ಕನ್ನಡ ಸುದ್ದಿ  /  Karnataka  /  Davanagere News Ration Card Mortgage For Loan Moneylenders Atrocity Targeted Poors Congress Guarantee Kannada News Rst

Davanagere News: ಸಾಲ ಬೇಕಾದರೆ ರೇಷನ್ ಕಾರ್ಡ್ ಅಡಮಾನ; ಬಡವರ ಸೌಲಭ್ಯ ಕಸಿಯುತ್ತಿರುವ ಬಡ್ಡಿ ದಂಧೆಕೋರರು

Ration Card Mortgage For Loan: ಗ್ರಾಮೀಣ ಭಾಗಗಳಲ್ಲಿ, ಕೊಳಚೆ ಪ್ರದೇಶ ಹಾಗೂ ಬಡ-ಮಧ್ಯಮ ವರ್ಗದವರು ವಾಸಿಸುವ ಕಡೆಗಳಲ್ಲಿರುವ ಬಡ್ಡಿದಂಧೆಕೋರರು ಜನರಿಗೆ ಸಾಲ ನೀಡುವಾಗ ರೇಷನ್ ಕಾರ್ಡನ್ನೆ ಅಡಮಾನವಾಗಿ ಪಡೆಯುತ್ತಿದ್ದಾರೆ. ಆ ಮೂಲಕ ಬಡ-ಮಧ್ಯಮದವರ ಐಡೆಂಟಿಯಾಗಿರುವ ರೇಷನ್‌ ಕಾರ್ಡನ್ನೇ ಕಸಿದುಕೊಳ್ಳುತ್ತಿದ್ದಾರೆ.

ಸಾಲ ಬೇಕಾದರೆ ರೇಷನ್ ಕಾರ್ಡ್ ಅಡಮಾನ
ಸಾಲ ಬೇಕಾದರೆ ರೇಷನ್ ಕಾರ್ಡ್ ಅಡಮಾನ

ದಾವಣಗೆರೆ: ನಮ್ಮ ದೇಶದಲ್ಲಿ ಪಡಿತರ ಚೀಟಿ ಇಲ್ಲದೇ ಯಾವುದೇ ಸರ್ಕಾರಿ ಸೌಲಭ್ಯವೂ ಸಿಗುವುದಿಲ್ಲ. ಹಾಗಾಗಿ, ಪಡಿತರ ಚೀಟಿ ಅದರಲ್ಲೂ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಅದರದ್ದೇ ಆದ ಮಹತ್ವ ಹೊಂದಿದೆ. ಆದರೆ, ವಿಪರ್ಯಾಸ ಎಂದರೆ ರೇಷನ್ ಕಾರ್ಡ್ ಈಗ ಬಡ್ಡಿದಂಧೆಕೋರರಿಗೆ ಅಡಮಾನ ಪಡೆಯಲು ಇರುವ ವಸ್ತುವಾಗಿ ಬಳಕೆಯಾಗುತ್ತಿದೆ!.

ಅರೇ, ಇದೇನಿದು ಅಂತೀರಾ.. ಹೌದು, ಗ್ರಾಮೀಣ ಭಾಗಗಳಲ್ಲಿ, ಕೊಳಚೆ ಪ್ರದೇಶ ಹಾಗೂ ಬಡ-ಮಧ್ಯಮ ವರ್ಗದವರು ವಾಸಿಸುವ ಕಡೆಗಳಲ್ಲಿರುವ ಬಡ್ಡಿದಂಧೆಕೋರರು ಜನರಿಗೆ ಸಾಲ ನೀಡುವಾಗ ರೇಷನ್ ಕಾರ್ಡನ್ನೆ ಅಡಮಾನವಾಗಿ ಪಡೆಯುತ್ತಿದ್ದಾರೆ. ಆ ಮೂಲಕ ಬಡ-ಮಧ್ಯಮದವರ ಐಡೆಂಟಿಯಾಗಿರುವ ರೇಷನ್‌ ಕಾರ್ಡನ್ನೇ ಕಸಿದುಕೊಳ್ಳುತ್ತಿದ್ದಾರೆ.

ಆರ್ಥಿಕವಾಗಿ ಸಬಲರಲ್ಲದವರು ಮದುವೆ, ಮುಂಜಿ ಇತರೆ ಮನೆಯಲ್ಲಿ ನಡೆಯುವ ಶುಭ ಕಾರ್ಯಕ್ರಮಗಳಿಗೆ ಅಥವಾ ಮಕ್ಕಳ ಶಾಲೆ-ಕಾಲೇಜು ಶುಲ್ಕ, ಹಬ್ಬ ಹೀಗೆ ಅನೇಕ ವಿಷಯಗಳಿಗಾಗಿ ಇಂತಿಷ್ಟು ಬಡ್ಡಿಯಂತೆ ಸಾಲ ಪಡೆಯುವುದು ಸಹಜ. ಇವರ ಬಳಿ ಸಾಲ ಮರುಪಾವತಿ ಮಾಡಲು ಯಾವುದೇ ಮೌಲ್ಯಯುತ ವಸ್ತು, ಚಿನ್ನ, ಬೆಳ್ಳಿ ಸಾಮಾನುಗಳು ಸಹ ಇರದ ಕಾರಣ ಪಡಿತರ ಚೀಟಿಯನ್ನೇ ಬಡ್ಡಿದಂಧೆಕೋರರು ಅಡಮಾನವಾಗಿ ಪಡೆಯುತ್ತಿದ್ದಾರೆ ಎನ್ನುವ ಆರೋಪವಿದೆ.

ಅನಕ್ಷರಸ್ಥ, ಬಡ ಜನರೇ ಟಾರ್ಗೆಟ್

ಅನಕ್ಷರಸ್ಥರಿಗೆ ಬಿಪಿಎಲ್ ಪಡಿತರ ಚೀಟಿಯ ಮೌಲ್ಯ ತಿಳಿದಿರುವುದಿಲ್ಲ. ಅವರಿಗೇನಿದ್ದರೂ ಆ ಕ್ಷಣಕ್ಕೆ ಸಾಲ ಸಿಕ್ಕು ಸಮಸ್ಯೆ ಬಗೆಹರಿದರೆ ಸಾಕೆನ್ನುವ ಮನೋಭಾವನೆ ಬೆಳೆದುಬಿಟ್ಟಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಬಡ್ಡಿದಂಧೆಕೋರರು ಸಾಲ ನೀಡುವ ಸಂದರ್ಭದಲ್ಲಿ ಪಡಿತರ ಚೀಟಿಯನ್ನು ಅಡಮಾನವಾಗಿ ಪಡೆದು, ಸಾಲ ಪಡೆದವರು ಸಾಲ ತೀರಿಸುವವರೆಗೂ ತಿಂಗಳಿಗೊಮ್ಮೆ ಸರ್ಕಾರದಿಂದ ನೀಡುವ ರೇಷನ್ನನ್ನು ಇವರೇ ಪಡೆಯುತ್ತಾರೆ.

ಕೆಲವೊಮ್ಮೆ ಸಾಲ ಮರುಪಾವತಿ ಮಾಡದ ಸಾಲಗಾರರಿಗೆ ಪಡಿತರ ಚೀಟಿ ಸಹ ವಾಪಸ್ ಸಿಗುವುದಿಲ್ಲ. ಹಾಗಿದ್ದಾಗ ಸರ್ಕಾರದ ಯೋಜನೆಗಳು ಇವರಿಗೆ ತಲುಪುವುದು ಇಲ್ಲ. ಪಡೆದ 5-10 ಸಾವಿರ ಸಾಲಕ್ಕೆ ಸಾವಿರಾರು ರೂಪಾಯಿಯ ಸೌಲಭ್ಯಗಳನ್ನು ಕಳೆದುಕೊಳ್ಳುವ ಸಂಭವವೂ ಹೆಚ್ಚಿದೆ. ಹಾಗೆ ನೋಡಿದರೆ ರೇಷನ್ ಕಾರ್ಡ್ ಅಡಮಾನವಾಗಿ ಇಟ್ಟುಕೊಳ್ಳುವುದೇ ಕಾನೂನು ಬಾಹಿರವಾದ ಕೆಲಸ. ಹಾಗಿದ್ದರೂ ಕೊಳಗೇರಿಗಳಲ್ಲಿ, ಗ್ರಾಮೀಣ ಭಾಗಗಳಲ್ಲಿ ಎಗ್ಗಿಲ್ಲದೇ, ಹೆದರಿಕೆಯೂ ಇಲ್ಲದೆ ದಂಧೆ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಬೀಳಬೇಕಿದೆ.

ಈಗ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಬಡಜನರ ಅಭ್ಯುದಯಕ್ಕೆ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದು, ಬಡ-ಮಧ್ಯಮ ಜನರಿಗೆ ಈ ಎಲ್ಲಾ ಗ್ಯಾರಂಟಿಗಳು ತಲುಪಲು ರೇಷನ್‌ಕಾರ್ಡ್ ಬಡವರ ಮನೆಯಲ್ಲಿಯೇ ಉಳಿಸಲು ಬಡ್ಡಿದಂಧೆಕೋರರಿಗೆ ಕಡಿವಾಣ ಹಾಕಬೇಕಿದೆ.

ಇದನ್ನೂ ಓದಿ

Caste wise survey: ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ ಸ್ವೀಕರಿಸಲಿರುವ ಸಿದ್ದರಾಮಯ್ಯ ಸರ್ಕಾರ

CM Siddaramaiah: ಬಿಜೆಪಿ ಸರ್ಕಾರವು ಮೀಸಲಾತಿಯಲ್ಲಿ ಸೃಷ್ಟಿಸಿದ ಗೊಂದಲ ನಿವಾರಣೆ ಮಾಡಲಾಗುವುದು. ಇಲ್ಲವಾದರೆ ಯಾರಿಗೂ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಬೆಂಗಳೂರು: ಹಿಂದಿನ ಬಾರಿ ತಮ್ಮ ಸರ್ಕಾರದ ಅವಧಿಯಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಹಮ್ಮಿಕೊಳ್ಳಲಾದ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಸ್ವೀಕರಿಸಿ, ಅದರ ದತ್ತಾಂಶದ ಆಧಾರದಲ್ಲಿ ವಿವಿಧ ಸಮುದಾಯಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ತಿಳಿಸಿದರು.

IPL_Entry_Point