ಕನ್ನಡ ಸುದ್ದಿ  /  ಮನರಂಜನೆ  /  ಇದು ಸೆಲೆಬ್ರಿಟಿ ಮಕ್ಕಳ ಡೇಟಿಂಗ್‌ ವಿಷ್ಯ; ಅಕ್ಷಯ್‌ ಕುಮಾರ್‌ ಮಗ ಅರವ್‌, ಕಾಜೋಲ್‌ ಮಗಳು ನೈಸಾ ಲಂಡನ್‌ನಲ್ಲಿ ಸಖತ್‌ ಮಸ್ತಿ

ಇದು ಸೆಲೆಬ್ರಿಟಿ ಮಕ್ಕಳ ಡೇಟಿಂಗ್‌ ವಿಷ್ಯ; ಅಕ್ಷಯ್‌ ಕುಮಾರ್‌ ಮಗ ಅರವ್‌, ಕಾಜೋಲ್‌ ಮಗಳು ನೈಸಾ ಲಂಡನ್‌ನಲ್ಲಿ ಸಖತ್‌ ಮಸ್ತಿ

ಅಜಯ್ ದೇವಗನ್ ಮತ್ತು ಕಾಜೋಲ್ ಮಗಳು ನೈಸಾ ದೇವಗನ್ ಲಂಡನ್‌ನಲ್ಲಿ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಅವರ ಮಗ ಆರವ್ ಜತೆ ಸುತ್ತಾಡುವ ವಿಷಯ ಈಗ ಗುಟ್ಟಾಗಿ ಉಳಿದಿಲ್ಲ. ಲಂಡನ್‌ನಲ್ಲಿ ಇವರಿಬ್ಬರು ಪಾರ್ಟಿ ಮಾಡುತ್ತಿರುವ ಫೋಟೋವನ್ನು ಬಾಲಿವುಡ್‌ ನಟಿ ನಟರ ಗೆಳೆಯ ಓರಿ ಹಂಚಿಕೊಂಡಿದ್ದಾರೆ.

ಅಕ್ಷಯ್‌ ಕುಮಾರ್‌ ಮಗ ಅರವ್‌, ಕಾಜೋಲ್‌ ಮಗಳು ನೈಸಾ
ಅಕ್ಷಯ್‌ ಕುಮಾರ್‌ ಮಗ ಅರವ್‌, ಕಾಜೋಲ್‌ ಮಗಳು ನೈಸಾ

ಬೆಂಗಳೂರು: ಕಾಜೋಲ್ ಮತ್ತು ಅಜಯ್ ದೇವಗನ್ ಅವರ ಮಗಳು ನೈಸಾ ದೇವಗನ್ ಜತೆಗೆ ಓರಿ ಅವಾತ್ರಮಣಿ ಫೋಟೋ ತೆಗೆಸಿಕೊಂಡಿದ್ದು, ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇವರಿಬ್ಬರ ಜತೆ ಅಕ್ಷಯ್‌ ಕುಮಾರ್‌ ಮತ್ತು ಟ್ವಿಂಕಲ್‌ ಖನ್ನಾ ಅವರ ಮಗ ಆರವ್‌ ಕೂಡ ಇದ್ದಾನೆ. ಲಂಡನ್‌ ಪಾರ್ಟಿಯ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದೇ ಸಮಯದಲ್ಲಿ ಅಜಯ್ ದೇವಗನ್ ಮತ್ತು ಕಾಜೋಲ್ ಮಗಳು ನೈಸಾ ದೇವಗನ್ ಲಂಡನ್‌ನಲ್ಲಿ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಅವರ ಮಗ ಆರವ್ ಡೇಟಿಂಗ್‌ ವಿಷಯವೂ ಚರ್ಚೆಗೆ ಒಳಗಾಗಿದೆ.

ಟ್ರೆಂಡಿಂಗ್​ ಸುದ್ದಿ

"ಕಳೆದ ರಾತ್ರಿ ಡಿನ್ನರ್‌ನ ಮೋಜಿನ ಸಮಯ" ಎಂದು ಈ ಫೋಟೋಗಳಿಗೆ ಓರಿ ಕ್ಯಾಪ್ಷನ್‌ ನೀಡಿದ್ದಾರೆ. ನೈಸಾ, ಆರವ್ ಮತ್ತು ಓರಿ ಒಟ್ಟಿಗೆ ಪೋಸ್ ನೀಡುತ್ತಿರುವ ಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ನೈಸಾ ಡೆನಿಮ್‌ ಬಾಟಮ್‌ ಜತೆ ಬೂದು ಬಣ್ಣದ ಟಾಪ್‌ ಧರಿಸಿದ್ದಾರೆ. ಆರವ್‌ ನೀಲಿ ಜೀನ್ಸ್‌ ಮತ್ತು ಕಪ್ಪು ಟೀಶರ್ಟ್‌ ಧರಿಸಿದ್ದರು. ಪಾರ್ಟಿ ಜೋರಾಗಿಯೇ ಇತ್ತು ಎನ್ನುವುದಕ್ಕೆ ಸಾಕ್ಷಿಯಾಗಿ ಇವರ ಕೈಯಲ್ಲಿ ಗ್ಲಾಸ್‌ ಇತ್ತು.

ನೈಸಾ ದೇವಗನ್‌ ಮತ್ತು ಆರವ್‌ ಇಬ್ಬರು ಒಳ್ಳೆಯ ಫ್ರೆಂಡ್ಸ್.‌ ಇವರಿಬ್ಬರು ಒಟ್ಟಾಗಿ ಕಾಣಿಸಿಕೊಂಡಾಗ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದರು. ಇವರಿಬ್ಬರ ಹೆತ್ತವರು ಜನಪ್ರಿಯ ಸೆಲೆಬ್ರಿಟಿಗಳಾಗಿರುವುದರಿಂದ ಅವರ ಹಿಂದೆ ಮಾಧ್ಯಮಗಳು, ಸೋಷಿಯಲ್‌ ಮೀಡಿಯಾಗಳು ಕಣ್ಣಿಟ್ಟಿವೆ. ಸೆಲೆಬ್ರಿಟಿ ಮಕ್ಕಳ ಡೇಟಿಂಗ್‌ ಎಂದು ಸುದ್ದಿ ಮಾಡುತ್ತಿವೆ. ಇವರಿಬ್ಬರು ವಿದೇಶಗಳಲ್ಲಿ ಓದಿರುವುದರಿಂದ ಲಂಡನ್‌ನಲ್ಲಿ ಪಾರ್ಟಿ ಮಾಡುವುದರಲ್ಲಿ ವಿಶೇಷವಿಲ್ಲ. ಕಾಜೋಲ್ ಮತ್ತು ಅಜಯ್ ದೇವಗನ್ ಅವರ ಮುದ್ದಿನ ಮಗಳಾದ ನೈಸಾಳಿಗೆ ಕಿರಿಯ ಸಹೋದರನೂ ಇದ್ದಾನೆ. ಅಂದಹಾಗೆ ನೈಸಾ ದೇವಗನ್‌ಗೆ ಈಗ 20 ವರ್ಷ ವಯಸ್ಸು.

ಬಾಲಿವುಡ್‌ನ ಸ್ಟಾರ್‌ ಕಿಡ್‌ಗಳು ಈಗಾಗಲೇ ಡೇಟಿಂಗ್‌ನಲ್ಲಿದ್ದಾರೆ. ಸುಹಾನ ಖಾನ್‌ ಅವರು ಅಹನ್‌ ಪಾಂಡೆ ಜತೆ ಡೇಟಿಂಗ್‌ನಲ್ಲಿರುವುದು ಸುದ್ದಿಯಾಗಿತ್ತು. ಹರ್ಷವರ್ಧನ್‌ ಕಪೂರ್‌ ಸಪ್ನಾ ಪನ್ನಿ ಜತೆ ಡೇಟಿಂಗ್‌ನಲ್ಲಿದ್ದರು. ಕೃಷ್ಣ ಶ್ರಾಫ್‌ ಅವರು ಸ್ಪೆನ್ಸರ್‌ ಜಾನ್ಸನ್‌ ಜತೆ ಡೇಟಿಂಗ್‌ನಲ್ಲಿದ್ದರು. ಈಕೆ ಬ್ರೆಜಿಲಿಯನ್‌ ಬಾಸ್ಕೆಟ್‌ಬಾಲ್‌ ಪ್ಲೇಯರ್‌. ಬಳಿಕ ಇವರು ಬ್ರೇಕಪ್‌ ಆಗಿದ್ದರು. ಅಮಿತಾಬ್‌ ಬಚ್ಚನ್‌ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ಶಾರೂಖ್‌ ಖಾನ್‌ ಮಗ ಆರ್ಯನ್‌ ಖಾನ್‌ ಜತೆ ಡೇಟಿಂಗ್‌ನಲ್ಲಿದ್ದರು. ಬಳಿಕ ಜಾವೇದ್‌ ಜೆಫ್ರಿ ಮಗ ಮಿಯಾನ್‌ ಜೆಫ್ರಿ ಜತೆ ಸಂಬಂಧದಲ್ಲಿದ್ದಾರೆ ಎಂದು ವರದಿಯಾಗಿತ್ತು. ಅಮಿರ್‌ ಖಾನ್‌ ಮಗಳು ಇರಾ ಖಾನ್‌ಗೂ ಸಂಗೀತ ನಿರ್ದೇಶಕ ಮತ್ತು ಗಾಯಕ ಮಿಶಾಲ್‌ ಕೃಪಲಾನಿ ಜತೆ ಸಂಬಂಧ ಇದೆ ಎನ್ನುವುದು ವರದಿಯಾಗಿತ್ತು.

ಅಂದಹಾಗೆ ಅಕ್ಷಯ್‌ ಕುಮಾರ್‌ ಮೇಲೆ ಕಾಜೋಲ್‌ಗೂ ಕ್ರಶ್‌ ಇತ್ತಂತೆ. 2020ರಲ್ಲಿ ದಿ ಕಪಿಲ್‌ ಶರ್ಮಾ ಶೋನಲ್ಲಿ ನಿರ್ದೇಶಕರೊಬ್ಬರು ಈ ಕ್ರಶ್‌ ಕುರಿತಾದ ಘಟನೆಯನ್ನು ತಿಳಿಸಿದ್ದರು. "ಅಭಿ ಬೋಲ್‌ ಸಕ್ತೆ ಹೈ ಪ್ರೀಮಿಯರ್‌ ಸಂದರ್ಭ ಕಾಜೋಲ್‌ ಅಕ್ಷರ್‌ ಕುಮಾರ್‌ ಅವರನ್ನು ಹುಡುಕುತ್ತಿದ್ದರು. ಅವರನ್ನು ಹುಡುಕಲು ನಾನು ಸಹಾಯ ಮಾಡಿದ್ದೆ" ಎಂದು ಹೇಳಿದ್ದರು. ಕಾಜೋಲ್‌ಗೆ ಅಕ್ಷಯ್‌ ಕುಮಾರ್‌ ಮೇಲೆ ಇರುವ ಕ್ರಶ್‌ ಕುರಿತು ಈಗಾಗಲೇ ಹಲವು ವರದಿಗಳು ಬಂದಿವೆ.

IPL_Entry_Point