ಕನ್ನಡ ಸುದ್ದಿ  /  ಕ್ರಿಕೆಟ್  /  Explainer: ಐಪಿಎಲ್ ಟಾಸ್ ನಾಣ್ಯದ ಬೆಲೆ ಎಷ್ಟು; ಕಾಯಿನ್ ತಯಾರಿ ಹೇಗೆ, ಟೂರ್ನಿ ಬಳಿಕ ನಾಣ್ಯವನ್ನು ಬಿಸಿಸಿಐ ಎನು ಮಾಡುತ್ತೆ?

Explainer: ಐಪಿಎಲ್ ಟಾಸ್ ನಾಣ್ಯದ ಬೆಲೆ ಎಷ್ಟು; ಕಾಯಿನ್ ತಯಾರಿ ಹೇಗೆ, ಟೂರ್ನಿ ಬಳಿಕ ನಾಣ್ಯವನ್ನು ಬಿಸಿಸಿಐ ಎನು ಮಾಡುತ್ತೆ?

IPL Toss Coin:‌ ಐಪಿಎಲ್ ಪಂದ್ಯಾವಳಿಯಲ್ಲಿ ಟಾಸ್‌ ಪ್ರಕ್ರಿಯೆಗೆ ಬಳಸುವ ನಾಣ್ಯಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಬೇರೆ ಯಾವುದೇ ಟೂರ್ನಿಗೂ ಈ ನಾಣ್ಯಗಳನ್ನು ಬಳಸಲಾಗುವುದಿಲ್ಲ. ಹಾಗಿದ್ದರೆ ಈ ನಾಣ್ಯದ ವಿಶೇಷವೇನು? ಇದರ ಬೆಲೆ ಎಷ್ಟಿರಬಹುದು ಎಂಬ ಮಾಹಿತಿ ಇಲ್ಲಿದೆ.

 ಐಪಿಎಲ್ ಟಾಸ್ ನಾಣ್ಯದ ಬೆಲೆ ಎಷ್ಟು; ಕಾಯಿನ್ ತಯಾರಿ ಹೇಗೆ
ಐಪಿಎಲ್ ಟಾಸ್ ನಾಣ್ಯದ ಬೆಲೆ ಎಷ್ಟು; ಕಾಯಿನ್ ತಯಾರಿ ಹೇಗೆ

ಕ್ರಿಕೆಟ್ ಪಂದ್ಯದ ಆರಂಭಕ್ಕೂ ಮುನ್ನ ಟಾಸ್ ಪ್ರಕ್ರಿಯೆ ನಡೆಸಲಾಗುತ್ತದೆ. ನಾಣ್ಯವನ್ನು ಚಿಮ್ಮಿಸುವ ಮೂಲಕ, ಈ ಪ್ರಕ್ರಿಯೆ ನಡೆಸಲಾಗುತ್ತದೆ. ಟಾಸ್‌ ಗೆಲ್ಲುವ ತಂಡವು ತನ್ನಿಷ್ಟದಂತೆ ಬ್ಯಾಟಿಂಗ್ ಅಥವಾ ಬೌಲಿಂಗ್ ಆಯ್ಕೆ ಮಾಡುತ್ತದೆ. ಹೆಚ್ಚಿನ ಪಂದ್ಯಗಳಲ್ಲಿ ಪಂದ್ಯದ ಗೆಲುವಿನಲ್ಲಿನ ಟಾಸ್ ಗೆಲ್ಲುವ ತಂಡವು ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಟಾಸ್‌ ಪ್ರಕ್ರಿಯೆಯನ್ನು ನಾಣ್ಯದ ಮೂಲಕ ಮಾಡುವ ಕುರಿತು ಎಲ್ಲರಿಗೂ ತಿಳಿದಿದೆ. ಎರಡು ದೇಶಗಳ ನಡುವೆ ಪಂದ್ಯಗಳು ನಡೆಯುವಾಗ ಸಾಮಾನ್ಯವಾಗಿ ಆತಿಥೇಯ ತಂಡದ ಕರೆನ್ಸಿಯನ್ನೇ ಟಾಸ್‌ಗೆ ನಾಣ್ಯವಾಗಿ ಬಳಸಲಾಗುತ್ತದೆ. ನಾಣ್ಯದ ಎರಡು ವಿಭಿನ್ನ ಬದಿಗಳಲ್ಲಿ ಒಂದು ಬದಿ ಹೆಡ್‌ ಆದರೆ, ಇನ್ನೊಂದನ್ನು ಟೇಲ್ಸ್‌ ಎಂದು ಕರೆಯಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ನಾವೀಗ ಐಪಿಎಲ್‌ ಪಂದ್ಯಾವಳಿಯಲ್ಲಿ ಬಳಸಲಾಗುವ ಟಾಸ್ ಕಾಯಿನ್ ಬಗ್ಗೆ ಮಾತನಾಡೋಣ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಟಾಸ್‌ ಪ್ರಕ್ರಿಯೆ ವೇಳೆ ನಾಣ್ಯವನ್ನು ಹತ್ತಿರದಿಂದ ಜೂಮ್‌ ಮಾಡಿ ತೋರಿಸುತ್ತಾರೆ. ಆಗ ನೀವು ಕೂಡಾ ಆ ನಾಣ್ಯವನ್ನು ನೋಡಿರಬಹುದು. ಐಪಿಎಲ್‌ ಲೋಗೋ ಇರುವ ಆ ನಾಣ್ಯವು ನಿಮ್ಮ ಕಣ್ಣಿಗೂ ಭಿನ್ನವಾಗಿ ಕಾಣಿಸಿರಬಹುದು. ಹಾಗಿದ್ದರೆ ಐಪಿಎಲ್‌ ಟಾಸ್‌ ಕಾಯಿನ್‌ ವಿಶೇಷಗಳೇನು? ಅದಕ್ಕೆ ಎಷ್ಟು ವೆಚ್ಚವಾಗುತ್ತದೆ ಎಂಬ ಕುರಿತು ತಿಳಿಯೋಣ.

ಐಪಿಎಲ್ ಟಾಸ್ ಕಾಯಿನ್ ಯಾವ ಲೋಹದ್ದು?

ಐಪಿಎಲ್ ಟಾಸ್‌ಗೆ ಬಳಸುವ ನಾಣ್ಯಗಳನ್ನು ಮುಖ್ಯವಾಗಿ ಚಿನ್ನದಿಂದ ಮಾಡಲಾಗಿದೆ. ಇದನ್ನು ಪಂದ್ಯಾವಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಅಂದರೆ, ಬೇರೆ ಯಾವುದೇ ಟೂರ್ನಿಗೂ ಈ ನಾಣ್ಯಗಳನ್ನು ಬಳಸಲಾಗುವುದಿಲ್ಲ. 2023ರಲ್ಲಿ ನಡೆದ ಐಪಿಎಲ್ 16ನೇ ಸೀಸನ್‌ನಲ್ಲಿ ಬಳಸಲಾದ ನಾಣ್ಯದ ತೂಕ 16 ಗ್ರಾಂ ಎಂಬ ಮಾಹಿತಿ ಇದೆ. ಈ ಬಾರಿಯ ಟೂರ್ನಿಯ ಕಾಯಿನ್‌ ತೂಕ ಬಹಿರಂಗಗೊಂಡಿಲ್ಲ. ಆದರೆ, ಬಹುತೇಕ ಇದೇ ತೂಕ ಇರುವ ಸಾಧ್ಯತೆ ಇದೆ. ಒಂದು ನಾಣ್ಯವನ್ನು ವಿನ್ಯಾಸಗೊಳಿಸಲು 4000 ರೂಪಾಯಿವರೆಗೆ ವೆಚ್ಚವಾಗುತ್ತದೆ.

ಇದನ್ನೂ ಓದಿ | ಆರ್‌ಸಿಬಿಗೆ ವೆಂಟಿಲೇಟರ್ ಬೇಡ, ಆದರೆ ತಂಡ ಇನ್ನೂ ಐಸಿಯುನಲ್ಲಿದೆ; ಪ್ಲೇಆಫ್ ಲೆಕ್ಕಾಚಾರಕ್ಕೆ ಜಡೇಜಾ ಫುಲ್‌ಸ್ಟಾಪ್

ಐಪಿಎಲ್ ಪಂದ್ಯಾವಳಿಯನ್ನು ನಡೆಸುವ ಬಿಸಿಸಿಐ, ಈ ಕಾಯಿನ್ ತಯಾರಿಸುತ್ತದೆ. ಪಂದ್ಯಾವಳಿಗಾಗಿ ಸುಮಾರು 20ರಿಂದ 25 ಟಾಸ್‌ ನಾಣ್ಯಗಳನ್ನು ತಯಾರಿಸಲಾಗುತ್ತದೆ. ಪಂದ್ಯಗಳು ನಡೆಯುವ ಪ್ರತಿ ಮೈದಾನಕ್ಕೂ ತಲಾ 2 ನಾಣ್ಯಗಳನ್ನು ನೀಡಲಾಗುತ್ತದೆ. ಉಳಿದವುಗಳನ್ನು ಬ್ಯಾಕಪ್ ನಾಣ್ಯಗಳಾಗಿ ಇಟ್ಟುಕೊಳ್ಳಲಾಗುತ್ತದೆ. ಈ ನಾಣ್ಯದಲ್ಲಿಯೇ ಒಂದು ಬದಿಯಲ್ಲಿ H ಹಾಗೂ ಇನ್ನೊಂದು ಬದಿಯಲ್ಲಿ T ಎಂದು ಬರೆಯಲಾಗಿದೆ. ಅಂದರೆ ಹೆಡ್ಸ್ ಮತ್ತು ಟೇಲ್ಸ್ ಎಂದರ್ಥ. ಇದರೊಂದಿಗೆ ಐಪಿಎಲ್ ಪ್ರಾಯೋಜಕರ ಹೆಸರನ್ನು ಒಂದು ಬದಿಯಲ್ಲಿ ಬರೆದರೆ, ಪಂದ್ಯಾವಳಿಯ ವರ್ಷವನ್ನು ಮತ್ತೊಂದು ಬದಿಯಲ್ಲಿ ಬರೆಯಲಾಗುತ್ತದೆ.

ಐಪಿಎಲ್ ಮುಗಿದ ನಂತರ ನಾಣ್ಯಗಳನ್ನು ಏನು ಮಾಡಲಾಗುತ್ತದೆ?

ಪ್ರತಿ ಐಪಿಎಲ್ ಋತುವಿನ ಮುಗಿದ ನಂತರ, ನಾಣ್ಯಗಳನ್ನು ಬಿಸಿಸಿಐ ಇಟ್ಟುಕೊಳ್ಳುತ್ತದೆ. ಕಾಲಕಾಲಕ್ಕೆ ಅದನ್ನು ಹರಾಜಿನ ಮೂಲಕ ಮಾರಾಟ ಮಾಡುತ್ತದೆ. ಈ ನಾಣ್ಯಗಳು ಭಾರಿ ಮೊತ್ತಕ್ಕೆ ಹರಾಜಾಗುತ್ತವೆ. ಕೊನೆಯ ಬಾರಿಗೆ 2024ರಲ್ಲಿ ಟಾಸ್‌ ನಾಣ್ಯಗಳನ್ನು ಹರಾಜು ಮಾಡಲಾಗಿತ್ತು.

ಈ ಬಾರಿಯ ಪಂದ್ಯಾವಳಿ ವೇಳೆ ಟಾಸ್‌ ಪ್ರಕ್ರಿಯೆಯ ಸಮಯದಲ್ಲಿ ಕಾಯಿನ್‌ ಅನ್ನು ಹತ್ತಿರದಿಂದ ತೋರಿಸಲಾಗುತ್ತಿದೆ. ಹೀಗಾಗಿ ಈ ನಾಣ್ಯ ಹೇಗಿದೆ ಎಂಬುದು ವೀಕ್ಷಕರಿಗೆ ಸುಲಭವಾಗಿ ತಿಳಿಯುತ್ತಿದೆ.

IPL_Entry_Point