logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bad Manners Movie: ಬೆಳಗಾವಿಯಲ್ಲಿ ಪೂರಿ ಸವಿದು ಬ್ಯಾಡ್‌ ಮ್ಯಾನರ್ಸ್‌ ಚಿತ್ರದ ಪ್ರಚಾರಕ್ಕಿಳಿದ ಅಭಿಷೇಕ್‌ ಅಂಬಿ

Bad Manners Movie: ಬೆಳಗಾವಿಯಲ್ಲಿ ಪೂರಿ ಸವಿದು ಬ್ಯಾಡ್‌ ಮ್ಯಾನರ್ಸ್‌ ಚಿತ್ರದ ಪ್ರಚಾರಕ್ಕಿಳಿದ ಅಭಿಷೇಕ್‌ ಅಂಬಿ

Nov 21, 2023 12:47 PM IST

  • ಬ್ಯಾಡ್‌ ಮ್ಯಾನರ್ಸ್‌ ಸಿನಿಮಾ ಪ್ರಚಾರದ ಸಲುವಾಗಿ ಬೆಳಗಾವಿಗೆ ಆಗಮಿಸಿದ್ದಾರೆ ಅಭಿಷೇಕ್‌ ಅಂಬರೀಶ್‌. ಕುಂದಾನಗರಿಗೆ ಕಾಲಿಡುತ್ತಿದ್ದಂತೆ, ಉಪಹಾರಕ್ಕೆ ಒಳ್ಳೇ ಹೋಟೆಲ್‌ ಹುಡುಕಿದ್ದಾರೆ. ಆಗ ಅವರಿವರಿಂದ ಸಿಕ್ಕ ಹೆಸರು ದುರ್ಗಾ ದರ್ಶಿನಿ ಹೋಟೆಲ್‌. ಆಪ್ತರ ಜತೆಗೆ ನೇರವಾಗಿ ಹೋಟೆಲ್‌ಗೆ ಹೋಗಿ ಪೂರಿ ಬಾಜಿ ಸವಿದಿದ್ದಾರೆ. ಕಳೆದ 60 ವರ್ಷಗಳಿಂದ ಈ ಹೋಟೆಲ್‌ ನಡೆಸುತ್ತ ಬರಲಾಗುತ್ತಿದೆ. ತುಂಬ ಇಷ್ಟಪಟ್ಟೇ ಪೂರಿ ಸವಿದಿದ್ದಾರೆ ಅಭಿಷೇಕ್‌. ಬೆಳಗಾವಿ ಅಭಿಷೇಕ್‌ ಅಂಬರೀಶ್‌ ಆಗಮಿಸಿದ್ದಾರೆ ಎನ್ನುತ್ತಿದ್ದಂತೆ, ಸಾಕಷ್ಟು ಮಂದಿ ಅಭಿಮಾನಿಗಳು ಹೋಟೆಲ್‌ ಬಳಿ ಜಮಾಯಿಸಿದ್ದರು. ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ಇದೇ ವೇಳೆ ಹೋಟೆಲ್‌ ಮುಂಭಾಗದಲ್ಲಿ ಅಭಿಷೇಕ್‌ಗೆ ಶಾಲು ಹೊದಿಸಿ, ಹೂವಿನ ಹಾರ ಹಾಕಿ ಸನ್ಮಾನವನ್ನೂ ಮಾಡಲಾಯಿತು.