ಕನ್ನಡ ಸುದ್ದಿ  /  Astrology  /  Gita Jayanti 2022: When Is Geeta Jayanti 2022: Gita Jayanti Date And Importance Day Is Related To Bhagavan Srikishna And Arjuna

Gita Jayanti 2022 Date: ಗೀತಾ ಜಯಂತಿ ದಿನಾಂಕ ಮತ್ತು ಮಹತ್ವ ಏನು? ಇದು ಶ್ರೀಕೃಷ್ಣಾರ್ಜುನರಿಗೆ ಸಂಬಂಧಿಸಿದ ದಿನವೂ ಹೌದು!

Geeta Jayanti 2022: ಹಿಂದೂ ಧರ್ಮದ ಅನೇಕ ಪಠ್ಯಗಳಲ್ಲಿ ಶ್ರೀಮದ್ಭಗವದ್ಗೀತೆಗೆ ವಿಶೇಷ ಸ್ಥಾನವಿದೆ. ಇದು ಕುರುಕ್ಷೇತ್ರ ಸಂಗ್ರಾಮದಲ್ಲಿ ಅರ್ಜುನನಿಗೆ ಶ್ರೀ ಕೃಷ್ಣನು ನೀಡಿದ ಉಪದೇಶಗಳನ್ನು ವಿವರಿಸುತ್ತದೆ. ಆ ದಿನದ ವಾರ್ಷಿಕ ಆಚರಣೆ ಇದು. ದಿನ ವಿಶೇಷ, ಗೀತಾ ಜಯಂತಿಯ ಮಹತ್ವದ ವಿವರ ಇಲ್ಲಿದೆ.

ಗೀತೋಪದೇಶ
ಗೀತೋಪದೇಶ (Social Media)

ಹಿಂದೂ ಧರ್ಮದಲ್ಲಿ ಅನೇಕ ಪುರಾಣಗಳು, ವೇದಗಳು ಮತ್ತು ಗ್ರಂಥಗಳಿವೆ. ಆದರೆ ಶ್ರೀಮದ್ಭಗವದ್ಗೀತೆಯನ್ನು 18 ಮಹಾಪುರಾಣಗಳಲ್ಲಿ ಪ್ರಮುಖ ಎಂದು ಪರಿಗಣಿಸಲಾಗಿದೆ. ಇದು ಕರ್ಮ ಯೋಗ, ಭಕ್ತಿ ಯೋಗ ಮತ್ತು ಜ್ಞಾನ ಯೋಗವನ್ನು ಬೋಧಿಸುತ್ತದೆ. ಆದ್ದರಿಂದಲೇ ಗೀತೆಯನ್ನು ಪಠಿಸುವವನಿಗೆ ಜೀವನದ ತೊಂದರೆಗಳಿಂದ ಮುಕ್ತಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ಜಯಂತಿ ಆಚರಿಸುವ ಏಕೈಕ ಗ್ರಂಥ ಇದಾಗಿದೆ. ಶ್ರೀಮದ್ಭಾಗವತವು ಮಹಾಭಾರತದ ಒಂದು ಭಾಗ ಮಾತ್ರ.

ಕುರುಕ್ಷೇತ್ರದಲ್ಲಿ ಕೌರವರು ಮತ್ತು ಪಾಂಡವರ ನಡುವೆ ಮಹಾಭಾರತದ ಯುದ್ಧವು ನಡೆದಾಗ, ಅರ್ಜುನನು ಕೌರವರ ಸೈನ್ಯವನ್ನು ನೋಡಿ ದುಃಖಿತನಾದನು. ಆಗ ಶ್ರೀಕೃಷ್ಣನು ಅರ್ಜುನನಿಗೆ ಗೀತೆಯನ್ನು ಉಪದೇಶಿಸಿದನು. ಈ ದಿನವು ಮಾರ್ಗಶೀರ್ಷ ಮಾಸದ ಶುಕ್ಲಪಕ್ಷದ ಏಕಾದಶಿ ದಿನ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಪ್ರತಿ ವರ್ಷ ಇದೇ ದಿನಾಂಕದಂದು ಗೀತಾ ಜಯಂತಿಯನ್ನು ಆಚರಿಸಲಾಗುತ್ತದೆ.

ಗೀತಾ ಜಯಂತಿ ದಿನಾಂಕ (Geeta Jayanti 2022 Date)

ಹಿಂದೂ ಕ್ಯಾಲೆಂಡರ್ ಪ್ರಕಾರ, ಗೀತಾ ಜಯಂತಿಯು ಮಾರ್ಗಶೀರ್ಷ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನ ಆಚರಿಸಲ್ಪಡುತ್ತದೆ. ಇದು ಈ ಸಲ ಡಿಸೆಂಬರ್‌ 3 ಶನಿವಾರ ಬಂದಿದೆ. ಏಕಾದಶಿ ತಿಥಿಯು ಡಿಸೆಂಬರ್ 03 ರಂದು ಬೆಳಗ್ಗೆ 05:39 ರಿಂದ ಪ್ರಾರಂಭವಾಗಲಿದ್ದು, ಇದು ಡಿಸೆಂಬರ್ 04 ರ ಭಾನುವಾರದಂದು ಬೆಳಗ್ಗೆ 05:34 ಕ್ಕೆ ಕೊನೆಗೊಳ್ಳುತ್ತದೆ.

ಗೀತಾ ಜಯಂತಿಯ ಮಹತ್ವ (Geeta Jayanti 2022 Significance)

ಹಿಂದೂ ಧರ್ಮದಲ್ಲಿ ಗೀತಾ ಗ್ರಂಥಕ್ಕೆ ವಿಶೇಷ ಮಹತ್ವವಿದೆ. ಎಲ್ಲ ಪುಸ್ತಕಗಳ ಪೈಕಿ ಜಯಂತಿ ಆಚರಿಸುವ ಏಕೈಕ ಗ್ರಂಥ ಇದಾಗಿದೆ. ಇದಕ್ಕೆ ಕಾರಣವೆಂದರೆ ಬಹುತೇಕ ಎಲ್ಲ ಇತರ ಗ್ರಂಥಗಳನ್ನು ಋಷಿಗಳು ಬರೆದಿದ್ದಾರೆ. ಆದರೆ ಗೀತಾ ಗ್ರಂಥವು ಶ್ರೀಕೃಷ್ಣ ಪರಮಾತ್ಮನ ಬೋಧನೆಗಳನ್ನು ಒಳಗೊಂಡಿದೆ. ಇದರಲ್ಲಿ ಶ್ರೀಕೃಷ್ಣನು ಜೀವನ ಮತ್ತು ಮರಣದ ಆಳವಾದ ರಹಸ್ಯವನ್ನು ಹೇಳಿದ್ದಾನೆ. ಶ್ರೀಕೃಷ್ಣ ಪರಮಾತ್ಮನ ಬೋಧನೆಗಳಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರಗಳು ಅಡಗಿದ್ದು, ಅದನ್ನು ಒಳಗೊಂಡಿರುವ ಗ್ರಂಥ ಗೀತೆ. ಶ್ರೀಕೃಷ್ಣನ ಉಪದೇಶದಿಂದ ಅರ್ಜುನನಿಗೆ ಮಹಾಭಾರತದ ಯುದ್ಧವನ್ನು ಹೇಗೆ ಗೆಲ್ಲಲು ಸಾಧ್ಯವೋ, ಅದೇ ರೀತಿಯಲ್ಲಿ, ಗೀತಾ ಜ್ಞಾನದಿಂದ, ಒಬ್ಬ ವ್ಯಕ್ತಿಯು ಕಷ್ಟಕರ ಸಂದರ್ಭದಲ್ಲೂ ಗೆಲ್ಲಬಹುದು.