Bodyguard Cat: ಬಾಲ್ಕನಿಯಲ್ಲಿ ಮಗುವನ್ನು ರಕ್ಷಿಸಿದ ಬೆಕ್ಕು..!
Oct 04, 2022 11:36 AM IST
- ಬಾಲ್ಕನಿಯಲ್ಲಿ ಆಟವಾಡುತ್ತಿದ್ದ ಮಗುವೊಂದು ರೇಲಿಂಗ್ ಬಳಿ ಹೋಗಿ ಸರಳನ್ನು ಹಿಡಿದುಕೊಂಡು ಇಣುಕಿ ನೋಡುತ್ತಿರುತ್ತದೆ. ಸರಳುಗಳನ್ನು ಹತ್ತಲು ಪ್ರಯತ್ನಿಸುತ್ತಿರುತ್ತದೆ. ಆದರೆ ರೇಲಿಂಗ್ ಮೇಲೆ ಕುಳಿತಿದ್ದ ಬೆಕ್ಕು ಸರಳುಗಳನ್ನು ಹಿಡಿದುಕೊಂಡಿದ್ದ ಮಗುವಿನ ಕೈಗಳನ್ನು ಬಿಡಿಸಿದೆ. ಅಡ್ಡಲಾಗಿ ನಿಂತು ಮಗು ಬಾಲ್ಕನಿಯಿಂದ ಕೆಳಗಿ ಇಣುಕುವುದನ್ನು, ರೇಲಿಂಗ್ ಹತ್ತುವುದನ್ನು ತಪ್ಪಿಸಿದೆ. Gabriele Corno ಎಂಬವರು ಈ ವಿಡಿಯೋವನ್ನು ಅಕ್ಟೋಬರ್ 2ರಂದು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋಗೆ 'ದಿ ಬಾಡಿಗಾರ್ಡ್' ಎಂದು ಅವರು ಕ್ಯಾಪ್ಶನ್ ನೀಡಿದ್ದಾರೆ.