Avishkara 2023: ಮಕ್ಕಳಲ್ಲಿ ಯೋಜನಾಬದ್ಧ ಪ್ರಯತ್ನ ಇದ್ದರಷ್ಟೆ ಉನ್ನತ ಗುರಿ ಸಾಧನೆ - ಎನ್.ಕೆ.ಸಾವಕಾರ
Avishkara 2023: ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಸರ್ಕಾರಿ ಶಾಲಾ ಮಕ್ಕಳ ಎರಡು ದಿನಗಳ ಆವಿಷ್ಕಾರ-2023 ವಿಜ್ಞಾನ ಹಬ್ಬದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಸಮಾರಂಭ ಶುಕ್ರವಾರ ನಡೆಯಿತು.
ಧಾರವಾಡ: ಮಕ್ಕಳಲ್ಲಿ ಗುರಿಗಳು ಉನ್ನತವಾಗಿರಬೇಕು. ಆ ಗುರಿ ಸಾಧನೆಗೆ ನಿರಂತರ ಪ್ರಯತ್ನದ ಅಗತ್ಯವಿದೆ. ಹಾಗೆಯೇ, ಉತ್ತಮ ಯೋಜನೆ ಇದ್ದಾಗ ಮಾತ್ರವೇ ಗುರಿ ಸಾಧಿಸುವುದು ಸಾಧ್ಯ ಎಂದು ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ, ಡಯಟ್ ಪ್ರಾಚಾರ್ಯರಾದ ಶ್ರೀಮತಿ ಎನ್.ಕೆ ಸಾವಕಾರ ಹೇಳಿದರು.
ಟ್ರೆಂಡಿಂಗ್ ಸುದ್ದಿ
ಅವರು, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಸರ್ಕಾರಿ ಶಾಲಾ ಮಕ್ಕಳ ಎರಡು ದಿನಗಳ ಆವಿಷ್ಕಾರ-2023 ವಿಜ್ಞಾನ ಹಬ್ಬದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಸರ್ಕಾರಿ ಶಾಲಾ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಸ್ವಯಂ ಸೇವಾ ಸಂಸ್ಥೆ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ಸಂಪನ್ಮೂಲ ವ್ಯಕ್ತಿಗಳ ಮೂಲಕ ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸುತ್ತಿರುವುದು ಪ್ರಶಂಸಾರ್ಹ. ಮಕ್ಕಳ ಪ್ರತಿಭಾನ್ವೇಷಣೆಗೆ ವೇದಿಕೆ ಸೃಷ್ಠಿಸಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸುತ್ತಿದೆ. ಸಮುದಾಯ ಕೂಡ ನಮ್ಮ ಶಾಲೆ, ನಮ್ಮೂರ ಶಾಲೆ ಎಂದು ಮನಗಂಡು ಮಕ್ಕಳ ಶಿಕ್ಷಣ ಪ್ರಗತಿಯಲ್ಲಿ ಕೈ ಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕುಮಾರ ಸಿಂದಗಿ ಮಾತನಾಡಿ, ಮಕ್ಕಳಲ್ಲಿ ವಿಜ್ಞಾನದ ಅಭಿರುಚಿಯನ್ನು ಕೆರಳಿಸಿ ಅವರನ್ನು ಕಾರ್ಯಪ್ರವೃತ್ತರಾಗುವಂತೆ ಮಾಡಲಾಗುತ್ತಿದೆ. ಮಕ್ಕಳ ಪ್ರತಿಭೆಗೆ ಸಾಣೆ ಹಿಡಿಯವ ಕಾರ್ಯವನ್ನು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಮಾಡುತ್ತಿರುವುದು ಸ್ವಾಗತಾರ್ಹ. ಈ ಕಾರ್ಯದಿಂದ ಭವಿಷ್ಯದಲ್ಲಿ ಉತ್ತಮ ಯುವ ವಿಜ್ಞಾನಿಗಳ ಸೃಷ್ಟಿ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ.ಮೋಹನ ಥಂಬದ, ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸುವುದು ಮಾತ್ರ ಮುಖ್ಯವಲ್ಲ. ನಮ್ಮಲ್ಲಿ ಬಿತ್ತಿರುವ ವಿಜ್ಞಾನದ ಬೀಜ ಹೆಮ್ಮರವಾಗಿ ಬೆಳೆದು ವಿಜ್ಞಾನ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡುವ ಗುರಿ ನಮ್ಮದಾಗ ಬೇಕು. ಆವಿಷ್ಕಾರ ಎಂಬ ಎರಡು ದಿನಗಳ ವಿಜ್ಞಾನ ಹಬ್ಬ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಎಂದು ಹೇಳಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷೆ ನಾಗರತ್ನ ಚಿನಗುಡಿ, ವಿದ್ಯಾರ್ಥಿ ಪ್ರತಿನಿಧಿ ಏಳನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ಕಲ್ಲೇದ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಶಾಲಾ ಶಿಕ್ಷಣ ಕಾರ್ಯಕ್ರಮದ ಯೋಜನಾ ನಿರ್ದೇಶಕ ಜಯಕುಮಾರ ಕೆ, ಕಾರ್ಯಕ್ರಮ ವ್ಯವಸ್ಥಾಪಕ ಸಂತೋಷಕುಮಾರ ಶೀಶನಳ್ಳಿ ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಆವಿಷ್ಕಾರ 2023 ಎರಡು ದಿನಗಳ ವಿಜ್ಷಾನ ಹಬ್ಬದಲ್ಲಿ ಮೊದಲ ದಿನ ಸರ್ಕಾರಿ ಪ್ರೌಢ ಶಾಲೆಗಳ ಮಕ್ಕಳು ವಿಜ್ಞಾನದ ಮಾದರಿಗಳನ್ನು ಪ್ರದರ್ಶಿಸಿದರೆ, ಎರಡನೆ ದಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪಿಕ್ ಎಂಡ್ ಪ್ರಾಕ್ಟಿಕಲ್ ಸ್ಪರ್ಧೆಯಲ್ಲಿ ಉತ್ತಮವಾಗಿ ವಿಜ್ಞಾನ ಪ್ರಯೋಗಗಳನ್ನು ಪ್ರದರ್ಶಿಸಿದರು.
ಬಹುಮಾನ ವಿಜೇತರ ವಿವರ ಹೀಗಿದೆ -
ಪ್ರೌಢ ಶಾಲೆ ವಿಭಾಗದಲ್ಲಿ
ರಸ ಪ್ರಶ್ನೆ ಸ್ಪರ್ಧೆ- (ಮೂರು ಮಕ್ಕಳ ತಂಡ)
ಮೊದಲ ಬಹುಮಾನ : ಕರ್ನಾಟಕ ಪಬ್ಲಿಕ್ ಶಾಲೆ, ನವನಗರ
ದ್ವಿತೀಯ ಬಹುಮಾನ : ಸರ್ಕಾರಿ ಬಾಲಕಿಯರ ಪ್ರೌಢ ಶಾಲೆ, ಕಲಘಟಗಿ
ತೃತೀಯ ಬಹುಮಾನ : ಸರ್ಕಾರಿ ಪ್ರೌಢ ಶಾಲೆ, ಹಿರೇಹೊನ್ನಳ್ಳಿ
ವಿಜ್ಞಾನ ಮಾದರಿ ಸ್ಪರ್ಧೆ
ಮೊದಲ ಬಹುಮಾನ : ಅಭಿಷೇಕ ಗುಡಿಹಾಳ ಮತ್ತು ಅಭಿಷೇಕ ಕರಿಗೌಡರ, ಸರ್ಕಾರಿ ಪ್ರೌಢ ಶಾಲೆ, ಹೊಲ್ತಿಕೋಟಿ ಮಾದರಿ - ಸ್ಮಾರ್ಟ್ ಸಿಟಿ
ದ್ವಿತೀಯ ಬಹುಮಾನ : ಪವನ ಪಿ.ಎನ್ ಮತ್ತು ಯಶವಂತ ಕಲ್ಲನ ಗೌಡರ, ಕರ್ನಾಟಕ ಪಬ್ಲಿಕ್ ಶಾಲೆ, ನವನಗರ ಮಾದರಿ - ಸ್ಮಾರ್ಟ್ ಹೋಮ್
ತೃತೀಯ ಬಹುಮಾನ :ಫಕಿರೇಶ ಹೊನ್ನಳ್ಳಿ ಮತ್ತು ನಾಗರಾಜ ವಾಲಿಕಾರ, ಸರ್ಕಾರಿ ಪ್ರೌಢ ಶಾಲೆ, ಬೆಲವಂತರ ಮಾದರಿ - ಮಾನವನ ದೇಹದ ಭಾಗಗಳು
ಪ್ರಾಥಮಿಕ ಶಾಲೆ ವಿಭಾಗದಲ್ಲಿ
ರಸ ಪ್ರಶ್ನೆ ಸ್ಪರ್ಧೆ - (ಮೂರು ಮಕ್ಕಳ ತಂಡ)
ಮೊದಲ ಬಹುಮಾನ : ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ, ನರೇಂದ್ರ
ದ್ವಿತೀಯ ಬಹುಮಾನ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಳಮಟ್ಟಿ
ತೃತೀಯ ಬಹುಮಾನ : ಕಸ್ತೂರಭಾ ಗಾಂಧಿ ಬಾಲಕಿಯರ ವಿದ್ಯಾಲಯ, ಗಂಜಿಗಟ್ಟಿ
ಪಿಕ್ ಆಂಡ್ ಪ್ರಾಕ್ಟಿಕಲ್ ಸ್ಪರ್ಧೆ (5ನೇ ತರಗತಿ)
ಮೊದಲ ಬಹುಮಾನ : ಐಶ್ವರ್ಯ ಮದ್ನೂರು, ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ, ಕಲಘಟಗಿ
ದ್ವಿತೀಯ ಬಹುಮಾನ : ಈಶ್ವರಿ ಕಲ್ಲೇದ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾದನಬಾವಿ
ತೃತೀಯ ಬಹುಮಾನ : ಮಂಜುನಾಥ ಮುಂಡರಗಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾರಡಗಿ
ಪಿಕ್ ಆಂಡ್ ಪ್ರಾಕ್ಟಿಕಲ್ ಸ್ಪರ್ಧೆ (6ನೇ ತರಗತಿ)
ಮೊದಲ ಬಹುಮಾನ : ಅಂಕಿತಾ ಗುತ್ತೆಪ್ಪನವರ, ಕರ್ನಾಟಕ ಪಬ್ಲಿಕ್ ಶಾಲೆ, ಕರಡಿಗುಡ್ಡ
ದ್ವಿತೀಯ ಬಹುಮಾನ : ಪ್ರೀತಿ ಹೆಬಸೂರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದೇವಿಕೊಪ್ಪ
ತೃತೀಯ ಬಹುಮಾನ : ಸಂಗೀತ ಮಂಗಣೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಮ್ಮಿಗಟ್ಟಿ
ಪಿಕ್ ಆಂಡ್ ಪ್ರಾಕ್ಟಿಕಲ್ ಸ್ಪರ್ಧೆ (7-8 ನೇ ತರಗತಿ)
ಮೊದಲ ಬಹುಮಾನ : ಪ್ರಾರ್ವತಿ ಮಿರಾಶಿ, ಕಸ್ತೂರಭಾ ಗಾಂಧಿ ಬಾಲಕಿಯರ ವಿದ್ಯಾಲಯ, ಅಳ್ನಾವರ
ದ್ವಿತೀಯ ಬಹುಮಾನ : ಸವಿತಾ ಮುಂಡರಗಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾರಡಗಿ
ತೃತೀಯ ಬಹುಮಾನ : ಕೀರ್ತಿ ಅಕ್ಕಿ, ಕಸ್ತೂರಭಾ ಗಾಂಧಿ ಬಾಲಕಿಯರ ವಿದ್ಯಾಲಯ, ಗಂಜಿಗಟ್ಟಿ
ಮಕ್ಕಳಿಗೆ ವೈಯಕ್ತಿಕ ಬಹುಮಾನ ನೀಡಿರುವುದಲ್ಲದೆ ಬಹುಮಾನ ವಿಜೇತ ಶಾಲೆಗಳಿಗೆ ಗಿಫ್ಟ್ ಓಚರ್ ನೀಡಲಾಗಿದೆ. ಶಾಲೆಯವರು ಹುಬ್ಬಳ್ಳಿಯ ಇಂಡಿಯನ್ ಸ್ಪೋರ್ಟ್ಸ್ ಆಂಡ್ ಸೈಂಟಿಫಿಕ್ ಕಂಪನಿಯಲ್ಲಿ ಗಿಫ್ಟ್ ವೋಚರ್ ನೀಡಿ, ಶಾಲೆಗೆ ಅಗತ್ಯವಿರುವ ವಿಜ್ಞಾನದ ಮಾದರಿಗಳನ್ನು ಪಡೆದುಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ.