ಕನ್ನಡ ಸುದ್ದಿ  /  ಮನರಂಜನೆ  /  Sakuchi Trailer: ಸಿನಿಮಾ ಪ್ರೆಸ್‌ಮೀಟ್‌ನಲ್ಲೇ ಮೈ ಮೇಲೆ ದೈವ ಆವಾಹನೆ; ವೇದಿಕೆ ಮೇಲೆಯೇ ಕುಸಿದು ಬಿದ್ದ ‘ಸಕೂಚಿ’ ಚಿತ್ರದ ನಿರ್ದೇಶಕ Video

Sakuchi Trailer: ಸಿನಿಮಾ ಪ್ರೆಸ್‌ಮೀಟ್‌ನಲ್ಲೇ ಮೈ ಮೇಲೆ ದೈವ ಆವಾಹನೆ; ವೇದಿಕೆ ಮೇಲೆಯೇ ಕುಸಿದು ಬಿದ್ದ ‘ಸಕೂಚಿ’ ಚಿತ್ರದ ನಿರ್ದೇಶಕ VIDEO

ಸಿನಿಮಾ ಬಗ್ಗೆ ಮಾತನಾಡುತ್ತಿದ್ದಂತೆ, ನಿರ್ದೇಶಕರ ಮೈ ಮೇಲೆ ದೈವ ಆವಾಹನೆಯಾಗಿದೆ! ಒಮ್ಮಿಂದೊಮ್ಮೆಲೆ ಕಿರುಚಾಡಿದ್ದಾರೆ. ಹೀಗೆ ಕಿರುಚುತ್ತಿದ್ದಂತೆ, ಪಕ್ಕದಲ್ಲಿಯೇ ಇದ್ದ ಸಿನಿಮಾತಂಡದವರೂ ಅರೇ ಕ್ಷಣ ಗಾಬರಿಯಾಗಿದ್ದಾರೆ.

ಸಿನಿಮಾ ಪ್ರೆಸ್‌ಮೀಟ್‌ನಲ್ಲೇ ಮೈ ಮೇಲೆ ದೈವ ಆವಾಹನೆ; ವೇದಿಕೆ ಮೇಲೆಯೇ ಕುಸಿದು ಬದ್ದ ‘ಸಕೂಚಿ’ ಚಿತ್ರದ ನಿರ್ದೇಶಕ VIDEO
ಸಿನಿಮಾ ಪ್ರೆಸ್‌ಮೀಟ್‌ನಲ್ಲೇ ಮೈ ಮೇಲೆ ದೈವ ಆವಾಹನೆ; ವೇದಿಕೆ ಮೇಲೆಯೇ ಕುಸಿದು ಬದ್ದ ‘ಸಕೂಚಿ’ ಚಿತ್ರದ ನಿರ್ದೇಶಕ VIDEO

Sakuchi Trailer: ನಿರ್ದೇಶಕ ಅಶೋಕ ಚಕ್ರವರ್ತಿ ಆಕ್ಷನ್‌ ಕಟ್‌ ಹೇಳಿರುವ ‘ಸಕೂಚಿ’ ಸಿನಿಮಾ ಇನ್ನೇನು ಬಿಡುಗಡೆಯ ಸನಿಹ ಬಂದು ನಿಂತಿದೆ. ಕಳೆದ ಮೂರು ವರ್ಷದ ಹಿಂದೆ ಆರಂಭವಾದ ಈ ಚಿತ್ರವನ್ನು ಇದೇ ತಿಂಗಳ 17ರಂದು ಪ್ರೇಕ್ಷಕರ ಮುಂದಿಡಲು ನಿರ್ಧರಿಸಿದ್ದಾರೆ. ಅದೇ ರೀತಿ ಪ್ರಚಾರ ಕೆಲಸವನ್ನೂ ಚಿತ್ರತಂಡ ಆರಂಭಿಸಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್‌ ಸಹ ಬಿಡುಗಡೆ ಆಗಿತ್ತು. ಈ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮಕ್ಕೆ ಮಂತ್ರವಾದಿ ವೇಷದಲ್ಲಿಯೇ ನಿರ್ದೇಶಕರು ಎಂಟ್ರಿಕೊಟ್ಟಿದ್ದರು!

ಹೌದು, ಸಹಜವಾಗಿ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಈ ರೀತಿಯ ಟೆಕ್ನಿಕ್‌ಗಳು ನಡೆಯುತ್ತಲಿರುತ್ತವೆ. ಅದು ಸಹಜ ಕೂಡ. ಆದರೆ, ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋದ ನಿರ್ದೇಶಕರು, ಮಂತ್ರವಾದಿ ವೇಷ ಧರಿಸಿ ವೇದಿಕೆ ಮೇಲೆ ಆಸೀನರಾಗಿ, ಸಿನಿಮಾ ಬಗ್ಗೆ ಮಾತನಾಡುತ್ತಿದ್ದಂತೆ, ಅವರ ಮೈ ಮೇಲೆ ದೈವ ಆವಾಹನೆಯಾಗಿದೆ! ಒಮ್ಮಿಂದೊಮ್ಮೆಲೆ ಕಿರುಚಾಡಿದ್ದಾರೆ. ಹೀಗೆ ಕಿರುಚುತ್ತಿದ್ದಂತೆ, ಪಕ್ಕದಲ್ಲಿಯೇ ಇದ್ದ ಇತರೆ ಸಿನಿಮಾತಂಡದವರೂ ಅರೇ ಕ್ಷಣ ಗಾಬರಿಯಾಗಿದ್ದಾರೆ.

ಕೆಲ ನಿಮಿಷ ಹೀಗೆ ನಡೆಯುತ್ತಿದ್ದಂತೆ, ಮಂತ್ರವಾದಿ ವೇಷ ಧರಿಸಿದ ನಿರ್ದೇಶಕ ಅಶೋಕ ಚಕ್ರವರ್ತಿ ಪ್ರಜ್ಞೆ ತಪ್ಪಿ ವೇದಿಕೆ ಮೇಲೆಯೇ ಬಿದ್ದಿದ್ದಾರೆ. ಕೂಡಲೇ ಸಿನಿಮಾತಂಡದವರು ಮತ್ತು ವೇದಿಕೆ ಮುಂಭಾಗದಲ್ಲಿದ್ದವರು ಅವರ ರಕ್ಷಣೆಗೆ ಧಾವಿಸಿದ್ದಾರೆ. ವೇದಿಕೆಯಿಂದ ಕೆಳಗಿಳಿಸಿ ಅವರನ್ನು ಪಕ್ಕಕ್ಕೆ ಕರೆದೊಯ್ದು, ನೀರು ಕುಡಿಸಿದ್ದಾರೆ.

ಹಾಗಾದರೆ ಏನಿದು ಸಕೂಚಿ?

ಬ್ಲಾಕ್‌ ಮ್ಯಾಜಿಕ್‌ ಹಿನ್ನೆಲೆಯಲ್ಲಿ ಮೂಡಿಬಂದ ಈ ಸಿನಿಮಾದ ಬಗ್ಗೆ ನಿರ್ದೇಶಕರು ಈ ರೀತಿ ಮಾಹಿತಿ ನೀಡಿದ್ದಾರೆ. ‘ಇದು ನಾನು ನಿರ್ದೇಶನ ಮಾಡಿರುವ ಮೊದಲ ಸಿನಿಮಾ. ಚಿತ್ರದಲ್ಲೊಂದು ವಿಭಿನ್ನವಾದ ಪಾತ್ರವಿದೆ. ಹಾಗಾಗಿ ನಾನು ಈ ಗೆಟಪ್‌ನಲ್ಲಿ ಇಲ್ಲಿಗೆ ಬಂದಿದ್ದೇನೆ ಎಂದು ಮಂತ್ರವಾದಿ ಗೆಟಪ್‌ನಲ್ಲಿ ಬಂದ ಕಾರಣ ತಿಳಿಸಿದರು. ‘ನಾನು ಈ 'ಸಕೂಚಿ' ಎಂಬ ಶಬ್ದವನ್ನು ಒಂದಿಷ್ಟು ಕಡೆ ಕೇಳಿದ್ದೆ. ಆ ನಂತರ 'ಸಕೂಚಿ'ಗೆ ಅರ್ಥ ಅತಿ ಘೋರವಾದ ವಾಮಾಚಾರ ಎಂದು ಗೊತ್ತಾಯ್ತು. ಈ ಬ್ಲಾಕ್ ಮ್ಯಾಜಿಕ್ ಕತೆಯನ್ನು ತೆಗೆದುಕೊಂಡು ಕಮರ್ಶಿಯಲ್ ಆಗಿ ಸಿನಿಮಾ ಮಾಡಲಾಗಿದೆ. ಇದರಲ್ಲಿ ನಾಯಕ ಹೇಗೆ ಸಕೂಚಿಗೆ ಒಳಗಾಗುತ್ತಾನೆ ಎಂಬುದು ಮುಖ್ಯವಾದ ಅಂಶ. ಶೂಟಿಂಗ್ ಟೈಮ್‌ನಲ್ಲಿ ಒಂದಷ್ಟು ಘಟನೆಗಳು ನಡೆದಿದ್ದು, ನಮ್ಮಗಳ ಗಮನಕ್ಕೆ ಬಂದಿದೆ. ಸಾಕಷ್ಟು ಕಷ್ಟಪಟ್ಟು ಇಷ್ಟಪಟ್ಟು ಸಿನಿಮಾ ಮಾಡಿದ್ದು, ಎಲ್ಲಾ ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕಾಗಿ ನಾವು ಕತೆಯಾಗಿ ಬದುಕಿದ್ದೇವೆ. ಸಿನಿಮಾವನ್ನು ದೈವ ಬಬ್ಬುಸ್ವಾಮಿಗೆ ಅರ್ಪಣೆ ಮಾಡುತ್ತೇನೆ’ ಎಂದಿದ್ದಾರೆ.

ಈ ಚಿತ್ರದಲ್ಲಿ ‘ರಂಗನಾಯಕಿ’ ಚಿತ್ರದಲ್ಲಿ ನಟಿಸಿದ್ದ ತ್ರಿವಿಕ್ರಮ ಸಾಮ್ರಾಟ್ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಮಿಸ್ ಮೈಸೂರು ಕಿರೀಟದಾರಿ ಡಯಾನ ಈ ಚಿತ್ರದ ನಾಯಕಿ. ಅಂದಂಗೆ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ ಬಿಟ್ ಗುರು ಬ್ಯಾಂಡ್ ಖ್ಯಾತಿಯ ಗಣೇಶ್ ಗೋವಿಂದಸ್ವಾಮಿ. ಸಕೂಚಿ ಅವರ ಮೊದಲ ಸಂಗೀತ ನಿರ್ದೇಶನದ ಚಿತ್ರವಾಗಿದೆ. ಆನಂದ್ ಸುಂದ್ರೇಶ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಮಹೇಶ್ ಸಂಕಲನ, ಕುಂಫು ಚಂದ್ರು ಸಾಹಸ, ಆನಂದ್ ನೃತ್ಯವಿದೆ. ಅಶ್ವಿನ್ ಬಿ.ಸಿ ನಿರ್ಮಾಣದ ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಮಧುಕರ್ ಜೆ ಹಾಗೂ ಮಹಾವೀರ್ ಪ್ರಸಾದ್ ಸಾಥ್ ನೀಡಿದ್ದಾರೆ. ಸತ್ಯ ಸಿನಿ ಡಿಸ್ಟಿಬ್ಯೂಟರ್ಸ್ ನ ಸತ್ಯ ಪ್ರಕಾಶ್ ಹಾಗೂ ಮಂಜುನಾಥ ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ.

IPL_Entry_Point