ಕನ್ನಡ ಸುದ್ದಿ  /  ಕರ್ನಾಟಕ  /  Cm Bommai On Spirituality: ಭಗವದ್ಗೀತೆ ಮತ್ತು ವಿಜ್ಞಾನ ಆಧ್ಯಾತ್ಮದ ಮಿಶ್ರಣ: ಸಿಎಂ ಬೊಮ್ಮಾಯಿ

CM Bommai on Spirituality: ಭಗವದ್ಗೀತೆ ಮತ್ತು ವಿಜ್ಞಾನ ಆಧ್ಯಾತ್ಮದ ಮಿಶ್ರಣ: ಸಿಎಂ ಬೊಮ್ಮಾಯಿ

ದೇಶದಲ್ಲಿ ಸಂಸ್ಕಂತಿ, ಸಂಸ್ಕಾರಗಳು ಆಳವಾಗಿ ಬೇರೂರುತ್ತಿದ್ದು, ಈಗ ಭಾರತೀಯ ಸಂಸ್ಕಂತಿ ಪುನ:ಸ್ಥಾಪನೆಯಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಇಸ್ಕಾನ್ ವತಿಯಿಂದ ಆಯೋಜಿಸಿದ್ದ ಗೀತಾ ಜಯಂತಿ ಹಾಗೂ ಗೀತಾ ದಾನ ಯಜ್ಞ ಮಹೋತ್ಸವ ಕಾರ್ಯಕ್ರಮದಲ್ಲಿ ಸಿಎಂ  ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಚಿವ ಅಶೋಕ್ ಸೇರಿ ಇತರರು ಉಪಸ್ಥಿತರಿದ್ದರು.
ಇಸ್ಕಾನ್ ವತಿಯಿಂದ ಆಯೋಜಿಸಿದ್ದ ಗೀತಾ ಜಯಂತಿ ಹಾಗೂ ಗೀತಾ ದಾನ ಯಜ್ಞ ಮಹೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಚಿವ ಅಶೋಕ್ ಸೇರಿ ಇತರರು ಉಪಸ್ಥಿತರಿದ್ದರು.

ಬೆಂಗಳೂರು: ಭಗವದ್ಗೀತೆ ದೇವರ ಹಾಡು. ಸೃಷ್ಟಿ, ಲಯ, ಜೀವನದ ಸಂಕೋಲೆ, ಮನುಷ್ಯನ ಪಾತ್ರ, ಬದುಕುವ ದಾರಿಯನ್ನು ಗೀತೆಯಲ್ಲಿ ವಿವರಿಸಲಾಗಿದೆ. ಭಗವದ್ಗೀತೆ ವಿಜ್ಞಾನ ಮತ್ತು ಆಧ್ಯಾತ್ಮದ ಮಿಶ್ರಣವಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಇಸ್ಕಾನ್ ವತಿಯಿಂದ ಆಯೋಜಿಸಿದ್ದ ಗೀತಾ ಜಯಂತಿ ಹಾಗೂ ಗೀತಾ ದಾನ ಯಜ್ಞ ಮಹೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಪಾಲ್ಗೊಂಡು ಮಾತನಾಡಿದ ಸಿಎಂ, ಭಗವದ್ಗೀತೆ ಜಗತ್ತಿನ ಅತ್ಯಂತ ಶ್ರೇಷ್ಠ ಗ್ರಂಥವಾಗಿದೆ. ಎಲ್ಲಾ ಧರ್ಮಗಳ ಒಳತತ್ವ ಮನುಕುಲದ ಅಭಿವೃದ್ಧಿಯಾಗಿದೆ. ಕೃಷ್ಣನು ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಬೋಧನೆ ಮಾಡುವ ಸಂದರ್ಭ ಬಹಳ ಮಹತ್ವದ್ದು. ಬೋಧನೆಗೂ ಸಮಯ, ಸಂದರ್ಭ ಬಹಳ ಮುಖ್ಯವಾಗುತ್ತದೆ. ಭಗವಾನ್ ಕೃಷ್ಣ ಅರ್ಜುನನಿಗೆ ಬೋಧನೆ ಮಾಡಿದ ಕಾಲ ಸಂಕ್ರಮಣ ಕಾಲ. ಬದುಕನ್ನು ತಿಳಿಯುವ, ನಡೆಯುವ ಸಂಕ್ರಮಣ ಕಾಲ. ಎಲ್ಲವನ್ನೂ ಧ್ವಂಸ ಮಾಡುವ ಶಕ್ತಿ ಹಾಗೂ ಎಲ್ಲರನ್ನು ಉಳಿಸುವ ಚಿಂತನೆಗಳ ನಡುವೆ ಭಗವಾನ್ ಕೃಷ್ಣ ಬದುಕು ಎಂದರೇನು ಎಂದು, ಫಲ, ಪಾಪ, ಪುಣ್ಯ, ಮರುಜನ್ಮ ಎಂದರೇನು ಎಂದು ವಿವರಿಸುತ್ತಾನೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಸಂಸ್ಕಂತಿ ಸಂಸ್ಕಾರಗಳು ಪುನ:ಸ್ಥಾಪನೆಯಾಗುತ್ತಿವೆ

ಭಾರತ ದೇಶದಲ್ಲಿ ಸಂಸ್ಕಂತಿ, ಸಂಸ್ಕಾರಗಳು ಆಳವಾಗಿ ಬೇರೂರುತ್ತಿದ್ದು, ಈಗ ಭಾರತೀಯ ಸಂಸ್ಕಂತಿ ಪುನ:ಸ್ಥಾಪನೆಯಾಗುತ್ತಿದೆ. ಭಾರತದಲ್ಲಿ ಎಪ್ಪತ್ತರಿಂದ ತೊಂಭತ್ತರ ದಶಕದವರೆಗೂ ಪಾಶ್ಚಿಮಾತ್ಯ ಪ್ರಭಾವ ಬಹಳವಿತ್ತು. ಹಾಗಾಗಿ ಮೌಲ್ಯಗಳು ಕಡಿಮೆಯಾಗಿತ್ತು. ಭಾರತ ದೇಶದಲ್ಲಿ ಮೂಲವಾಗಿ ಸಂಸ್ಕಂತಿಯ ಬೇರುಗಳು ಆಳವಾಗಿದೆ. ಇಲ್ಲಿ ನಡೆದ ಭಕ್ತಿ ಚಳವಳಿ ಜಗತ್ತಿನಲ್ಲೆಲ್ಲೂ ಆಗಿಲ್ಲ.

ಈ ದೇಶದಲ್ಲಿ ಪ್ರಭುಪಂಡಿತದಾಸರು ಮಾಡಿರುವ ಪ್ರಯತ್ನಗಳನ್ನು ಕೈಗೊಂಡು ವಿಫಲರಾದ ನಂತರ ಅಮೆರಿಕದಲ್ಲಿ ಪ್ರಯೋಗ ಮಾಡಿ ಯಶಸ್ವಿಯಾದರು. ಅಲ್ಲಿಂದ ಪುನ: ಇಲ್ಲಿ ಭಾರತದಲ್ಲಿ ಪ್ರಯತ್ನ ಮುಂದುವರೆಸಿದರು. ಪ್ರಭುದಾಸರ ಪಯಣ ಭಾರತದ ಸಾಂಸ್ಕಂತಿಕ ಮೌಲ್ಯಗಳ ಬದಲಾವಣೆಯನ್ನು ತೋರಿಸುತ್ತದೆ. ಶಂಕಾರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವಾಚಾರ್ಯ, ಬುದ್ಧ, ಬಸವಣ್ಣ ಸೇರಿದಂತೆ ಹಲವಾರು ಜನರನ್ನು ಒಳಗೊಂಡಿದೆ. ದೇಶಕ್ಕೆ ಸ್ವಾತಂತ್ರ್ಯ ದೊರಕಲು ಭಕ್ತಿ ಚಳವಳಿ ಮಹತ್ವದ ಪಾತ್ರ ವಹಿಸಿದೆ ಎಂದರು.

ಭಗವದ್ಗೀತೆಯಿಂದ ಸಮಸ್ಯೆಗೆ ಪರಿಹಾರ

ಯಾವುದಾದರೂ ಸಮಸ್ಯೆಗಳಿಗೆ ನಾವು ಒಳಪಟ್ಟಾಗ ಭಗವದ್ಗೀತೆಯ ಪುಟಗಳನ್ನು ತಿರುವಿ ಹಾಕಿದರೆ ಸಮಸ್ಯೆಗೆ ಪರಿಹಾರ ದೊರೆಕುತ್ತದೆ. ಪ್ರಯತ್ನ ಮಾಡಿ ನೋಡಿ. ಇದು ನನ್ನ ಅನುಭವದ ಮಾತು. ಪ್ರತಿ ಶ್ಲೋಕದಲ್ಲಿ ಬದುಕಿನ ಸಾರದ ಜೊತೆಗೆ ಪರಿಹಾರವನ್ನೂ ಕೂಡ ಧರ್ಮದತ್ತವಾಗಿ ನೀಡಿದೆ.

ಆತ್ಮನಿರ್ಭರತೆಯಿಂದ ಆತ್ಮವಿಶ್ವಾಸ

ಭಾರತವನ್ನು ಆತ್ಮನಿರ್ಭರತೆಯೆಡೆಗೆ ಕೊಂಡೊಯ್ಯುವಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಪಾತ್ರ ದೊಡ್ಡದಿದೆ. ಶೇ 50 ರಷ್ಟು ರಕ್ಷಣಾ ಪರಿಕರಗಳು ಭಾರತದಲ್ಲಿಯೇ ಉತ್ಪಾದನೆಯಾಗುತ್ತಿದೆ. ಶೀಘ್ರದಲ್ಲಿಯೇ ಭಾರತ ರಕ್ಷಣಾ ಪರಿಕರಗಳನು ರಫ್ತು ಮಾಡುವ ಜಗತ್ತಿನ ಐದು ರಾಷ್ಟ್ರಗಳ ಪೈಕಿ ಒಂದಾಗಲಿದೆ. ಆತ್ಮನಿರ್ಭರತೆ ಆತ್ಮವಿಶ್ವಾಸದಿಂದ ಬರುತ್ತದೆ. ನಿನ್ನನ್ನು ನೀನು ನಂಬು ಎಂದು ಅದನ್ನೇ ಭಗವಾನ್ ಕೃಷ್ಣ ಹೇಳಿದ್ದಾನೆ. ಭಗವದ್ಗೀತೆ ಪಡೆಯುವವರು, ಕೊಡುವವರಿಬ್ಬರೂ ಧನ್ಯ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಆರ್ ಅಶೋಕ್, ಶಾಸಕ ಕೃಷ್ಣಪ್ಪ, ಸಂಸದ ತೇಜಸ್ವಿ ಸೂರ್ಯ, ಇಸ್ಕಾನ್ ಅಧ್ಯಕ್ಷ ಮಧುಪಂಡಿತದಾಸರು ಉಪಸ್ಥಿತರಿದ್ದರು.

IPL_Entry_Point