ಕನ್ನಡ ಸುದ್ದಿ  /  Photo Gallery  /  Television News Amruthadhaare Serial Today Episode March 28 Goutham Bring Jasmine Flower To Bhumika Mysore Mallige Pcp

Amruthadhaare: ಘಮಘಮ ಮೈಸೂರು ಮಲ್ಲಿಗೆ ತಂದ ಗೌತಮ್‌; ಹೂವನ್ನೇ ಹೂವು ಮುಡಿದುಕೊಂಡ ಹಾಗೆ ಅಂದಾಗ ನಾಚಿಕೊಂಡ್ರು ಭೂಮಿಕಾ ಮೆಲ್ಲಗೆ

  • Amruthadhaare Serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಗೌತಮ್‌ ಮತ್ತು ಭೂಮಿಕಾರ ಪ್ರೇಮಧಾರೆ ಇನ್ನೊಂದು ಹಂತಕ್ಕೆ ತಲುಪಿದೆ. ಗೌತಮ್‌ ಭೂಮಿಕಾಳಿಗೆ ಮಲ್ಲಿಗೆ ಹೂವು ತಂದಿದ್ದಾರೆ. ಅಷ್ಟೇ ಅಲ್ಲ ತನ್ನ ಪ್ರೀತಿಯ ಮಡದಿಯ ತಲೆಕೂದಲಿಗೆ ಮಲ್ಲಿಗೆ ಮುಡಿಸಿದ್ದಾರೆ.

ಝೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋ ಬಿಡುಗಡೆ ಮಾಡಿದೆ. ಅದರಲ್ಲಿ ಗೌತಮ್‌ ಭೂಮಿಕಾಳಿಗೆ ಮಲ್ಲಿಗೆ ಹೂವು ತಂದಿದ್ದಾರೆ. ಏನೂ ಎಂದು ಇಲ್ಲದೆ ಇಂದು ಹೂವು ತಂದಿರಿ ಎಂದು ಭೂಮಿಕಾ ಆಶ್ಚರ್ಯದಿಂದ ಪ್ರಶ್ನಿಸಿದ್ದಾರೆ.
icon

(1 / 10)

ಅದಕ್ಕೆ ಗೌತಮ್‌ "ಇಲ್ಲಾ ಕಾರಲ್ಲಿ ಬರ್ತಾ ಇರುವಾಗ ಯಾರೋ ಘಮ ಘಮ ಮಲ್ಲಿಗೆ, ಮೈಸೂರು ಮಲ್ಲಿಗೆ ಎಂದು ಮಾರ್ತಾ ಇದ್ರು, ನಿಮಗೆ ಮಲ್ಲಿಗೆ ಹೂವು ತುಂಬಾ ಇಷ್ಟ, ಅದಕ್ಕೆ ತೆಗೆದುಕೊಂಡೆ" ಎನ್ನುತ್ತಾರೆ.
icon

(2 / 10)

"ಕಾರಲ್ಲಿ ಯಾರೋ ಮಾರುತ್ತ ಬರುವಾಗ ತೆಗೆದುಕೊಳ್ಳುವುದಕ್ಕೂ ಕಾರಿನಿಂದ ಇಳಿದು ತೆಗೆದುಕೊಂಡು ಬರುವುದಕ್ಕೂ ತುಂಬಾ ವ್ಯತ್ಯಾಸ ಇದೆ ಗೌತಮ್‌ ಅವರೇ" ಎಂದು ಭೂಮಿಕಾ ಹೇಳುತ್ತಾಳೆ. ಈ ಮೂಲಕ ತನಗಾಗಿ ಪ್ರೀತಿಯಿಂದ ಹೂವು ಗೌತಮ್‌ ತಂದಿದ್ದಾರೆ ಎನ್ನುವ ಅರ್ಥದಲ್ಲಿ ಭೂಮಿಕಾ ಮಾತನಾಡುತ್ತಾರೆ.
icon

(3 / 10)

"ಸಿಗ್ನಲ್‌ನಲ್ಲಿ ಕಾರು ನಿಲ್ಲಿಸಿ ತೆಗೆದುಕೊಂಡು ಬಂದೆ" ಎಂದು ಒಪ್ಪುತ್ತಾನೆ ಗೌತಮ್‌. "ನನಗೆ ಯಾವ ಹೂವು ಇಷ್ಟ ಎಂದು ತಿಳಿದು ತರಬೇಕು ಎಂದು ನಿಮಗೆ ಅನಿಸ್ತಾಲ್ವ? ಥ್ಯಾಂಕ್ಸ್‌" ಅಂತಾರೆ ಭೂಮಿಕಾ. 
icon

(4 / 10)

ಯಾಕೋ ಗೊತ್ತಿಲ್ಲ ಇತ್ತೀಚಿಗೆ ನಿಮಗೆ ಇಷ್ಟವಾಗುವುದೆಲ್ಲ ನನಗೂ ನಿಧಾನವಾಗಿ ಇಷ್ಟವಾಗಲು ಆರಂಭವಾಗಿದೆ ಎನ್ನುತ್ತಾನೆ ಗೌತಮ್‌. ನನ್ನ ಇಷ್ಟ ಕಷ್ಟ ಅರ್ಥ ಮಾಡಿಕೊಂಡಿದ್ದೀರಿ ಎಂದೆಲ್ಲ ಗೌತಮ್‌ ಮಾತನಾಡುತ್ತಾನೆ.
icon

(5 / 10)

ಇದಾದ ಬಳಿಕ ಮುಡಿಸಿ ಎಂದು ಗೌತಮ್‌ ಕೈಯಿಂದಲೇ ಹೂವನ್ನು ಮುಡಿಸಿಕೊಳ್ಳುತ್ತಾರೆ ಭೂಮಿಕಾ. ಒಟ್ಟಾರೆ ಇವರ ಕ್ಯೂಟ್‌ ಲವ್‌ ಸ್ಟೋರಿಗೆ ಪ್ರೇಕ್ಷಕರು ಖುಷಿ ವ್ಯಕ್ತಪಡಿಸಿದ್ದಾರೆ.
icon

(6 / 10)

ಭೂಮಿಕಾಳಿಗೆ "ಹೂವೇ ಹೂವನ್ನು ಮುಡಿದುಕೊಂಡ ಹಾಗಿದೆ" ಎಂದು ಗೌತಮ್‌ ಹೇಳುತ್ತಾರೆ. ನಮ್ಮ ಡುಮ್ಮ ಸರ್‌ ತುಂಬಾ ಇಂಪ್ರೂವ್‌ ಆಗಿದ್ದಾರೆ ಎಂದು ಪ್ರಮೋಗೆ ಪ್ರೇಕ್ಷಕರು ಕಾಮೆಂಟ್‌ ಮಾಡಿದ್ದಾರೆ.
icon

(7 / 10)

ನೀವು ಬಂದಾಕ್ಷಣ ತಿನ್ನಲು ಏನು ಸ್ನಾಕ್ಸ್‌ ಮಾಡ್ಲಿ ಎಂದು ಭೂಮಿ ಫೋನ್‌ ಮಾಡಿ ಕೇಳುತ್ತಾಳೆ.  ಆಫೀಸ್‌ನಿಂದ ಹೊರಟಾಗ ಗೆಳೆಯ ಆನಂದ "ಹೋಗುವುದು ಹೋಗ್ತಿಯಾ, ಹೋಗುವಾಗ ಮಲ್ಲಿಗೆ ಹೋವು ತೆಗೆದುಕೊಂಡು ಹೋಗು ಎನ್ನುತ್ತಾನೆʼ ಇದೇ ಸಲಹೆಯ ಮೇರೆಗೆ ಆನಂದ್‌ ಮಲ್ಲಿಗೆ ಹೂವು ತೆಗೆದುಕೊಂಡು ಹೋಗಿರುತ್ತಾನೆ.  
icon

(8 / 10)

ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಗೌತಮ್‌ ಮತ್ತು ಭೂಮಿಕಾರ ಪ್ರೀತಿಯ  ಮಾತುಗಳೇ ಪ್ರೇಕ್ಷಕರಿಗೆ ಮನರಂಜನೆ ನೀಡುವ ನಿರೀಕ್ಷೆ ಇದೆ. 
icon

(9 / 10)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(10 / 10)

IPL_Entry_Point

ಇತರ ಗ್ಯಾಲರಿಗಳು