ಕನ್ನಡ ಸುದ್ದಿ  /  Astrology  /  Geeta Jayanti 2022: Today Is Geeta Jayanti. Take A Look At These Teachings Given By Lord Krishna

Geeta Jayanti 2022: ಇಂದು ಗೀತಾ ಜಯಂತಿ. ಶ್ರೀಕೃಷ್ಣ ಭಗವಂತ ನೀಡಿದ ಈ ಉಪದೇಶಗಳನ್ನು ಒಮ್ಮೆ ಅವಲೋಕಿಸಿ

Geeta Jayanti 2022: ಇಂದು ವೈಕುಂಠ ಏಕಾದಶಿ ಅಷ್ಟೇ ಅಲ್ಲ, ಗೀತಾ ಜಯಂತಿ ಕೂಡ. ದ್ವಾಪರ ಯುಗದಲ್ಲಿ ಇದೇ ಮೋಕ್ಷದ ಏಕಾದಶಿ ದಿನ ಕುರುಕ್ಷೇತ್ರ ಸಮರಾಂಗಣದಲ್ಲಿ ಭಗವಾನ್‌ ಶ್ರೀಕೃಷ್ಣನು ಎದೆಗುಂದಿ ಕುಳಿತ ಅರ್ಜುನನಿಗೆ ಗೀತೋಪದೇಶ ಮಾಡುತ್ತಾರೆ. ಅದೇ ಮೊದಲ ಸಲ ಗೀತೆಯ ಪರಿಚಯ ಮತ್ತು ಉಪದೇಶವಾದ ಕಾರಣ ಆ ದಿನವನ್ನು ಇಂದಿಗೂ ಗೀತಾ ಜಯಂತಿ ಎಂದು ಆಚರಿಸುವುದು ಚಾಲ್ತಿಯಲ್ಲಿದೆ.

ಇಂದು ಗೀತಾ ಜಯಂತಿ
ಇಂದು ಗೀತಾ ಜಯಂತಿ

ಈ ವರ್ಷ ಗೀತಾ ಜಯಂತಿ ಡಿಸೆಂಬರ್‌ 3ರಂದು ಅಂದರೆ ಇಂದು ಆಚರಿಸಲಾಗುತ್ತಿದೆ. ಶ್ರೀಕೃಷ್ಣನು ಅರ್ಜುನನಿಗೆ ಗೀತೆಯನ್ನು ಉಪದೇಶಿಸಿದ ದಿನದ ವಾರ್ಷಿಕ ಆಚರಣೆ ಇದು. ಈ ಗೀತೋಪದೇಶದ ಬಳಿಕ ಮಹಾಭಾರತದ ಯುದ್ಧವನ್ನು ಅರ್ಜುನ ಗೆದ್ದ. ಗೀತಾ ಜಯಂತಿಯನ್ನು ಪ್ರತಿ ವರ್ಷ ಮೋಕ್ಷದ ಏಕಾದಶಿಯ ದಿನದಂದು ಆಚರಿಸಲಾಗುತ್ತದೆ.

ಗೀತಾ ಜ್ಞಾನದ ಆ ಗಂಗೆ ಅಂದರೆ, ಗೀತೆಗೆ ಅಂತ್ಯವಿಲ್ಲ. ಇಲ್ಲಿ ನಾವು ನಿಮಗಾಗಿ ಕೆಲವು ಆಯ್ದ ಗೀತಾ ಸಂದೇಶಗಳನ್ನು ತರುತ್ತೇವೆ-

ನೈನಂ ಛಿದ್ರಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ |

ನ ಚೈನಂ ಕ್ಲೇದಯನ್ತ್ಯಪೋ ನ ಶೋಷಯತಿ ಮಾರುತ ||

ಅರ್ಥ: ಆತ್ಮವನ್ನು ಆಯುಧಗಳು ಕತ್ತರಿಸಲಾರವು, ಬೆಂಕಿಯು ಸುಡಲಾರದು. ನೀರು ಅದನ್ನು ತೇವಗೊಳಿಸುವುದಿಲ್ಲ, ಗಾಳಿಯು ಅದನ್ನು ಒಣಗಿಸುವುದಿಲ್ಲ. ಅಂದರೆ ಶ್ರೀಕೃಷ್ಣನು ಈ ಶ್ಲೋಕದಲ್ಲಿ ಆತ್ಮವನ್ನು ಅಮರ ಮತ್ತು ಶಾಶ್ವತ ಎಂದು ಹೇಳುತ್ತಿದ್ದಾನೆ.

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ |

ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಾಂ ಸೃಜಾಮ್ಯಹಂ ||

ಅರ್ಥ: ಹೇ ಭರತ (ಅರ್ಜುನ), ಅಧರ್ಮವು ಹೆಚ್ಚಾದಾಗ, ನಾನು (ಶ್ರೀ ಕೃಷ್ಣ) ಧರ್ಮದ ಉನ್ನತಿಗಾಗಿ ಅವತರಿಸುತ್ತೇನೆ.

ಪರಿತ್ರಾಣಾಯ ಸಾಧೂನಾಂವಿನಾಶಾಯ ಚ ದುಷ್ಕೃತಾಂ |

ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ -ಯುಗೇ||

ಅರ್ಥ: ಸತ್ಪುರುಷರ ಕಲ್ಯಾಣಕ್ಕಾಗಿ ಮತ್ತು ದುಷ್ಟರ ನಾಶಕ್ಕಾಗಿ ಮತ್ತು ಧರ್ಮ ಸಂಸ್ಥಾಪನೆಗಾಗಿ, ನಾನು (ಶ್ರೀ ಕೃಷ್ಣ) ಯುಗಯುಗಗಳಿಂದಲೂ ಪ್ರತಿ ಯುಗದಲ್ಲಿ ಜನ್ಮ ತಳೆಯುತ್ತೇನೆ.

Gita Jayanti 2022 Date: ಗೀತಾ ಜಯಂತಿ ದಿನಾಂಕ ಮತ್ತು ಮಹತ್ವ ಏನು? ಇದು ಶ್ರೀಕೃಷ್ಣಾರ್ಜುನರಿಗೆ ಸಂಬಂಧಿಸಿದ ದಿನವೂ ಹೌದು!

Geeta Jayanti 2022: ಹಿಂದೂ ಧರ್ಮದ ಅನೇಕ ಪಠ್ಯಗಳಲ್ಲಿ ಶ್ರೀಮದ್ಭಗವದ್ಗೀತೆಗೆ ವಿಶೇಷ ಸ್ಥಾನವಿದೆ. ಇದು ಕುರುಕ್ಷೇತ್ರ ಸಂಗ್ರಾಮದಲ್ಲಿ ಅರ್ಜುನನಿಗೆ ಶ್ರೀ ಕೃಷ್ಣನು ನೀಡಿದ ಉಪದೇಶಗಳನ್ನು ವಿವರಿಸುತ್ತದೆ. ಆ ದಿನದ ವಾರ್ಷಿಕ ಆಚರಣೆ ಇದು. ದಿನ ವಿಶೇಷ, ಗೀತಾ ಜಯಂತಿಯ ಮಹತ್ವದ ವಿವರ ಇಲ್ಲಿದೆ ಕ್ಲಿಕ್ಕಿಸಿ.

Geeta Jayanti 2022: ಮನೆಯಲ್ಲಿ ಶ್ರೀಮದ್ಭಗವದ್ಗೀತೆ ಇದೆಯಾ? ಹಾಗಾದರೆ ಈ ನಿಯಮ ಪಾಲಿಸಿ, ತಪ್ಪಿದರೆ ಸಂಕಷ್ಟ ಎದುರಾದೀತು!

Geeta Jayanti 2022: ಈ ವರ್ಷ ಡಿಸೆಂಬರ್ 3 ರ ಶನಿವಾರ ಮಾರ್ಗಶೀರ್ಷ ಮಾಸದ ಶುಕ್ಲ ಪಕ್ಷದ ಮೋಕ್ಷದ ಏಕಾದಶಿಯಂದು ಗೀತಾ ಜಯಂತಿಯನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ, ಮನೆಯಲ್ಲಿ ಶ್ರೀಮದ್ಭಗವದ್ಗೀತೆಯನ್ನು ಇಡುವ ಕುರಿತಾದ ಕೆಲವು ನಿಯಮಗಳನ್ನು ಖಂಡಿತವಾಗಿ ತಿಳಿದುಕೊಳ್ಳಿ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.

Mokshda ekadashi 2022 Date: ವೈಕುಂಠ ಏಕಾದಶಿ ಶುಭ ಮುಹೂರ್ತ, ಮಹತ್ವ ಮತ್ತು ಪೂಜಾ ವಿಧಾನ

Vaikunta Ekadashi 2022 Importance: ಹಿಂದು ಧರ್ಮದಲ್ಲಿ ಏಕಾದಶಿ ಉಪವಾಸಕ್ಕೆ ಬಹಳ ಪ್ರಾಮುಖ್ಯತೆ ಇದೆ. ಇದು ಅತ್ಯಂತ ಮಂಗಳಕರ ಮತ್ತು ಫಲಪ್ರದವೆಂದು ಪರಿಗಣಿಸಲ್ಪಟ್ಟಿದೆ. ಈ ದಿನ ಉಪವಾಸ ವ್ರತ ಮಾಡಿದರೆ ಭಗವಾನ್‌ ವಿಷ್ಣು ಪ್ರಸನ್ನನಾಗುವನೆಂಬ ನಂಬಿಕೆ ಇದೆ. ಈ ದಿನದ ಮಹತ್ವ, ಪೂಜಾ ವಿಧಾನ ಮುಂತಾದ ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.