ಜಿಟಿ ವಿರುದ್ಧ ಗೆದ್ದ ಆರ್ಸಿಬಿ ಭಾರಿ ಜಿಗಿತ; 10ನೇ ಸ್ಥಾನಕ್ಕೆ ಜಾರಿದ ಮುಂಬೈ ಇಂಡಿಯನ್ಸ್- ಹೀಗಿದೆ ಐಪಿಎಲ್ ಅಂಕಪಟ್ಟಿ
- IPL 2024 Points Table updated: 17ನೇ ಆವೃತ್ತಿಯ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದ ನಂತರ ಪಾಯಿಂಟ್ಸ್ ಟೇಬಲ್ ಹೇಗಿದೆ? ಇಲ್ಲಿದೆ ವಿವರ.
- IPL 2024 Points Table updated: 17ನೇ ಆವೃತ್ತಿಯ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದ ನಂತರ ಪಾಯಿಂಟ್ಸ್ ಟೇಬಲ್ ಹೇಗಿದೆ? ಇಲ್ಲಿದೆ ವಿವರ.
(1 / 10)
ಐಪಿಎಲ್ 2024ರಲ್ಲಿ ರಾಜಸ್ಥಾನ್ ರಾಯಲ್ಸ್ ಅತ್ಯಂತ ಸ್ಥಿರವಾದ ತಂಡವಾಗಿದೆ. ತನ್ನ ಕಳೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 1 ರನ್ನಿಂದ ಸೋತರೂ ಸಂಜು ಸ್ಯಾಮ್ಸನ್ ಪಡೆ ಅಗ್ರಸ್ಥಾನದಲ್ಲೇ ಉಳಿದುಕೊಂಡಿದೆ. ಆರ್ಆರ್ ಆಡಿರುವ 10 ಪಂದ್ಯಗಳಲ್ಲಿ 8 ಗೆಲುವು, 2 ಸೋಲು ಕಂಡಿದೆ. ಸಂಜು ಪಡೆ, 16 ಅಂಕಗಳೊಂದಿಗೆ ಲೀಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನೆಟ್ ರನ್ ರೇಟ್ +0.622 ಆಗಿದೆ.
(2 / 10)
ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಪ್ಲೇ ಆಫ್ ಹಾದಿಯನ್ನು ಬಲಪಡಿಸಿದೆ. 10 ಪಂದ್ಯಗಳಲ್ಲಿ 14 ಅಂಕಗಳನ್ನು ಹೊಂದಿರುವ ಕೆಕೆಆರ್, 2ನೇ ಸ್ಥಾನದಲ್ಲಿದೆ. ಕೋಲ್ಕತಾ 10ರಲ್ಲಿ 7 ಗೆಲುವು, 3ರಲ್ಲಿ ಸೋತಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ತಂಡ +1.098 ನೆಟ್ ರನ್ ರೇಟ್ ಹೊಂದಿದೆ.
(3 / 10)
ಲಕ್ನೋ ಸೂಪರ್ ಜೈಂಟ್ಸ್ 3ನೇ ಸ್ಥಾನದಲ್ಲಿದೆ. ಕೆಎಲ್ ರಾಹುಲ್ ಪಡೆ ಆಡಿರುವ 10 ಪಂದ್ಯಗಳಲ್ಲಿ 12 ಅಂಕಗಳನ್ನು ಗಳಿಸಿದೆ. 6ರಲ್ಲಿ ಗೆಲುವು, ನಾಲ್ಕು ಪಂದ್ಯಗಳಲ್ಲಿ ಸೋತಿದೆ. ಎಲ್ಎಸ್ಜಿ ನೆಟ್ ರನ್ ರೇಟ್ +0.094 ಆಗಿದೆ.
(4 / 10)
ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಸನ್ರೈಸರ್ಸ್ ಹೈದರಾಬಾದ್, ಆಡಿರುವ 10 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 4ರಲ್ಲಿ ಸೋತಿದೆ. 12 ಅಂಕ ಪಡೆದಿದೆ. ನೆಟ್ ರನ್ ರೇಟ್ನಲ್ಲಿ ಎಲ್ಎಸ್ಜಿಗಿಂತ (+0.072) ಹಿಂದುಳಿದಿದೆ. ಆಗಿದೆ.
(5 / 10)
ಚೆನ್ನೈ ಸೂಪರ್ ಕಿಂಗ್ಸ್ 5ನೇ ಸ್ಥಾನದಲ್ಲಿದೆ. 10 ಪಂದ್ಯಗಳಲ್ಲಿ 5ರಲ್ಲಿ ಸೋತಿದೆ. ಚೆನ್ನೈ 5 ಪಂದ್ಯಗಳನ್ನು ಗೆದ್ದಿದೆ. ಸಿಎಸ್ಕೆ 10 ಅಂಕ ಸಂಪಾದಿಸಿದೆ. ಋತುರಾಜ್ ಗಾಯಕ್ವಾಡ್ ನೇತೃತ್ವದ ತಂಡ ಈಗ 0.627 ನೆಟ್ ರನ್ ರೇಟ್ ಹೊಂದಿದೆ
(6 / 10)
ಪಾಯಿಂಟ್ಸ್ ಟೇಬಲ್ನಲ್ಲಿ 6ನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್, 11 ಪಂದ್ಯಗಳಲ್ಲಿ 5 ಗೆದ್ದಿದೆ. ರಿಷಭ್ ಪಂತ್ ನೇತೃತ್ವದ ತಂಡ 6 ಪಂದ್ಯಗಳನ್ನು ಸೋತಿದೆ. 10 ಅಂಕ ಗಳಿಸಿರುವ ಡೆಲ್ಲಿ ನೆಟ್ ರನ್ ರೇಟ್ -0.442 ಆಗಿದೆ.
(7 / 10)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಶನಿವಾರ (ಮೇ 4) ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಲೀಗ್ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಜಿಗಿಗಿದೆ. ಆಡಿರುವ 11ರಲ್ಲಿ 4 ಜಯ, 7 ಸೋಲು ಅನುಭವಿಸಿದ್ದು 8 ಅಂಕ ಪಡೆದಿದೆ. ಈ ಪಂದ್ಯಕ್ಕೂ ಮುನ್ನ ಆರ್ಸಿಬಿ 10ನೇ ಸ್ಥಾನದಲ್ಲಿದ್ದ ಆರ್ಸಿಬಿ ಈಗ 7ನೇ ಸ್ಥಾನಕ್ಕೆ ಏರಿದೆ. ಪ್ರಸ್ತುತ ತಂಡದ ಪ್ಲೇಆಫ್ ಆಸೆ ಜೀವಂತವಾಗಿದೆ. ಫಾಫ್ ಡು ಪ್ಲೆಸಿಸ್ ತಂಡದ ನೆಟ್ ರನ್ ರೇಟ್ -0.049 ಆಗಿದೆ.
(8 / 10)
ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ 7 ರಿಂದ ಎಂಟನೇ ಸ್ಥಾನಕ್ಕೆ ಕುಸಿದಿದೆ. ಪಂಜಾಬ್ 10ರಲ್ಲಿ 4 ಗೆಲುವು, ಆರರಲ್ಲಿ ಸೋತಿದೆ. 8 ಅಂಕ ಪಡೆದಿರುವ ಪಿಬಿಕೆಎಸ್, ನೆಟ್ ರನ್ ರೇಟ್ -0.062 ಆಗಿದೆ.
(9 / 10)
ಶನಿವಾರ (ಮೇ 4) ಆರ್ಸಿಬಿ ವಿರುದ್ಧ ಸೋತ ನಂತರ ಗುಜರಾತ್ ಟೈಟಾನ್ಸ್ ದೊಡ್ಡ ಹಿನ್ನಡೆ ಅನುಭವಿಸಿತು. ಪಾಯಿಂಟ್ಸ್ ಟೇಬಲ್ನಲ್ಲಿ 9ಕ್ಕೆ ಕುಸಿದಿದೆ. 11 ಪಂದ್ಯಗಳಲ್ಲಿ 4 ಜಯ, 7 ಸೋಲು ಕಂಡಿದೆ. 8 ಅಂಕ ಪಡೆದಿದೆ. ಶುಭ್ಮನ್ ಗಿಲ್ ಪಡೆ -1.320 ನೆಟ್ ರನ್ ರೇಟ್ ಹೊಂದಿದೆ.
ಇತರ ಗ್ಯಾಲರಿಗಳು