ಕನ್ನಡ ಸುದ್ದಿ  /  ಕ್ರಿಕೆಟ್  /  ಎಂಎಸ್ ಧೋನಿ ಬದಲು ಬೌಲರ್​ಗೆ ಅವಕಾಶ ನೀಡಿ; ಕ್ರಿಕೆಟ್ ತ್ಯಜಿಸಿ ಎಂದು ಮಾಹಿ ವಿರುದ್ಧ ಗುಡುಗಿದ ಹರ್ಭಜನ್ ಸಿಂಗ್

ಎಂಎಸ್ ಧೋನಿ ಬದಲು ಬೌಲರ್​ಗೆ ಅವಕಾಶ ನೀಡಿ; ಕ್ರಿಕೆಟ್ ತ್ಯಜಿಸಿ ಎಂದು ಮಾಹಿ ವಿರುದ್ಧ ಗುಡುಗಿದ ಹರ್ಭಜನ್ ಸಿಂಗ್

Harbhajan Singh : ಪಂಜಾಬ್ ಕಿಂಗ್ಸ್ ವಿರುದ್ಧ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎಂಎಸ್ ಧೋನಿ ವಿರುದ್ಧ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಕಿಡಿಕಾರಿದ್ದಾರೆ.

ಎಂಎಸ್ ಧೋನಿ ಬದಲಿಗೆ ಒಬ್ಬ ಬೌಲರ್​ಗೆ ಅವಕಾಶ ನೀಡಿ; 9ನೇ ಸ್ಥಾನದಲ್ಲಿ ಆಡಲಿಳಿದ ಮಾಹಿ ವಿರುದ್ಧ ಹರ್ಭಜನ್ ಸಿಂಗ್ ಗರಂ
ಎಂಎಸ್ ಧೋನಿ ಬದಲಿಗೆ ಒಬ್ಬ ಬೌಲರ್​ಗೆ ಅವಕಾಶ ನೀಡಿ; 9ನೇ ಸ್ಥಾನದಲ್ಲಿ ಆಡಲಿಳಿದ ಮಾಹಿ ವಿರುದ್ಧ ಹರ್ಭಜನ್ ಸಿಂಗ್ ಗರಂ

ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK vs PBKS), ಐಪಿಎಲ್ 2024ರ (IPL 2024) 53ನೇ ಪಂದ್ಯದ ಸಂದರ್ಭದಲ್ಲಿ ಎಂಎಸ್ ಧೋನಿ (MS Dhoni) 9ನೇ ಸ್ಥಾನದಲ್ಲಿ ಬ್ಯಾಟಿಂಗ್ ನಡೆಸಿದ್ದು ಇಡೀ ಕ್ರಿಕೆಟ್ ಜಗತ್ತು ಆಶ್ಚರ್ಯಚಕಿತವಾಯಿತು. ಧೋನಿ ಟಿ20 ವೃತ್ತಿಜೀವನದಲ್ಲಿ ಈ ಸ್ಥಾನದಲ್ಲಿ ಬ್ಯಾಟಿಂಗ್‌ ನಡೆಸಿದ್ದು ಇದೇ ಮೊದಲು. ಈ ಪಂದ್ಯದಲ್ಲಿ ಮಿಚೆಲ್ ಸ್ಯಾಂಟ್ನರ್-ಶಾರ್ದೂಲ್ ಠಾಕೂರ್ ಅವರು ಧೋನಿಗಿಂತ ಮೊದಲು ಬ್ಯಾಟಿಂಗ್​ ನಡೆಸಿದ್ದರು ಇವರ ನಂತರ ಮಾಹಿ ಬ್ಯಾಟಿಂಗ್ ನಡೆಸಿದ್ದು ಅಚ್ಚರಿ ಮೂಡಿಸಿತ್ತು. ಆದರೆ ಎದುರಿಸಿದ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್ ಆದರು.

ಟ್ರೆಂಡಿಂಗ್​ ಸುದ್ದಿ

ಮಹೇಂದ್ರ ಸಿಂಗ್ ಧೋನಿ ಆಟವನ್ನು ಕಣ್ತುಂಬಿಕೊಳ್ಳಬೇಕೆಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ, ಧೋನಿ 9ನೇ ಸ್ಥಾನದಲ್ಲಿ ಕಣಕ್ಕಿಳಿದರೂ ವೇಗಿ ಹರ್ಷಲ್ ಪಟೇಲ್ ಅವರ ಲೋ ಯಾರ್ಕರ್​ಗೆ ಕ್ಲೀನ್ ಬೋಲ್ಡ್​ ಆದರು. ಇದರೊಂದಿಗೆ ಗೋಲ್ಡನ್ ಡಕ್​ಗೆ ಬಲಿಯಾದರು. ಆದರೆ, ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಮಾಹಿ ನಿರ್ಧಾರದಿಂದ ಕೋಪಗೊಂಡಿದ್ದು, ಕ್ರಿಕೆಟ್ ತ್ಯಜಿಸುವಂತೆ ಸಲಹೆ ನೀಡಿದ್ದಾರೆ. 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದಾದರೆ ಧೋನಿ ಬೌಲಿಂಗ್ ಮಾಡಲಿ ಎಂದು ಭಜ್ಜಿ ಟೀಕಿಸಿದ್ದಾರೆ.

ಧೋನಿ ಬದಲಿಗೆ ಬೌಲರ್​​ಗೆ ಅವಕಾಶ ಕೊಡಿ ಎಂದ ಹರ್ಭಜನ್ ಸಿಂಗ್

ಹರ್ಭಜನ್ ಸಿಂಗ್ ಸ್ಟಾರ್ ಸ್ಪೋರ್ಟ್ಸ್‌ ಜೊತೆ ಮಾತನಾಡಿದ್ದು, ಎಂಎಸ್ ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಯಸಿದರೆ, ಅವರು ಪ್ಲೇಯಿಂಗ್​ ಇಲೆವೆನ್​​ನಲ್ಲಿ ಆಡಲೇಬಾರದು. ಬದಲಿಗೆ ಒಬ್ಬ ವೇಗದ ಬೌಲರ್ ಅನ್ನು ಪ್ಲೇಯಿಂಗ್ ಹನ್ನೊಂದರಲ್ಲಿ ಸೇರಿಸುವುದು ಉತ್ತಮ. ಪ್ರತಿಯೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವ ಅವರೇ ಈ ರೀತಿ ಪಂಜಾಬ್ ಕಿಂಗ್ಸ್ ವಿರುದ್ಧ ಒಂಬತ್ತನೇ ಕ್ರಮಾಂಕದಲ್ಲಿ ಕಣಕ್ಕಿಳಿದು ತಂಡದ ಹಿನ್ನಡೆಗೆ ಕಾರಣರಾಗಿದ್ದೀರಿ. ಧೋನಿ ಈ ತಪ್ಪು ಮಾಡಿದ್ದೇಕೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಹರ್ಭಜನ್ ಕಿಡಿಕಾರಿದ್ದಾರೆ.

ಧೋನಿಗೆ ಕಾಲ್ ಮಾಡಿ ವಿವರ ಕೇಳುತ್ತೇನೆಂದ ಭಜ್ಜಿ

ಧೋನಿ ಅವರನ್ನು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಳುಹಿಸುವ ನಿರ್ಧಾರ ಬೇರೆಯವರು ತೆಗೆದುಕೊಂಡಿದ್ದಾರೆ ಎಂದು ನಾನು ನಂಬಲು ಸಿದ್ಧನಿಲ್ಲ. ಸಿಎಸ್​​ಕೆ ವೇಗವಾಗಿ ರನ್ ಗಳಿಸುವ ಅಗತ್ಯವಿತ್ತು. ಹಿಂದಿನ ಪಂದ್ಯಗಳಲ್ಲಿ ಧೋನಿ ತಮ್ಮ ಕೆಲಸ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಬೇರೆ ತಂಡಗಳ ಎದುರು ಕಣಕ್ಕಿಳಿದಂತೆ ಪಂಜಾಬ್ ವಿರುದ್ಧದ ಬ್ಯಾಟಿಂಗ್‌ಗೆ ಇಳಿಯದಿರುವುದು ಆಶ್ಚರ್ಯಕರವಾಗಿದೆ. ಸಿಎಸ್​ಕೆ ಗೆದ್ದರೂ, ಧೋನಿಯನ್ನು ಇನ್ನೂ ಟೀಕಿಸುತ್ತೇನೆ. ಧೋನಿ ಮಾಡಿದ್ದು ಸರಿಯಿಲ್ಲ ಎಂದಿದ್ದಾರೆ.

ಮಾಹಿಗಿಂತ ಶಾರ್ದೂಲ್ ಠಾಕೂರ್ ಮೊದಲು ಬ್ಯಾಟಿಂಗ್ ನಡೆಸಿದರು. ಆದರೆ, ಧೋನಿಯಂತೆ ಬಿಟ್​ ಹಿಟ್ ಮಾಡುವ ಸಾಮರ್ಥ್ಯ ಶಾರ್ದೂಲ್​ಗಿಲ್ಲ. ಅವರ ನಿರ್ಧಾರ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಏಕೆ ಹೀಗೆ ಮಾಡಿದರು? ಇದರ ಅರ್ಥವೇನು? ಎಂಬುದೇ ನನಗೆ ತಿಳಿಯುತ್ತಿಲ್ಲ. ಅಭಿಮಾನಿಗಳಿಗೂ ಅಚ್ಚರಿ ತಂದಿದೆ. ನಿಜವಾಗಲೂ ನಾನು ಧೋನಿಗೆ ಕಾಲ್ ಮಾಡಿ ವಿವರ ತಿಳಿದುಕೊಳ್ಳುತ್ತೇನೆ ಎಂದು ಮಾಜಿ ಕ್ರಿಕೆಟಿಗ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಆಡಿರುವ 11 ಪಂದ್ಯಗಳಲ್ಲಿ 7 ಬಾರಿ ಬ್ಯಾಟಿಂಗ್ ಮಾಡಿರುವ ಧೋನಿ, ಈ ಐಪಿಎಲ್​ನಲ್ಲಿ ಇದೇ ಮೊದಲ ಬಾರಿಗೆ ಡಕೌಟ್ ಆಗಿದ್ದಾರೆ. ಒಟ್ಟಾರೆ ಎರಡನೇ ಬಾರಿಗೆ ಔಟ್ ಆಗಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 28 ರನ್‌ಗಳಿಂದ ಗೆದ್ದು ಬೀಗಿತು. ಈ ಗೆಲುವಿನ ಲಾಭವನ್ನು ಪಡೆದ ತಂಡ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಟಾಪ್-4 ತಲುಪಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ತಂಡದ ಈ ಗೆಲುವಿನ ಹೀರೋ ಆದರು. ಅವರ ಆಲ್‌ರೌಂಡ್ ಪ್ರದರ್ಶನಕ್ಕಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು.

IPL_Entry_Point