ಕನ್ನಡ ಸುದ್ದಿ  /  ಕರ್ನಾಟಕ  /  Fact Check: ರೈಲು ಹಳಿ ಮೇಲೆ ಬಾಲಕ ಕಲ್ಲುಗಳು ಇಟ್ಟ ವಿಡಿಯೋ ವೈರಲ್; 5 ವರ್ಷ ಹಿಂದಿನ ಹಳೆಯ ವಿಡಿಯೋ ಹಂಚಿಕೊಂಡು ತಪ್ಪು ಸಂದೇಶ

Fact Check: ರೈಲು ಹಳಿ ಮೇಲೆ ಬಾಲಕ ಕಲ್ಲುಗಳು ಇಟ್ಟ ವಿಡಿಯೋ ವೈರಲ್; 5 ವರ್ಷ ಹಿಂದಿನ ಹಳೆಯ ವಿಡಿಯೋ ಹಂಚಿಕೊಂಡು ತಪ್ಪು ಸಂದೇಶ

ರೈಲು ಹಳಿಯ ಮೇಲೆ ಬಾಲಕನೊರ್ವ ಇತ್ತೀಚೆಗೆ ಕಲ್ಲುಗಳನ್ನು ಇಟ್ಟಿದ್ದಾನೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲಣಗಳಲ್ಲಿ ವೈರಲ್ ಆಗಿತ್ತು. ಆದರೆ ಈ ವಿಡಿಯೋ ಸತ್ಯಾಸತ್ಯತೆ ಪರಿಶೀಲಿಸಿದಾಗ ಇದು ಇತ್ತೀಚಿನ ವಿಡಿಯೋ ಅಲ್ಲ, ಐದು ವರ್ಷಗಳ ಹಳೆಯ ವಿಡಿಯೋ ಎಂಬುದು ತಿಳಿದು ಬಂದಿದೆ.

ರೈಲು ಹಳಿಗಳ ಮೇಲೆ ಬಾಲಕನೊರ್ವ ಕಲ್ಲುಗಳನ್ನು ಇಟ್ಟಿದ್ದಾನೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಇದು 5 ವರ್ಷಗಳ ಹಳೆ ವಿಡಿಯೋ ಎಂಬುದು ಫ್ಯಾಕ್ಟ್ ಚೆಕ್‌ನಲ್ಲಿ ತಿಳಿದು ಬಂದಿದೆ.
ರೈಲು ಹಳಿಗಳ ಮೇಲೆ ಬಾಲಕನೊರ್ವ ಕಲ್ಲುಗಳನ್ನು ಇಟ್ಟಿದ್ದಾನೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಇದು 5 ವರ್ಷಗಳ ಹಳೆ ವಿಡಿಯೋ ಎಂಬುದು ಫ್ಯಾಕ್ಟ್ ಚೆಕ್‌ನಲ್ಲಿ ತಿಳಿದು ಬಂದಿದೆ.

ಬೆಂಗಳೂರು: ಒಡಿಶಾದ ಬಾಲಸೋರ್‌ ಜಿಲ್ಲೆಯಲ್ಲಿ ಜೂನ್ 2 ರಂದು ಸಂಭವಿಸಿದ್ದ ಭೀಕರ ರೈಲು ದುರಂತದಿಂದ ಇಡೀ ಭಾರತವೇ ಬೆಚ್ಚಿ ಬಿದ್ದಿತ್ತು. ಈ ಘಟನೆಯ ಬಳಿಕ ರೈಲು ಹಳಿಗಳ ಸುರಕ್ಷತೆ ಕುರಿತು ಸಾಕಷ್ಟು ಪ್ರಶ್ನೆಗಳು ಎದ್ದಿದ್ದ ಬೆನ್ನಲ್ಲೇ ಕರ್ನಾಟಕದ ವಿಡಿಯೋವೊಂದು (Karnataka Viral Video) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಟ್ರ್ಯಾಕ್‌ಮನ್‌ ಬಾಲಕನನ್ನು ನಿಂದಿಸಿ ಹಲ್ಲೆ ಮಾಡಿದ್ದು, ಹಳಿ ಮೇಲೆ ಯಾರು ಕಲ್ಲುಗಳನ್ನು ಇಟ್ಟಿದ್ದು, ಇನ್ನು ಎಷ್ಟು ರೈಲುಗಳಿಗೆ ಹೀಗೆ ಮಾಡಿದ್ದೀರಿ ಎಂದು ಪ್ರಶ್ನಿಸಿ ನಿನ್ನ ಹೆಸರೇನು, ನಿಮ್ಮ ಅಪ್ಪನ ನಂಬರ್ ಕೊಡು ಅಂತ ಕೇಳುತ್ತಿರುವುದು ದೃಶ್ಯ ಅದರಲ್ಲಿದೆ. ಬಾಲಕ ನಾನು ಹೀಗೆ ಮಾಡಿಲ್ಲ. ನಿನ್ನೆ ಕಾಲಿಗೆ ಮುಗಿತೀನಿ ಅಂತ ಗೊಗೆರೆಯುತ್ತಾನೆ.

ಮುಸ್ಲಿಂ ಸಮುದಾಯದವರು ರೈಲು ಹಳಿ ತಪ್ಪಿಸಲು ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ ಅಂತ ಈ ವಿಡಿಯೋ ಇತ್ತೀಚೆಗೆ ಕರ್ನಾಟಕದಲ್ಲಿ ನಡೆದಿರುವುದು ಅಂತ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಟ್ವಿಟರ್ ಬ್ಲೂಕ್ ಟಿಕ್ ಪಡೆದಿರುವ ಅರುಣ್ ಪುದೂರ್ ಎಂಬ ವ್ಯಕ್ತಿ ಜೂನ್ 5 ರಂದು ಈವಿಡಿಯೋವನ್ನು ಹಂಚಿಕೊಂಡಿದ್ದು, ಶಾಕಿಂಗ್: ಮತ್ತೊಂದು ರೈಲು ದುರಂತ ತಪ್ಪಿದೆ. ಈ ಬಾರಿ ಕರ್ನಾಟಕದಲ್ಲಿ ಅಪ್ರಾಪ್ತ ಬಾಲಕನೊಬ್ಬ ರೈಲು ಹಳಿಗಳ ಮೇಲೆೆ ಕಲ್ಲುಗಳನ್ನು ಇಟ್ಟು ಸಿಕ್ಕಿಬಿದ್ದಿದ್ದಾನೆ. ದೊಡ್ಡವರನ್ನು ಬಿಡಿ ಈಗ ಚಿಕ್ಕ ಮಕ್ಕಳನ್ನು ಕೂಡ ವಿಧ್ವಂಸಕ ಹಾಗೂ ಸಾವಿಗೆ ಕಾರಣವಾಗಲು ಬಳಸಾಗುತ್ತಿದೆ. ಇಂದೊಂದು ಗಂಭೀರ ವಿಚಾರ. ದಯವಿಟ್ಟು ಇದನ್ನು ನೋಡಿ ಅಂತ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಟ್ಯಾಗ್ ಮಾಡಿದ್ದಾರೆ.

ಅರುಣ್ ಪುದೂರ್ ಅವರ ಈ ಟ್ವೀಟ್‌ಗೆ 6 ಲಕ್ಷಕ್ಕೂ ಅಧಿಕ ವೀವ್ಸ್ ಬಂದಿದೆ. 4 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಮಾಡಲಾಗಿದೆ.

ಈ ವಿಡಿಯೋ ಕರ್ನಾಟಕದ್ದು ಇಂತಹ ಮಕ್ಕಳನ್ನು ಜಿಹಾದಿಗಳು ಹಳಿ ತಪ್ಪಿಸಲು ಬಳಸಿಕೊಳ್ಳುತ್ತಿದ್ದಾರೆ. ಈ ವಿಧ್ವಂಸಕ ಕೃತ್ಯಗಳಲ್ಲಿ ದೊಡ್ಡ ಗ್ಯಾಂಗ್ ಕಾರ್ಯನಿರ್ವಹಿಸುತ್ತಿರುವಂತೆ ಕಾಣುತ್ತಿದೆ. ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲುಗಳಲ್ಲಿ ನಾವು ಆಗಾಗ್ಗೆ ಕಲ್ಲು ತೂರಾಟವನ್ನು ನೋಡುತ್ತಿರುವುದರಲ್ಲಿ ಆಶ್ಚರ್ಯವಿಲ್ಲ ಎಂದು ಸುಬ್ಬಾ ರಾವ್ ಎಂಬುವರು ಟ್ವೀಟ್ ಮಾಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಕೆಲವು ಸುದ್ದಿ ವಾಹಿನಿಗಳು ಬಳಸಿಕೊಂಡಿವೆ. ಟೈಮ್ಸ್ ನೌ, ಅಮರ್ ಉಜಾಲಾ, ಏಷ್ಯಾನೆಟ್‌ ನ್ಯೂಸ್, ಒನ್ ಇಂಡಿಯಾ, ಡೆಕ್ಕನ್ ನ್ಯೂಸ್, ನ್ಯೂಸ್ ಕರ್ನಾಟಕ ಹೀಗೆ ಹಲವು ವಾಹಿನಿಗಳು ವಿಡಿಯೋ ಹಂಚಿಕೊಂಡಿವೆ ಎಂದು ಆಲ್ಟ್ ನ್ಯೂಸ್ ತನ್ನ ಫ್ಯಾಕ್ಟ್ ಚೆಕ್ ವರದಿಯಲ್ಲಿ ತಿಳಿಸಿದೆ.

ಫ್ಯಾಕ್ಟ್ ಚೆಕ್

InVid ಸಾಫ್ಟ್‌ವೇರ್ ಸಹಾಯದಿಂದ ಈ ವಿಡಿಯೋವನ್ನು ಪರಿಶೀಲಿಸಿದಾಗ, ವೈರಲ್ ಆಗಿದ್ದ ಕೆಲವು ಫೋಟೋಗಳನ್ನು ರಿವರ್ಸ್ ಇಮೇಜ್ ಗೂಗಲ್ ಸರ್ಚ್ ಮಾಡಿದಾಗ ಇದು 2018ರ ಮೇ 12 ರಂದು ನಡೆದಿರುವ ಘಟನೆ ಎಂಬುದು ತಿಳಿದು ಬಂದಿದೆ. ಇದು ಇತ್ತೀಚಿನ ವಿಡಿಯೋ ಅಲ್ಲ ಎಂಬುದು ಸ್ಪಷ್ಟವಾಗಿದೆ.

ಕಲಬುರಗಿ ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜು ಮುಂಭಾಗದಲ್ಲಿರುವ ರೈಲು ಹಳಿಯಲ್ಲಿ ಇಬ್ಬರು ಮಕ್ಕಳು ಎರಡು ಹಳಿಯ ಮೇಲೆ ಸಾಲುಗಟ್ಟಿ ಜಲ್ಲಿ ಕಲ್ಲುಗಳನ್ನು ಇಟ್ಟಿರುವ ವಿಡಿಯೋ ಎಲ್ಲಡೆ ವೈರಲ್ ಆಗಿದೆ.

ಈ ವಿಡಿಯೋ ಹಳೆಯದಾಗಿದೆ ಎಂದು ಕಲಬುರಗಿ ರೈಲ್ವೆ ಪೊಲೀಸರು ಸ್ಪಷ್ಟಪಡಿಸಿದ್ದು, ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ರೈಲು ದುರಂತದ ಹಿನ್ನೆಲೆಯಲ್ಲಿ ಈ ಹಳೆಯ ವಿಡಿಯೋ ಇದೀಗ ವೈರಲ್ ಆಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿಡಿಯೋ ಹಂಚಿಕೊಂಡು ಕೋಮುವಾದಿ ಬಣ್ಣ ಕಟ್ಟುವ ಪ್ರಯತ್ನ ನಡೆಯುತ್ತಿದೆ. ರೈಲಿಗೆ ಹಾನಿ ಮಾಡುವಂತ ಯಾವುದೇ ಉದ್ದೇಶ ಆ ಮಕ್ಕಳಿಗೆ ಇರಲಿಲ್ಲ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಒಟ್ಟಾರೆಯಾಗಿ ವೈರಲ್ ಆಗುತ್ತಿರುವ ವಿಡಿಯೋ ಇತ್ತೀಚೆಗೆ ನಡೆದಿರೋದು ಅಲ್ಲ ಎಂಬುದು ಗೊತ್ತಾಗಿದೆ.

IPL_Entry_Point

ವಿಭಾಗ