ಯುಗಾದಿ ಪಂಚಾಂಗ 2024; ಏಪ್ರಿಲ್ 09ರ ದಿನ ವಿಶೇಷ, ತಿಥಿ, ಯೋಗ, ಕರಣ, ಮುಹೂರ್ತ, ಇತರ ಧಾರ್ಮಿಕ ವಿವರ
Yugadi Panchanga: ಯುಗದ ಆದಿ ಯುಗಾದಿ. ಅಂದರೆ ಹೊಸ ವರ್ಷ ಶುರುವಾಗುವ ದಿನ. ಈ ವರ್ಷ ಯುಗಾದಿ ಏಪ್ರಿಲ್ 9ಕ್ಕೆ. ಚೈತ್ರ ಮಾಸದ ಮೊದಲ ದಿನವೆ ಹಿಂದು ಕ್ಯಾಲೆಂಡರ್ ಪ್ರಕಾರ ಹೊಸವರ್ಷದ ಮೊದಲ ದಿನ. ಈ ಸಲ ಮಂಗಳವಾರ ಹಿಂದುಗಳ ಹೊಸ ವರ್ಷ ಶುರುವಾಗುತ್ತಿದೆ. ಯುಗಾದಿ ದಿನದ (ಏಪ್ರಿಲ್ 9ರ) ನಿತ್ಯಪಂಚಾಂಗ, ದಿನ ವಿಶೇಷ, ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ.
ಚಾಂದ್ರಮಾನ ಪದ್ಧತಿ ಪ್ರಕಾರ ಹೊಸ ವರ್ಷ ಶುರುವಾಗುವುದು ಯುಗಾದಿಯಂದು. ಅಂದರೆ ಈ ಬಾರಿ ಶ್ರೀ ಶೋಭನ್ನಾಮ ಸಂವತ್ಸರ ಮುಕ್ತಾಯವಾಗಿ ಶ್ರೀಕ್ರೋಧಿನಾಮ ಸಂವತ್ಸರ ಶುರುವಾಗುವುದು ಏಪ್ರಿಲ್ 9ರಂದು. ಅಂದೇ ಯುಗಾದಿ- ಯುಗದ ಆದಿ. ಪಂಚಾಂಗ ಗಮನಿಸುವಾಗ ಹಿಂದು ಕ್ಯಾಲೆಂಡರ್ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದೆ. ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಏಪ್ರಿಲ್ 9 ಎಂಬುದು ಚೈತ್ರಮಾಸ, ಶುಕ್ಲ ಪಕ್ಷದ ಮೊದಲ ದಿನ. ಇದರ ನಿತ್ಯ ಪಂಚಾಂಗ, ದಿನ ವಿಶೇಷ ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ ಹೀಗಿದೆ.
ಯುಗಾದಿಗೆ ಸಂಬಂಧಿಸಿದ ಚೈತ್ರ ಮಾಸ ಶುಕ್ಲ ಪಕ್ಷದ ಪ್ರತಿಪದ ತಿಥಿ ಆರಂಭವಾಗುವುದು ಏಪ್ರಿಲ್ 08 ಮಧ್ಯಾಹ್ನ ನಂತರ 03:20ಕ್ಕೆ. ಅದೇ ರೀತಿ ಪ್ರತಿಪದ ತಿಥಿ ಅಂತ್ಯವಾಗುವುದು ಏಪ್ರಿಲ್ 09 ಮಧ್ಯಾಹ್ನ 12:00 ಗಂಟೆಗೆ.
ಯುಗಾದಿ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರದ ಯುಗಾದಿ ಪಂಚಾಂಗ
ದಿನಾಂಕ: ಏಪ್ರಿಲ್ 9, 2024
ಸೂರ್ಯೋದಯ (ಬೆಂಗಳೂರು): ಬೆಳಿಗ್ಗೆ 6:11
ಸೂರ್ಯಾಸ್ತ: ಸಂಜೆ 6:32
ಸಂವತ್ಸರ: ಶ್ರೀ ಕ್ರೋಧಿನಾಮ ಸಂವತ್ಸರ
ಅಯನ: ಉತ್ತರಾಯಣ
ಋತು: ವಸಂತ ಋತು
ಮಾಸ: ಚೈತ್ರ ಮಾಸ
ಪಕ್ಷ: ಶುಕ್ಲ ಪಕ್ಷ
ತಿಥಿ: ಪಾಡ್ಯ (ರಾತ್ರಿ 9.55 ರವರೆಗೆ)
ವಾರ: ಮಂಗಳವಾರ
ತಿಥಿ: ಪಾಡ್ಯ,
ನಕ್ಷತ್ರ: ರೇವತಿ (ಸಂಜೆ 4.58 ರವರೆಗೆ)
ಯೋಗ: ಕಿಂಸ್ತು ಬೆಳಿಗ್ಗೆ 11.19 ಗಂಟೆಯವರೆಗೆ
ಕರಣಂ: ರಾತ್ರಿ 9.55 ರವರೆಗೆ ಬಾವ
ಅಮೃತ ಕಾಲ: ಮಧ್ಯಾಹ್ನ 1.42 ರಿಂದ 3.44
ರಾಹುಕಾಲ: ಮಧ್ಯಾಹ್ನ 3:25 ರಿಂದ 4.57 ರವರೆಗೆ
ಯಮಗಂಡ ಕಾಲ: ಬೆಳಿಗ್ಗೆ 9 ರಿಂದ 10.30
ತಾರಾಬಲ: ಅಶ್ವಿನಿ, ಭರಣಿ, ರೋಹಿಣಿ, ಆರ್ದ್ರ, ಪುಷ್ಯ, ಆಶ್ಲೇಷ, ಮಾಘಾ, ಪೂರ್ವ ಫಾಲ್ಗುಣಿ, ಹಸ್ತ, ಸ್ವಾತಿ, ಅನುರಾಧ, ಜ್ಯೇಷ್ಠ, ಮೂಲ, ಪೂರ್ವಾಷಾಡ, ಶ್ರಾವಣ, ಶತಭಿಷ, ಉತ್ತರಭಾದ್ರಪದ, ರೇವತಿ
ಚಂದ್ರಬಲ - ವೃಷಭ, ಮಿಥುನ, ಕನ್ಯಾ, ತುಲಾ, ಮಕರ, ಮೀನ
ಶುಭವಾಗಲಿ, ಶುಭದಿನ
----------------------------------------------------------------
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.