಅವರನ್ನು ಸೋಲಿಸುವ ಮೂಲಕ ಗೆಲುವಿನ ಸೂಚನೆ ನೀಡಿದರು. ಮತ್ತೊಂದೆಡೆ ನೇಪಾಳದ ನಬಿತಾ ಶ್ರೇಷ್ಠಾ ವಿರುದ್ಧ 11-3, 11-7, 11-2 ಅಂತರದಲ್ಲಿ ಜಯ ಗಳಿಸಿದ ಅಹಿಕಾ ಮುಖರ್ಜಿ ಭಾರತದ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ಕೊನೆಯದಾಗಿ ಸುತೀರ್ಥ ಮುಖರ್ಜಿ ಅವರು ಇವಾನಾ ಥಾಪಾ ಅವರನ್ನು 11-1, 11-5, 11-2 ರಿಂದ ಸೋಲಿಸಿ ಕ್ಲೀನ್‌ ಸ್ವೀಪ್‌ ಮಾಡಿದರು.

ನಿಖತ್‌ ಜರೀನ್‌ಗೆ ಕಠಿಣ ಸವಾಲು

ಮತ್ತೊಂದೆಡೆ ಬಾಕ್ಸಿಂಗ್‌ ವಿಭಾಗದಲ್ಲಿ, ವಿಶ್ವ ಚಾಂಪಿಯನ್ ನಿಖತ್ ಜರೀನ್ ಅವರು ಏಷ್ಯನ್ ಗೇಮ್ಸ್ 2023ರ ಬಾಕ್ಸಿಂಗ್‌ನಲ್ಲಿ ಕಠಿಣ ಆರಂಭ ಪಡೆಯಲಿದ್ದಾರೆ. ಚೀನಾದ ಹ್ಯಾಂಗ್‌ಝೌನಲ್ಲಿ ಆರಂಭವಾಗಿರುವ ಕ್ರೀಡಾಕೂಟದಲ್ಲಿ, ಆರಂಭದಲ್ಲೇ ಜರೀನ್‌ ಅವರಿಗೆ ಪ್ರಬಲ ಎದುರಾಳಿ ಸಿಕ್ಕಿದ್ದಾರೆ.

ಟೂರ್ನಿಯಲ್ಲಿ ನಡೆಯಲಿರುವ ಬಾಕ್ಸಿಂಗ್‌ನ ಪಂದ್ಯಗಳ ಪಟ್ಟಿ ಅಂತಿಮಗೊಂಡಿದ್ದು, ಕಠಿಣ ಡ್ರಾ ಎದುರಿಸಿರುವ ಜರೀನ್‌ ಮೊದಲ ಸುತ್ತಿನಲ್ಲಿ ಜರೀನ್‌ ಅವರು ನ್ಗುಯೆನ್ ಥಿ ಟಾಮ್ ಅವರನ್ನು ಎದುರಿಸಲಿದ್ದಾರೆ. ಕಳೆದ ಮಾರ್ಚ್‌ನಲ್ಲಿ ನವದೆಹಲಿಯಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ, ವಿಯೆಟ್ನಾಂನ ಥಿ ಟಾಮ್ ವಿರುದ್ಧ ಗೆದ್ದು ನಿಖತ್‌ ಜರೀನ್‌ ಚಾಂಪಿಯನ್‌ ಆಗಿದ್ದರು. ಇದೀಗ ಇವರ ವಿರುದ್ಧ ನಿಖತ್‌ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.

ಈ ಹಿಂದೆ ಟಾಮ್‌ ವಿರುದ್ಧ ಜರೀನ್‌ ಗೆದ್ದಿದ್ದರೂ, ಅವರು ಪ್ರಬಲ ಎದುರಾಳಿ ಎನ್ನುವುದರಲ್ಲಿ ಅನುಮಾನವಿಲ್ಲ. ಥಿ ಟಾಮ್ ಎರಡು ಬಾರಿ ಏಷ್ಯನ್ ಚಾಂಪಿಯನ್ ಆಗಿದ್ದಾರೆ. ಹೀಗಾಗಿ ಅವರು ಬಲಿಷ್ಠ ಎದುರಾಳಿ. ಒಂದು ವೇಳೆ ಜರೀನ್ ತಾಮ್ ಅವರನ್ನು ಸೋಲಿಸಿದರೆ, ಅವರು ಎರಡನೇ ಸುತ್ತಿನಲ್ಲಿ ರಿಪಬ್ಲಿಕ್ ಆಫ್ ಕೊರಿಯಾದ ಚೊರೊಂಗ್ ಬಾಕ್ ವಿರುದ್ಧ ಸೆಣಸಲಿದ್ದಾರೆ.

ಲೊವ್ಲಿನಾ ಬೊರ್ಗೊಹೈನ್‌ಗೆ ಬೈ

ಮತ್ತೊಂದೆಡೆ ಒಲಿಂಪಿಕ್ ಪದಕ ವಿಜೇತೆ ಮತ್ತು ವಿಶ್ವ ಚಾಂಪಿಯನ್ ಲೊವ್ಲಿನಾ ಬೊರ್ಗೊಹೈನ್ ಅವರಿಗೆ, ಪೂರ್ವಭಾವಿ ಪಂದ್ಯಗಳಲ್ಲಿ ಬೈ ನೀಡಲಾಗಿದೆ. ಅವರು ಸೆಪ್ಟೆಂಬರ್ 30ರಂದು ಮಹಿಳೆಯರ 70 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಕೊರಿಯಾದ ಸಿಯೊಂಗ್ ಸುಯೆನ್ ಅವರನ್ನು ಎದುರಿಸಲಿದ್ದಾರೆ.

ಭಾರತದ ಯುವ ಬಾಕ್ಸರ್ ಪ್ರೀತಿ, 54 ಕೆಜಿ ವಿಭಾಗದ ಮೊದಲ ಸುತ್ತಿನಲ್ಲಿ ಜೋರ್ಡಾನ್‌ನ ಅಲಹಸನಾತ್ ಸಿಲಿನಾ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ. ಪರ್ವೀನ್ ಹೂಡಾ ಅವರು 57 ಕೆಜಿ ವಿಭಾಗದ ಮೊದಲ ಸುತ್ತಿನಲ್ಲಿ ಚೀನಾದ ಕ್ಸು ಝೀಹುನ್ ಅವರನ್ನು ಎದುರಿಸಲಿದ್ದಾರೆ. ಇದೇ ವೇಳೆ 66 ಕೆಜಿ ವಿಭಾಗದಲ್ಲಿ ಅರುಂಧತಿ ಚೌಧರಿ ಕಠಿಣ ಡ್ರಾ ಸಾಧಿಸಿದ್ದು, ಮೊದಲ ಸುತ್ತಿನಲ್ಲಿ ಚೀನಾದ ಯಾಂಗ್ ಲಿಯು ವಿರುದ್ಧ ಕಾದಾಡಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ