logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Himachal Pradesh :ಮೇಘಸ್ಪೋಟಕ್ಕೆ ಹಿಮಾಚಲ ಪ್ರದೇಶ ತತ್ತರ, ಭಾರೀ ಮಳೆಗೆ ಅಪಾರ ಸಾವು ನೋವು ;ರಕ್ಷಣಾ ಕಾರ್ಯ ಚುರುಕು

Himachal Pradesh :ಮೇಘಸ್ಪೋಟಕ್ಕೆ ಹಿಮಾಚಲ ಪ್ರದೇಶ ತತ್ತರ, ಭಾರೀ ಮಳೆಗೆ ಅಪಾರ ಸಾವು ನೋವು ;ರಕ್ಷಣಾ ಕಾರ್ಯ ಚುರುಕು

Aug 16, 2023 05:43 PM IST

  • ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯ ಕಾರಣದಿಂದ ಸಂಭವಿಸಿದ ಘಟನೆಯಲ್ಲಿ ಹಲವು ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ 16 ಜನರು ಮೃತಪಟ್ಟಿರುವುದನ್ನು ಈಗಾಗಲೇ ಮುಖ್ಯಮಂತ್ರಿ ಖಚಿತಪಡಿಸಿದ್ದಾರೆ. ಕಳೆದ ರಾತ್ರಿ ಸೊಲಾನ್‌ ಜಿಲ್ಲೆಯಲ್ಲಿ ಮೇಘಸ್ಪೋಟ ಸಂಭವಿಸಿ ಏಳು ಜನರು ಮೃತಪಟ್ಟಿದ್ದರು. ಇಂದು ಸುಮೇರ್‌ ಗುಡ್ಡ ಪ್ರದೇಶದಲ್ಲಿ ಶಿವ ದೇಗುಲವು ಗುಡ್ಡಕುಸಿತದಿಂದ ನೆಲಕಚ್ಚಿದೆ. ಈ ದೇಗುಲದಡಿ ಸಿಲುಕಿ ಸುಮಾರು ಏಳು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಕಳೆದ 48 ಗಂಟೆಯಲ್ಲಿ ಭಾರೀ ಮಳೆಯಾಗುತ್ತಿದೆ. ಅಲ್ಲಿನ ನದಿಗಳು ಉಕ್ಕಿ ಹರಿಯುತ್ತಿವೆ. ತಗ್ಗು ಪ್ರದೇಶಗಳು ಜಲಾವೃತ್ತವಾಗಿವೆ. ಗುಡ್ಡಗಳು ಕುಸಿತದ ಭೀತಿಯಲ್ಲಿವೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಶಿಮ್ಲಾ ಚಂಡೀಗಢ ರಸ್ತೆ ಬ್ಲಾಕ್‌ ಆಗಿದೆ. ಜೂನ್‌ 24ಕ್ಕೆ ಹಿಮಾಚಲ ಪ್ರದೇಶಕ್ಕೆ ಮುಂಗಾರು ಪ್ರವೇಶಿಸಿತ್ತು. ಈ ಬಾರಿ ಮಳೆ ಋತುವಿನಲ್ಲಿ 250ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.