Rachita Ram: ಸಿನಿಮಾಗಳಲ್ಲಿ ದಕ್ಕದ ನಿರೀಕ್ಷಿತ ಗೆಲುವು; ಯಶಸ್ಸಿಗಾಗಿ ಕುತ್ತಾರು ಕೊರಗಜ್ಜನ ಮೊರೆಹೋದ ರಚಿತಾ ರಾಮ್
ನಟಿ ರಚಿತಾ ರಾಮ್‌ಗೆ ಕಳೆದ ಕೆಲ ವರ್ಷಗಳಿಂದ ಸಿನಿಮಾದಲ್ಲಿ ಹೇಳಿಕೊಳ್ಳುವ ಗೆಲುವು ದಕ್ಕಿಲ್ಲ. ಈ ನಡುವೆ ಜೂನ್‌ನಲ್ಲಿ ಇವರ ಎರಡು ಸಿನಿಮಾಗಳು ಬಿಡುಗಡೆಯ ಹೊಸ್ತಿಲಲ್ಲಿವೆ. ಈ ಸಿನಿಮಾಗಳ ಗೆಲುವಿಗಾಗಿ ಕುತ್ತಾರು ಕೊರಗಜ್ಜನ ಮೊರೆ ಹೋಗಿದ್ದಾರೆ ಡಿಂಪಲ್ ಕ್ವೀನ್.
Rachita Ram: ಇತ್ತೀಚಿನ ಕೆಲ ತಿಂಗಳಿಂದ ಮಂಗಳೂರು ಬಳಿಯ ಕುತ್ತಾರು ಕೊರಗಜ್ಜನ ಸನ್ನಿಧಾನಕ್ಕೆ ಸಾಕಷ್ಟು ಸ್ಯಾಂಡಲ್‌ವುಡ್ ಕಲಾವಿದರು ಭೇಟಿ ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ನಟಿ ಮಾಲಾಶ್ರೀ ಮತ್ತವರ ಕುಟುಂಬ ಕುತ್ತಾರಿಗೆ ಆಗಮಿಸಿ ಕೊರಗಜ್ಜನ ದರ್ಶನ ಪಡೆದು ಮರಳಿತ್ತು. ಇದೀಗ ಚಂದನವನದ ಡಿಂಪಲ್ ಕ್ವೀನ್ ರಚಿತಾ ರಾಮ್ ಇದೇ ಪುಣ್ಯಸ್ಥಳಕ್ಕೆ ಭೇಟಿ ನೀಡಿ ಕೊರಗಜ್ಜನ ಆಶೀರ್ವಾದ ಪಡೆದಿದ್ದಾರೆ.
ಮಂಗಳೂರು ಹೊರವಲಯದ ದೆಕ್ಕಾಡಿಯಲ್ಲಿನ ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಆಗಮಿಸಿದ ರಚಿತಾ, ನೇರವಾಗಿ ಅಜ್ಜನ ದರ್ಶನ ಪಡೆದರು. ಅದಾದ ಬಳಿಕ ಆದಿಸ್ಥಳದ ಮಂಡಳಿ ವತಿಯಿಂದ ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು. ಶಾಲು ಹೊದಿಸಿ ಸನ್ಮಾನಿಸಲಾಯಿತು.
ಇದನ್ನೂ ಓದಿ: ತೃತೀಯ ಲಿಂಗಿಗಳ ಏಳಿಗೆಗೆ ಕೈ ಜೋಡಿಸಿದ ರಾಗಿಣಿ ದ್ವಿವೇದಿ; ನಟಿಯ ಕಾರ್ಯಕ್ಕೆ ಸಿಕ್ತು ಮಂಗಳಮುಖಿಯರ ಆಶೀರ್ವಾದ
ಜೂನ್ ತಿಂಗಳಲ್ಲಿ ನಟಿ ರಚಿತಾ ಅವರ ಎರಡು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಮ್ಯಾಟ್ನಿ ಮತ್ತು ಬ್ಯಾಡ್ ಮ್ಯಾನರ್ಸ್ ಸಿನಿಮಾಗಳು ಯಶಸ್ವಿಯಾಗಲೆಂದು ದೇವರ ಬಳಿ ಬೇಡಿಕೊಂಡೆ ಎಂಬುದನ್ನು ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲ ಈ ಸ್ಥಳದ ಮಹಿಮೆಯೂ ಅಪಾರ. ಅದನ್ನೊಮ್ಮೆ ಕಣ್ತುಂಬಿಕೊಳ್ಳಬೇಕಿತ್ತು. ನನ್ನ ಸ್ನೇಹಿತರೂ ಈ ಸ್ಥಳದ ಬಗ್ಗೆ ಸಾಕಷ್ಟು ಹೇಳಿದ್ದರು. ಆ ಕಾರಣಕ್ಕೆ ಇಲ್ಲಿಗೆ ಬಂದಿದ್ದೇನೆ ಎಂದೂ ಹೇಳಿಕೊಂಡಿದ್ದಾರೆ.
ಸೆಲೆಬ್ರಿಟಿಗಳ ಆಗಮನ
ಕುತ್ತಾರು ಕೊರಗಜ್ಜ ಆದಿಸ್ಥಳಕ್ಕೆ ಸ್ಯಾಂಡಲ್‌ವುಡ್‌ನ ಸಾಕಷ್ಟು ಸಿನಿಮಾ ಮಂದಿ ಬಂದು ಹೋಗಿದೆ. ಕಾಂತಾರ ಸಿನಿಮಾ ಯಶಸ್ಸು ಕಾಣುತ್ತಿದ್ದಂತೆ ಅಂದಿನಿಂದ ಭಕ್ತರ ಸಂಖ್ಯೆಯಲ್ಲೂ ಏರಿಕೆ ಕಂಡುಬಂದಿದೆ. ಅದರಂತೆ, ನಟ, ನಟಿಯರ ಪೈಕಿ ಶಿವರಾಜ್‌ಕುಮಾರ್ ದಂಪತಿ ಸಹ ಈ ಆದಿಸ್ಥಳಕ್ಕೆ ಆಗಮಿಸಿ ದರ್ಶನ ಪಡೆದಿತ್ತು. ನಟಿ ಪ್ರೇಮಾ ಸಹ ಆಗಮಿಸಿ ಮದುವೆ ವಿಚಾರ ಪ್ರಸ್ತಾಪಿಸಿದ್ದರು.ಇತ್ತೀಚೆಗಷ್ಟೇ ನಟಿ ಮಾಲಾಶ್ರೀ ಕುಟುಂಬ ಸಮೇತ ಬಂದು ಕೊರಗಜ್ಜನ ಆಶೀರ್ವಾದ ಪಡೆದಿತ್ತು. ಈಗ ರಚಿತಾ ರಾಮ್ ಆಗಮಿಸಿದ್ದಾರೆ.
ಸಿನಿಮಾ ಸಂಬಂಧಿ ಈ ಸುದ್ದಿಗಳನ್ನೂ ಓದಿ
Daali Dhananjay: ಸರ್ಕಾರಿ ಶಾಲೆ ಉಳೀಬೇಕು, ಬಡವರಿಗೆ ಉಚಿತ ಅಕ್ಕಿ ಕೊಡಬೇಕು; ಸರ್ಕಾರಿ ಮಾದರಿ ಶಾಲೆ ಉದ್ಘಾಟಿಸಿದ ನಟ ಧನಂಜಯ್
ಡಾಲಿ ಧನಂಜಯ್ ಸದ್ಯ ಡೇರ್ ಡೆವಿಲ್ ಮುಸ್ತಾಫಾ ಚಿತ್ರದ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಕರ್ನಾಟಕದ ಜತೆಗೆ ವಿದೇಶದಲ್ಲಿಯೂ ಈ ಸಿನಿಮಾವನ್ನು ಕೊಂಡೊಯ್ದಿದ್ದಾರೆ. ಅಲ್ಲಿನ ಕರುನಾಡ ಜನತೆಗೂ ಈ ಸಿನಿಮಾ ತಲುಪಿಸುವ ಕಾಯಕಕ್ಕೆ ಮುಂದಾಗಿದ್ದಾರೆ. ಈ ನಡುವೆ, ಇಂದಿನಿಂದ (ಮೇ 31) ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಶುರುವಾಗಿವೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚೆಲುವರಸನಕೊಪ್ಪಲು ಗ್ರಾಮದಲ್ಲಿನ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಬದಲಾಯಿಸಲಾಗಿದೆ. ಆ ಶಾಲೆಯ ಆರಂಭೋತ್ಸವದಲ್ಲಿ ಧನಂಜಯ್ ಭಾಗವಹಿಸಿದ್ದರು. ಈ ವೇಳೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಅವರು ಹಂಚಿಕೊಂಡಿದ್ದಾರೆ.