logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Jaggesh: ರೋಗ ಗಿಫ್ಟ್‌ ನೀಡಿದ್ರಲ್ಲೋ! ಹಾಸಿಗೆ ಹಿಡಿದ ನಟ ಜಗ್ಗೇಶ್

Jaggesh: ರೋಗ ಗಿಫ್ಟ್‌ ನೀಡಿದ್ರಲ್ಲೋ! ಹಾಸಿಗೆ ಹಿಡಿದ ನಟ ಜಗ್ಗೇಶ್

Dec 31, 2023 03:05 PM IST

  • Jaggesh: ಸ್ಯಾಂಡಲ್‌ವುಡ್‌ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್‌ ಸಿನಿಮಾಗಳಿಂದ ಕೊಂಚ ದೂರವೇ ಉಳಿದಿದ್ದಾರೆ. ರಾಘವೇಂದ್ರ ಸ್ಟೋರ್ಸ್‌ ಸಿನಿಮಾ ಬಳಿಕ, ಅವರ ಬೇರಾವ ಚಿತ್ರದ ಬಗ್ಗೆ ಸುದ್ದಿಯಿಲ್ಲ. ಹಾಗಂತ ಚಿತ್ರರಂಗದಿಂದ ಅವರು ದೂರವಾಗಿಲ್ಲ. ರಾಜಕೀಯದ ಕಡೆಗೆ ಹೆಚ್ಚು ವಾಲಿದ್ದಾರೆ. ಇತ್ತ ಸೋಷಿಯಲ್‌ ಮೀಡಿಯಾದಲ್ಲಿ ರಾಜಕೀಯ ವಿಚಾರಗಳ ಬಗ್ಗೆಯೇ ಹೆಚ್ಚು ಪೋಸ್ಟ್‌ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ರಾಮಮಂದಿರ ಉದ್ಘಾಟನೆಗೆ ಸಮಯ ಹತ್ತಿರ ಬರುತ್ತಿದ್ದಂತೆ ಅದಕ್ಕೆ ಸಂಬಂಧಿಸಿದ ಪೋಸ್ಟ್‌ ಮಾಡುತ್ತಿದ್ದಾರೆ. ಈ ನಡುವೆ ತಮ್ಮ ಆರೋಗ್ಯ ಸರಿಯಿಲ್ಲ ಎಂಬುದನ್ನೂ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ ಜಗ್ಗೇಶ್.‌ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಶೇರ್‌ ಮಾಡಿರುವ ನವರಸ ನಾಯಕ ಜಗ್ಗೇಶ್‌, ಅನಾರೋಗ್ಯಕ್ಕೆ ತುತ್ತಾದ ವಿಚಾರವನ್ನು ಹೇಳಿಕೊಂಡು ಎಲ್ಲರಲ್ಲಿಯೂ ಮನವಿ ಮಾಡಿಕೊಂಡಿದ್ದಾರೆ. ಯಾರೇ ಆಗಲಿ ಆರೋಗ್ಯ ಸರಿಯಿಲ್ಲದೇ ಇದ್ದರೆ ಹೊರಗಡೆ ಬರಬೇಡಿ, ಬೇರೆಯವರಿಗೂ ಅಂಟಿಸಬೇಡಿ ಎಂದಿದ್ದಾರೆ.