Republic P-MARQ:‌ ಕರ್ನಾಟಕ ಚುನಾವಣೇಲಿ ಅತಂತ್ರ ಜನಾದೇಶದ ಸುಳಿವು ನೀಡಿದ ರಿಪಬ್ಲಿಕ್‌ ಎಕ್ಸಿಟ್‌ ಪೋಲ್‌ 2023; ವಿವರ ವರದಿ ಇಲ್ಲಿದೆ
ಕನ್ನಡ ಸುದ್ದಿ  /  ಕರ್ನಾಟಕ  /  Republic P-marq:‌ ಕರ್ನಾಟಕ ಚುನಾವಣೇಲಿ ಅತಂತ್ರ ಜನಾದೇಶದ ಸುಳಿವು ನೀಡಿದ ರಿಪಬ್ಲಿಕ್‌ ಎಕ್ಸಿಟ್‌ ಪೋಲ್‌ 2023; ವಿವರ ವರದಿ ಇಲ್ಲಿದೆ

Republic P-MARQ:‌ ಕರ್ನಾಟಕ ಚುನಾವಣೇಲಿ ಅತಂತ್ರ ಜನಾದೇಶದ ಸುಳಿವು ನೀಡಿದ ರಿಪಬ್ಲಿಕ್‌ ಎಕ್ಸಿಟ್‌ ಪೋಲ್‌ 2023; ವಿವರ ವರದಿ ಇಲ್ಲಿದೆ

Republic P-MARQ Exit Poll: ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಬಿಗಿ ಸ್ಪರ್ಧೆ ಇದ್ದು, ಸ್ಪಷ್ಟ ಬಹುಮತ ಸಿಗುವ ಚಾನ್ಸ್‌ ಕಡಿಮೆ. ಜೆಡಿಎಸ್‌ ಕಿಂಗ್‌ ಮೇಕರ್‌ ಆಗಲಿದೆ ಎಂದು ರಿಪಬ್ಲಿಕ್‌ ಪಿ ಮಾರ್ಕ್‌ ಮತದಾನೋತ್ತರ ಸಮೀಕ್ಷೆ ವರದಿ ಹೇಳಿದೆ. ವಿವರ ಇಲ್ಲಿದೆ.

ರಿಪಬ್ಲಿಕ್‌ ಪಿ ಮಾರ್ಕ್‌ ಮತದಾನೋತ್ತರ ಸಮೀಕ್ಷೆ ಪ್ರಕಟ ( ಚುನಾವಣೆಯ ಸಾಂಕೇತಿಕ ಚಿತ್ರ)
ರಿಪಬ್ಲಿಕ್‌ ಪಿ ಮಾರ್ಕ್‌ ಮತದಾನೋತ್ತರ ಸಮೀಕ್ಷೆ ಪ್ರಕಟ ( ಚುನಾವಣೆಯ ಸಾಂಕೇತಿಕ ಚಿತ್ರ) (PTI)

ಕರ್ನಾಟಕ ವಿಧಾನಸಭೆಯ 224 ಸದಸ್ಯರನ್ನು ಆಯ್ಕೆ ಮಾಡಲು ಬುಧವಾರ ಸಂಜೆ 6 ಗಂಟೆಗೆ ಮತದಾನ ಮುಕ್ತಾಯಗೊಂಡಿದೆ. ಮೇ 13ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಅಂದೇ ಪ್ರಕಟವಾಗಲಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ಹಲವೆಡೆ ನೇರ ಹಣಾಹಣಿ ನಡೆದರೆ, ಇನ್ನು ಕೆಲವು ಕಡೆ ಜೆಡಿಎಸ್‌ ಜತೆಗೆ ನೇರ ಮತ್ತು ತ್ರಿಕೋನ ಸ್ಪರ್ಧೆ ಕಂಡುಬಂದಿತು.

ರಿಪಬ್ಲಿಕ್ P-MARQ ಎಕ್ಸಿಟ್ ಪೋಲ್ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಬಿಗಿ ಸ್ಪರ್ಧೆಯನ್ನು ಬಿಂಬಿಸಿದೆ. ಇದರ ಪ್ರಕಾರ, ಜೆಡಿಎಸ್‌ ಕಿಂಗ್‌ ಮೇಕರ್‌ ಆಗುವ ಸಾಧ್ಯತೆ ಇದೆ. ಈ ಎಕ್ಸಿಟ್ ಪೋಲ್ ಪ್ರಕಾರ, ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷವು 94 ರಿಂದ 108 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಆಡಳಿತಾರೂಢ ಬಿಜೆಪಿಯು 85 ರಿಂದ 100 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ನಂತರ ಜೆಡಿಎಸ್ (ಎಸ್) 24-32 ಸ್ಥಾನಗಳನ್ನು ಪಡೆಯಬಹುದು. ಪಕ್ಷೇತರರು ಮತ್ತು ಇತರೆ ಪಕ್ಷದ ಅಭ್ಯರ್ಥಿಗಳು 2-6 ಸ್ಥಾನಗಳನ್ನು ಪಡೆಯಲಿದ್ದಾರೆ ಎಂಬುದನ್ನು ಎಕ್ಸಿಟ್‌ ಪೋಲ್‌ ಸೂಚಿಸಿದೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇಕಡಾ 36 ರಷ್ಟು ಮತಗಳನ್ನು ಪಡೆಯುವ ನಿರೀಕ್ಷೆಯಿದ್ದರೆ, ಕಾಂಗ್ರೆಸ್ ಶೇಕಡಾ 40, ಜೆಡಿಎಸ್ (ಎಸ್) ಶೇಕಡಾ 17 ಮತ್ತು ಇತರರು ಶೇಕಡಾ 7 ರಷ್ಟು ಮತಗಳನ್ನು ಗಳಿಸಬಹುದು ಎಂದು ಸಮೀಕ್ಷಾ ವರದಿ ಹೇಳಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ 2023 

ರಿಪಬ್ಲಿಕ್‌ - ಪಿ ಮಾರ್ಕ್‌ ಎಕ್ಸಿಟ್‌ ಪೋಲ್‌ 

ಪಕ್ಷಸ್ಥಾನಮತಗಳಿಕೆ (%)
ಬಿಜೆಪಿ85-10036
ಕಾಂಗ್ರೆಸ್94-10840
ಜೆಡಿಎಸ್24-3217
ಇತರೆ2-67
ಒಟ್ಟು224100

ರಿಪಬ್ಲಿಕ್‌ ಪಿಮಾರ್ಕ್‌ ತಂಡ ಎಕ್ಸಿಟ್‌ ಪೋಲ್‌ ನಡೆಸಿದ್ದು ಹೀಗೆ..

ರಿಪಬ್ಲಿಕ್‌ ಟಿವಿ ವರದಿ ಪ್ರಕಾರ, ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಎಕ್ಸಿಟ್ ಪೋಲ್ ಸಮೀಕ್ಷೆಯನ್ನು ನಡೆಸಲಾಗಿದೆ. ಸಮೀಕ್ಷೆಗೆ ಬಳಸಿಕೊಂಡ ಮಾದರಿಯ ಗಾತ್ರ 21,432. ಅಂದರೆ 21,432 ಮತದಾರರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ.

ಈ ವಿಧಾನವು ಪ್ರಧಾನವಾಗಿ ಮೂರು ತಂತ್ರಗಳನ್ನು ಬಳಸಿಕೊಂಡು ಯಾದೃಚ್ಛಿಕ ಶ್ರೇಣೀಕೃತ ಮಾದರಿಯಾಗಿದೆ. ಕ್ಷೇತ್ರ ಸಮೀಕ್ಷೆಗಳು, ಸಿಎಟಿಐ ಮತ್ತು ಐಡಿಐಗಳು ಜಿಲ್ಲೆಗಳು ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಮುಖ ವ್ಯಕ್ತಿಗಳೊಂದಿಗೆ ಸಮಾಲೋಚನೆ ಮಾಡಿ ಅಂದಾಜು ಮತ ಹಂಚಿಕೆಯ ಲೆಕ್ಕಾಚಾರ ಮಾಡಲಾಗಿದೆ. ಅದೇ ರೀತಿ ಪಕ್ಷವು ಗೆಲ್ಲಬಹುದಾದ ಸ್ಥಾನಗಳ ಸಂಖ್ಯೆಯನ್ನು ನಿರ್ಧರಿಸಲಾಗಿದೆ ಎಂದು ವರದಿ ಹೇಳಿದೆ.

Whats_app_banner