ಕನ್ನಡ ಸುದ್ದಿ  /  ಕ್ರಿಕೆಟ್  /  ಡೆಲ್ಲಿ ಕ್ಯಾಪಿಟಲ್ಸ್‌ Vs ರಾಜಸ್ಥಾನ್‌ ರಾಯಲ್ಸ್‌; ಸಂಭಾವ್ಯ ಆಡುವ ಬಳಗ, ದೆಹಲಿ ಹವಾಮಾನ ಹಾಗೂ ಪಿಚ್‌ ವರದಿ

ಡೆಲ್ಲಿ ಕ್ಯಾಪಿಟಲ್ಸ್‌ vs ರಾಜಸ್ಥಾನ್‌ ರಾಯಲ್ಸ್‌; ಸಂಭಾವ್ಯ ಆಡುವ ಬಳಗ, ದೆಹಲಿ ಹವಾಮಾನ ಹಾಗೂ ಪಿಚ್‌ ವರದಿ

ಪ್ರಚಂಡ ಫಾರ್ಮ್‌ನಲ್ಲಿರುವ ರಾಜಸ್ಥಾನ್‌ ರಾಯಲ್ಸ್‌ ತಂಡವು ಐಪಿಎಲ್‌ 2024ರ ಪ್ಲೇ ಆಫ್‌ಗೆ ಲಗ್ಗೆ ಹಾಕಲು ಒಂದು ಹೆಜ್ಜೆ ಮಾತ್ರವೇ ಬಾಕಿ ಉಳಿದಿದೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಗೆಲುವು, ಸಂಜು ಸ್ಯಾಮ್ಸನ್‌ ಬಳಗವನ್ನು ನಿಟ್ಟುಸಿರು ಬಿಡುವಂತೆ ಮಾಡಲಿದೆ.

ಡೆಲ್ಲಿ ಕ್ಯಾಪಿಟಲ್ಸ್‌ vs ರಾಜಸ್ಥಾನ್‌ ರಾಯಲ್ಸ್‌
ಡೆಲ್ಲಿ ಕ್ಯಾಪಿಟಲ್ಸ್‌ vs ರಾಜಸ್ಥಾನ್‌ ರಾಯಲ್ಸ್‌ (PTI)

ಐಪಿಎಲ್‌ 2024ರಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ್‌ ರಾಯಲ್ಸ್‌, ಮೇ 7ರ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals vs Rajasthan Royals) ತಂಡವನ್ನು ಎದುರಿಸುತ್ತಿದೆ. ಉಭಯ ತಂಡಗಳ ನಡುವೆ ಟೂರ್ನಿಯಲ್ಲಿ ನಡೆದ ಮೊದಲ ಮುಖಾಮುಖಿಯಲ್ಲಿ ಸಂಜು ಸ್ಯಾಮ್ಸನ್‌ ನೇತೃತ್ವದ ರಾಜಸ್ಥಾನ ಗೆದ್ದು ಬೀಗಿದೆ. ಇದೀಗ ತನ್ನದೇ ತವರು ಮೈದಾನ ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಸೇಡು ತೀರಿಸಿಕೊಳ್ಳಲು ಕ್ಯಾಪಿಟಲ್ಸ್‌ ಪಾಳಯ ಸಜ್ಜಾಗಿದೆ. ನಾಯಕನಾಗಿ ರಿಷಭ್‌ ಪಂತ್ ಉತ್ತಮ ಫಾರ್ಮ್‌ನಲ್ಲಿದ್ದು, ಟೂರ್ನಿಯಲ್ಲಿ 6ನೇ ಗೆಲುವಿನತ್ತ ತಂಡವನ್ನು ಮುನ್ನಡೆಸಲು ಎದುರು ನೋಡುತ್ತಿದ್ದಾರೆ. ಅತ್ತ ಇಂದಿನ ಪಂದ್ಯದಲ್ಲಿ ಗೆಲ್ಲುವ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವುದರೊಂದಿಗೆ, 9ನೇ ಗೆಲುವಿನೊಂದಿಗೆ ಪ್ಲೇ ಆಫ್‌ಗೆ ಲಗ್ಗೆ ಹಾಕಲು ರಾಜಸ್ಥಾನ ಎದುರು ನೋಡುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಗಾಯಗಳ ಸಮಸ್ಯೆ ಎದುರಿಸುತ್ತಿದ್ದ ಡೆಲ್ಲಿ ತಂಡಕ್ಕೆ, ಅಲ್ಪ ಸಮಾಧಾನ ಬಂದಿದೆ. ಇಶಾಂತ್‌ ಶರ್ಮಾ ಫಿಟ್‌ ಆಗಿದ್ದು ಆಯ್ಕೆಗೆ ಲಭ್ಯರಾಗಲಿದ್ದಾರೆ. ಆದರೆ, ಸ್ಫೋಟಕ ಆಟಗಾರ ಡೇವಿಡ್ ವಾರ್ನರ್ ಲಭ್ಯತೆಯ ಕುರಿತು ಇನ್ನಷ್ಟೇ ತಿಳಿಯಬೇಕಿದೆ. ಕೊನೆಯ ಕೆಲವು ಪಂದ್ಯಗಳಲ್ಲಿ ಪೃಥ್ವಿ ಶಾ ರನ್‌ ಗಳಿಸಲು ಪರದಾಡುತ್ತಿದ್ದು, ಕುಮಾರ್ ಕುಶಾಗ್ರಾ ಸ್ಥಾನ ಗಿಟ್ಟಿಸಿಕೊಳ್ಳಲು ಸಜ್ಜಾಗಿದ್ದಾರೆ.

ಅತ್ತ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಟದ ತಂತ್ರಗಳು ಫಲ ಕೊಡುತ್ತಿವೆ. ಹೀಗಾಗಿ ಮುಂದಿನ ಪಂದ್ಯದಲ್ಲೂ ಆಡುವ ಬಳಗದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇಲ್ಲ. ತಂಡದಲ್ಲಿ ಗಾಯದ ಆತಂಕವಿಲ್ಲ. ಹೀಗಾಗಿ ಎಲ್ಲರೂ ಆಯ್ಕೆಗೆ ಲಭ್ಯರಿದ್ದಾರೆ. ಈ ಹಿಂದಿನಂತೆ ಯುಜ್ವೇಂದ್ರ ಚಾಹಲ್‌ ಹಾಗೂ ಜೋಸ್ ಬಟ್ಲರ್, ತಂದ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಆಯ್ಕೆಯ ಮೇಲೆ ಇಂಪ್ಯಾಕ್ಟ್‌ ಆಟಗಾರರಾಗಲಿದ್ದಾರೆ.‌

ಇದನ್ನೂ ಓದಿ | ಲಕ್ನೋ ವಿರುದ್ಧ ಭರ್ಜರಿ 98 ರನ್‌ಗಳಿಂದ ಗೆದ್ದ ಕೆಕೆಆರ್;‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬಡ್ತಿ

ಅರುಣ್‌ ಜೇಟ್ಲಿ ಸ್ಟೇಡಿಯಂ ಪಿಚ್‌ ವರದಿ

ದೆಹಲಿಯಲ್ಲಿ ಮತ್ತೆ ರನ್‌ ಮಳೆ ಹರಿಯುವುದು ಬಹುತೇಕ ಖಚಿತ. ಇಬ್ಬನಿಯು ಪ್ರಮುಖ ಅಂಶವಾಗುವ ಸಾಧ್ಯತೆ ಇಲ್ಲ. ಹೀಗಾಗಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್‌ ಪರಿಸ್ಥಿತಿಯಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ.

ದೆಹಲಿ ಹವಾಮಾನ ವರದಿ

ಪಂದ್ಯದ ಸಮಯದಲ್ಲಿ ರಾಜಧಾನಿ ನವದೆಹಲಿಯಲ್ಲಿ ಸುಮಾರು 33 ಡಿಗ್ರಿ ತಾಪಮಾನ ಇರುವ ಮುನ್ಸೂಚನೆ ಇದೆ. ನಗರದಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ. ಹೀಗಾಗಿ ಅಭಿಮಾನಿಗಳು ಸಂಪೂರ್ಣ ಪಂದ್ಯವನ್ನು ಆನಂದಿಸಬಹುದು.

ಡೆಲ್ಲಿ ಕ್ಯಾಪಿಟಲ್ಸ್‌ ಸಂಭಾವ್ಯ ತಂಡ

ಜೇಕ್ ಫ್ರೇಸರ್-ಮೆಕ್‌ಗುರ್ಕ್, ಅಭಿಷೇಕ್ ಪೊರೆಲ್, ಶಾಯ್ ಹೋಪ್, ಟ್ರಿಸ್ಟಾನ್ ಸ್ಟಬ್ಸ್, ರಿಷಭ್ ಪಂತ್ (ನಾಯಕ, ವಿಕೆಟ್‌ ಕೀಪರ್), ಅಕ್ಷರ್ ಪಟೇಲ್, ಕುಮಾರ್ ಕುಶಾಗ್ರಾ, ಕುಲ್ದೀಪ್ ಯಾದವ್, ಖಲೀಲ್ ಅಹ್ಮದ್, ಲಿಜಾದ್ ವಿಲಿಯಮ್ಸ್, ಮುಖೇಶ್ ಕುಮಾರ್, ರಸಿಖ್ ಸಲಾಂ (ಇಂಪ್ಯಾಕ್ಟ್‌ ಆಟಗಾರ).

ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ಆಡುವ ಬಳಗ

ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್‌ ಕೀಪರ್), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ಧ್ರುವ್ ಜುರೆಲ್, ಆರ್ ಅಶ್ವಿನ್, ಟ್ರೆಂಟ್ ಬೋಲ್ಟ್, ಆವೇಶ್ ಖಾನ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಹಾಲ್ (ಇಂಪ್ಯಾಕ್ಟ್‌ ಆಟಗಾರ).

IPL_Entry_Point