ಕ್ರಿಕೆಟ್ ಆಡೋದು ಬಿಟ್ಟು ಮೈದಾನದಲ್ಲೇ ಗಾಳಿಪಟ ಹಾರಿಸಿದ ರೋಹಿತ್-ಪಂತ್; ಡೆಲ್ಲಿ-ಮುಂಬೈ ಪಂದ್ಯದಲ್ಲಿ ಹೀಗೊಂದು ಕ್ಷಣ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕ್ರಿಕೆಟ್ ಆಡೋದು ಬಿಟ್ಟು ಮೈದಾನದಲ್ಲೇ ಗಾಳಿಪಟ ಹಾರಿಸಿದ ರೋಹಿತ್-ಪಂತ್; ಡೆಲ್ಲಿ-ಮುಂಬೈ ಪಂದ್ಯದಲ್ಲಿ ಹೀಗೊಂದು ಕ್ಷಣ

ಕ್ರಿಕೆಟ್ ಆಡೋದು ಬಿಟ್ಟು ಮೈದಾನದಲ್ಲೇ ಗಾಳಿಪಟ ಹಾರಿಸಿದ ರೋಹಿತ್-ಪಂತ್; ಡೆಲ್ಲಿ-ಮುಂಬೈ ಪಂದ್ಯದಲ್ಲಿ ಹೀಗೊಂದು ಕ್ಷಣ

  • ದೆಹಲಿಯಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಅಂತಿಮವಾಗಿ ರಿಷಬ್‌ ಪಂತ್‌ ಪಡೆ ರೋಚಕ ಜಯ ಸಾಧಿಸಿತು. ಪಂದ್ಯದ ನಡುವೆ ಡಿಸಿ ನಾಯಕ ಪಂತ್‌ ಹಾಗೂ ಎಂಐ ಮಾಜಿ ನಾಯಕ ರೋಹಿತ್ ಶರ್ಮಾ ಕ್ರಿಕೆಟ್‌ ಬಿಟ್ಟು ಬೇರೆಯೇ ಆಟದಲ್ಲಿ ತೊಡಗಿದ್ದರು. ಈ ವೇಳೆ ಪಂದ್ಯ ಕೂಡಾ ಕೆಲಕಾಲ ನಿಂತಿತು. ಅಷ್ಟಕ್ಕೂ ಕಾರಣವೇನು ಎಂಬುದನ್ನು ಮುಂದೆ ಓದಿ.

ಮುಂಬೈ ಇಂಡಿಯನ್ಸ್‌ ತಂಡ ಚೇಸಿಂಗ್‌ ಮಾಡುತ್ತಿದ್ದ ಸಂದರ್ಭದಲ್ಲಿ, ರೋಹಿತ್ ಶರ್ಮಾ ಕ್ರೀಸ್‌ನಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದರು. ಈ ವೇಳೆ ಮೈದಾನಕ್ಕೆ ಅಚ್ಚರಿಯ ರೀತಿಯಲ್ಲಿ ನಿರ್ಜೀವ ಅತಿಥಿಯೊಂದು ಎಂಟ್ರಿ ಕೊಟ್ಟಿದೆ. 
icon

(1 / 7)

ಮುಂಬೈ ಇಂಡಿಯನ್ಸ್‌ ತಂಡ ಚೇಸಿಂಗ್‌ ಮಾಡುತ್ತಿದ್ದ ಸಂದರ್ಭದಲ್ಲಿ, ರೋಹಿತ್ ಶರ್ಮಾ ಕ್ರೀಸ್‌ನಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದರು. ಈ ವೇಳೆ ಮೈದಾನಕ್ಕೆ ಅಚ್ಚರಿಯ ರೀತಿಯಲ್ಲಿ ನಿರ್ಜೀವ ಅತಿಥಿಯೊಂದು ಎಂಟ್ರಿ ಕೊಟ್ಟಿದೆ. (PTI)

ರೋಚಕ ಪಂದ್ಯದ ನಡುವೆ ಮೈದಾನಕ್ಕೆ ಹಾರಿ ಬಂದಿದ್ದು ಒಂದು ಗಾಳಿಪಟ. ಇದನ್ನು ಕೈಯಿಂದ ಎತ್ತಿದ ರೋಹಿತ್‌ ಶರ್ಮಾ, ವಿಕೆಟ್‌ ಕೀಪರ್‌ ರಿಷಬ್ ಪಂತ್ ಅವರೊಂದಿಗೆ ಮೋಜಿನ ಕ್ಷಣವನ್ನು ಆನಂದಿಸಿದ್ದಾರೆ.
icon

(2 / 7)

ರೋಚಕ ಪಂದ್ಯದ ನಡುವೆ ಮೈದಾನಕ್ಕೆ ಹಾರಿ ಬಂದಿದ್ದು ಒಂದು ಗಾಳಿಪಟ. ಇದನ್ನು ಕೈಯಿಂದ ಎತ್ತಿದ ರೋಹಿತ್‌ ಶರ್ಮಾ, ವಿಕೆಟ್‌ ಕೀಪರ್‌ ರಿಷಬ್ ಪಂತ್ ಅವರೊಂದಿಗೆ ಮೋಜಿನ ಕ್ಷಣವನ್ನು ಆನಂದಿಸಿದ್ದಾರೆ.(AP)

ಶರ್ಮಾ ಕ್ರೀಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವಾಗ ಗಾಳಿಪಟವು ತಲೆಯ ಮೇಲೆ ಬೀಸುತ್ತಿತ್ತು. ಆಗ ಆಟಕ್ಕೆ ಅಡ್ಡಿಯಾಯಿತು. ಗಾಳಿಪಟವನ್ನು ಮೈದಾನದಿಂದ ಹೊರಹಾಕಿ ಆಟ ಮುಂದುವರೆಸಬೇಕಿತ್ತು. ಆದರೆ, ರೋಹಿತ್‌ ಗಾಳಿಪಟವನ್ನು ಪಂತ್ ಕೈಗಿಟ್ಟ ನಂತರ ಡೆಲ್ಲಿ ನಾಯಕ ಮತ್ತಷ್ಟು ಮೋಜು ಮುಂದುವರೆಸಿದರು. ಗಾಳಿಪಟವನ್ನು ಹಾರಿಸುವ ಪ್ರಯತ್ನ ಮಾಡಿದರು.
icon

(3 / 7)

ಶರ್ಮಾ ಕ್ರೀಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವಾಗ ಗಾಳಿಪಟವು ತಲೆಯ ಮೇಲೆ ಬೀಸುತ್ತಿತ್ತು. ಆಗ ಆಟಕ್ಕೆ ಅಡ್ಡಿಯಾಯಿತು. ಗಾಳಿಪಟವನ್ನು ಮೈದಾನದಿಂದ ಹೊರಹಾಕಿ ಆಟ ಮುಂದುವರೆಸಬೇಕಿತ್ತು. ಆದರೆ, ರೋಹಿತ್‌ ಗಾಳಿಪಟವನ್ನು ಪಂತ್ ಕೈಗಿಟ್ಟ ನಂತರ ಡೆಲ್ಲಿ ನಾಯಕ ಮತ್ತಷ್ಟು ಮೋಜು ಮುಂದುವರೆಸಿದರು. ಗಾಳಿಪಟವನ್ನು ಹಾರಿಸುವ ಪ್ರಯತ್ನ ಮಾಡಿದರು.(AP)

ಈ ವೇಳೆ ಸ್ಕ್ವಾರ್‌ ಲೆಗ್‌ ಅಂಪೈರ್‌ ಮಧ್ಯಪ್ರವೇಶಿಸಿ ಪಂತ್‌ ಕೈಯಲ್ಲಿದ್ದ ಗಾಳಿಪಟವನ್ನು ಮೈದಾನದ ಹೊರ ಕೊಂಡೊಯ್ದರು.
icon

(4 / 7)

ಈ ವೇಳೆ ಸ್ಕ್ವಾರ್‌ ಲೆಗ್‌ ಅಂಪೈರ್‌ ಮಧ್ಯಪ್ರವೇಶಿಸಿ ಪಂತ್‌ ಕೈಯಲ್ಲಿದ್ದ ಗಾಳಿಪಟವನ್ನು ಮೈದಾನದ ಹೊರ ಕೊಂಡೊಯ್ದರು.(PTI)

ಆ ಬಳಿಕ ಪಂದ್ಯ ಮತ್ತೆ ಮುಂದುವರೆಯಿತು. 258 ರನ್‌ ಗುರಿ ಬೆನ್ನಟ್ಟಿದ ಮುಂಬೈ ತಂಡವು, 9 ವಿಕಟ್‌ ನಷ್ಟಕ್ಕೆ 247 ರನ್‌ ಗಳಿಸಲಷ್ಟೇ ಶಕ್ತವಾಯ್ತು. ಇದರೊಂದಿಗೆ ಡೆಲ್ಲಿ 10 ರನ್‌ಗಳಿಂದ ಗೆದ್ದು ಬೀಗಿತು.
icon

(5 / 7)

ಆ ಬಳಿಕ ಪಂದ್ಯ ಮತ್ತೆ ಮುಂದುವರೆಯಿತು. 258 ರನ್‌ ಗುರಿ ಬೆನ್ನಟ್ಟಿದ ಮುಂಬೈ ತಂಡವು, 9 ವಿಕಟ್‌ ನಷ್ಟಕ್ಕೆ 247 ರನ್‌ ಗಳಿಸಲಷ್ಟೇ ಶಕ್ತವಾಯ್ತು. ಇದರೊಂದಿಗೆ ಡೆಲ್ಲಿ 10 ರನ್‌ಗಳಿಂದ ಗೆದ್ದು ಬೀಗಿತು.(PTI)

ಹಗ್ಗದಿಂದ ಕಟ್ಟಿರದ ಗಾಳಿಪಟವನ್ನು ಹಾರಿಸಿದ ಪಂತ್‌, ಅಂಪೈರ್‌ಗೆ ಹಸ್ತಾಂತರಿಸಿದರು.
icon

(6 / 7)

ಹಗ್ಗದಿಂದ ಕಟ್ಟಿರದ ಗಾಳಿಪಟವನ್ನು ಹಾರಿಸಿದ ಪಂತ್‌, ಅಂಪೈರ್‌ಗೆ ಹಸ್ತಾಂತರಿಸಿದರು.(PTI)

ಪಂದ್ಯದ ನಡುವೆ ಹಿಟ್‌ಮ್ಯಾನ್‌ ಹಾಗೂ ರಿಷಬ್‌ ಪಂತ್‌ ನಡುವಿನ ಗಾಳಿಪಟ ಆಟ ಪ್ರೇಕ್ಷಕರಿಗೆ ಖುಷಿ ಕೊಟ್ಟಿತು.
icon

(7 / 7)

ಪಂದ್ಯದ ನಡುವೆ ಹಿಟ್‌ಮ್ಯಾನ್‌ ಹಾಗೂ ರಿಷಬ್‌ ಪಂತ್‌ ನಡುವಿನ ಗಾಳಿಪಟ ಆಟ ಪ್ರೇಕ್ಷಕರಿಗೆ ಖುಷಿ ಕೊಟ್ಟಿತು.(AP)


ಇತರ ಗ್ಯಾಲರಿಗಳು