ಕನ್ನಡ ಸುದ್ದಿ  /  ಕ್ರಿಕೆಟ್  /  Irfan Pathan: ಮುಂಬೈ ಇಂಡಿಯನ್ಸ್ ಎಂಬ ಯಶಸ್ವಿ ದೋಣಿ ಮುಳುಗಿದ್ದೇ ಈತನಿಂದ; ಇರ್ಫಾನ್ ಪಠಾಣ್ ಮತ್ತೆ ವಾಗ್ದಾಳಿ

Irfan Pathan: ಮುಂಬೈ ಇಂಡಿಯನ್ಸ್ ಎಂಬ ಯಶಸ್ವಿ ದೋಣಿ ಮುಳುಗಿದ್ದೇ ಈತನಿಂದ; ಇರ್ಫಾನ್ ಪಠಾಣ್ ಮತ್ತೆ ವಾಗ್ದಾಳಿ

Irfan Pathan : ಕೆಕೆಆರ್​ ವಿರುದ್ಧ ಮುಂಬೈ ಇಂಡಿಯನ್ಸ್ ಸೋಲಿನ ಬೆನ್ನಲ್ಲೇ ನಾಯಕ ಹಾರ್ದಿಕ್ ಪಾಂಡ್ಯ ಅವರ ವಿರುದ್ಧ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ಮುಂಬೈ ಇಂಡಿಯನ್ಸ್ ಎಂಬ ಯಶಸ್ವಿ ದೋಣಿ ಮುಳುಗಿದ್ದೇ ಈತನಿಂದ; ಇರ್ಫಾನ್ ಪಠಾಣ್ ಮತ್ತೆ ವಾಗ್ದಾಳಿ
ಮುಂಬೈ ಇಂಡಿಯನ್ಸ್ ಎಂಬ ಯಶಸ್ವಿ ದೋಣಿ ಮುಳುಗಿದ್ದೇ ಈತನಿಂದ; ಇರ್ಫಾನ್ ಪಠಾಣ್ ಮತ್ತೆ ವಾಗ್ದಾಳಿ

ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಮುಂಬೈ ಇಂಡಿಯನ್ಸ್ (MI) ಸೋತ ನಂತರ ಭಾರತ ದ ಮಾಜಿ ಆಲ್​ರೌಂಡರ್ ಇರ್ಫಾನ್ ಪಠಾಣ್ (Irfan Pathan) ಅವರು ನಾಯಕ ಹಾರ್ದಿಕ್ ಪಾಂಡ್ಯಗೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಗೌರವದ ಕೊರತೆ ಇದೆ ಎಂದು ಸಲಹೆ ನೀಡಿದ್ದಾರೆ. 11 ಪಂದ್ಯಗಳಲ್ಲಿ 8 ಸೋಲುಗಳೊಂದಿಗೆ ಹಾರ್ದಿಕ್ ಪಾಂಡ್ಯ, ಮುಂಬೈ ನಾಯಕನಾಗಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಆವೃತ್ತಿಯ ಋತುವಿನ ಆರಂಭದಿಂದಲೂ ಹಾರ್ದಿಕ್ ಅವರನ್ನು ಟೀಕಿಸುತ್ತಿದ್ದ ಇರ್ಫಾನ್, ಮತ್ತೊಮ್ಮೆ ಎಂಐ ನಾಯಕನ ತಂತ್ರಗಳನ್ನು ಪ್ರಶ್ನಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕೆಕೆಆರ್​ 57ಕ್ಕೆ 5 ವಿಕೆಟ್ ಕಳೆದುಕೊಂಡು ತತ್ತರಿಸುತ್ತಿದ್ದ ಅವಧಿಯಲ್ಲಿ ನಾಯಕ ಹಾರ್ದಿಕ್ ಪಾಂಡ್ಯ, ನಮನ್​ ಧೀರ್​ಗೆ ಚೆಂಡು ನೀಡಿದ್ದನ್ನು ಪ್ರಶ್ನಿಸಿದ್ದಾರೆ. ಹಾರ್ದಿಕ್ ನಿರ್ಧಾರವು ವೆಂಕಟೇಶ್ ಅಯ್ಯರ್ ಮತ್ತು ಮನೀಷ್ ಪಾಂಡೆ ತಮ್ಮ ಇನ್ನಿಂಗ್ಸ್ ಅನ್ನು ಮರುನಿರ್ಮಾಣ ಮಾಡಲು ಅವಕಾಶ ಮಾಡಿಕೊಟ್ಟಿತು ಎಂದು ಇರ್ಫಾನ್ ಹೇಳಿದ್ದಾರೆ. ಮುಂಬೈ ಇಂಡಿಯನ್ಸ್ ಕಥೆ ಇಲ್ಲಿಗೆ ಮುಗಿಯಿತು. ಈ ತಂಡ ತುಂಬಾ ಚೆನ್ನಾಗಿದೆ. ಆದರೆ ಅದನ್ನು ನಿರ್ವಹಿಸಲು ಅವರಿಂದ ಸಾಧ್ಯವಾಗಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಹಾರ್ದಿಕ್ ವಿರುದ್ಧ ಇರ್ಫಾನ್ ಪಠಾಣ್ ಗರಂ

ಮತ್ತೆ ಗರಂ ಆದ ಇರ್ಫಾನ್, ಹಾರ್ದಿಕ್ ಪಾಂಡ್ಯ ನಾಯಕತ್ವದ ಮೇಲೆ ಎದ್ದಿರುವ ಪ್ರಶ್ನೆಗಳು ಸಂಪೂರ್ಣವಾಗಿ ಸರಿ. ನೀವೇ ನೋಡಿ ಕೆಕೆಆರ್​ 57ಕ್ಕೆ 5 ವಿಕೆಟ್ ಕಳೆದುಕೊಂಡಿದ್ದಾಗ ನಮನ್​ ಧೀರ್​ಗೆ ಬೌಲಿಂಗ್ ಕೊಡುವ ಅವಶ್ಯಕತೆ ಏನಿತ್ತು? ನೀವು ಆರನೇ ಬೌಲರ್​​ ಆಗಿ 4 ಓವರ್​ ಮಾಡಿದ್ದೀರಿ. ಹೀಗಾಗಿ ಕೆಕೆಆರ್​ ಚೇತರಿಕೆ ಕಂಡಿತು. ಆರಂಭದಲ್ಲೇ ಅದ್ಭುತ ಪ್ರದರ್ಶನ ನೀಡುತ್ತಿದ್ದ ಬೌಲರ್​​ಗಳಿಗೆ ಚೆಂಡು ನೀಡಿದ್ದರೆ, 150 ರನ್​​ಗಿಂತ ಕಡಿಮೆ ಸ್ಕೋರ್​ಗೆ ಕೆಕೆಆರ್​ ಆಲೌಟ್ ಆಗುತ್ತಿತ್ತು ಎಂದು ವೈರಲ್ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ.

ಮುಂಬೈ ಏಕೀಕೃತ ತಂಡದಂತೆ ಕಾಣುತ್ತಿಲ್ಲ ಎಂದ ಇರ್ಫಾನ್

ನಾಯಕ ಹಾರ್ದಿಕ್​​ ಅವರನ್ನು ಎಂಐ ಆಟಗಾರರು ಗೌರವಿಸದೇ ಇರುವುದು ತಂಡದ ಯಶಸ್ಸಿಗೆ ಅಡ್ಡಿಪಡಿಸಿದೆ. ಆಟದಲ್ಲಿ ನಾಯಕತ್ವವು ಪ್ರಭಾವ ಬೀರುತ್ತದೆ. ಆದರೆ ಮುಂಬೈ ಇಂಡಿಯನ್ಸ್ ಏಕೀಕೃತ ತಂಡದಂತೆ ಕಾಣುತ್ತಿಲ್ಲ. ಮ್ಯಾನೇಜ್ಮೆಂಟ್ ಇದನ್ನು ಪರಿಗಣಿಸಬೇಕು. ಆಟಗಾರರು ನಾಯಕನನ್ನು ಗೌರವಿಸಬೇಕು ಮತ್ತು ಒಪ್ಪಿಕೊಳ್ಳಬೇಕು. ಆದರಿದು ಮೈದಾನದಲ್ಲಿ ಕಂಡುಬರುತ್ತಿಲ್ಲ. ತಂಡದಲ್ಲಿ ಈ ಅಂಶ ಸುಧಾರಿಸುವುದು ಅನಿವಾರ್ಯ ಎಂದಿದ್ದಾರೆ. ಆ ಮೂಲಕ ಮುಂಬೈ ಇಂಡಿಯನ್ಸ್ ಎಂಬ ಯಶಸ್ವಿ ದೋಣಿಯು ಮುಳುಗಲು ಕಾರಣ ಹಾರ್ದಿಕ್ ಎನ್ನುವಂತೆ ಇರ್ಫಾನ್ ಪಠಾಣ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಮುಂಬೈನ ಐಕಾನಿಕ್ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್​​ ಆರಂಭದಲ್ಲೇ 57 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡಿತು. ಆದರೆ, ಈ ವೇಳೆ ವೆಂಕಟೇಶ್ ಅಯ್ಯರ್ (70) ಮತ್ತು ಮನೀಶ್ ಪಾಂಡೆ (42) 83 ರನ್​ಗಳ ಪಾಲುದಾರಿಕೆ ನೀಡಿದರು. 19.5 ಓವರ್​​ಗಳಲ್ಲಿ 169 ರನ್​ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಮುಂಬೈ ಸಹ ಪವರ್​​ಪ್ಲೇನಲ್ಲಿ 4 ವಿಕೆಟ್ ಕಳೆದುಕೊಂಡಿತು. ಸೂರ್ಯಕುಮಾರ್ 50 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಮಿಚೆಲ್ ಸ್ಟಾರ್ಕ್​ 4 ವಿಕೆಟ್ ಪಡೆದು ಮಿಂಚಿದರು. ಮುಂಬೈ 145 ರನ್​ಗಳಿಗೆ ಆಲೌಟ್ ಆಯಿತು.

ಎರಡು ಬಣಗಳಿವೆ ಎಂದ ಕ್ಲಾರ್ಕ್

ಮುಂಬೈ ಇಂಡಿಯನ್ಸ್ ತಂಡದಲ್ಲಿ ಎರಡು ಬಣಗಳಿಗೆ ಎಂಬುದು ತಿಳಿಯುತ್ತಿಇದೆ. ಐಪಿಎಲ್​ ಆರಂಭದಿಂದಲೂ ತಂಡದ ಹಾದಿ ಸರಿ ಇರಲಿಲ್ಲ. ಮೈದಾನಕ್ಕಿಂತ ಡ್ರೆಸ್ಸಿಂಗ್​ ರೂಮ್​ ಸಂಗತಿಗಳೇ ಹೆಚ್ಚಾಗಿವೆ. ತಂಡದಲ್ಲಿ ಪ್ರಮುಖ ಆಟಗಾರರ ದಂಡೇ ಇದೆ. ಆದರೂ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ನನಗನಿಸಿದ ಮಟ್ಟಿಗೆ ಮುಂಬೈ ತಂಡದಲ್ಲಿ ಎರಡು ಬಣಗಳಿವೆ. ಅದಕ್ಕಾಗಿ ಒಂದು ತಂಡವಾಗಿ ಆಡುತ್ತಿಲ್ಲ ಎಂದು ಸ್ಟಾರ್‌ ಸ್ಪೋರ್ಟ್ಸ್‌ಗೆ ಮೈಕಲ್‌ ವಾನ್‌ ತಿಳಿಸಿದ್ದಾರೆ.

IPL_Entry_Point