ಕನ್ನಡ ಸುದ್ದಿ  /  Entertainment  /  Bollywood News Anushka Sharma Finally Returns To Instagram, Smiles Bright First Post Since Akaay Birth Pcp

Anushka Sharma: ಅಕಾಯ್‌ ಹುಟ್ಟಿದ ಬಳಿಕದ ಮೊದಲ ಪೋಸ್ಟ್‌; ಇನ್‌ಸ್ಟಾಗ್ರಾಂಗೆ ಬಂದು ಬಿದಿಗೆ ಚಂದಿರನಂತೆ ನಕ್ಕ ಅನುಷ್ಕಾ ಶರ್ಮಾ

ಅಪರೂಪಕ್ಕೆ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಇನ್‌ಸ್ಟಾಗ್ರಾಂಗೆ ಆಗಮಿಸಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಮಗ ಅಕಾಯ್‌ ಹುಟ್ಟಿದ ಬಳಿಕ ಇವರು ಸೋಷಿಯಲ್‌ ಮೀಡಿಯಾದಿಂದ ದೂರವಿದ್ದರು. ಇದೀಗ ಹ್ಯಾಪಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

Anushka Sharma: ಇನ್‌ಸ್ಟಾಗ್ರಾಂಗೆ ಬಂದು ಬಿದಿಗೆ ಚಂದಿರನಂತೆ ನಕ್ಕ ಅನುಷ್ಕಾ ಶರ್ಮಾ
Anushka Sharma: ಇನ್‌ಸ್ಟಾಗ್ರಾಂಗೆ ಬಂದು ಬಿದಿಗೆ ಚಂದಿರನಂತೆ ನಕ್ಕ ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ ಇನ್‌ಸ್ಟಾಗ್ರಾಂಗೆ ವಾಪಸ್‌ ಬಂದಿದ್ದಾರೆ. ಸುಮಾರು ಒಂದು ತಿಂಗಳಿನಿಂದ ಅನುಷ್ಕಾ ಸೋಷಿಯಲ್‌ ಮೀಡಿಯಾದಲ್ಲಿ ಯಾವುದೇ ಪೋಸ್ಟ್‌ ಮಾಡಿರಲಿಲ್ಲ. ಆಕೆ ಲಂಡನ್‌ನಲ್ಲಿ ತನ್ನ ಮಗು ಅಕಾಯ್‌ನನ್ನು ನೋಡಿಕೊಳ್ಳುತ್ತಿದ್ದಾರೆ. ಇಂದು ಸುಂದರವಾದ ನಗುಮುಖದ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹ್ಯಾಪಿ ಮಾರ್ನಿಂಗ್‌ ಪೋಸ್ಟ್‌ ಮಾಡಿದ ಅನುಷ್ಕಾ

ಮೊಬೈಲ್‌ ಫೋನ್‌ ಬ್ರಾಂಡ್‌ನ ಜಾಹೀರಾತಿನಂತೆ ತನ್ನ ಫೋಟೋವನ್ನು ಹಂಚಿಕೊಂಡಿದ್ದಾರೆ. ತನ್ನ ಕೈಯಲ್ಲಿ ಸ್ಮಾರ್ಟ್‌ಫೋನ್‌ ಹಿಡಿದುಕೊಂಡು ಅನುಷ್ಕಾ ಪೋಸ್‌ ನೀಡಿದ್ದಾರೆ. ರೂಮಿ ಬಿಳಿ ಶರ್ಟ್‌ ಮತ್ತು ನೀಲಿ ಜೀನ್ಸ್‌ ಧರಿಸಿದ್ದಾರೆ. ಸಾಫ್ಟ್‌ ವೇವ್‌ ಸ್ಟೈಲ್‌ನಲ್ಲಿ ಶಾರ್ಟ್‌ ಹೇರ್‌ಸ್ಟೈಲ್‌ ಮಾಡಿಕೊಂಡಿದ್ದಾರೆ. ಮರದ ಬೆಂಚ್‌ ಮೇಲೆ ಕುಳಿತುಕೊಂಡಿದ್ದಾರೆ. ಒಟ್ಟಾರೆ ಆಹ್ಲಾದಕರ ವಾತಾವರಣದಲ್ಲಿ ಸುಂದರವಾದ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ.

ಈ ಪೋಸ್ಟ್‌ಗೆ ಅನುಷ್ಕಾ ಹೀಗೆ ಕ್ಯಾಪ್ಷನ್‌ ಬರೆದಿದ್ದಾರೆ. "ಮುಂಜಾನೆಯ ಸೂರ್ಯ. ಒನ್‌ಪ್ಲಸ್‌ಓಪನ್‌ ಜತೆ ಓದುವ ಸಮಯ. ದಿನವನ್ನು ಆರಂಭಿಸಲು ಇದು ಉತ್ತಮ ಹಾದಿ" ಎಂದು ತನ್ನ ಮೊಬೈಲ್‌ ಜಾಹೀರಾತು ಫೋಟೋದಲ್ಲಿ ಬರೆದಿದ್ದಾರೆ. ಇದು ಜಾಹೀರಾತು ಫೋಟೋವಾದರೂ ಅಭಿಮಾನಿಗಳು ಖುಷಿಯಾಗಿದ್ದಾರೆ. ಅಭಿಮಾನಿಯೊಬ್ಬರು ನನ್ನ ಸಂದೇಶವನ್ನು ನಿಮ್ಮ ಪತಿ ವಿರಾಟ್‌ ಕೊಹ್ಲಿಗೆ ಕಳುಹಿಸಿ ಎಂದಿದ್ದಾರೆ.

ಅನುಷ್ಕಾ ಭಾರತಕ್ಕೆ ಆಗಮಿಸುವುದು ಯಾವಾಗ?

ವಿರಾಟ್‌ ಮತ್ತು ಅನುಷ್ಕಾ ಸದ್ಯ ಲಂಡನ್‌ನಲ್ಲಿ ನೆಮ್ಮದಿಯಾಗಿ ಕಾಲಕಳೆಯುತ್ತಿದ್ದರು. ಐಪಿಎಲ್‌ಗೆ ಎರಡು ತಿಂಗಳು ಮೊದಲು ವಿರಾಟ್‌ ಭಾರತಕ್ಕೆ ಬಂದರೆ, ಅನುಷ್ಕಾ ಅವರು ಈಗಲೂ ಲಂಡನ್‌ನಲ್ಲಿ ತನ್ನ ಮಗಳು ವಮಿಕಾ ಮತ್ತು ಮಗ ಅಕಾಯ್‌ ಜತೆ ಇದ್ದಾರೆ. ವಮಿಕಾಗೆ ಮೂರು ವರ್ಷವಾಗಿದೆ. ಹೀಗಾಗಿ, ಅನುಷ್ಕಾ ಶರ್ಮಾ ಅವರು ತನ್ನ ಮಗಳನ್ನು ಶಾಲೆಗೆ ಸೇರಿಸುವ ಸಲುವಾಗಿ ಭಾರತಕ್ಕೆ ಹಿಂತುರುಗಲಿದ್ದಾರೆ ಎಂದು ವರದಿಗಳು ತಿಳಿಸಿವೆ.

"ಜನವರಿ 2024ಕ್ಕೆ ವಮಿಕಾಳಿಗೆ ಮೂರು ವರ್ಷ ಭರ್ತಿಯಾಗಿದೆ. ಶೈಕ್ಷಣಿಕವಾಗಿ ನೋಡಿದರೆ ಈಕೆ ನರ್ಸರಿಗೆ ಸೇರುವ ಸಮಯ. ಏಪ್ರಿಲ್‌ನಲ್ಲಿ 20-30 ದಿನ ನರ್ಸರಿ ಇರಲಿದೆ. ಮತ್ತೆ ಸಮ್ಮರ್‌ಗೆ ರಜೆ ಇರಲಿದೆ. ಜೂನ್‌ಗೆ ಮತ್ತೆ ಸ್ಕೂಲ್‌ ಓಪನ್‌ ಆಗಲಿದೆ. ಹೀಗಾಗಿ, ಅನುಷ್ಕಾ ಶೀಘ್ರದಲ್ಲಿ ಭಾರತಕ್ಕೆ ಆಗಮಿಸುವ ಸೂಚನೆ ಇದೆ" ಎಂದು ಬಾಲಿವುಡ್‌ ಲೈಫ್‌ ವರದಿ ತಿಳಿಸಿದೆ.

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿಗೆ ಇದೇ ಫೆಬ್ರವರಿ 15ರಂದು ಗಂಡು ಮಗು ಜನಿಸಿತ್ತು. ಈ ಕುರಿತು ಅನುಷ್ಕಾ ಮತ್ತು ವಿರಾಟ್‌ ಒಟ್ಟಾಗಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು. ಅಲ್ಲಿಯವರೆಗೆ ಅನುಷ್ಕಾ ಗರ್ಭಿಣಿಯಾಗಿರುವುದು ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿ ಯಾರಿಗೂ ಗೊತ್ತಿರಲಿಲ್ಲ. ಮಗುವಿಗೆ ಅಕಾಯ್‌ ಎಂದು ಹೆಸರಿಡಲಾಗಿತ್ತು. ಇವರಿಗೆ ಈಗಾಗಲೇ ವಮಿಕಾ ಹೆಸರಿನ ಹೆಣ್ಣು ಮಗುವಿದೆ.

 

 

IPL_Entry_Point