ಕನ್ನಡ ಸುದ್ದಿ  /  ಕ್ರಿಕೆಟ್  /  ಸತತ 5 ಸೋಲಿನ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ಧ ಕೊನೆಗೂ ಗೆದ್ದ ಸಿಎಸ್‌ಕೆ; ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಲಗ್ಗೆ

ಸತತ 5 ಸೋಲಿನ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ಧ ಕೊನೆಗೂ ಗೆದ್ದ ಸಿಎಸ್‌ಕೆ; ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಲಗ್ಗೆ

PBKS vs CSK: ಪಂಜಾಬ್‌ ಕಿಂಗ್ಸ್‌ ವಿರುದ್ಧ ಭರ್ಜರಿ ಜಯ ಸಾಧಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಐಪಿಎಲ್‌ 2024ರ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಅತ್ತ ಸೋಲಿನೊಂದಿಗೆ ಸ್ಯಾಮ್‌ ಕರನ್‌ ಪಡೆಯ ಪ್ಲೇ ಆಫ್‌ ಆಸೆ ಕಡಿಮೆಯಾಗಿದೆ.

ಸತತ 5 ಸೋಲಿನ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ಧ ಕೊನೆಗೂ ಗೆದ್ದ ಸಿಎಸ್‌ಕೆ
ಸತತ 5 ಸೋಲಿನ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ಧ ಕೊನೆಗೂ ಗೆದ್ದ ಸಿಎಸ್‌ಕೆ (PTI)

ಪಂಜಾಬ್ ಕಿಂಗ್ಸ್ ವಿರುದ್ಧ ಸತತ ಸೋಲು ಅನುಭವಿಸುತ್ತಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಕೊನೆಗೂ ಗೆಲುವಿನ ರುಚಿ ಕಂಡಿದೆ. ಪಂಜಾಬ್‌ ವಿರುದ್ಧ ಆಡಿದ್ದ ಕೊನೆಯ ಎಲ್ಲಾ ಐದು ಪಂದ್ಯಗಳಲ್ಲಿಯೂ ಮುಗ್ಗರಿಸಿದ್ದ ಸಿಎಸ್‌ಕೆ, ಇದೀಗ ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ 28 ರನ್‌ಗಳಿಂದ ಗೆದ್ದಿದೆ. ಇದರೊಂದಿಗೆ ಐಪಿಎಲ್‌ 2024ರ ಆವೃತ್ತಿಯಲ್ಲಿ ಪ್ಲೇ ಆಫ್‌ ಆಸೆಯನ್ನು ಇನ್ನೂ ಜೀವಂತವಾಗಿ ಇರಿಸಿಕೊಂಡಿದೆ. ಅತ್ತ ಸತತ ಕೊನೆಯ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಪ್ಲೇ ಆಫ್‌ ಹಂತಕ್ಕೇರುವ ಕನಸು ಹೊತ್ತಿದ್ದ ಸ್ಯಾಮ್‌ ಕರನ್‌ ಪಡೆ, ಸಿಎಸ್‌ಕೆ ವಿರುದ್ಧ ಸೋಲಿನೊಂದಿಗೆ ಮತ್ತೆ ಹಿನ್ನಡೆ ಅನುಭವಿಸಿದೆ.

ಟ್ರೆಂಡಿಂಗ್​ ಸುದ್ದಿ

ಪಂದ್ಯದಲ್ಲಿ ಟಾಸ್‌ ಗೆದ್ದ ಪಂಜಾಬ್‌ ಕಿಂಗ್ಸ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟ್‌ ಬೀಸಿದ ಋತುರಾಜ್‌ ಗಾಯಕ್ವಾಡ್‌ ಬಳಗವು, 9 ವಿಕೆಟ್‌ ಕಳೆದುಕೊಂಡು 167 ರನ್‌ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಪಂಜಾಬ್‌ ಕಿಂಗ್ಸ್‌, ಮೇಲಿಂದ ಮೇಲೆ ವಿಕೆಟ್‌ ಕಳೆದುಕೊಂಡು ಅಂತಿಮವಾಗಿ 9 ವಿಕೆಟ್‌ ಕಳೆದುಕೊಂಡು 139 ರನ್‌ ಗಳಿಸಲಷ್ಟೇ ಶಕ್ತವಾಯ್ತು.

ಮೊದಲು ಬ್ಯಾಟಿಂಗ್‌ ನಡೆಸಿದ ಚೆನ್ನೈಗೆ ಉತ್ತಮ ಆರಂಭ ಸಿಗಲಲ್ಲ. ಅಜಿಂಕ್ಯ ರಹಾನೆ 9 ರನ್‌ ಗಳಿಸಿ ಔಟಾದರು. ಈ ವೇಳೆ ಒಂದಾದ ನಾಯಕ ಋತುರಾಜ್‌ ಹಾಗೂ ಡೇರಿಲ್‌ ಮಿಚೆಲ್‌ ಅರ್ಧಶತಕದ ಜೊತೆಯಾಟವಾಡಿದರು. 21 ಎಸೆತಗಳಲ್ಲಿ 32 ರನ್‌ ಗಳಿಸಿ ಗಾಯಕ್ವಾಡ್‌ ಔಟಾದರೆ, ಅವರ ಬೆನ್ನಲ್ಲೇ ಶಿವಂ ದುಬೆ ಗೋಲ್ಡನ್‌ ಡಕ್‌ ಆದರು. ಆ ಮೂಲಕ ಸತತ ಎರಡು ಪಂದ್ಯಗಳಲ್ಲಿ ಮೊದಲ ಎಸೆತದಲ್ಲೇ ಔಟಾದರು. ಮಿಚೆಲ್‌ ಆಟ 30 ರನ್‌ಗೆ ಅಂತ್ಯವಾದರೆ, ಮೊಯೀನ್‌ ಅಲಿ 17 ರನ್ ಗಳಿಸಿದರು.

ಇದನ್ನೂ ಓದಿ | ಜಿಟಿ ವಿರುದ್ಧ ಗೆದ್ದ ಆರ್​​ಸಿಬಿ ಭಾರಿ ಜಿಗಿತ; 10ನೇ ಸ್ಥಾನಕ್ಕೆ ಜಾರಿದ ಮುಂಬೈ ಇಂಡಿಯನ್ಸ್- ಹೀಗಿದೆ ಐಪಿಎಲ್ ಅಂಕಪಟ್ಟಿ

ಸ್ಯಾಂಟ್ನರ್‌ 11 ರನ್‌ ಗಳಿಸಿದರೆ, ಶಾರ್ದುಲ್‌ ಠಾಕೂರ್‌ 17 ರನ್‌ ಗಳಿಸಿ ನಿರ್ಗಮಿಸಿದರು. ಅವರ ಬೆನ್ನಲ್ಲೇ ಎಂಎಸ್‌ ಧೋನಿ ಕೂಡಾ ಗೋಲ್ಡನ್‌ ಡಕ್‌ ಆದರು. ಅಂತಿಮವಾಗಿ ತಂಡವು 167 ರನ್‌ ಗಳಿಸಲಷ್ಟೇ ಸಾಧ್ಯವಾಯ್ತು.

ಒಂದೇ ಓವರ್‌ನಲ್ಲಿ ಇಬ್ಬರು ಕ್ಲೀನ್‌ ಬೋಲ್ಡ್‌

ಸಾಧಾರಣ ಮೊತ್ತ ಚೇಸಿಂಗ್‌ಗಳಿದ ಪಂಜಾಬ್‌, ಆರಂಭದಿಂದಲೂ ವಿಕೆಟ್‌ ಕೈಚೆಲ್ಲುತ್ತಾ ಹೋಯ್ತು. ಜಾನಿ ಬೇರ್‌ಸ್ಟೋ ಕೇವಲ 7‌ ರನ್‌ ಗಳಿಸಿದರೆ, ರೀಲಿ ರೊಸ್ಸೋ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು. ಒಂದೇ ಓವರ್‌ನಲ್ಲಿ ಇಬ್ಬರನ್ನು ಕ್ಲೀನ್‌ ಬೋಲ್ಡ್‌ ಮಾಡಿದ ತುಶಾರ್‌ ದೇಶಪಾಂಡೆ ತಂಡಕ್ಕೆ ಭಾರಿ ಮುನ್ನಡೆ ತಂದುಕೊಟ್ಟರು. ಈ ವೇಳೆ ಪ್ರಭ್‌ಸಿಮ್ರಾನ್‌ ಸಿಂಗ್‌ ಮತ್ತು ಶಶಾಂಕ್‌ ಸಿಂಗ್‌ ಕೆಲಕಾಲ ಉತ್ತಮ ಆಟವಾಡಿದರು. ಇನ್‌ಫಾರ್ಮ್‌ ಬ್ಯಾಟರ್ ಶಶಾಂಕ್‌ 27 ರನ್‌ ಗಳಿಸಿದರೆ, ಪ್ರಭ್‌ 30 ರನ್‌ ಪೇರಿಸಿ ಔಟಾದರು. ಜಿತೇಶ್‌ ಶರ್ಮಾ ಗೋಲ್ಡನ್‌ ಡಕ್‌ ಆದರೆ, ನಾಯಕ ಸ್ಯಾಮ್‌ ಕರನ್‌ ಕೇವಲ 7 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.

ಜಡೇಜಾ 3 ವಿಕೆಟ್

ಅಶುತೋಷ್‌ 3, ಹರ್ಷಲ್‌ ಪಟೇಲ್‌ 12, ರಾಹುಲ್‌ ಚಹಾರ್‌ 16 ರನ್‌ ಗಳಿಸಿ ಔಟಾದರು. ಹರ್ಪ್ರೀತ್‌ ಬ್ರಾರ್ 17 ಮತ್ತು ರಬಾಡಾ 11 ರನ್‌ ಗಳಿಸಿ ತಂಡದ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಅಂತಿಮವಾಗಿ ತಂಡವು ಎಲ್ಲಾ 20 ಓವರ್‌ ಬ್ಯಾಟ್‌ ಬೀಸಿದರು ಗೆಲುವು ಸಾಧ್ಯವಾಗಲಿಲ್ಲ. ಹೀಗಾಗಿ 28 ರನ್‌ಗಳಿಂದ ಸೋಲೊಪ್ಪಿತು. 

ಸಿಎಸ್‌ಕೆ ಪರ ಜಡೇಜಾ 3 ವಿಕೆಟ್‌ ಪಡೆದರೆ, ತುಷಾರ್‌ ಹಾಗೂ ಸಿಮರ್ಜೀತ್‌ ತಲಾ 2 ವಿಕೆಟ್‌ ಕಬಳಿಸಿದರು.

IPL_Entry_Point