ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Weekly Horoscope: ಹೊಸ ವರ್ಷ ಕಾಲಿಡುವ ಯುಗಾದಿ ವಾರದಲ್ಲಿ ನಿಮ್ಮ ವಾರ ಭವಿಷ್ಯ ಹೇಗಿದೆ? ಆದಾಯ, ಉದ್ಯೋಗ, ಪ್ರಣಯದಲ್ಲಿ ಈ ರಾಶಿಗೆ ಮೇಲುಗೈ

Weekly Horoscope: ಹೊಸ ವರ್ಷ ಕಾಲಿಡುವ ಯುಗಾದಿ ವಾರದಲ್ಲಿ ನಿಮ್ಮ ವಾರ ಭವಿಷ್ಯ ಹೇಗಿದೆ? ಆದಾಯ, ಉದ್ಯೋಗ, ಪ್ರಣಯದಲ್ಲಿ ಈ ರಾಶಿಗೆ ಮೇಲುಗೈ

ವಾರ ಭವಿಷ್ಯ, ಏಪ್ರಿಲ್ 7 ರಿಂದ ಏಪ್ರಿಲ್ 14 ರ ಅವಧಿಯ ದ್ವಾದಶ ರಾಶಿಗಳ ಗೋಚಾರ ಫಲ: ಯುಗಾದಿ ಹಬ್ಬವು ಸನಿಹದಲ್ಲಿದೆ. ಭಾರತೀಯ ಪರಂಪರೆಯಲ್ಲಿ ಹೊಸ ವರ್ಷ ಎನಿಸಿಕೊಂಡಿರುವ ಯುಗಾದಿ ಹಬ್ಬದ ವಾರದಲ್ಲಿ ಯಾವ ರಾಶಿಯವರಿಗೆ ಏನು ಫಲ? ಇಲ್ಲಿದೆ ಉತ್ತರ (Weekly Horoscope)

ಯುಗಾದಿ ವಾರದಲ್ಲಿ ನಿಮ್ಮ ವಾರ ಭವಿಷ್ಯ ಹೇಗಿದೆ?
ಯುಗಾದಿ ವಾರದಲ್ಲಿ ನಿಮ್ಮ ವಾರ ಭವಿಷ್ಯ ಹೇಗಿದೆ?

ದ್ವಾದಶ ರಾಶಿಗಳ ಗೋಚಾರ ಫಲ: ಮನುಷ್ಯನ ಮನಸ್ಸಿನ ಮೇಲೆ ಗ್ರಹಗತಿಗಳು ಪರಿಣಾಮ ಬೀರುತ್ತವೆ. ಗ್ರಹಗಳ ಪ್ರಭಾವವು ಮನುಷ್ಯನ ನಿರ್ಧಾರಗಳನ್ನು ಪ್ರಭಾವಿಸುತ್ತವೆ ಎನ್ನುವುದು ಪರಂಪರಾಗತ ನಂಬಿಕೆ. ಬದುಕಿನಲ್ಲಿ ಸಂಭವಿಸುವ ಪ್ರತಿ ಏರಿಳಿತದ ಮೇಲೆಯೂ ಗ್ರಹಗತಿಗಳ ಪ್ರಭಾವವನ್ನು ಗುರುತಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರವನ್ನು ಅಳವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್‌.ಸತೀಶ್ ದ್ವಾದಶ ರಾಶಿಗಳ ವಾರದ ಗೋಚಾರ ಫಲಗಳನ್ನು ಇಲ್ಲಿ ಕೊಟ್ಟಿದ್ದಾರೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ಓದುಗರ ನಂಬಿಕೆಗಳನ್ನು 'ಎಚ್‌ಟಿ ಕನ್ನಡ' ಗೌರವಿಸುತ್ತದೆ.

ಮೇಷ ರಾಶಿಯ ವಾರ ಭವಿಷ್ಯ: ಹಣದ ವಿಚಾರಕ್ಕೆ ಒತ್ತಡ

ಅನವಶ್ಯಕವಾದ ಕೆಲಸ ಕಾರ್ಯಗಳನ್ನಷ್ಟೇ ಆಯ್ಕೆ ಮಾಡುವಿರಿ. ಹಣದ ವಿಚಾರದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ನೇರವಾದ ನಡೆ ನುಡಿಯಿಂದ ಯಾವುದೇ ತೊಂದರೆ ಎದುರಾಗದು. ಕುಟುಂಬದಲ್ಲಿ ಪರಸ್ಪರ ಹೊಂದಾಣಿಕೆ ಇರುತ್ತದೆ. ಸೋದರಿಯಿಂದ ಸಮಯಕ್ಕೆ ಸರಿಯಾಗಿ ಸೂಕ್ತ ಸಲಹೆ ಮತ್ತು ಸಹಾಯ ದೊರೆಯುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಸೋದರನ ದಾಂಪತ್ಯ ಜೀವನದಲ್ಲಿನ ವಿವಾದವನ್ನು ಬಗೆಹರಿಸುವಿರಿ. ಅರೋಗ್ಯದ ಬಗ್ಗೆ ಕಾಳಜಿ ಇರಲಿ. ಕುಟುಂಬದ ವಯೋವೃದ್ದರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಆತ್ಮೀಯರ ಜೊತೆಗಿನ ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಆದಾಯವಿರುತ್ತದೆ. ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಮುಂದುವರೆಯುವಿರಿ.

ವೃಷಭ ರಾಶಿಯ ವಾರ ಭವಿಷ್ಯ: ಆಶೋತ್ತರಗಳು ಈಡೇರಲಿವೆ

ವಿಶ್ರಾಂತಿಯನ್ನು ಬಯಸುವ ಕಾರಣ ಮುಖ್ಯವಾದ ಕೆಲಸಗಳ ಆಯ್ಕೆ ಮಾಡುವಿರಿ. ಏಕಾಂಗಿಯಾಗಿ ಕುಟುಂಬದ ಕೆಲಸವೊಂದನ್ನು ಪೂರ್ಣಗೊಳಿಸುವಿರಿ. ನಿಮ್ಮ ಮನದ ಆಶೋತ್ತರಗಳು ನೆರವೇರುತ್ತವೆ. ಸೋಲಿಗೆ ಕುಗ್ಗದೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ಅನಿರೀಕ್ಷಿತ ಧನಲಾಭ ಇರುತ್ತದೆ. ಮನದ ಆಶಯದಂತೆ ವಾಸಸ್ಥಳವನ್ನು ಬದಲಿಸುವಿರಿ. ಸ್ವಂತ ವ್ಯಾಪಾರ, ವ್ಯವಹಾರಗಳನ್ನು ಆರಂಭಿಸುವ ಆಸೆ ಕೈಗೂಡಲಿದೆ. ವಿದ್ಯಾರ್ಥಿಗಳು ಅಹಂಭಾವ ತೊರೆದು ಸಹಪಾಠಿಗಳ ಜೊತೆ ವ್ಯಾಸಂಗ ಮಾಡುತ್ತಾರೆ. ವ್ಯಾಪಾರ ವ್ಯವಹಾರಗಳಲ್ಲಿ ಪ್ರಯತ್ನಕ್ಕೆ ತಕ್ಕಂತೆ ಲಾಭ ದೊರೆಯುತ್ತದೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಯಾತ್ರಾಸ್ಥಳಕ್ಕೆ ಕಿರುಪ್ರವಾಸಕ್ಕೆ ತೆರಳುವಿರಿ.

ಮಿಥುನ ರಾಶಿಯ ವಾರ ಭವಿಷ್ಯ: ಕೌಟುಂಬಿಕ ಬದುಕಿನಲ್ಲಿ ಸಂತಸ

ಆತ್ಮಸ್ಥೈಯದಿಂದ ಜೀವನದ ಸಮಸ್ಯೆಗಳನ್ನು ಗೆಲ್ಲುವಿರಿ. ಆತುರದ ಮಾತುಕತೆ ಆತ್ಮೀಯರಲ್ಲಿಯೂ ಬೇಸರ ಉಂಟಾಗಬಹುದು. ಮನರಂಜನೆಯ ಆಸರೆಯಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಕುಟುಂಬದವರೊಂದಿಗೆ ಸಂತಸದಿಂದ ವಿಚಾರ ವಿನಿಮಯದಲ್ಲಿ ತೊಡಗುವಿರಿ. ಅಪರೂಪದ ಹಣಕಾಸಿನ ವ್ಯವಹಾರದಿಂದ ಲಾಭ ದೊರೆಯುತ್ತದೆ. ಉದ್ಯೋಗ ಬದಲಿಸುವ ಸೂಚನೆಗಳಿವೆ. ಆರೋಗ್ಯದಲ್ಲಿ ಚೇತರಿಕೆ ಇರುತ್ತದೆ. ಆದರೆ ಕಣ್ಣಿನ ಬಗ್ಗೆ ಎಚ್ಚರಿಕೆ ವಹಿಸಿ. ಹಣಕಾಸಿನ ವಿವಾದ ಒಂದನ್ನು ಸುಲಭವಾಗಿ ಜಯಿಸುವಿರಿ. ಸಂತಾನ ಲಾಭವಿದೆ. ಕುಟುಂಬದಲ್ಲಿ ಮಂಗಳ ಕಾರ್ಯವನ್ನು. ನಡೆಯುತ್ತದೆ. ವಿಧ್ಯಾರ್ಥಿಗಳೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುತ್ತಾರೆ.

ಕಟಕ ರಾಶಿಯ ವಾರ ಭವಿಷ್ಯ: ಮುಖ್ಯ ವಿಷಯಗಳ ತೀರ್ಮಾನ

ಕೌಟುಂಬಿಕ ಜವಾಬ್ದಾರಿಗಳು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ನಿಮ್ಮ ಆಮೂಲ್ಯ ವೇಳೆಯನ್ನು ಮಕ್ಕಳೊಂದಿಗೆ ಕಳೆಯಲು ನಿರ್ಧರಿಸುವಿರಿ. ನೆಮ್ಮದಿಯ ಜೀವನವನ್ನು ನಡೆಸುವಿರಿ. ಕುಟುಂಬದ ಪ್ರಮುಖ ವಿಚಾರಗಳು ಮತ್ತು ತೀರ್ಮಾನಗಳು ನಿಮ್ಮನ್ನು ಅವಲಂಬಿಸಿರುತ್ತದೆ. ಕುಟುಂಬದಲ್ಲಿ ಅನವಶ್ಯಕ ವಾದ-ವಿವಾದಗಳು ಎದುರಾದರೂ ಬಹುಕಾಲ ಉಳಿಯದು. ಮನದ ನೋವನ್ನು ಮರೆತು ಎಲ್ಲರೊಂದಿಗೆ ಸಂತೋಷದಿಂದ ಬಾಳುವಿರಿ. ಉದ್ಯೋಗದಲ್ಲಿ ಯಾವುದೇ ರೀತಿಯ ಹಿನ್ನಡೆ ಉಂಟಾಗುವುದಿಲ್ಲ. ವಂಶಾಧಾರಿತ ವ್ಯಾಪಾರ ವ್ಯವಹಾರವನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಆಸ್ತಿಯಲ್ಲಿಯ ವಿವಾದವು ಸಂಬಂಧಿಕರ ಮಧ್ಯಸ್ಥಿಕೆಯಿಂದ ಪರಿಹಾರವಾಗಲಿದೆ.

ಸಿಂಹ ರಾಶಿಯ ವಾರ ಭವಿಷ್ಯ: ನಿತ್ಯ ಜೀವನದಲ್ಲಿ ಮಾರ್ಪಾಡು

ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳು ಹೊಸ ಚೇತನಕ್ಕೆ ಕಾರಣವಾಗುತ್ತದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ನಿತ್ಯಜೀವನದಲ್ಲಿ ಹಲವು ಮಾರ್ಪಾಡುಗಳನ್ನು ಮಾಡುವಿರಿ. ಜನಸೇವೆ ಮಾಡುವ ಆಸೆಯು ಗಣ್ಯವ್ಯಕ್ತಿಯೊಬ್ಬರಿಂದ ಸಾಧ್ಯವಾಗಲಿದೆ. ಧಾರ್ಮಿಕ ಗುರುವೊಬ್ಬರನ್ನು ಭೇಟಿ ಮಾಡುವಿರಿ. ಸರ್ಕಾರದ ಅನುದಾನದಲ್ಲಿ ಹಣಕಾಸಿನ ಸಂಸ್ಥೆಯನ್ನು ಆರಂಭಿಸುವಿರಿ. ಬೇರೆಯವರ ಸಲಹೆಯನ್ನು ಕೇಳದೆ ಸ್ವಂತ ನಿರ್ಧಾರಕ್ಕೆ ಬದ್ದರಾಗುವಿರಿ. ಕೊಟ್ಟ ಭಾಷೆಯನ್ನು ಚಾಚೂತಪ್ಪದೆ ಅನುಸರಿಸುವಿರಿ. ಉದ್ಯೋಗದಲ್ಲಿ ಉನ್ನತ ಅಧಿಕಾರಿಗಳ ಮೆಚ್ಚುಗೆ ವ್ಯಕ್ತವಾಗುತ್ತದೆ. ಮಕ್ಕಳಿಗೆ ವಿಶೇಷ ಸೌಲಭ್ಯವನ್ನು ಒದಗಿಸುವಿರಿ. ವಿದ್ಯಾರ್ಥಿಗಳು ಸ್ನೇಹಿತರ ಜೊತೆಯಲ್ಲಿ ಸಮಾಜಸೇವೆಯಲ್ಲಿ ನಿರತರಾಗುತ್ತಾರೆ.

ಕನ್ಯಾ ರಾಶಿಯ ವಾರ ಭವಿಷ್ಯ: ವಿಶ್ರಾಂತಿ ಇಲ್ಲದ ಚಟುವಟಿಕೆ

ವಿಶ್ರಾಂತಿ ದೊರೆಯದ ಕಾರಣ ಬೇಸರದಿಂದ ದಿನ ಕಳೆಯುವಿರಿ. ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಂಡುಬರುತ್ತದೆ. ಆದರೆ ನಿರೀಕ್ಷಿತ ಫಲಿತಾಂಶಗಳಿಗಾಗಿ ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ. ಆತ್ಮೀಯರಿಂದ ಧನ ಸಹಾಯವಿರುತ್ತದೆ. ಅನವಶ್ಯಕ ಖರ್ಚುವೆಚ್ಚಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ವ್ಯಾಪಾರ ವ್ಯವಹಾರಗಳನ್ನು ಬದಲಾಯಿಸದೆ ಮುಂದುವರಿಸುವಿರಿ. ಯಾವುದೇ ಹಣಕಾಸಿನ ವ್ಯವಹಾರದಲ್ಲಿ ಭಾಗವಹಿಸದಿರಿ. ವಾರಂತ್ಯಕ್ಕೆ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಹಣ ಉಳಿಸಲು ಪ್ರಯತ್ನಿಸುವಿರಿ. ವಿದ್ಯಾರ್ಥಿಗಳು ಏಕಾಗ್ರಚಿತ್ತದಿಂದ ಅಭ್ಯಾಸದಲ್ಲಿ ತೊಡಗುತ್ತಾರೆ. ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ತೆರಳಬಹುದು.

ತುಲಾ ರಾಶಿಯ ವಾರ ಭವಿಷ್ಯ: ಉದ್ಯೋಗದಲ್ಲಿ ಉತ್ತಮ ಪ್ರತಿಕ್ರಿಯೆ

ನಿಮ್ಮ ತಪ್ಪನ್ನು ಮರೆಮಾಚಲು ಬೇರೆಯವರ ತಪ್ಪು ಎತ್ತಿ ಹಿಡಿಯುವಿರಿ. ಹಣಕಾಸಿನ ವಿಚಾರದಲ್ಲಿ ಕುಟುಂಬದವರ ವಿರೋಧವನ್ನು ಎದುರಿಸಬೇಕಾಗುತ್ತದೆ. ಅತುರದಿಂದ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವಿರಿ. ಕ್ರಮೇಣವಾಗಿ ಕುಟುಂಬದಲ್ಲಿ ಶಾಂತಿ-ನೆಮ್ಮದಿ ನೆಲೆಸಿರುತ್ತದೆ. ಉದ್ಯೋಗದಲ್ಲಿ ಉತ್ತಮ ಪ್ರತಿಕ್ರಿಯೆ ಲಭಿಸುತ್ತದೆ. ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತದೆ. ಸರ್ಕಾರದ ಅನುಮತಿಯಿಂದ ಲೆವಾದೇವಿ ವ್ಯವಹಾರವನ್ನು ಆರಂಭಿಸುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ವಿದ್ಯಾರ್ಥಿಗಳು ಉನ್ನತ ಸ್ಥಾನ ಗಳಿಸುತ್ತಾರೆ. ಮಿತಿ ಇಲ್ಲದ ಆಸೆ ಆಕಾಂಕ್ಷಿಗಳು ನಿರಾಸೆಗೆ ಕಾರಣವಾಗುತ್ತದೆ. ಪಾಲುಗಾರಿಕೆ ವ್ಯವಹಾರದಲ್ಲಿ ಉತ್ತಮ ವರಮಾನ ಇರುತ್ತದೆ.

ವೃಶ್ಚಿಕ ರಾಶಿಯ ವಾರ ಭವಿಷ್ಯ: ದೇಹಾಲಸ್ಯದ ಬಗ್ಗೆ ಇರಲಿ ಎಚ್ಚರ

ಅನುಪಯುಕ್ತ ಕೆಲಸ ಕಾರ್ಯಗಳಿಂದ ದೇಹಾಲಸ್ಯಕ್ಕೆ ಒಳಗಾಗುವಿರಿ. ಅನಾವಶ್ಯಕ ಕೋಪತಾಪಗಳು ವಿವಾದಕ್ಕೆ ಕಾರಣವಾಗುತ್ತದೆ. ಕೌಟುಂಬಿಕ ವಿಚಾರಗಳಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಉದ್ಯೋಗದಲ್ಲಿ ಪ್ರಯೋಜನಕಾರಿ ಬೆಳವಣಿಗೆಗಳು ಕಾಣಲಿವೆ. ವಿದ್ಯಾರ್ಥಿಗಳು ಹಿರಿಯರ ಆದೇಶವನ್ನು ಪಾಲಿಸುವುದು ಒಳ್ಳೆಯದು. ಉದ್ಯೋಗವನ್ನು ಬದಲಾಯಿಸುವ ಯೋಚನೆ ಮಾಡುವಿರಿ. ಸಣ್ಣ ಪ್ರಮಾಣದ ವ್ಯಾಪಾರವನ್ನು ಆರಂಭಿಸುವಿರಿ. ಮಕ್ಕಳಿಗೆ ವಿದೇಶಿ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಕುಟುಂಬದಲ್ಲಿ ಸಂತೋಷ ಸಂಭ್ರಮಗಳು ಇರಲಿವೆ. ಅನಿವಾರ್ಯವಾಗಿ ಬೇರೆಯವರಿಂದ ಹಣಕಾಸನ್ನು ಪಡೆಯುವಿರಿ. ಹೊಸ ವಾಹನ ಕೊಳ್ಳುವಿರಿ.

ಧನು ರಾಶಿಯ ವಾರ ಭವಿಷ್ಯ: ಪಿಕ್‌ನಿಕ್ ಹೊರಡಲು ರೆಡಿ ಆಗಿ

ಕುಟುಂಬದಲ್ಲಿ ನೆಮ್ಮದಿ ನೆಲೆಸಲು ಕಾರಣರಾಗುವಿರಿ. ಮನಸ್ಸಿಗೆ ಒಗ್ಗದ ಕೆಲಸಗಳನ್ನು ಮಾಡಬೇಕಾಗುತ್ತದೆ. ನಿರೀಕ್ಷಿಸಿದ ಅನುಕೂಲಗಳು ತಾವಾಗಿಯೇ ದೊರೆಯುತ್ತವೆ. ವೈಯಕ್ತಿಕ ಕೆಲಸಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸುವಿರಿ. ಹಣದ ತೊಂದರೆ ಉಂಟಾಗದು. ಉದ್ಯೋಗದಲ್ಲಿ ಆಶಾದಾಯಕ ಬೆಳವಣಿಗೆಗಳು ಕಂಡುಬರುತ್ತದೆ. ಸಹೋದ್ಯೋಗಿಗಳ ಸಹಕಾರದಿಂದ ಉನ್ನತ ಅಧಿಕಾರ ದೊರೆಯುತ್ತದೆ. ವಿದ್ಯಾರ್ಥಿಗಳು ಆಟ-ಪಾಠಗಳ ನಡುವೆ ಅಂತರ ಕಾಯ್ದುಕೊಳ್ಳಲ್ಲಿದ್ದಾರೆ. ಪುಟ್ಟ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಮನದ ಬೇಸರ ಹೋಗಲಾಡಿಸಲು ಕಿರು ಪ್ರವಾಸ ಕೈಗೊಳ್ಳುವಿರಿ.

ಮಕರ ರಾಶಿಯ ವಾರ ಭವಿಷ್ಯ: ಸೋದರಮಾವನಿಂದ ಹಣ ಸಹಾಯ

ನೀವು ತೆಗೆದುಕೊಳ್ಳುವ ಆತುರದ ತೀರ್ಮಾನಗಳು ತೊಂದರೆಗೆ ಕಾರಣವಾಗುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ಕೆಲಸದ ಹೊರೆ ಹೆಚ್ಚುತ್ತದೆ. ಕುಟುಂಬದ ಜವಾಬ್ದಾರಿಯೂ ನಿಮ್ಮದಾಗುತ್ತದೆ. ವಿಶ್ರಾಂತಿ ಇಲ್ಲದ ಕೆಲಸ ಕಾರ್ಯಗಳಿಂದ ಆರೋಗ್ಯದಲ್ಲಿ ತೊಂದರೆ ಉಂಟಾಗಲಿದೆ. ಆತ್ಮೀಯರಿಗೆ ಕಷ್ಟದ ಸಂದರ್ಭದಲ್ಲಿ ನೀಡಿದ ಹಣವು ಮರಳಿ ಕೈ ಸೇರುವುದು. ಮನೆಗೆ ಬೇಕಾದ ಅಲಂಕಾರದ ಪದಾರ್ಥಗಳನ್ನು ಕೊಳ್ಳುವಿರಿ. ನಿತ್ಯದ ಜೀವನಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡುವಿರಿ. ಕುಟುಂಬದಲ್ಲಿ ಪರಸ್ಪರ ಪ್ರೀತಿ ವಿಶ್ವಾಸಗಳು ಇರಲಿವೆ. ಸೋದರ ಮಾವನಿಂದ ಹಣದ ಸಹಾಯ ದೊರೆಯುತ್ತದೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ.

ಕುಂಭ ರಾಶಿಯವರ ವಾರ ಭವಿಷ್ಯ: ಹೊಟ್ಟೆ ನೋವು ಬಾಧಿಸೀತು ಎಚ್ಚರ

ಮನದಲ್ಲಿ ಮುಚ್ಚಿಟ್ಟಿದ್ದ ನೋವನ್ನು ಕುಟುಂಬದ ಸದಸ್ಯರಲ್ಲಿ ಹಂಚಿಕೊಳ್ಳುವಿರಿ. ಅತಿ ಮುಖ್ಯವಾದ ವಿಚಾರಕ್ಕಾಗಿ ಪರಸ್ಥಳಕ್ಕೆ ತೆರಳಬೇಕಾಗುತ್ತದೆ. ಉದರ ಸಂಬಂಧಿತ ದೋಷದಿಂದ ಬಳಲುವಿರಿ. ಉದ್ಯೋಗದಲ್ಲಿ ನಿರೀಕ್ಷೆ ಮೀರಿದ ಪ್ರಗತಿ ಉಂಟಾಗುತ್ತದೆ. ಮಕ್ಕಳ ಕಣ್ಣಿಗೆ ಪೆಟ್ಟಾಗಬಹುದು. ವಾಹನ ಚಾಲನೆ ಮಾಡುವ ವೇಳೆ ಕೈಕಾಲುಗಳಿಗೆ ಪೆಟ್ಟಾಗಬಹುದು. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನದಿಂದ ಗುರಿ ಸಾಧಿಸುವಿರಿ. ಕುಟುಂಬದ ವಿವಾದಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ. ವ್ಯಾಪಾರ ವ್ಯವಹಾರಗಳು ಸುಗಮವಾಗಿ ನಡೆಯಲಿದೆ. ನಿಮ್ಮ ನಿರೀಕ್ಷೆಯಂತೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ಹೊಸ ಭೂಮಿಯನ್ನು ಕೊಳ್ಳುವಿರಿ.

ಮೀನ ರಾಶಿಯವರ ವಾರ ಭವಿಷ್ಯ: ಕೌಟುಂಬಿಕ ಸಮಸ್ಯೆ ನಿವಾರಣೆ

ಬುದ್ಧಿವಂತಿಕೆಯ ಮಾತಿನಿಂದ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಒಪ್ಪಂದದ ಮೂಲಕ ಕುಟುಂಬದ ಸಮಸ್ಯೆಯು ನಿವಾರಣೆಯಾಗುತ್ತವೆ. ಹೆಚ್ಚಿನ ಪರಿಶ್ರಮವಿಲ್ಲದ ಕೆಲಸಗಳನ್ನು ಮಾಡಲು ಮುಂದಾಗುವಿರಿ. ಹಣಕಾಸಿನ ಜವಾಬ್ದಾರಿಯನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಮನೆಯ ಸುತ್ತಮುತ್ತಲಿನ ಅಂದವನ್ನು ಕಾಪಾಡಲು ಹಣವನ್ನು ಖರ್ಚು ಮಾಡುವಿರಿ. ಉದ್ಯೋಗದಲ್ಲಿ ಅಧಿಕಾರಿಗಳ ಜೊತೆ ವಾದ-ವಿವಾದಗಳು ಇರುತ್ತದೆ. ಉದ್ಯೋಗವನ್ನು ಬದಲಿಸುವಿರಿ. ಕಷ್ಟದಲ್ಲಿದ್ದವರಿಗೆ ಹಣದ ಸಹಾಯ ಮಾಡುವಿರಿ. ರಾಜಕೀಯ ಪ್ರವೇಶಿಸುವ ಆಸೆ ಮೂಡಲಿದೆ. ಗಣ್ಯ ವ್ಯಕ್ತಿ ಒಬ್ಬರ ಸಹಾಯ ಸಹಕಾರ ದೊರೆಯಲಿದೆ. ಮೂಗು ಅಥವಾ ಗಂಟಲಿನ ತೊಂದರೆ ಕಾಡಲಿದೆ.

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).