ಕನ್ನಡ ಸುದ್ದಿ  /  Entertainment  /  Kaatera Movie Update: Katera's Beauty To Be Unveiled On Ugadi

Kaatera movie update: ಯುಗಾದಿಯಂದು ಅನಾವರಣಗೊಳ್ಳಲಿದ್ದಾಳೆ ʼಕಾಟೇರʼನ ಚೆಲುವೆ

Kaatera movie update: ಚಾಲೆಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ʼಕಾಟೇರʼ ಚಿತ್ರದ ನಾಯಕಿಯ ಫಸ್ಟ್‌ಲುಕ್‌ ಯುಗಾದಿ (ಮಾರ್ಚ್‌ 22)ಯಂದು ಬಿಡುಗಡೆಯಾಗಲಿದೆ. ಈ ವಿಷಯವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಸ್ಟರ್‌ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ ನಿರ್ದೇಶಕ ತರುಣ್‌ ಸುಧೀರ್‌.

ಬರ್ತ್‌ಡೇಗೆ ದರ್ಶನ್‌ ಹೊಸ ಸಿನಿಮಾ ಘೋಷಣೆ; 1974ರಲ್ಲಿ ನಡೆದ ದಂಗೆಯ ಕಥೆ ಹೇಳಲಿದ್ದಾನೆ ಈ ‘ಕಾಟೇರ’
ಬರ್ತ್‌ಡೇಗೆ ದರ್ಶನ್‌ ಹೊಸ ಸಿನಿಮಾ ಘೋಷಣೆ; 1974ರಲ್ಲಿ ನಡೆದ ದಂಗೆಯ ಕಥೆ ಹೇಳಲಿದ್ದಾನೆ ಈ ‘ಕಾಟೇರ’

ಚಾಲೆಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ́ಕಾಟೇರʼ ಸಿನಿಮಾದ ಕಡೆಯಿಂದ ಹೊಸ ಅಪ್‌ಡೇಟ್‌ ಒಂದು ಸಿಕ್ಕಿದೆ. ಯುಗಾದಿ ಹಬ್ಬದಂದು ಕಾಟೇರನ ಚೆಲುವೆ ಫಸ್ಟ್‌ಲುಕ್‌ ಬಿಡುಗಡೆ ಮಾಡಲಿದೆ ಚಿತ್ರತಂಡ. ಈ ವಿಷಯವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ನಿರ್ದೇಶಕ ತರುಣ್‌ ಸುಧೀರ್‌.

ʼಮೋಹಕ ಬಿರುಗಾಳಿಯೊಂದು ನಿಮ್ಮ ಹಾದಿಯಲ್ಲಿ ಬರಲಿದೆʼ ಎಂಬರ್ಥದ ಶೀರ್ಷಿಕೆಯೊಂದಿಗೆ ಪೋಸ್ಟರ್‌ ಒಂದನ್ನು ಹಂಚಿಕೊಂಡಿದ್ದಾರೆ ನಿರ್ದೇಶಕ. ಅಲ್ಲದೆ ʼಮಾರ್ಚ್‌ 22ರ ಬೆಳಿಗ್ಗೆ 10ಗಂಟೆಗೆ ಬರಲಿದ್ದಾಳೆ ಕಾಟೇರನ ನಾಯಕಿʼ ಎಂದೂ ಶೀರ್ಷಿಕೆಯಲ್ಲಿ ಸೇರಿಸಿದ್ದಾರೆ.

ಕುತೂಹಲ ಹುಟ್ಟಿಸಿದ ಪೋಸ್ಟರ್‌

ಪೋಸ್ಟರ್‌ನಲ್ಲಿ ಮುಖವಿಲ್ಲದ ಹುಡುಗಿಯ ಫೋಟೊವಿದ್ದು ಫೋಟೊದ ಮೇಲೆ ʼಮೇಧಾವಿ, ಧೈರ್ಯಶಾಲಿ ಹಾಗೂ ಆಕರ್ಷಕ ವ್ಯಕ್ತಿತ್ವದ ಕಾಟೇರ ಚಿತ್ರದ ನಾಯಕಿ ಇವರು, ಇವರ ಫಸ್ಟ್‌ಲುಕ್‌ ಅನ್ನು ಮಾರ್ಚ್‌ 22ರಂದು ಅವರೇ ಬಹಿರಂಗ ಪಡಿಸಲಿದ್ದಾರೆʼ ಎಂದು ಬರೆಯಲಾಗಿದೆ. ತರುಣ್‌ ಅವರ ಈ ಪೋಸ್ಟಿಗೆ ಅಭಿಮಾನಿಗಳು ಲೈಕ್ಸ್‌, ಕಮೆಂಟ್‌ ನೀಡಿದ್ದಾರೆ.

ʼಕಾಟೇರʼ ದರ್ಶನ್‌ ಅಭಿನಯದ 56ನೇ ಸಿನಿಮಾ. ದರ್ಶನ ಅವರ ಹುಟ್ಟುಹಬ್ಬದಂದು (ಫೆ. 16) ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಗಿತ್ತು. ಅಲ್ಲದೆ ಸಿನಿಮಾಕ್ಕೆ ಸಂಬಂಧಿಸಿ ಸಣ್ಣ ವಿಡಿಯೊವೊಂದನ್ನು ಚಿತ್ರತಂಡ ಹಂಚಿಕೊಂಡಿತ್ತು.

1974ರಲ್ಲಿ ನಡೆದ ನೈಜ ಘಟನೆಯೇ ‘ಕಾಟೇರ’

ರಾಕ್‌ಲೈನ್‌ ವೆಂಕಟೇಶ್‌ ಅವರ ರಾಕ್‌ಲೈನ್‌ ಪ್ರೊಡಕ್ಷನ್ಸ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಕಾಟೇರ’ ಸಿನಿಮಾದಲ್ಲಿ ಹಳ್ಳಿಗಾಡಿನ ಕಥೆಯೊಂದನ್ನು ಹಿಡಿದು ತಂದಿದ್ದಾರೆ. ಶೀರ್ಷಿಕೆ ಪೋಸ್ಟರ್‌ ಒಂದು ಬಾರಿ ಗಮನಿಸಿದರೆ, 1974ರಲ್ಲಿ ನಡೆದ ನೈಜ ಘಟನೆಯನ್ನೇ ಕಥಾವಸ್ತುವನ್ನಾಗಿಸಿಕೊಂಡ ನಿರ್ದೇಶಕ ತರುಣ್‌ ಸುಧೀರ್‌, ಸಿನಿಮಾ ರೂಪಕ್ಕೆ ತರುತ್ತಿದ್ದಾರೆ. ಏಕೆಂದರೆ ಪೋಸ್ಟರ್‌ನಲ್ಲಿ ಪಾರ್ಲಿಮೆಂಟ್‌ ಚಿತ್ರವೂ ಇದೆ. ದಂಗೆ ಎದ್ದ ರೈತರ ಸಮೂಹವೂ ಕಾಣಿಸುತ್ತಿದೆ.

ಮತ್ತೆ ಲಾಂಗ್‌ ಹಿಡಿದ ‘ಕಾಟೇರ’

ತಮ್ಮ ಹಿಂದಿನ ಸಿನಿಮಾಗಳಲ್ಲಿನ ಖದರ್‌ ಅನ್ನು ಇಲ್ಲಿಯೂ ಮುಂದುವರಿಸಿರುವ ದರ್ಶನ್‌, ಮತ್ತೆ ಮತ್ತೆ ಲಾಂಗ್‌ ಹಿಡಿದು ರಗಡ್‌ ಆಗಿಯೇ ಕಾಣಿಸಿಕೊಂಡಿದ್ದಾರೆ. ಪಂಚೆಯಲ್ಲಿ ಹಳ್ಳಿಗನಾಗಿ ಕಾಣಿಸಿದ್ದಷ್ಟೇ ಅಲ್ಲದೆ, ‘ಪ್ರತೀ ಮಚ್ಚು ಎರಡು ಸಲ ಕೆಂಪಾಗ್ತದೆ, ಬೆಂಕಿಯಲ್ಲಿ ಬೆಂದಾಗ, ರಕ್ತದಲ್ಲಿ ನೆಂದಾಗ..’ ಎಂಬ ಖಡಕ್‌ ಡೈಲಾಗ್‌ ಸಹ ಅವರ ಬಾಯಿಂದ ಹೊರಬಿದ್ದಿದೆ. ಅಂದಹಾಗೆ ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದರೆ, ಸುಧಾಕರ್‌ ಎಸ್‌. ರಾಜ್‌ ಅವರ ಛಾಯಾಗ್ರಹಣ, ಕೆ.ಎಂ ಪ್ರಕಾಶ್‌ ಅವರ ಸಂಕಲನ, ಚಿತ್ರಕಥೆಯ ಜವಾಬ್ದಾರಿ ತರುಣ್‌ ಸುಧೀರ್‌ ಮತ್ತು ಜಡೇಶ್‌ ಕುಮಾರ್‌ ಹಂಪಿ ಅವರದ್ದು. ಮಾಸ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಕನಸಿನ ರಾಣಿ ಮಾಲಾಶ್ರೀ ಅವರ ಮಗಳು ರಾಧನಾ ರಾಮ್‌ ಕನ್ನಡಕ್ಕೆ ಪರಿಚಿತಗೊಳ್ಳುತ್ತಿದ್ದಾರೆ.

ಈ ಸಿನಿ ಸುದ್ದಿಗಳನ್ನೂ ಓದಿ

ʼಎನ್‌ಟಿಆರ್‌30ʼ ಚಿತ್ರಕ್ಕೆ ಮುಹೂರ್ತ ನಿಗದಿ; ಕೊನೆಗೂ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚಿತ್ರತಂಡ

ಎನ್‌ಟಿಆರ್‌30 ಸಿನಿಮಾದ ಕುರಿತು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿತ್ತು. ಎನ್‌ಟಿಆರ್‌ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಚಿತ್ರದ ಅಪ್‌ಡೇಟ್‌ ಬಗ್ಗೆಯೇ ಕೇಳಲಾಗುತ್ತಿತ್ತು, ಕೊನೆಗೂ ಚಿತ್ರತಂಡದಿಂದ ಅಪ್‌ಡೇಟ್‌ ಹೊರಬಿದಿದ್ದೆ. ಮಾರ್ಚ್‌ 23ರಂದು ಚಿತ್ರದ ಮುಹೂರ್ತಕ್ಕೆ ದಿನ ನಿಗದಿಯಾಗಿದೆ.

ಆಕಾಶದಲ್ಲಿ ಹೊಳೆಯಲಿದೆ ಪುನೀತ್‌ ಹೆಸರು; ನಕ್ಷತ್ರಕ್ಕೆ ಪುನೀತ್‌ ರಾಜ್‌ಕುಮಾರ್‌ ಹೆಸರಿಡುವ ಮೂಲಕ ಗೌರವ ಸಲ್ಲಿಸಿದ ಬಿಗ್ ಲಿಟ್ಲ್ ಕಂಪನಿ

ʼಬಿಗ್‌ ಲಿಟ್ಲ್‌ʼ ಕಂಪನಿ ಆಕಾಶದಲ್ಲಿರುವ ನಕ್ಷತ್ರವೊಂದಕ್ಕೆ ಪುನೀತ್‌ ರಾಜ್‌ಕುಮಾರ್‌ ಅವರ ಹೆಸರು ಇರಿಸುವ ಮೂಲಕ ಗೌರವ ಸಲ್ಲಿಸಿದೆ. ಈ ಕುರಿತು ವಿಡಿಯೊವೊಂದನ್ನು ಮಾಡಿದ್ದು, ಅದನ್ನು ನಟ ವಿಕ್ರಮ್‌ ರವಿಚಂದ್ರನ್‌ ಬಿಡುಗಡೆ ಮಾಡಿದ್ದಾರೆ.

IPL_Entry_Point

ವಿಭಾಗ