ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಂಶುಲ್ ಕಾಂಬೋಜ್: ಮುಂಬೈ ಇಂಡಿಯನ್ಸ್‌ ಪರ ಪದಾರ್ಪಣೆ ಮಾಡಿದ ಈತ ಆರ್‌ಸಿಬಿ ಮಾಜಿ ನೆಟ್ ಬೌಲರ್

ಅಂಶುಲ್ ಕಾಂಬೋಜ್: ಮುಂಬೈ ಇಂಡಿಯನ್ಸ್‌ ಪರ ಪದಾರ್ಪಣೆ ಮಾಡಿದ ಈತ ಆರ್‌ಸಿಬಿ ಮಾಜಿ ನೆಟ್ ಬೌಲರ್

  • ಎಸ್‌ಆರ್‌ಎಚ್‌ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಅಂಶುಲ್ ಕಾಂಬೋಜ್ ಪದಾರ್ಪಣೆ ಮಾಡಿದರು. 23ರ ಹರೆಯದ ಬಲಗೈ ಮಧ್ಯಮ ವೇಗಿ ಈ ಹಿಂದೆ ಭಾರತ ಅಂಡರ್ 19 ತಂಡದ ಪರ ಆಡಿದ್ದಾರೆ. ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿ 10 ಪಂದ್ಯಗಳಲ್ಲಿ 17 ವಿಕೆಟ್ ಪಡೆದಿದ್ದ ಕಾಂಬೋಜ್ ಕುರಿತು ಮತ್ತಷ್ಟು ತಿಳಿಯೋಣ.

ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ಪರ ಅಂಶುಲ್ ಕಾಂಬೋಜ್ ಪದಾರ್ಪಣೆ ಮಾಡಿದರು. ಜೆರಾಲ್ಡ್ ಕೊಯೆಟ್ಜೆ ಸ್ಥಾನದಲ್ಲಿ ಆಡಿದ ಕಾಂಬೋಜ್‌ ಪಂದ್ಯದಲ್ಲಿ ಮಯಾಂಕ್‌ ಅಗರ್ವಾಲ್‌ ಅವರ ವಿಕೆಟ್‌ ಕಿತ್ತರು.
icon

(1 / 7)

ಚೊಚ್ಚಲ ಐಪಿಎಲ್‌ ಪಂದ್ಯದಲ್ಲಿ ಅಂಶುಲ್ ಗಮನ ಸೆಳೆದರು. ತಮ್ಮ ಎರಡನೇ ಓವರ್‌ನಲ್ಲಿ ಅವರು ಟ್ರಾವಿಸ್ ಹೆಡ್ ವಿಕೆಟ್ ಪಡೆಯಬಹುದಿತ್ತು. ಆದರೆ ಅದೃಷ್ಟ ಅವರೊಂದಿಗೆ ಇರಲಿಲ್ಲ. ಹೆಡ್‌ ಕ್ಲೀನ್‌ ಬೋಲ್ಡ್‌ ಆದ ಆ ಎಸೆತ ನೋ-ಬಾಲ್ ಆಗಿತ್ತು. ಹೀಗಾಗಿ ಹೆಡ್‌ ಜೀವದಾನ ಪಡೆದರೆ, ಕಾಂಬೋಜ್‌ ಚೊಚ್ಚಲ ವಿಕೆಟ್‌ಗಾಗಿ ಕಾಯಬೇಕಾಯ್ತು.
icon

(2 / 7)

ಆ ಬಳಿಕ ಕನ್ನಡಿಗ ಮಯಾಂಕ್ ಅಗರ್ವಾಲ್‌ ವಿಕೆಟ್‌ ಪಡೆಯುವಲ್ಲಿ ಅಂಶುಲ್‌ ಯಶಸ್ವಿಯಾದರು. 6 ಎಸೆತಗಳಲ್ಲಿ 5 ರನ್ ಸಿಡಿಸಿ ಮಯಾಂಕ್‌ ವಿಕೆಟ್‌ ಒಪ್ಪಿಸಿದರು. ಅಂತಿಮವಾಗಿ ಅವರು 4 ಓವರ್ ಎಸೆದು 42 ರನ್ ನೀಡಿ 1 ವಿಕೆಟ್ ಪಡೆದರು.
icon

(3 / 7)

23 ವರ್ಷದ ಅಂಶುಲ್ ಕಾಂಬೋಜ್ ಬಲಗೈ ಮಧ್ಯಮ ವೇಗಿ. ಅವರು ಹರಿಯಾಣದ ಆಟಗಾರ. ಈ ಹಿಂದೆ ಭಾರತ ಅಂಡರ್ 19 ತಂಡದ ಪರ ಆಡಿದ್ದರು. ನಮನ್ ಧೀರ್ ನಂತರ ಈ ಋತುವಿನಲ್ಲಿ ಮುಂಬೈ ಪರ ಪದಾರ್ಪಣೆ ಮಾಡಿದ ಎರಡನೇ ಆಟಗಾರ ಇವರು. ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿ, ಆಡಿದ  10 ಪಂದ್ಯಗಳಲ್ಲಿ 17 ವಿಕೆಟ್ ಪಡೆದು ಮಿಂಚಿದ್ದರು.
icon

(4 / 7)

ಐಪಿಎಲ್ 2024ರ ಆವೃತ್ತಿಗೂ ಮುನ್ನ ನಡೆದ ಹರಾಜಿನಲ್ಲಿ ಅಂಶುಲ್ ಅವರನ್ನು ಮುಂಬೈ ಇಂಡಿಯನ್ಸ್ 20 ಲಕ್ಷ ರೂಪಾಯಿಗೆ ಖರೀದಿಸಿತು. ಹರಿಯಾಣದ ಕರ್ನಾಲ್‌ನ ಕೃಷಿ ಹಿನ್ನೆಲೆಯ ಕುಟುಂಬವರಾದ ಅಂಶುಲ್, ಇದಕ್ಕೂ ಮೊದಲು ನೆಟ್ ಬೌಲರ್ ಆಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. ನೆಟ್ಸ್‌ನಲ್ಲಿ ವಿರಾಟ್ ಕೊಹ್ಲಿಯ ವಿಕೆಟ್‌ ಪಡೆದಿದ್ದರು.
icon

(5 / 7)

23 ವರ್ಷದ ಆಟಗಾರ ತಮ್ಮ ವೃತ್ತಿಜೀವನದಲ್ಲಿ ಕೇವಲ ಒಂಬತ್ತು ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಇದರಲ್ಲಿ 6.91ರ ಎಕಾನಮಿಯಲ್ಲಿ 11 ವಿಕೆಟ್ ಪಡೆದಿದ್ದಾರೆ. 
icon

(6 / 7)

23 ವರ್ಷದ ಆಟಗಾರ ತಮ್ಮ ವೃತ್ತಿಜೀವನದಲ್ಲಿ ಕೇವಲ ಒಂಬತ್ತು ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಇದರಲ್ಲಿ 6.91ರ ಎಕಾನಮಿಯಲ್ಲಿ 11 ವಿಕೆಟ್ ಪಡೆದಿದ್ದಾರೆ. (ANI)

ಈವರೆಗೆ ಒಟ್ಟು 13 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 24 ವಿಕೆಟ್ ಮತ್ತು 284 ರನ್ ಗಳಿಸಿದ್ದಾರೆ. ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಅವರು 15 ಪಂದ್ಯಗಳಲ್ಲಿ 23 ವಿಕೆಟ್ ಪಡೆದಿದ್ದಾರೆ.
icon

(7 / 7)

ಈವರೆಗೆ ಒಟ್ಟು 13 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 24 ವಿಕೆಟ್ ಮತ್ತು 284 ರನ್ ಗಳಿಸಿದ್ದಾರೆ. ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಅವರು 15 ಪಂದ್ಯಗಳಲ್ಲಿ 23 ವಿಕೆಟ್ ಪಡೆದಿದ್ದಾರೆ.(MI-X)

IPL_Entry_Point

ಇತರ ಗ್ಯಾಲರಿಗಳು